• Home
  • »
  • News
  • »
  • trend
  • »
  • Love Story: ಅಬ್ಬಬ್ಬಾ ಇದೆಂತಾ ಲವ್ ಸ್ಟೋರಿ? ಪತಿಯ ಗೆಳತಿಯ ಗಂಡನ ಪ್ರೀತಿಯಲ್ಲಿ ಬಿದ್ದ ಮಹಿಳೆ

Love Story: ಅಬ್ಬಬ್ಬಾ ಇದೆಂತಾ ಲವ್ ಸ್ಟೋರಿ? ಪತಿಯ ಗೆಳತಿಯ ಗಂಡನ ಪ್ರೀತಿಯಲ್ಲಿ ಬಿದ್ದ ಮಹಿಳೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇಲ್ಲೊಬ್ಬ ಮಹಿಳೆ ತನ್ನ ಕಥೆಯನ್ನು ರೆಡ್ಡಿಟ್ ನಲ್ಲಿ ಹಂಚಿಕೊಂಡಿದ್ದಾಳೆ ನೋಡಿ. ಆಕೆಗೆ 36 ವರ್ಷ ವಯಸ್ಸಾಗಿದ್ದು, 38 ವರ್ಷದ ಪತಿ ಮತ್ತು 6 ವರ್ಷದ ಮಗಳ ಜೊತೆ ಇರುತ್ತಾಳೆ. ತನ್ನ ಪತಿ ತನ್ನ ಕಂಪನಿಯಲ್ಲಿ ಕೆಲಸ ಮಾಡುವ 30 ವರ್ಷದ ಮಹಿಳೆಯನ್ನು ಪ್ರೀತಿಸುತ್ತಿದ್ದಾನೆ ಮತ್ತು ಆಕೆಗೆ ಮೋಸ ಮಾಡುತ್ತಿದ್ದಾನೆ ಅಂತ ಪತಿಯ ಪ್ರೇಯಸಿಯ ಗಂಡ ಒಂದು ದಿನ ಅವಳಿಗೆ ಕರೆ ಮಾಡಿ ವಿಷಯ ತಿಳಿಸುತ್ತಾನೆ.

ಮುಂದೆ ಓದಿ ...
  • Share this:

ಈ ಪ್ರೀತಿ (Love) ಅನ್ನೋದೆ ಹೀಗೆ ಕಣ್ರೀ.. ಯಾರ ಜೊತೆ, ಯಾವಾಗ ಮತ್ತು ಹೇಗೆ ಆಗುತ್ತದೆ ಅಂತ ಊಹೆ ಮಾಡುವುದಕ್ಕೂ ಸಾಧ್ಯವಾಗುವುದಿಲ್ಲ ನೋಡಿ. ಸಾಮಾನ್ಯವಾಗಿ ಈ ಮದುವೆಯಾದ (Marriage) ನಂತರ ಕೆಲವರಿಗೆ ಕೆಲವರ ಮೇಲೆ ಪ್ರೀತಿ ಹುಟ್ಟೋದು, ನಂತರ ಹೆಂಡತಿಯಿಂದ ಅಥವಾ ಗಂಡನಿಂದ ವಿಚ್ಛೇದನ ಪಡೆದು ಪ್ರೀತಿಸಿದವರ ಜೊತೆ ಹೋಗಿ ಹೊಸ ಜೀವನ (Life) ಶುರು ಮಾಡುವ ಘಟನೆಗಳನ್ನು ಇತ್ತೀಚೆಗೆ ಸ್ವಲ್ಪ ಜಾಸ್ತಿಯೇ ನೋಡುತ್ತಿದ್ದೇವೆ. ತುಂಬಾ ಘಟನೆಗಳಲ್ಲಿ ತನ್ನ ಪತಿ (Husband) ಅಥವಾ ಪತ್ನಿ (Wife) ಇನ್ನೊಬ್ಬರ ಜೊತೆ ಪ್ರೀತಿ ಮಾಡುತ್ತಿದ್ದಾರೆ ಅಂತ ಗೊತ್ತಾದ ನಂತರ ಅವರಿಂದ ವಿಚ್ಛೇದನೆ (Divorce) ಪಡೆದು ಬೇರೆಯಾಗುವುದನ್ನು ನಾವು ನೋಡಿರುತ್ತೇವೆ.


ಇನ್ನೂ ಕೆಲವು ಸಂದರ್ಭಗಳಲ್ಲಿ ತಮಗೆ ಮೋಸ ಮಾಡಿದ ಸಂಗಾತಿಯ ಬಗ್ಗೆ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸುವುದನ್ನು ಸಹ ನಾವು ನೋಡಿರುತ್ತೇವೆ. ಆದರೆ ಇಲ್ಲೊಂದು ಘಟನೆ ನಡೆದಿದ್ದು, ಇಂತಹ ಘಟನೆಯನ್ನು ನಾವು ಹೆಚ್ಚಾಗಿ ಸಿನೆಮಾಗಳಲ್ಲಿ ನೋಡಿರುತ್ತೇವೆ.


ಮಹಿಳೆಯ ಕಥೆ ಒಮ್ಮೆ ಕೇಳಿ..


ಇಲ್ಲೊಬ್ಬ ಮಹಿಳೆ ತನ್ನ ಕಥೆಯನ್ನು ರೆಡ್ಡಿಟ್ ನಲ್ಲಿ ಹಂಚಿಕೊಂಡಿದ್ದಾಳೆ ನೋಡಿ. ಆಕೆಗೆ 36 ವರ್ಷ ವಯಸ್ಸಾಗಿದ್ದು, 38 ವರ್ಷದ ಪತಿ ಮತ್ತು 6 ವರ್ಷದ ಮಗಳ ಜೊತೆ ಇರುತ್ತಾಳೆ. ತನ್ನ ಪತಿ ತನ್ನ ಕಂಪನಿಯಲ್ಲಿ ಕೆಲಸ ಮಾಡುವ 30 ವರ್ಷದ ಮಹಿಳೆಯನ್ನು ಪ್ರೀತಿಸುತ್ತಿದ್ದಾನೆ ಮತ್ತು ಆಕೆಗೆ ಮೋಸ ಮಾಡುತ್ತಿದ್ದಾನೆ ಅಂತ ಪತಿಯ ಪ್ರೇಯಸಿಯ ಗಂಡ ಒಂದು ದಿನ ಅವಳಿಗೆ ಕರೆ ಮಾಡಿ ವಿಷಯ ತಿಳಿಸುತ್ತಾನೆ.


ರೆಡ್ಡಿಟ್ ನಲ್ಲಿ ಏನಂತಾ ಬರೆದಿದ್ದಾರೆ ಆ ಮಹಿಳೆ?
"ಒಂದು ವರ್ಷದ ಹಿಂದೆ ನನ್ನ ಪತಿ ತನ್ನ ಸಹದ್ಯೋಗಿಯೊಂದಿಗೆ ಮಲಗಿದ್ದಾನೆ ಎಂದು ನಾನು ಕಂಡುಕೊಂಡೆ. ಅವಳ ಪತಿಯೇ ಖುದ್ದು ನನಗೆ ಕರೆ ಮಾಡಿ ಈ ವಿಷಯ ಗೊತ್ತಾಗಲಿ ಅಂತ ಹೇಳಿದರು. ಆ ವಿಷಯ ಹೇಳುವಾಗ ಅವನು ಸಹ ತುಂಬಾನೇ ಬೇಸರಗೊಂಡಿದ್ದನು. ನನ್ನ ಪತಿ ಮತ್ತು ಆ ಮಹಿಳೆ ಹೋಟೆಲ್ ನಲ್ಲಿದ್ದಾಗ ಆಕೆಯ ಪತಿ ನನಗೆ ಸಂದೇಶಗಳನ್ನು ಕಳುಹಿಸಿ ಹೇಳುತ್ತಿದ್ದರು.


"ನಾನು ನನ್ನ ಗಂಡ ಮತ್ತು ಇನ್ನೊಬ್ಬ ಮಹಿಳೆಯನ್ನು ಗುರುತಿಸಿದೆ. ನಾನು ನನ್ನ ಗಂಡನನ್ನು ಭೇಟಿ ಮಾಡಿದಾಗ ನಾನು ಅವಳನ್ನು ಅನೇಕ ಸಂದರ್ಭಗಳಲ್ಲಿ ಹತ್ತಿರದಲ್ಲಿಯೇ ನೋಡಿದ್ದೇನೆ. ಅವಳು ನನ್ನ ಬಗ್ಗೆ ತುಂಬಾನೇ ದಯೆ ತೋರುತ್ತಿದ್ದಳು ಮತ್ತು ಅವಳು ನನ್ನ ಮಗಳನ್ನು ಸಹ ಮುದ್ದಾಡುತ್ತಿದ್ದಳು" ಎಂದು ಮಹಿಳೆ ರೆಡ್ಡಿಟ್ ನಲ್ಲಿ ಬರೆದಿದ್ದಾರೆ. ಅದಕ್ಕೆ ತನ್ನ ಪತಿ ಹೀಗೆ ಮಾಡಿರುವುದು ಗೊತ್ತಾದ ಮೇಲೂ ಆ ಮಹಿಳೆ ಅವರಿಬ್ಬರ ಮೇಲೆ ತಕ್ಷಣವೇ ಯಾವುದೇ ಗಂಭೀರ ಕ್ರಮವನ್ನು ತೆಗೆದುಕೊಳ್ಳದಿರಲು ನಿರ್ಧರಿಸಿದರು. ಈ ನಡುವೆ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯಿಂದಾಗಿ ಅವಳು ತನ್ನ ಕೆಲಸವನ್ನು ಕಳೆದುಕೊಂಡಳು.


ಇದನ್ನೂ ಓದಿ:  Viral Video: ಕ್ಯಾಂಡಿ 'ಕದ್ದ' ತಾಯಿ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಮಗ! ಈ ವೈರಲ್ ವಿಡಿಯೋ ನೋಡಿ


ನಂತರ ತನ್ನ ಮಗಳನ್ನು ನೋಡಿಕೊಳ್ಳಲು ಆಗದೆ ತನ್ನ ಗಂಡನ ಬಳಿ ಕಳುಹಿಸುತ್ತಾಳೆ. ನಂತರ ಕಳೆದ ಎರಡು ವರ್ಷಗಳಿಂದ, ಅವಳು ಒಂದು ಕೋರ್ಸ್ ಅನ್ನು ಮಾಡುತ್ತಿದ್ದು, ಅದು ಪೂರ್ಣಗೊಂಡ ನಂತರ ಅವಳು ಕೆಲಸವನ್ನು ಪಡೆಯುತ್ತಾಳೆ ಮತ್ತು ಈಗ ಅವಳು ತನ್ನ ಗಂಡನ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬಹುದು ಅಂತ ನಾವು ಸಹಜವಾಗಿ ಯೋಚಿಸಬಹುದು. ಆದರೆ, ಹಾಗಾಗಲಿಲ್ಲ.


ಮೋಸ ಹೋದವರ ಮಧ್ಯೆ ಪ್ರೀತಿ ಹುಟ್ಟಿತು..
ಅವಳು ಆ ಮಹಿಳೆಯ ಗಂಡನಿಗೂ ಸಹ ಅವರಿಬ್ಬರ ಮೇಲೆ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳದಂತೆ ವಿನಂತಿಸಿದಳು ಮತ್ತು ಅವನು ಅದಕ್ಕೆ ಒಪ್ಪಿದನು. ಆದಾಗ್ಯೂ, ಇಬ್ಬರೂ ಫೋನ್ ಮೂಲಕ ಹೆಚ್ಚಾಗಿ ಮಾತನಾಡಲು ಪ್ರಾರಂಭಿಸಿದರು ಮತ್ತು ಅವರ ಮುರಿದುಬಿದ್ದ ಮದುವೆಗಳ ಬಗ್ಗೆ ಹೆಚ್ಚು ಮಾತನಾಡಲಿಲ್ಲ. ನಂತರ, ಅವರು ಕಾಫಿ ಕುಡಿಯಲು, ಚಲನಚಿತ್ರಗಳನ್ನು ನೋಡಲು ಮತ್ತು ಪಿಕ್ನಿಕ್ ಗಳಿಗಾಗಿ ಹೊರಗೆ ಹೋಗಲು ಪ್ರಾರಂಭಿಸಿದರು.


"ನಾನು ಆಗಾಗ್ಗೆ ಅವನ ಬಗ್ಗೆ ಯೋಚಿಸುತ್ತಿದ್ದೆ, ಹಾಗೆ ಮಾಡಿದಾಗ ನನ್ನ ಮುಖದ ಮೇಲೆ ಒಂದು ನಗು ಮೂಡುತ್ತಿತ್ತು. 3-4 ತಿಂಗಳುಗಳಿಂದ ನಾವು ಬಹುಶಃ ಒಂದು ಅಥವಾ ಎರಡು ಬಾರಿ ನಮ್ಮ ಸಂಗಾತಿಗಳ ಬಗ್ಗೆ ಮಾತಾಡಿದ್ದೇವೆ. ನಾವು ಉಳಿದೆಲ್ಲದರ ಬಗ್ಗೆಯೂ ಮಾತನಾಡುತ್ತೇವೆ ಮತ್ತು ಅವನು ಯಾವಾಗಲೂ ನನ್ನನ್ನು ನಗಿಸುತ್ತಾನೆ" ಎಂದು ಮಹಿಳೆ ಹೊಸ ಗೆಳಯನ ಬಗ್ಗೆ ಬರೆದಿದ್ದಾರೆ. ಅಂತಹ ಒಂದು ಪಿಕ್ನಿಕ್ ನಲ್ಲಿ, ಇಬ್ಬರೂ ಪರಸ್ಪರ ತಮ್ಮ ಭಾವನೆಗಳನ್ನು ಒಪ್ಪಿಕೊಂಡರು ಮತ್ತು ಅವರಿಬ್ಬರು ಪರಸ್ಪರ ಪ್ರೀತಿಸಲು ಶುರುಮಾಡಿದರು.


ಇದನ್ನೂ ಓದಿ:   Viral Story: ಅಪರಿಚಿತನ ತಾಯಿ ಚಿಕಿತ್ಸೆಗೆ ನೀಡಿದ್ದ ಹಣ ವಾಪಸ್! ಈತನ ಪ್ರಾಮಾಣಿಕತೆ ಮೆಚ್ಚಿದ ನೆಟ್ಟಿಗರು


"ನಿನ್ನನ್ನು ಪ್ರೀತಿಸುತ್ತಿದ್ದೇನೆ ಅಂತ ಅವರು ನನಗೆ ಹೇಳಿದರು, ನಂತರ ನಾನು ಸಹ ಅವರನ್ನು ಇಷ್ಟಪಡಲು ಶುರು ಮಾಡಿದ್ದೇನೆ ಅಂತ ನನಗೆ ತಿಳಿಯಿತು. ನಾವಿಬ್ಬರೂ ಮದುವೆಯಿಂದ ಮೋಸ ಹೋದವರು ಮತ್ತು ನಾವಿಬ್ಬರೂ ಪರಸ್ಪರರ ಉಪಸ್ಥಿತಿಯಲ್ಲಿ ಆರಾಮದಾಯಕವಾಗಿರುವುದನ್ನು ಕಂಡುಕೊಂಡೆವು. ನಾವಿಬ್ಬರೂ ನಮಗಾದ ದಾಂಪತ್ಯ ದ್ರೋಹವನ್ನು ಒಂದು ಆಶೀರ್ವಾದವೆಂದು ಭಾವಿಸುತ್ತೇವೆ. ಏಕೆಂದರೆ ಅದರಿಂದ ನಾವಿಬ್ಬರೂ ಜೊತೆ ಸೇರುವಂತಾಯಿತು ಅಂತ ಅನ್ನಿಸಿತು" ಎಂದು ಬರೆದಿದ್ದಾರೆ.

Published by:Ashwini Prabhu
First published: