Jackpot: ಬಂದ ಕರೆಗಳನ್ನು ಸ್ವೀಕರಿಸದೆ, ಒಳ್ಳೆ ಸುದ್ದಿ ಮಿಸ್ ಮಾಡಿಕೊಂಡಿದ್ದ ಲೇಡಿ.. ಎಂತಹ ಲಾಟರಿ ಹೊಡೆದಿದೆ ನೋಡಿ

Lottery: ಎಲ್ಲಾ ಅಪರಿಚಿತ ಸಂಖ್ಯೆಗಳು ಸೈಬರ್ ಕಳ್ಳರದಾಗಿರುವುದಿಲ್ಲ, ಅಂದ ಮಾತ್ರಕ್ಕೆ ಎಲ್ಲಾ ಅಪರಿಚಿತ ಸಂಖ್ಯೆಗಳಿಂದ ಬಂದಂತಹ ಕರೆಗಳು ಆಗಿರುವುದಿಲ್ಲ. ಒಟ್ಟಿನಲ್ಲಿ ಇಂತಹ ಕರೆಗಳನ್ನು ಸ್ವೀಕರಿಸುವುದು ಅಥವಾ ಸ್ವೀಕರಿಸದೇ ಇರುವುದು ನಿಜಕ್ಕೂ ಒಂದು ಗೊಂದಲಮಯ ಪರಿಸ್ಥಿತಿ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೆಲವೊಮ್ಮೆ ನಾವು ನಮ್ಮ ಮೊಬೈಲ್ ಫೋನ್‌ಗೆ (Phone) ಬಂದ ಕರೆಗಳನ್ನು (Call) ಸ್ವೀಕರಿಸದೇ ಇಲ್ಲ. ಏಕೆಂದರೆ ಈಗಂತೂ ತುಂಬಾ ನಕಲಿ ಸಂಖ್ಯೆಗಳನ್ನು ಬಳಸಿಕೊಂಡು ಈ ಹ್ಯಾಕರ್‌ಗಳು (Hacker) ಮತ್ತು ಸೈಬರ್ ಕಳ್ಳರು ಕರೆ ಮಾಡುತ್ತಲೇ ಇರುತ್ತಾರೆ. ನಮ್ಮ ಮೊಬೈಲ್‌ನಲ್ಲಿ ಸೇವ್ ಮಾಡಿಕೊಂಡಿರುವ ಸಂಖ್ಯೆಗಳಿಂದ ಕರೆ ಬಂದರೆ ಮಾತ್ರ ಬಹುತೇಕರು ಅದನ್ನು ಸ್ವೀಕರಿಸುತ್ತಾರೆ. ಯಾವುದೋ ಗೊತ್ತಿರದ ಅಪರಿಚಿತ ಸಂಖ್ಯೆಯಿಂದ (Unknow Number) ಕರೆ ಬಂದರೆ ಅದನ್ನು ಸ್ವೀಕರಿಸುವುದಿಲ್ಲ.ಆದರೆ ಹೀಗೆ ಮಾಡುವಾಗ ನಾವು ಕೆಲವು ಮಹತ್ವದ ಕರೆಗಳನ್ನು ನಾವು ಮಿಸ್ ಮಾಡಿಕೊಳ್ಳುವ ಅವಕಾಶಗಳು ಇರಬಹುದಲ್ಲವೇ? ಹೌದು.. ಎಲ್ಲಾ ಅಪರಿಚಿತ ಸಂಖ್ಯೆಗಳು ಸೈಬರ್ ಕಳ್ಳರದಾಗಿರುವುದಿಲ್ಲ, ಅಂದ ಮಾತ್ರಕ್ಕೆ ಎಲ್ಲಾ ಅಪರಿಚಿತ ಸಂಖ್ಯೆಗಳಿಂದ ಬಂದಂತಹ ಕರೆಗಳು ಆಗಿರುವುದಿಲ್ಲ. ಒಟ್ಟಿನಲ್ಲಿ ಇಂತಹ ಕರೆಗಳನ್ನು ಸ್ವೀಕರಿಸುವುದು ಅಥವಾ ಸ್ವೀಕರಿಸದೇ ಇರುವುದು ನಿಜಕ್ಕೂ ಒಂದು ಗೊಂದಲಮಯ ಪರಿಸ್ಥಿತಿ ಎಂದು ಹೇಳಿದರೆ ತಪ್ಪಾಗುವುದಿಲ್ಲ.

    ಇಲ್ಲಿ ಒಂದು ಘಟನೆಯಲ್ಲಿ ಇಂತಹ ಅಪರಿಚಿತ ಸಂಖ್ಯೆಯಿಂದ ಕರೆಗಳನ್ನು ಸ್ವೀಕರಿಸದೆ ಇದ್ದುದ್ದರಿಂದ ಆಸ್ಟ್ರೇಲಿಯದ ಮಹಿಳೆಯೊಬ್ಬಳಿಗೆ ತಾನು 1,00,000 ಆಸ್ಟ್ರೇಲಿಯನ್ ಡಾಲರ್ ದೊಡ್ಡ ಮೊತ್ತದ ಜಾಕ್‌ಪಾಟ್ ಬಹುಮಾನವನ್ನು ಗೆದ್ದಿದ್ದೇನೆ ಎಂದು ಅವರು ತಡವಾಗಿ ಕಂಡುಕೊಂಡರು.

    ಈ ಮಹಿಳೆಗೆ ಲಾಟರಿ ಅಧಿಕಾರಿಗಳಿಂದ ಸುಮಾರು ಬಾರಿ ಕರೆಗಳು ಬಂದಿವೆ, ಆದರೆ ಮಹಿಳೆ ಆ ಕರೆಗಳನ್ನು ಯಾವುದೋ ಹಗರಣವಿರಬೇಕು ಎಂದುಕೊಂಡು ಫೋನ್ ಕರೆಗಳನ್ನು ನಿರ್ಲಕ್ಷಿಸಿದ್ದಾರೆ. ಕೆಲವು ದಿನಗಳ ನಂತರ ಈ ನ್ಯೂ ಸೌತ್ ವೇಲ್ಸ್‌ನ ಫ್ರೆಂಚ್ ಫಾರೆಸ್ಟ್ ನಿವಾಸಿ ಫೆಬ್ರವರಿ 25ನೇ ತಾರೀಖಿನ ಲಕ್ಕಿ ಲಾಟರಿಗಳ ಡ್ರಾ ಸಲುವಾಗಿ thelott.com ನಲ್ಲಿ ಟಿಕೆಟ್ ಖರೀದಿಸಿದ್ದರು, ಆದರೆ ಡ್ರಾ ಆದ ನಂತರ ತನ್ನ ಖಾತೆಯನ್ನು ಪರಿಶೀಲಿಸಲು ಅವರು ಮರೆತಿದ್ದರು.

    ಅವರು ಆರಂಭದಲ್ಲಿ ಲಾಟರಿ ಅಧಿಕಾರಿಯ ಫೋನ್ ಕರೆಗಳನ್ನು ಯಾವುದೋ ಹಗರಣಗಳು ಇರಬೇಕು ಎಂದು ತಪ್ಪಾಗಿ ಅರ್ಥೈಸಿಕೊಂಡು ಕರೆಗಳನ್ನು ನಿರ್ಲಕ್ಷಿಸಿದ್ದರು. ಆದರೆ ಈ ಮಹಿಳೆಯು ಈ ಲಾಟರಿ ಡ್ರಾ ದಲ್ಲಿ ಸಮಾಧಾನಕರ ಬಹುಮಾನವನ್ನು ಗೆದ್ದಿದ್ದಾರೆ. ಅಂದರೆ ಅವರು ಒಟ್ಟು 101,000 ಆಸ್ಟ್ರೇಲಿಯನ್ ಡಾಲರ್ ಎಂದರೆ ಭಾರತೀಯ ಮೌಲ್ಯದಲ್ಲಿ ಅದು ಬರೋಬ್ಬರಿ 55.5 ಲಕ್ಷ ರೂಪಾಯಿಯನ್ನು ಗೆದ್ದಿದ್ದಾರೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: Viral Photo: ಸಂಸತ್ತಿನ ವೇಳೆ ಆನ್​ಲೈನ್​ನಲ್ಲಿ ಬಟ್ಟೆ​ ಆರ್ಡರ್​ ಮಾಡಿದ ಸಂಸದೆ! ಈಕೆಗೆ ಟೈಮ್ ಸಿಕ್ಕಿದ್ದು ಇಲ್ಲೇನಾ?

    ಅವರು ‘ದಿ ಲಾಟ್’ ಗೆ "ಲಾಟರಿ ಡ್ರಾ ನಂತರ ನನಗೆ ಕೆಲವು ಫೋನ್ ಕರೆಗಳು ಮತ್ತು ಇಮೇಲ್‌ಗಳು ನೇರವಾಗಿ ಬಂದಿದ್ದವು, ಆದರೆ ನಾನು ಫೋನ್ ಸಂಖ್ಯೆ ಅಥವಾ ಇಮೇಲ್ ಅನ್ನು ಸರಿಯಾಗಿ ಗುರುತಿಸಲಿಲ್ಲ, ಆದ್ದರಿಂದ ನಾನು ಆ ಕರೆಗಳನ್ನು ಸ್ವೀಕರಿಸಲಿಲ್ಲ ಮತ್ತು ಇಮೇಲ್‌ಗಳಿಗೆ ಯಾವುದೇ ಉತ್ತರವನ್ನು ನೀಡಲಿಲ್ಲ. ಇದು ಖಂಡಿತವಾಗಿಯೂ ಯಾವುದಾದರೂ ಒಂದು ಹಗರಣ ಇರಬೇಕು ಎಂದು ಅಂದುಕೊಂಡು ನಾನು ಸುಮ್ಮನಾದೆ" ಎಂದು ಹೇಳಿದರು.

    "ನಾನು ಕೆಲವು ದಿನಗಳವರೆಗೆ ಆ ಫೋನ್ ಕರೆಗಳು ಮತ್ತು ಇಮೇಲ್‌ಗಳನ್ನು ನಿರ್ಲಕ್ಷಿಸಿದೆ ಮತ್ತು ಅಂತಿಮವಾಗಿ ನಾನು ನನ್ನ ಆನ್‌ಲೈನ್ ‘ದಿ ಲಾಟ್’ ಲಾಟರಿ ಖಾತೆಗೆ ಲಾಗ್ ಇನ್ ಮಾಡಲು ನಿರ್ಧರಿಸಿದೆ. ಆಗ ನಾನು ಲಾಟರಿ ಡ್ರಾ ದಲ್ಲಿ ಸಮಾಧಾನಕರ ಬಹುಮಾನವನ್ನು ಗೆದ್ದಿರುವುದರ ಬಗ್ಗೆ ನನಗೆ ತಿಳಿದಾಗ ಈ ಕರೆಗಳ ಮತ್ತು ಇಮೇಲ್‌ಗಳ ಬಗ್ಗೆ ಎಲ್ಲವೂ ಅರ್ಥವಾಗಲು ಶುರುವಾಯಿತು" ಎಂದು ಹೇಳಿದರು.

    ಇದನ್ನೂ ಓದಿ: Samosa Ban: ಈ ದೇಶದಲ್ಲಿ ಸಮೋಸಾ ಬ್ಯಾನ್! ಒಂದು ವೇಳೆ ಮಾರಿದ್ರೆ, ತಿಂದ್ರೆ ಶಿಕ್ಷೆ ಗ್ಯಾರಂಟಿ

    "ನಾನು ನೇರವಾಗಿ ನನ್ನ ಗಂಡನ ಬಳಿಗೆ ಹೋಗಿ ಇಬ್ಬರು ಒಟ್ಟಾಗಿ ಲಾಟರಿ ಫಲಿತಾಂಶಗಳನ್ನು ಪರಿಶೀಲಿಸುತ್ತಿದ್ದೆವು, ಬಹುಮಾನ ಗೆದ್ದಿರುವುದನ್ನು ನೋಡಿ ನಮಗೆ ಅದನ್ನು ಕೂಡಲೇ ನಂಬಲು ಸಾಧ್ಯವಾಗಲಿಲ್ಲ" ಎಂದು ಅವರು ಹೇಳಿದರು.

    "ನಾನು ಗೆದ್ದಿರುವ ಬಹುಮಾನದ ಹಣವು ಬ್ಯಾಂಕ್ ಖಾತೆಗೆ ಜಮೆ ಆಗುವವರೆಗೆ ನಾವು ಕಾಯಬೇಕು, ನಾನು ಅದನ್ನು ಯಾವುದಕ್ಕಾಗಿ ಖರ್ಚು ಮಾಡುತ್ತೇನೆ ಎಂದು ಇನ್ನೂ ನಿರ್ಧರಿಸಿಲ್ಲ, ಆದರೆ ಅದನ್ನು ಒಳ್ಳೆಯ ಕೆಲಸಕ್ಕೆ ಬಳಸುವುದಂತೂ ನಿಜ" ಎಂದು ಅವರು ಹೇಳಿದರು.
    Published by:Harshith AS
    First published: