Viral Video: ಕೋತಿಗೆ ಕೈ ತುತ್ತು ತಿನ್ನಿಸುತ್ತಿರುವ ಮಹಿಳೆ; ಈ ಪ್ರೀತಿಗೆ ನೀವೇನು ಹೇಳುತ್ತೀರಿ?

ಚಂದ್​​ದಾಸ್​ ಅವರ ತಾಯಿ ಅನ್ನ ತರಕಾರಿಗಳನ್ನು ಸೇರಿಸಿ ಉಂಡೆ ಮಾಡಿ ಲಂಗೂರ್​ಗೆ ಮಮತೆಯಿಂದ ತಿನ್ನಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮಹಿಳೆಯ ಮಾತೃ ಹೃದಯವನ್ನುಅನೇಕರು ಕೊಂಡಾಡಿದ್ದಾರೆ.

news18
Updated:June 10, 2020, 8:16 PM IST
Viral Video: ಕೋತಿಗೆ ಕೈ ತುತ್ತು ತಿನ್ನಿಸುತ್ತಿರುವ ಮಹಿಳೆ; ಈ ಪ್ರೀತಿಗೆ ನೀವೇನು ಹೇಳುತ್ತೀರಿ?
ಲಂಗೂರ್
  • News18
  • Last Updated: June 10, 2020, 8:16 PM IST
  • Share this:
ಪ್ರೀತಿಗೆ ಯಾರ ಮನಸ್ಸು ಕರಗುವುದಿಲ್ಲ ಹೇಳಿ?. ಪ್ರತಿಯೊಬ್ಬರ ಮನಸ್ಸು ಕರಗುತ್ತದೆ. ಅಂತಹ ಶಕ್ತಿ ಪ್ರೀತಿಗಿದೆ. ಮನುಷ್ಯನಾದರು ಅಷ್ಟೇ ಪ್ರಾಣಿಯಾದರೂ ಅಷ್ಟೇ. ನಾವೆಷ್ಟು ಪ್ರೀತಿಯನ್ನು ನೀಡುತ್ತೇವೊ ಅಷ್ಟೇ ಪ್ರೀತಿಯನ್ನು ಅವುಗಳು ನೀಡುತ್ತವೆ. ಅದರಂತೆ ಇಲ್ಲೊಂದು ಕಾಡು ಪ್ರಾಣಿ ತಾಯಿಯ ಪ್ರೀತಿಗೆ ಮಗುವಂತಾಗಿದೆ. ಪ್ರಾಣಿ-ಮನುಷ್ಯ ಪ್ರೀತಿಗೆ ಹೇಗಿದೆ ಎಂಬುದು ಈ ವಿಡಿಯೋ ನೋಡಿದರೆ ಗೊತ್ತಾಗುತ್ತದೆ.

ಮನೆಯ ಟೇಬಲ್​ ಮೇಲೆ ಕುಳಿತ ಲಂಗೂರ್​. ಪಕ್ಕದಲ್ಲಿ ಮಹಿಳೆಯೊಬ್ಬಳು ಆಹಾರದ ತಟ್ಟೆಯಿಂದ ಒಂದೊಂದೆ ತುತ್ತನ್ನು ಅದರ ಬಾಯಿಗೆ ನೀಡುತ್ತಿದ್ದಾರೆ. ಆ ಕೋತಿ ಕೂಡ ಯಾವುದೇ ಅಂಜಿಕೆಯಿಲ್ಲದೆ ಮಹಿಳೆ ನೀಡುತ್ತಿರುವ ಆಹಾರವನ್ನು ಚೆನ್ನಾಗಿ ತಿನ್ನುತ್ತಿದೆ.ಈ ದೃಶ್ಯ ಕಂಡು ಬಂದಿರುವುದು  ಪಶ್ವಿಮ ಬಂಗಾಳದ ಬಿರ್ಭುಮ್​​ ಜಿಲ್ಲೆಯ ಮಯೂರೇಶ್ವರದಲ್ಲಿ. ಚಂದ್​​ ದಾಸ್​​​ ತಮ್ಮ ಮನೆಗೆ ಬಂದ ಕೋತಿ ಆರಾಮವಾಗಿ ಆಹಾರ ಸೇವಿಸುತ್ತಿರುವ ವಿಡಿಯೋವನ್ನು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಚಂದ್​​ದಾಸ್​ ಅವರ ತಾಯಿ ಅನ್ನ ತರಕಾರಿಗಳನ್ನು ಸೇರಿಸಿ ಉಂಡೆ ಮಾಡಿ ಲಂಗೂರ್​ಗೆ ಮಮತೆಯಿಂದ ತಿನ್ನಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮಹಿಳೆಯ ಮಾತೃ ಹೃದಯವನ್ನುಅನೇಕರು ಕೊಂಡಾಡಿದ್ದಾರೆ.

Viral: ರಾಧಿಕಾ ಪಂಡಿತ್ ಹರಿಬಿಟ್ಟಿದ್ದ ಪೋಸ್ಟ್​​ವೊಂದಕ್ಕೆ ಭಾವನಾತ್ಮಕವಾಗಿ ಕಾಮೆಂಟ್ ಮಾಡಿದ್ದರು ಚಿರು!
First published: June 10, 2020, 8:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading