HOME » NEWS » Trend » WOMAN IN CHINA SAVES ELDERLY MAN IN WHEELCHAIR FROM ROLLING DOWN ESCALATOR KVD

Viral Video : ಜಾರಿ ಬೀಳುತ್ತಿದ್ದ ವ್ಹೀಲ್​​ಚೇರ್​ನಲ್ಲಿದ್ದ ವೃದ್ಧನನ್ನು ಅಚ್ಚರಿಯ ರೀತಿಯಲ್ಲಿ ಕಾಪಾಡಿದ ಮಹಿಳೆ!

Kavya V
Updated:April 22, 2021, 5:28 PM IST
Viral Video : ಜಾರಿ ಬೀಳುತ್ತಿದ್ದ ವ್ಹೀಲ್​​ಚೇರ್​ನಲ್ಲಿದ್ದ ವೃದ್ಧನನ್ನು ಅಚ್ಚರಿಯ ರೀತಿಯಲ್ಲಿ ಕಾಪಾಡಿದ ಮಹಿಳೆ!
Woman in China saves elderly man in wheelchair from rolling down escalator
  • Share this:
ಯಾವ ಕ್ಷಣದಲ್ಲಿ ಅಪಾಯ ಹೇಗೆ ಎದುರಾಗುತ್ತೆ ಅನ್ನೋದನ್ನು ಹೇಳೋಕೆ ಆಗಲ್ಲ. ಎಷ್ಟೆಲ್ಲಾ ಎಚ್ಚರಿಕೆಯಿಂದಿದ್ದರೂ ಸಣ್ಣಪುಟ್ಟ ಅಪಘಾತಗಳು, ಅವಘಡಗಳು ಆಗುತ್ತಲೇ ಇರುತ್ತೆ. ಇಲ್ಲವೇ ಕೂದಲೆಳೆ ಅಂತರದಲ್ಲಿ ಯಾವುದೋ ಅಪಾಯದಿಂದ ಪಾರಾಗಿರುತ್ತೇವೆ. ಇದಕ್ಕೆ ಸಮಯಪ್ರಜ್ಞೆ ತುಂಬಾನೇ ಮುಖ್ಯ. ಕೊಂಚ ಚುರುಕಾಗಿ ಯೋಚನೆ ಮಾಡಿದ್ರು ಸಾಕು ಅದೆಷ್ಟೋ ಅವಘಡಗಳಿಂದ ನಮ್ಮನ್ನು ನಾನು ರಕ್ಷಿಸಿಕೊಳ್ಳಬಹುದು ಇಲ್ಲವೇ ಬೇರೆಯವರಿಗೆ ನೆರವಾಗಬಹುದು. ಇಂತಹದ್ದೇ ಘಟನೆ ಚೀನಾದಲ್ಲಿ ನಡೆದಿದ್ದು, ಆ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವ್ಹೀಲ್​ ಚೇರ್​ನಲ್ಲೇ ಶಾಪಿಂಗ್​ ಮಾಲ್​ಗೆ ಬಂದಿದ್ದ ವೃದ್ಧರೊಬ್ಬರು ಅಚಾನಕ್​ ಆಗಿ ಎಲಿವೇಟರ್​ನಿಂದ ಜಾರಿದ್ದಾರೆ. ಎಲಿವೇಟರ್​ನಿಂದ ವ್ಹೀಲ್​ಚೇರ್​ ಮೇಲೆ ರಭಸದಿಂದ ಬಂದ ವ್ಯಕ್ತಿ ಇನ್ನೇನು ನೆಲಕ್ಕೆ ಅಪ್ಪಳಿಸಬೇಕು ಎನ್ನುವಷ್ಟರಲ್ಲಿ 10 ಅಡಿ ದೂರದಲ್ಲಿದ್ದ ಮಹಿಳೆ ಅಪತ್ಬಾಂಧವರಾಗಿದ್ದಾರೆ. ಕೆಲವೇ ಸೆಕೆಂಡ್​ಗಳಲ್ಲಿ ವ್ಹೀಲ್​ಚೇರ್​ ಬಳಿ ಓಡಿ ಇಡೀ ದೇಹವನ್ನು ವ್ಹೀಲ್​ಚೇರ್​ಗೆ ಅಡ್ಡಲಾಗಿ ಇಟ್ಟು ವೃದ್ಧನನ್ನು ಕಾಪಾಡಿದ್ದಾರೆ. ಶಾಪಿಂಗ್​ ಮಾಲ್​ನ ಬಿಲ್ಲಿಂಗ್​ ಕೌಂಟರ್​ನಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಈ ಘಟನೆ ಸೆರೆಯಾಗಿದೆ.

ಮಾಲ್​ನಲ್ಲಿ ಶಾಪಿಂಗ್​ ಮಾಡಿದ ಮಹಿಳೆ ಬಿಲ್ಲಿಂಗ್​ ಕೌಂಟರ್​ನಲ್ಲಿ ನಿಂತಿದ್ದರು. ಕೊಂಚ ದೂರದಲ್ಲಿದ್ದ ಎಲಿವೇಟರ್​ನಲ್ಲಿ ವೃದ್ಧರೊಬ್ಬರ ವ್ಹೀಲ್​ಚೇರ್​ ನಿಯಂತ್ರಣ ತಪ್ಪಿ ಜಾರಿ ಬರುತ್ತಿರೋದನ್ನು ಗಮನಿಸಿದ್ದಾರೆ. ನೋಡಿದ ಕೂಡಲೇ ಶರವೇಗದಲ್ಲಿ ಓಡಿದ ಮಹಿಳೆ ರಭಸವಾಗಿ ಬರುತ್ತಿದ್ದ ವ್ಹೀಲ್​ಚೇರನ್ನು ತಡೆದಿದ್ದಾರೆ. ಹಿಂದೆಮುಂದೆ ಯೋಚನೆ ಮಾಡದೇ ಅಡ್ಡಲಾಗಿ ಮಲಗಿ ವ್ಹೀಲ್​ಚೇರನ್ನು ತಡೆದಿದ್ದಾರೆ. ಕೂಡಲೇ ಎಲಿವೇಟರ್​ ಬಳಿ ಸಿಲುಕಿದ್ದ ಮಗುವನ್ನೂ ಮಹಿಳೆ ರಕ್ಷಿಸಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿರೋ ಮಹಿಳೆ ಆಕ್ಷಣದಲ್ಲಿ ನನಗೆ ಗಾಯವಾಗಬಹುದು ಎಂದು ನಾನು ಯೋಚಿಸಲಿಲ್ಲ. ಹೇಗಾದರೂ ಮಾಡಿ ಅವರನ್ನು ರಕ್ಷಿಸಬೇಕೆಂದಷ್ಟೇ ಯೋಚಿಸಿದೆ ಎಂದಿದ್ದಾರೆ. ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾದ ವೃದ್ಧ ತನ್ನನ್ನು ಕಾಪಾಡಿದ ಮಹಿಳೆಗೆ ಧನ್ಯವಾದ ತಿಳಿಸಿದ್ದಾರೆ. ಮಹಿಳೆಯ ಧೈರ್ಯ-ಸಾಹಸಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಎಲ್ಲರ ಶಹಬ್ಬಾಶ್​ಗಿರಿ ಕೊಟ್ಟಿದ್ದಾರೆ. ವಿಡಿಯೋ ನೋಡಿದವರು ನೀವೊಬ್ಬ ಸೂಪರ್​ ವುಮೆನ್​ ಎಂದು ಕೊಂಡಾಡಿದ್ದಾರೆ.
Published by: Kavya V
First published: April 22, 2021, 5:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories