Viral Video: ವಿಡಿಯೋ ಕಾಲ್‌ನಲ್ಲಿ ಕುರ್ಚಿ ಮುರಿದು ಫಜೀತಿಗೀಡಾದ ಮಹಿಳೆ; ನಗೆಗಡಲಲ್ಲಿ ತೇಲಿದ ನೆಟ್ಟಿಗರು

ತನ್ನ ಕಂಪೆನಿಯ ಸಿಇಒ ಅವರೊಂದಿಗೆ ವಿಡಿಯೋ ಕರೆಯಲ್ಲಿ ಮಾತನಾಡುತ್ತಿರುವಾಗ ಮಹಿಳೆಯು ಕುಳಿತಿದ್ದ ಕುರ್ಚಿ ಮುರಿದು ಅವರು ಕೆಳಕ್ಕೆ ಬಿದ್ದಿದ್ದಾರೆ. ಇದನ್ನೆಲ್ಲಾ ನಾವು ರೆಕಾರ್ಡ್ ಆದಂತಹ ವಿಡಿಯೋದಲ್ಲಿ ನೋಡಬಹುದಾಗಿದೆ

ವೈರಲ್ ವಿಡಿಯೋ ದೃಶ್ಯ

ವೈರಲ್ ವಿಡಿಯೋ ದೃಶ್ಯ

  • Share this:

ಈ ಕೋವಿಡ್-19 ವೈರಸ್ (Coronavirus)ಹಾವಳಿಯಿಂದಾಗಿ ಕಳೆದ ಒಂದೂವರೆ ವರ್ಷದಿಂದ ಬಹುತೇಕ ಜನರು ತಮ್ಮ ಕಂಪೆನಿಯ ಕೆಲಸವನ್ನು ಮನೆಯಲ್ಲಿ ಕುಳಿತುಕೊಂಡು ಮಾಡುತ್ತಿದ್ದಾರೆ.ಈ 'ವರ್ಕ್ ಫ್ರಂ ಹೋಂ(Work From Home)' ಬಗ್ಗೆ ತುಂಬಾ ಜನರು ತಮಾಷೆಯಾಗಿ ಸಂದೇಶಗಳನ್ನು ಮತ್ತು ವಿಡಿಯೋಗಳನ್ನು ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಲು ಬಿಟ್ಟಿರುವುದನ್ನು ನಮ್ಮ ಕಣ್ಣಿಗೂ ಬಿದ್ದಿರುತ್ತದೆ ಮತ್ತು ಅದನ್ನು ನೋಡಿ ನಾವು ಸಹ ತುಂಬಾನೇ ನಕ್ಕಿರುತ್ತೇವೆ.


ನಾವು ಮನೆಯಲ್ಲಿ ಕುಳಿತು ಕೆಲಸ ಮಾಡುವುದರಿಂದ ನಾವು ಅನೇಕ ಅಡ್ಡಿ ಆತಂಕಗಳನ್ನು ನಾವೆಲ್ಲಾರು ಅನುಭವಿಸಿರುತ್ತೇವೆ. ಕೆಲವೊಂದು ಹಾಸ್ಯಾಸ್ಪದ ಘಟನೆಗಳು ಸಹ ನಡೆದಿರುತ್ತವೆ.ಇಲ್ಲಿ ಸಹ ಅಂತಹದೇ ಒಂದು ಘಟನೆಯಲ್ಲಿ ಮಹಿಳೆಯೊಬ್ಬರು ತಮ್ಮ ಸಿಇಒ ಮತ್ತು ಇತರೆ ಸಹೋದ್ಯೋಗಿಗಳೊಂದಿಗೆ ವಿಡಿಯೋ ಕರೆಯ ಮೂಲಕ ನಡೆಸುತ್ತಿರುವಂತಹ ಮೀಟಿಂಗ್‌ನಲ್ಲಿ ಮಾತನಾಡುತ್ತಿರುವಾಗ ಈ ಘಟನೆ ನಡೆದಿದೆ.











View this post on Instagram






A post shared by Charlotte (@charkozy)





ತನ್ನ ಕಂಪೆನಿಯ ಸಿಇಒ ಅವರೊಂದಿಗೆ ವಿಡಿಯೋ ಕರೆಯಲ್ಲಿ ಮಾತನಾಡುತ್ತಿರುವಾಗ ಮಹಿಳೆಯು ಕುಳಿತಿದ್ದ ಕುರ್ಚಿ ಮುರಿದು ಅವರು ಕೆಳಕ್ಕೆ ಬಿದ್ದಿದ್ದಾರೆ. ಇದನ್ನೆಲ್ಲಾ ನಾವು ರೆಕಾರ್ಡ್ ಆದಂತಹ ವಿಡಿಯೋದಲ್ಲಿ ನೋಡಬಹುದಾಗಿದೆ.ಆ ಮಹಿಳೆಯೇ ಸ್ವತಃ ಈ ಘಟನೆಯ ವಿಡಿಯೋ ತುಣುಕೊಂದನ್ನು ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. “ನನ್ನ ಸಿಇಒ ವೊಂದಿಗೆ ವೀಡಿಯೋ ಕರೆಯಲ್ಲಿದ್ದಾಗ ನನ್ನ ಕುರ್ಚಿ ಮುರಿದಿದೆ, ನೋಡಿ ಆನಂದಿಸಿ” ಎಂದು ಚಾರ್ಲೆಟ್ ಅವರು ತಮ್ಮ ವೀಡಿಯೋವನ್ನು ಹಂಚಿಕೊಂಡು ಶೀರ್ಷಿಕೆಯನ್ನು ಬರೆದಿದ್ದಾರೆ.


ಇದನ್ನೂ ಓದಿ: ದಂಡ ವಿಧಿಸಲು ಕಾರಿನ ಬ್ಯಾನೆಟ್‍ ಹಿಡಿದುಕೊಂಡ ಮಾರ್ಷಲ್; ವಿಡಿಯೋ ವೈರಲ್

ಈ 1 ನಿಮಿಷ 5 ಸೆಕೆಂಡುಗಳ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ವೈರಲ್ ಆಗಿದ್ದು, ವಿಡಿಯೋದಲ್ಲಿ ಚಾರ್ಲೆಟ್ ತಾನು ವಿಡಿಯೋ ಕರೆಯಲ್ಲಿ ಮಾತನಾಡುತ್ತಿರುವಾಗ ತಾನು ಕುಳಿತ ಕುರ್ಚಿ ಮುರಿದು ಕೆಳಗೆ ಬೀಳುತ್ತಾರೆ. ಇದನ್ನು ನೋಡಿದ ಇತರೆ ಸಹೋದ್ಯೋಗಿಗಳಿಗೆ ಮತ್ತು ಅವರ ಸಿಇಒ ಅವರಿಗೆ ಒಂದು ಕ್ಷಣ ಆಘಾತವಾಗುತ್ತದೆ. ನಂತರ ಚಾರ್ಲೆಟ್ ಮಾತನಾಡುತ್ತಾ ಎದ್ದು ನಗಲು ಪ್ರಾರಂಭಿಸುತ್ತಾರೆ. ಚಾರ್ಲೆಟ್ ಕೆಳಗೆ ಬಿದ್ದಾಗ ಇದು ಸಹ ರೆಕಾರ್ಡ್ ಆಗುತ್ತಿದೆಯೇ ಎಂದು ತನ್ನ ಸಹದ್ಯೋಗಿಯನ್ನು ಕೇಳುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು.


ತನ್ನ ಕುರ್ಚಿ ಮುರಿದ ಮೇಲೆ ಮತ್ತೊಂದು ಕುರ್ಚಿ ತರಲು ಹೋಗುತ್ತಾಳೆ, ಆಗ ಅವರು ತಮ್ಮ ಕರೆಯನ್ನು ಮ್ಯೂಟ್ ಮಾಡಲು ಮರೆತಿರುವುದನ್ನು ಸಹ ನಾವು ನೋಡಬಹುದು. ಆಗ ಅವರು ಇನ್ನೊಂದು ಕುರ್ಚಿ ತರಲು ಹೋದಾಗ ಸಹದ್ಯೋಗಿಯೊಬ್ಬರು “ನಿಮಗೆ ಏನು ಆಗಿಲ್ಲವಲ್ಲ” ಎಂದು ವಿಚಾರಿಸಿದರು. ಈ ವಿಡಿಯೋವನ್ನು 11,000ಕ್ಕೂ ಹೆಚ್ಚು ಜನರು ನೋಡಿದ್ದು, 4,700ಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ ಮತ್ತು ಅನೇಕರು ತಮ್ಮ ಪ್ರತಿಕ್ರಿಯೆಯನ್ನು ಸಹ ವ್ಯಕ್ತ ಪಡಿಸಿದ್ದಾರೆ.


ಇದನ್ನೂ ಓದಿ: ಈ ಆಭರಣ ತೊಟ್ಟ ಸುಂದರಿ ತೃತೀಯ ಲಿಂಗಿ ಎಂದರೆ ನಂಬುತ್ತೀರಾ? ಎಲ್ಲರಿಗೂ ಬಹಳ ಇಷ್ಟವಾಗಿದೆ ಈ ವಿಡಿಯೋ

ಒಬ್ಬರು ಈ ವೈರಲ್ ವಿಡಿಯೋ ನೋಡಿ "ನಾನು ಅಕ್ಷರಶಃ ನಗುವುದನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ" ಎಂದು ಬರೆದರೆ, ಇನ್ನೊಬ್ಬರು "ಪ್ರತಿಯೊಬ್ಬರೂ 3 ಸೆಕೆಂಡುಗಳ ಕಾಲ ತುಂಬಾ ಕಾಳಜಿ ವ್ಯಕ್ತಪಡಿಸಿದರು, ನಂತರ ಎಲ್ಲರೂ ನಗಲಾರಂಭಿಸಿದರು" ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು "ನಾನು ಇದನ್ನು ಅನೇಕ ಬಾರಿ ನೋಡಿದ್ದೇನೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.


Published by:Sandhya M
First published: