Rich Cat: ಡಿಸೈನರ್ ಡ್ರೆಸ್ ಧರಿಸಿ ಸ್ಪಾಗೆ ಹೋಗುತ್ತೆ ಈ ಶ್ರೀಮಂತ ಬೆಕ್ಕು..! ಬರ್ತ್​ಡೇಗೆ ಸಿಕ್ತು ಬಂಪರ್ ಗಿಫ್ಟ್

ಈ ಬೆಕ್ಕಿಗೆ 100 ಗ್ರಾಂ ತೂಕದ ಬಂಗಾರ ಸರ ಹಾಕಿಕೊಳ್ಳುವ ಭಾಗ್ಯವಿರುವುದನ್ನು ಕಂಡು ಬಹಳಷ್ಟು ಮಂದಿಗೆ ಅಸೂಯೆಯಾಗುವುದಂತೂ ನಿಜ. ಅಂದ ಹಾಗೆ ಈ ಬೆಕ್ಕಿನ ಹೆಸರೇನು ಗೊತ್ತೇ? ಮನಿ..!

ಶ್ರೀಮಂತ ಬೆಕ್ಕು

ಶ್ರೀಮಂತ ಬೆಕ್ಕು

  • Share this:
ತಮ್ಮ ಸಾಕು ಪ್ರಾಣಿಗಳನ್ನು (Pet love) ಪ್ರೀತಿಸದವರು ಬಹಳ ವಿರಳ. ಅವುಗಳನ್ನು ಮುದ್ದಾಡುವುದು, ಅವುಗಳ ಜೊತೆ ಆಟವಾಡುವುದು, ಅವುಗಳಿಗೆ ಇಷ್ಟವಾದ ಆಹಾರ ತಿನಿಸುವುದು ಮತ್ತು ಅವುಗಳಿಗೆ ಉಡುಗೆ (Dress) ತೊಡಿಸಿ ಸುಂದರವಾಗಿ ಅಲಂಕರಿಸುವುದರಲ್ಲಿ ಪ್ರಾಣಿ ಪ್ರಿಯರು ಖುಷಿ ಕಾಣುತ್ತಾರೆ. ಇನ್ನು ಕೆಲವು ಮಂದಿಯಂತೂ ತಮ್ಮ ಸಾಕು ಪ್ರಾಣಿಗಳ ಮೇಲಿನ ಪ್ರೀತಿಯಿಂದ ಕೊಂಚ ಅತಿ ಎನಿಸುವಂತಹ ಅಥವಾ ಇತರರು ಅಚ್ಚರಿಯಿಂದ ಹುಬ್ಬೇರಿಸುವಂತಹ ಕೆಲಸಗಳನ್ನು ಮಾಡುವುದುಂಟು. ಸ್ವಂತ ಮಕ್ಕಳಿಗಿಂತಲೂ ತಮ್ಮ ಸಾಕು ಪ್ರಾಣಿಗಳನ್ನು ಪ್ರೀತಿಸಿ, ಅವುಗಳಿಗೋಸ್ಕರ ವಿಚಿತ್ರ ಮತ್ತು ವಿರಳ ಕಾರ್ಯಗಳನ್ನು ಮಾಡುವ ಮಾಲೀಕರು ಇದ್ದಾರೆ. ಅಂತದ್ದೇ ಒಬ್ಬ ಸಾಕು ಪ್ರಾಣಿ ಪ್ರಿಯ ಮಹಿಳೆಯ (Woman) ಸಂಗತಿ ಇಲ್ಲಿದೆ. ಆ ಮಹಿಳೆ ಮಾಡಿರುವ ಕೆಲಸವಾದರೂ ಏನು ಗೊತ್ತೆ? ತನ್ನ ಮುದ್ದಿನ ಬೆಕ್ಕಿಗೆ ದುಬಾರಿ ಉಡುಗೊರೆ (Luxury Gift) ಕೊಟ್ಟದ್ದು..!

ಆ ಉಡುಗೊರೆಯನ್ನು ಬೆಕ್ಕಿಗೆ ತೊಡಿಸಿ, ಫೋಟೋ ತೆಗೆದು , ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ ಕೂಡ. ಮಾಲೀಕಳು ಕೊಟ್ಟ ಉಡುಗೊರೆ ತೊಟ್ಟು, ಪೋಸ್ ಕೊಟ್ಟು ಕುಳಿತ ಆ ಬೆಕ್ಕಿನ ಫೋಟೋ ನೋಡಿ ನೆಟ್ಟಿಗರು, “ಅಬ್ಬಬ್ಬಾ.. ಎಲಾ.. ಮಾರ್ಜಾಲದ ಅದೃಷ್ಟವೇ..?” ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಅಷ್ಟಕ್ಕೂ ಆಕೆ ತನ್ನ ಬೆಕ್ಕಿಗೆ ಕೊಟ್ಟ ಉಡುಗೊರೆಯಾದರೂ ಏನು ಅನ್ನುತ್ತೀರಾ..? ಬರೋಬ್ಬರಿ 100 ಗ್ರಾಂ ತೂಕದ ಚಿನ್ನದ ಸರ..!  (Gold Chain) ಸುಂದರವಾದ ಆ ಚಿನ್ನದ ಸರದಲ್ಲಿ ಒಂದು ದೊಡ್ಡ ಪದಕ ಕೂಡ ಇದೆ..

100 ಗ್ರಾಮ್ ಚಿನ್ನದ ಸರ

ನಮ್ಮಲ್ಲಿ ಸಾಮಾನ್ಯ ಜನ ಒಂದು ಗ್ರಾಂ ಚಿನ್ನ ಕೊಳ್ಳುವಾಗಲೂ ಸಾವಿರ ಬಾರಿ ಮೀನಮೇಷ ಎಣಿಸುತ್ತಾರೆ, ಅಂತದ್ದರಲ್ಲಿ ಈ ಬೆಕ್ಕಿಗೆ 100 ಗ್ರಾಂ ತೂಕದ ಬಂಗಾರ ಸರ ಹಾಕಿಕೊಳ್ಳುವ ಭಾಗ್ಯವಿರುವುದನ್ನು ಕಂಡು ಬಹಳಷ್ಟು ಮಂದಿಗೆ ಅಸೂಯೆಯಾಗುವುದಂತೂ ನಿಜ. ಅಂದ ಹಾಗೆ ಈ ಬೆಕ್ಕಿನ ಹೆಸರೇನು ಗೊತ್ತೇ? ಮನಿ..! ಬೆಕ್ಕಿನ ಹೆಸರಿಗೆ ತಕ್ಕಂತೆ ಅದೃಷ್ಟವೂ (Luck) ಇದೆ ಅಲ್ಲವೇ? ಈ ಉಡುಗೊರೆಯ ಮೊತ್ತ ಸುಮಾರು 4.5 ಲಕ್ಷ ರೂ.ಗಳು. ಆ ಬಂಗಾರದ ಸರವನ್ನು ವಿಶೇಷವಾಗಿ, ಬೆಕ್ಕಿಗೆಂದೇ ಮಾಡಿಸಿರುವುದರಿಂದ ಅದರಲ್ಲಿ ಮನಿಯ ಹೆಸರು ಮತ್ತು ಹುಟ್ಟಿನ ದಿನಾಂಕವನ್ನು ಕೂಡ ಕೆತ್ತಿಸಲಾಗಿದೆ. ಆ ಸರವನ್ನು ಯಾರೂ ತೊಡಬಾರದು ಮತ್ತು ಮಾರಾಟ ಮಾಡಬಾರದು ಎಂಬುವುದೇ ಆದರ ಉದ್ದೇಶ ಎನ್ನುತ್ತಾರೆ ಬೆಕ್ಕಿನ ಮಾಲೀಕಳಾದ ಹಲೀಜಾ.

ಇದನ್ನೂ ಓದಿ: Black Cat: ಈ ದೇಶದ ಜನರಿಗೆ ಕಪ್ಪು ಬೆಕ್ಕೆಂದರೆ ಅದೃಷ್ಟ! ಪ್ರಯಾಣದ ವೇಳೆ ಸಿಕ್ಕರೆ ಶುಭ ಶಕುನವಂತೆ!

ಬೆಕ್ಕು ಬಂದಾಗಿನಿಂದ ಬ್ಯುಸಿನೆಸ್​ನಲ್ಲಿ ಲಾಭ

“ಒಂದು ವೇಳೆ ನಾನು ಇಲ್ಲಿ ಇಲ್ಲದಿದ್ದರೂ ಬಂಗಾರದ ಸರ ಮನಿಗಾಗಿ ಇರುತ್ತದೆ” ಎಂದು ಆಕೆ ಹೇಳಿದ್ದಾರೆ. 2018ರಲ್ಲಿ , ಹಲೀಜಾ ಮತ್ತು ಆಕೆ ಪತಿ ಮನಿಯನ್ನು ಒಂದು ಪೆಟ್ ಸ್ಟೋರ್‌ನಿಂದ 32,000 ರೂ.ಗಳಿಗೆ ಖರೀದಿಸಿದ್ದರು. ಮನಿ ಅವರ ಜೀವನವನ್ನು ಪ್ರವೇಶಿಸಿದಾಗಿನಿಂದ ತನ್ನ ಉದ್ದಿಮೆ (Business) ಏಳಿಗೆಯನ್ನು ಕಂಡಿತು ಎಂಬುವುದು ಹಲೀಜಾ ಅವರ ಅಭಿಪ್ರಾಯ.


ಒಂಟಿತನವನ್ನು ಕಳೆದ ಬೆಕ್ಕು

ಹಲೀಜಾ ಅವರ ಮಕ್ಕಳು ಬೆಳೆದು ದೊಡ್ಡವರಾಗಿ, ದೂರ ಹೋದ ಬಳಿಕ, ಮನಿ ಆಕೆಯ ಒಂಟಿತನವನ್ನು ದೂರ ಮಾಡಲು ಕೂಡ ಸಹಾಯ ಮಾಡಿತು. ಈ ಕಾರಣಕ್ಕಾಗಿ , ಹಲೀಜಾ ಮತ್ತು ಆಕೆಯ ಗಂಡ ತಮ್ಮ ಬೆಕ್ಕಿನ ಅನುಕೂಲಕರ ಬದುಕಿಗೆ ವ್ಯವಸ್ಥೆ ಮಾಡಿದ್ದಾರೆ. ಅಷ್ಟೇ ಅಲ್ಲ, ಮನಿ ಎಂಬ ಹೆಸರಿನ ಈ ಮಾರ್ಜಾಲ , ಮನುಷ್ಯರು ಕೂಡ ಮತ್ಸರ ಪಡುವಷ್ಟು ವಿಶೇಷ ಸೌಲಭ್ಯಗಳನ್ನು ಅನುಭವಿಸುತ್ತಿದೆ.

ಇದನ್ನೂ ಓದಿ: Bengaluru: ಬೆಕ್ಕು ಕಳ್ಳತನ, ದೂರು ದಾಖಲು: ಹುಡುಕಿ ಕೊಟ್ಟವರಿಗೆ ಭಾರೀ ನಗದು ಬಹುಮಾನ

ಪ್ರತಿ ತಿಂಗಳು ಸ್ಪಾಗೆ ಸವಾರಿ

ಮನಿ ಪ್ರತಿ ತಿಂಗಳು ಸ್ಪಾಗೆ ಹೋಗುತ್ತದೆ. ಹಲೀಜಾ ಮತ್ತು ಆಕೆಯ ಪತಿ ತಮ್ಮ ಮನೆಯಲ್ಲಿ ಮನಿಗೆಂದೇ ಪ್ರತ್ಯೇಕ ಕೋಣೆಯನ್ನು ಕೂಡ ಮೀಸಲಿಟ್ಟಿದ್ದಾರೆ. ಅದು ಥೈಲ್ಯಾಂಡ್‍ನಲ್ಲಿ ವಿನ್ಯಾಸ ಮಾಡಲಾಗಿರುವ ಡಿಸೈನರ್ ಬಟ್ಟೆಗಳನ್ನಷ್ಟೇ (Designer wear) ತೊಡುತ್ತದೆ. ಪ್ರತಿ 6 ತಿಂಗಳಿಗೊಮ್ಮೆ ಕೇವಲ ಮನಿಗಾಗಿ ಶಾಪಿಂಗ್ ಮಾಡಲೆಂದೇ ಆ ದಂಪತಿ ಥೈಲ್ಯಾಂಡ್ ಹೋಗುತ್ತಾರಂತೆ..!


ಮನೆಯಲ್ಲಿ ಒಂಟಿಯಾಗಿ ಬಿಟ್ಟು ಹೋಗೋದೇ ಇಲ್ಲ

ಈ ಸಾಕು ಪ್ರಾಣಿಯ ಮೇಲೆ ಎಷ್ಟೊಂದು ಪ್ರೀತಿಯ ಸುರಿಮಳೆ ಸುರಿಸಲಾಗುತ್ತದೆ ಎಂದರೆ, ಅದು ಎಂದೂ ನೆಲದ ಮೇಲೆ ಕಾಲಿಟ್ಟಿಲ್ಲವಂತೆ. ಅದನ್ನು ಮನೆಯಲ್ಲಿ ಒಂಟಿಯಾಗಿ ಬಿಟ್ಟು ಹೋಗುವುದಿಲ್ಲ. ಮನಿ, ಹಲೀಜಾ ಮತ್ತು ಆಕೆಯ ಪತಿಯ ಜೊತೆ ಆಫೀಸ್‍ಗೂ ಹೋಗುತ್ತದಂತೆ. ಮಾನವರಾಗುವ ಬದಲು ಮನಿಯಾಗಿದ್ದರೆ ಎಷ್ಟು ಚೆನ್ನಾಗಿತ್ತು ಎಂದನಿಸುತ್ತಿದೆಯೇ..?
Published by:Divya D
First published: