ಸೂರ್ಯನ ಬೆಳಕು ಕಾಣದೆ 28 ವರ್ಷದಿಂದ ಕಾಲ ಕಳೆಯುತ್ತಿರುವ ಮಹಿಳೆ: ಕಾರಣ ಹೀಗಿದೆ..!

ಇಲ್ಲೊಬ್ಬ ಮಹಿಳೆ ಬಿಸಿಲಿಗೆ ಹೋಗುವಂತಿಲ್ಲ. ಸೂರ್ಯನೆಡೆ ಕೊಂಚವೂ ನೋಡುವಂತಿಲ್ಲ. ಯಾಕೆಂದರೆ ಆಕೆ ಬಾಲ್ಯದಿಂದ 28 ಬಾರಿ ಚರ್ಮ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ. ಅವರೇ ಆ್ಯಂಡ್ರಿಯಾ ಇವೊನ್ನೆ ಮನ್‍ರಾಯ್.

ಸೂರ್ಯನ ಕಿರಣ

ಸೂರ್ಯನ ಕಿರಣ

  • Share this:
ಸೂರ್ಯನ ಕಿರಣಕ್ಕೆ ಮುಖ ಅಥವಾ ದೇಹವೊಡ್ಡಿದರೆ ಚರ್ಮದ ಕಾಯಿಲೆಗಳಿಂದ ದೂರವಿರಬಹುದು. ಸೂರ್ಯನ ಕಿರಣಗಳಿಂದ ಸಿಗುವ ವಿಟಮಿನ್ ‘ಡಿ’ ಚರ್ಮದ ಆರೈಕೆಗೆ ಪೂರಕಯಾಗಿದೆ. ಆದ್ದರಿಂದ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬೆಳಗಿನ ಎಳೆ ಬಿಸಿಲಿನಲ್ಲಿ ಮೈಯೊಡ್ಡುವಂತೆ ವೈದ್ಯರು ಸಲಹೆ ನೀಡುತ್ತಾರೆ.

ಆದರೆ ಇಲ್ಲೊಬ್ಬ ಮಹಿಳೆ ಬಿಸಿಲಿಗೆ ಹೋಗುವಂತಿಲ್ಲ. ಸೂರ್ಯನೆಡೆ ಕೊಂಚವೂ ನೋಡುವಂತಿಲ್ಲ. ಯಾಕೆಂದರೆ ಆಕೆ ಬಾಲ್ಯದಿಂದ 28 ಬಾರಿ ಚರ್ಮ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ. ಅವರೇ ಆ್ಯಂಡ್ರಿಯಾ ಇವೊನ್ನೆ ಮನ್‍ರಾಯ್. ಕ್ಯಾನ್ಸರ್‌ನಿಂದ ಅವರ ಚರ್ಮ ತುಂಬಾ ಸೂಕ್ಷ್ಮವಾಗಿದ್ದು, ಬಿಸಿಲಿಗೆ ಹೋದರೆ ಅದರ ಶಾಖವನ್ನು ತಡೆದುಕೊಳ್ಳುವ ಸಾಮರ್ಥ್ಯ ಕಳೆದುಕೊಂಡಿದ್ದಾರೆ. ಹಾಗಾಗಿ ಕಳೆದ 28 ವರ್ಷಗಳಿಂದ ಟಿಂಟೆಡ್ ವಿಂಡೋ ಹಾಕಿಕೊಂಡು ಮನೆಯ ಒಳಗೇ ಇದ್ದಾರೆ. ಎಕ್ಸೋಡರ್ಮ ಪಿಗ್‍ಮೆಂಟೋಸಮ್ ಎಂಬ ಕ್ಯಾನ್ಸರ್ ಇವರ ಈ ಸ್ಥಿತಿಗೆ ಕಾರಣವಾಗಿದೆ. ಆದರೆ ಇಂತಹ ಸಂದರ್ಭದಲ್ಲೂ ಜೀವನೋತ್ಸಾಹ ಕಳೆದುಕೊಳ್ಳದೆ ಬಹಳ ಉಲ್ಲಾಸದಿಂದ ಬದುಕುತ್ತಿದ್ದಾರೆ.

ಈ ಬಗ್ಗೆ ಖುದ್ದಾಗಿ ಆ್ಯಂಡ್ರಿಯಾ ಮಾತನಾಡುವ ಮಾತು ಇನ್ನಿತರರಿಗೆ ಸ್ಫೂರ್ತಿಯಾಗುವಂತಿದೆ. ಕ್ಯಾಲಿಪೊರ್ನಿಯಾದ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿರುವ ಅವರು ಈ ಕ್ಯಾನ್ಸರ್ ನನ್ನ ಬಹಳ ಕಾಲದವರೆಗೆ ಆಯ್ಕೆ ಮಾಡಿಕೊಂಡಿದೆ. ಇದರಿಂದ ನನ್ನ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಯಿತು. ನಾನು ನನ್ನ ಸ್ಥಿತಿಯನ್ನು ಸ್ವೀಕರಿಸಿದ್ದೇನೆ. ನಾನು ಇದರಿಂದ ಬಹುದೂರ ಸಾಗುತ್ತಿದ್ದೇನೆ ಎಂದು ನನಗೆ ಅನ್ನಿಸುವುದಿಲ್ಲ. ನನ್ನ ದೇಹ ನಿಧಾನವಾಗಿ ವಯಸ್ಸಾದವರ ರೀತಿಯಲ್ಲಿ ಭಾಸವಾಗುತ್ತಿತ್ತು. ಅದಕ್ಕೆ ನಾನು 23ನೇ ವಯಸ್ಸಿಗೆ ಋತುಚಕ್ರ ನಿಂತುಹೋಯಿತು ಎಂದು ಯೋಚಿಸಿದೆ. ನಾನು ನಾಲ್ಕು ವರ್ಷಗಳ ನಂತರ ಡಯಾಗ್ನೋಸಿಸ್ ಪಡೆದಾಗ ನನ್ನ ಮನಸ್ಸಿಗೆ ನೆಮ್ಮದಿ ದೊರೆಯಿತು. ನನಗೆ ಎಂದಿಗೂ ಅಮ್ಮನಾಗಬೇಕೆಂಬ ಆಸೆ ಇಲ್ಲ. ಆದ್ದರಿಂದ ಅದು ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.ಈ ಕಾಯಿಲೆಯಿಂದ ಬಳಲುತ್ತಿರುವವರು ತಮ್ಮ ಭವಿಷ್ಯದ ಬದುಕಿನ ಮೇಲೆ ನಿರಾಸೆ ಹೊಂದುತ್ತಾರೆ. ಆದರೆ ಆ್ಯಂಡ್ರಿಯಾ ಅವರ ಭವಿಷ್ಯದ ಮೇಲೆ ಬಹಳ ಭರವಸೆ ಇಟ್ಟು ಮುನ್ನಡೆಯುತ್ತಿದ್ದಾರೆ.
ತಮ್ಮ ಬಗ್ಗೆ ಹೆಚ್ಚು ಕಾಳಜಿ ವಹಿಸಿಕೊಂಡಿರುವ ಆ್ಯಂಡ್ರಿಯಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಮೆಡಿಕಲ್ ವಿಚಾರಕ್ಕೆ ಮಾತ್ರ ಮನೆಯಿಂದ ಹೊರಗೆ ಹೋಗುತ್ತಾರೆ. ಇದರ ಕುರಿತು ಹೇಳುವ ಇವರು ನಾನು ರಾತ್ರಿ ವೇಳೆ ಮಾತ್ರ ಹೊರಗೆ ಹೋಗಬಹುದು. ಹಾಗಾಗಿ ಯುವಿಯನ್ನು ಪರೀಕ್ಷಿಸುವ ಸಲುವಾಗಿ ನನ್ನ ಜೊತೆ ಸೋಲಾರ್ ಮೀಟರ್‌ ಅನ್ನು ತೆಗೆದುಕೊಂಡು ಹೋಗುತ್ತೇನೆ. ಮಳೆಯ ವೇಳೆ ತುಂಬು ತೋಳಿನ ಅಂಗಿ, ಟೋಪಿ ಮತ್ತು ಫೇಸ್‍ಶೀಲ್ಡ್ ಬಳಸುತ್ತೇನೆ. ಕೆಲವೊಮ್ಮೆ ಈ ವಿಚಾರಗಳು ನನ್ನ ಮನಸ್ಸನ್ನು ಕೆದಕುತ್ತವೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಯಾಕೆಂದರೆ ನಾನು ಸರಿಯಾದ ಹಾದಿಯಲ್ಲಿ ಸಾಗುತ್ತಿದ್ದೇನೆ ಎಂದು ಅನಿಸುತ್ತಿದೆ. ಆದರೆ ಕೆಲವು ಹಂತಗಳಲ್ಲಿ ಮಾತ್ರ ನಿಯಂತ್ರಿಸಿಕೊಳ್ಳಲು ಆಗುವುದಿಲ್ಲ. ನನ್ನ ಕೈಯಲ್ಲಿ ಆಗುವುದಿಲ್ಲ ಎಂದು ಕೈಚೆಲ್ಲಿ ಕುಳಿತಿದ್ದು ಇದೆ. ಇದರ ಹೊರತಾಗಿಯೂ ನಾನು ನನ್ನ ಜೀವನವನ್ನು ಇಷ್ಟಪಡುತ್ತೇನೆ. ನಾನು ಕೊನೆಯವರೆಗೂ ಜೀವಿಸುತ್ತೇನೆ ಎನ್ನುತ್ತಾರೆ ಆ್ಯಂಡ್ರಿಯಾ.

ಚರ್ಮ ಕ್ಯಾನ್ಸರ್‌ನಿಂದ ದೂರ ಉಳಿಯಲು ಸಾಕಷ್ಟು ಬಾರಿ ಡಯಾಗ್ನೋಸಿಸ್ ಮೊರೆ ಹೋಗಿರುವ ಆ್ಯಂಡ್ರಿಯಾ 2020ರ ಅಕ್ಟೋಬರ್ ತಿಂಗಳಲ್ಲಿ ಡಯಾಗ್ನೋಸಿಸ್ ಮಾಡಿಸಿಕೊಂಡಿದ್ದು.
First published: