ಮದುವೆಯಾಗುವಂತೆ ಹೆತ್ತವರ ಒತ್ತಾಯ: ತನ್ನನ್ನು ತಾನೇ ವಿವಾಹವಾದ ಯುವತಿ!

zahir | news18
Updated:October 11, 2018, 7:20 PM IST
ಮದುವೆಯಾಗುವಂತೆ ಹೆತ್ತವರ ಒತ್ತಾಯ: ತನ್ನನ್ನು ತಾನೇ ವಿವಾಹವಾದ ಯುವತಿ!
zahir | news18
Updated: October 11, 2018, 7:20 PM IST
-ನ್ಯೂಸ್ 18 ಕನ್ನಡ

ಮದುವೆ ಆದ್ಮೇಲೆ ಕೂಡಿ ಬಾಳಿದರೆ ಅದುವೇ ಸ್ವರ್ಗ ಸುಖ ಎಂಬ ಮಾತೊಂದಿದೆ. ಆದರೆ ಉಗಾಂಡದಲ್ಲಿ ಇತ್ತೀಚೆಗೆ ಮದುವೆಯಾದ ಲುಲು ಜೆಮಿಯಾಗೆ ಈ ಮಾತು ಅನ್ವಯಿಸುವುದಿಲ್ಲ. ಏಕೆಂದರೆ ಇವರು ಮದುವೆ ಆಗಿರುವುದು ಇವರನ್ನೇ! ಆಶ್ಚರ್ಯ ಅನಿಸಿದರೂ ಇದು ಸತ್ಯ.

32 ವರ್ಷದ ಲುಲು ಜೆಮಿಯಾ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದಲ್ಲಿ ವಿದ್ಯಭ್ಯಾಸ ಮಾಡುತ್ತಿದ್ದಾರೆ. ಇದರ ನಡುವೆ ಮದುವೆಯಾಗುವಂತೆ ಪೋಷಕರು ಒತ್ತಡ ಹೇರುತ್ತಿದ್ದರು. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಒಂದಷ್ಟು ಸಾಧನೆ ಮಾಡಬೇಕೆಂಬ ಆಸೆ ಹೊಂದಿದ್ದ ಲುಲು ವಿವಾಹವನ್ನು ನಿರಾಕರಿಸುತ್ತಲೇ ಬಂದಿದ್ದಾರೆ.

ಇತ್ತೀಚೆಗೆ  ಮದುವೆ ವಿಷಯವಾಗಿ ಕುಟುಂಬದಲ್ಲಿ ಒತ್ತಡಗಳು ಹೆಚ್ಚಾಗಿದೆ. ಆದರೆ ಸೃಜನಾತ್ಮಕ ಬರವಣಿಗೆಯಲ್ಲಿ ಸ್ನಾತಕೋತ್ತರ ಪದವಿ ಪಡೆಯಬೇಕೆಂದು ಲುಲು ಬಯಸಿದ್ದರು. ತನ್ನ ಸಾಧನೆಗಳ ಕನಸುಗಳ ನಡುವೆ ವಿವಾಹ ಬಂಧವನ್ನು ಲುಲು ಜೆಮಿಯಾ ಕೊನೆ ಸಾಲಿನಲ್ಲಿ ಅದಾಗಲೇ ನಿಲ್ಲಿಸಿಯಾಗಿತ್ತು.

ಆದರೂ ಪೋಷಕರ ಒತ್ತಡದಿಂದ ಪಾರಾಗಲು ಆಗಸ್ಟ್​ 27ರಂದು ಮದುವೆಯಾಗಲು ಲುಲು ನಿರ್ಧರಿಸಿದ್ದರು. ಇದಕ್ಕಾಗಿ ಬಿಳಿ ಗೌನ್ ಧರಿಸಿ ಮಧುಮಗಳಂತೆ ಶೃಂಗರಿಸಿ ಕ್ಯೂಪಸಾ ಬಾರ್​ಗೆ ಆಗಮಿಸಿದ್ದಾರೆ. ಈ ಸಮಾರಂಭದಲ್ಲಿ ಒಂದಷ್ಟು ಸ್ನೇಹಿತರ ಸಮ್ಮುಖದಲ್ಲಿ ಲುಲು ತನ್ನನ್ನೇ ತಾನು ವಿವಾಹವಾಗಿದ್ದಾರೆ. ವರನಿಲ್ಲದ ವಿವಾಹ ಸಮಾರಂಭಕ್ಕೆ ಪೋಷಕರನ್ನು ಆಹ್ವಾನಿಸಿದರೂ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ ಎಂಬುದು ಲುಲುಗೆ ಬೇಸರವನ್ನುಂಟು ಮಾಡಿದೆ. ಆದರೆ ಇವರ ಸಿಂಗಲ್ ಮ್ಯಾರೇಜ್ ಫೋಟೊಗಳು ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲುಲು ವೈವಾಹಿಕ ಜೀವನಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
First published:October 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...