Viral News: ಮೊಮ್ಮಗಳ ಜೊತೆಗೆ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ 87 ವರ್ಷದ ಅಜ್ಜ!

Education: ಅಮೆರಿಕಾದ ನ್ಯೂಯಾರ್ಕಿನಲ್ಲಿ . ರೆನೇ ನೀರಾ ಎನ್ನುವ 87 ವರ್ಷದ ವೃದ್ಧರೊಬ್ಬರು ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ವಿಶೇಷ ಅಂದ್ರೆ ಅಜ್ಜನ ಜೊತೆಗೆ ಆತನ ಮೊಮ್ಮಗಳು ಮೆಲಾನಿ ಸಲಜರ್​ ಸಮೂಹ ಸಂವಹನ ವಿಷಯದಲ್ಲಿ ಪದವಿ ಪಡೆದಿದ್ದಾಳೆ

ರೆನೇ ನೀರಾ

ರೆನೇ ನೀರಾ

 • Share this:
  ವಿದ್ಯೆ (Education) ಎಂಬುದು ಯಾರ ಮನೆಯ (Home) ಆಸ್ತಿಯೂ (Property) ಅಲ್ಲ. ಯಾವ ವಯಸ್ಸಿನಲ್ಲಿ (Age) ಓದಿ ಎಂತಹ ಸಾಧನೆಯನ್ನು ಬೇಕಾದರೂ ಮಾಡಬಹುದು. ವಯಸ್ಸಿನ ಹಂಗಿಲ್ಲದೆ ಯುವಕರು (Youths) ನಾಚಿಸುವಂತೆ ಪದವಿ ಪಡೆದು ಸಾಕಷ್ಟು ಜನರು ತಮ್ಮ ಜೀವನಕ್ಕೆ(Life) ಒಂದು ಅರ್ಥ ಕೊಟ್ಟು ಕೊಂಡಿದ್ದಾರೆ.. ನೂರು ವರ್ಷ ದಾಟಿದ ಎಸ್ಎಸ್ಎಲ್​ಸಿ ಪರೀಕ್ಷೆ ಬರೆದ ಘಟನೆ ಕೂಡ ಇದೆ. 16 ವರ್ಷದ ಬಾಲಕ ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದು ಅಚ್ಚರಿ ಮೂಡಿಸಿದ ಘಟನೆ ಗಳು ಇವೆ.. ಆದರೆ ಇದಕ್ಕೆಲ್ಲದಕ್ಕೂ ಕಾರಣ ಆಗಿದ್ದು ಓದಬೇಕೆಂಬ ಹಂಬಲ.. ಓದಿನ ಮೇಲೆ ಇದ್ದ ಅತೀವ ಆಸಕ್ತಿ. ಓದಬೇಕು ಎಂಬ ಆಸಕ್ತಿಯೇ ಕೆಲವರನ್ನ ಇಳಿವಯಸ್ಸಿನಲ್ಲಿ ಪದವಿ ಪಡೆಯುವಂತೆ ಮಾಡುತ್ತದೆ. ಅದೇ ರೀತಿ ಈಗ 87 ವರ್ಷದ ವೃದ್ಧರೊಬ್ಬರು, ಓದು ಹಾಗೂ ಕಲಿಕೆ ಬಗ್ಗೆ ತಮಗಿದ್ದ ಆಸಕ್ತಿಯಿಂದಲೇ ಅರ್ಥಶಾಸ್ತ್ರದಲ್ಲಿ ಪದವಿ ಪಡೆದುಕೊಂಡಿದ್ದಾರೆ..

  ಮೊಮ್ಮಗಳ ಜೊತೆಯೇ ಪದವಿ ಪಡೆದ ವೃದ್ಧ

  ನಾವು ಈಗಾಗಲೇ ಹಲವಾರು ಬಾರಿ ತಂದೆ ಮಕ್ಕಳು, ವಯಸ್ಸಾದ ವ್ಯಕ್ತಿಗಳು ಪದವಿ ಪಡೆದಿರುವ ಹಲವಾರು ಘಟನೆಯನ್ನು ನೋಡಿದ್ದೇವೆ.. ಆದರೆ ಅಮೆರಿಕಾದಲ್ಲಿ ನಡೆದಿರುವ ಘಟನೆಯೊಂದು ತೀವ್ರ ವಿಭಿನ್ನ ಎನಿಸಿಕೊಂಡು ಎಲ್ಲರನ್ನೂ ಭಾವನಾತ್ಮಕವಾಗಿ ಮಾಡುತ್ತದೆ. ಹೌದು 87 ವರ್ಷದ ವೃದ್ಧರೊಬ್ಬರು ತಮ್ಮ ಮೊಮ್ಮಗಳ ಜೊತೆಯಲ್ಲಿ ಓದಿ ಅರ್ಥ ಶಾಸ್ತ್ರದಲ್ಲಿ ಪದವಿ ಪಡೆದುಕೊಂಡಿದ್ದಾರೆ.

  ಇದನ್ನೂ ಓದಿ: ಸುಮ್ಮನಿರಲಾರದೇ ತಜಕಿಸ್ತಾನಕ್ಕೆ 6 ಕೋಟಿ ಹಣ ವರ್ಗಾವಣೆ ಮಾಡಿ ಇಂಗು ತಿಂದ ಮಂಗನಂತೆ ಆದ ಅಫ್ಘನ್ ತಾಲಿಬಾನ್ ಸರ್ಕಾರ

  ಅಮೆರಿಕಾದ ನ್ಯೂಯಾರ್ಕಿನಲ್ಲಿ, ರೆನೇ ನೀರಾ ಎನ್ನುವ 87 ವರ್ಷದ ವೃದ್ಧರೊಬ್ಬರು ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ವಿಶೇಷ ಅಂದ್ರೆ ಅಜ್ಜನ ಜೊತೆಗೆ ಆತನ ಮೊಮ್ಮಗಳು ಮೆಲಾನಿ ಸಲಜರ್​ ಸಮೂಹ ಸಂವಹನ ವಿಷಯದಲ್ಲಿ ಪದವಿ ಪಡೆದಿದ್ದಾಳೆ. ಯುಟಿಎಸ್‌ಎ ಕಾಲೇಜ್ ಆಫ್ ಲಿಬರಲ್ ಮತ್ತು ಫೈನ್ ಆರ್ಟ್ಸ್ ಈ ಅಜ್ಜ ಮೊಮ್ಮಗಳಿಗೆ ಪದವಿ ಪ್ರದಾನ ಮಾಡಿ ಇವರ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ.

  ಮಾರಣಾಂತಿಕ ಕಾಯಿಲೆಯಿಂದ ಬಳುಲುತ್ತಿರುವ ರೆನೇ ನೀರಾ

  ಇನ್ನು 87ನೇ ವಯಸ್ಸಿನಲ್ಲಿ ಪದವಿ ಪಡೆದು ಕೊಂಡಿರುವ ರೆನೇ ನೀರಾ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ.. ಆದರೆ ಇದ್ಯಾವುದನ್ನೂ ಲೆಕ್ಕಿಸದೆ 2016ರಲ್ಲಿ ಕಾಲೇಜಿಗೆ ಸೇರಿದ ರೆನೇ ನೀರಾ ಅವರಿಗೆ ಹೋಗುವ ಹಂಬಲ ಹೆಚ್ಚಾಗಿತ್ತು.. ಹೀಗಾಗಿ ಇಳಿವಯಸ್ಸಿನಲ್ಲಿ ಓದಿ ಗಾಲಿ ಕುರ್ಚಿಯಲ್ಲಿ ಕುಳಿತು ಕೊಂಡು ಬಂದು ಪದವಿ ಪಡೆದುಕೊಂಡಿದ್ದಾರೆ. ಇನ್ನು
  ರೆನೇ ನೀರಾ ಗಾಲಿ ಕುರ್ಚಿಯಲ್ಲಿ ಕುಳಿತು ಪದವಿ ಸ್ವೀಕಾರ ಮಾಡುತ್ತಿರುವ ಫೋಟೋಗಳನ್ನು ಯುಟಿಎಸ್‌ಎ ಕಾಲೇಜ್ ಆಫ್ ಲಿಬರಲ್ ಮತ್ತು ಫೈನ್ ಆರ್ಟ್ಸ್ ತನ್ನ ಫೇಸ್‌ಬುಕ್‌ ಮತ್ತು ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದೆ. ಇದಕ್ಕೆ ಪ್ರಪಂಚದಾದ್ಯಂತ ಇರುವ ನೆಟ್ಟಿಗರು ಅಭಿನಂದನೆಯ ಜೊತೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಯುಟಿಎಸ್‌ಎ ಕಾಲೇಜಿನ ಈ ಪೋಸ್ಟನ್ನು ಟೆಕ್ಸಾಸ್‌ನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸದಸ್ಯ ಡಿಯಾಗೋ ಬರ್ನಾಲ್ ಚಿತ್ರಕಥೆಗಾರ ಮತ್ತು ಫೋಟೋ ಜರ್ನಲಿಸ್ಟ್ ರೊಲ್ಯಾಂಡೊ ಗೊಮೇಜ್ ಮತ್ತು ಸೆನೆಟರ್ ಜೋಸ್ ಮೆನೆಂಡೆಜ್ ಇತರರು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ.  ಇದನ್ನೂ ಓದಿ: ದೇಶದಲ್ಲಿ ಹೆಚ್ಚುತ್ತಿರುವ ಓಮೈಕ್ರಾನ್​ ಪ್ರಕರಣ; ನಾಳೆ ಆರೋಗ್ಯ ಅಧಿಕಾರಿಗಳೊಂದಿಗೆ ಪ್ರಧಾನಿ ಸಭೆ

  1950ರ ಬಳಿಕ 2016ರಲ್ಲಿ ಓದುವ ಹಂಬಲ

  ಇನ್ನು ರೆನೇ ನೀರಾ ಅವರ ಮೊಮ್ಮಗಳ ಪ್ರಕಾರ 1950ರಲ್ಲಿ ರೆನೇ ನೀರಾ ಸೇಂಟ್ ಮೇರಿಸ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದರು. ಆದರೆ ಆ ವೇಳೆಗೆ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಾರಣ ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಬೇಕಾಯಿತು.. ಆದರೆ ತಮ್ಮ ಪತ್ನಿಯ ಮರಣದ ನಂತರ ಅವರು ತಮ್ಮ ಶಿಕ್ಷಣ ಪೂರ್ಣಗೊಳಿಸಲು ಯತ್ನಿಸಿದರೂ ಕುಟುಂಬದ ಜವಾಬ್ದಾರಿಗಳು ಅವರಿಗೆ ಅಡಚಣೆಯಾಗಿತ್ತು.. ಆದರೆ ಅಂತಿಮವಾಗಿ 2016ರಲ್ಲಿ
  ರೆನೇ ನೀರಾ ತಮ್ಮ ಮೊಮ್ಮಗಳು ಸೇರಿದ್ದ ಯುಟಿಎಸ್‌ಎ ಕಾಲೇಜ್ ಆಫ್ ಲಿಬರಲ್ ಮತ್ತು ಫೈನ್ ಆರ್ಟ್ಸ್‌ಗೆ ಬಂದು ತಮ್ಮ 82 ನೇ ವಯಸ್ಸಿನಲ್ಲಿ ಸೇರಿಕೊಂಡರು. ಕೊನೆಗೆ ಇಂದು 87ನೇ ವಯಸ್ಸಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದುಕೊಂಡು ನೂರಾರು ಜನರಿಗೆ ಸ್ಫೂರ್ತಿಯಾಗಿದ್ದಾರೆ.
  Published by:ranjumbkgowda1 ranjumbkgowda1
  First published: