Chewing Gum: ಚ್ಯೂಯಿಂಗ್ ಗಮ್​ನಿಂದ ಗುಳ್ಳೆ ಊದಿ ತಿಂಗಳಿಗೆ ₹ 67 ಸಾವಿರ ಗಳಿಕೆ!

ಇಲ್ಲೊಬ್ಬ ಜರ್ಮನ್ ಮಹಿಳೆ ಇದ್ದಾರೆ ನೋಡಿ, ಆಕೆ ತನ್ನ ವಿಶಿಷ್ಟವಾದ ಪ್ರತಿಭೆಯಿಂದ ತಿಂಗಳಿಗೆ ಸುಮಾರು 67,000 ರೂಪಾಯಿಗಿಂತಲೂ ಹೆಚ್ಚು ಹಣವನ್ನು ಗಳಿಸುತ್ತಾರೆ. ಏನಪ್ಪಾ ಆಕೆಯ ವಿಶಿಷ್ಟವಾದ ಪ್ರತಿಭೆ ಅಂತೀರಾ? 30 ವರ್ಷದ ಜೂಲಿಯಾ ಫೋರಟ್ ಚ್ಯೂಯಿಂಗ್ ಗಮ್ ನ ಅನ್ನು ಬಾಯಲ್ಲಿ ಹಾಕಿಕೊಂಡು ಅದರಿಂದ ದೈತ್ಯ ಗುಳ್ಳೆಗಳನ್ನು ಊದುವ ಅಪರೂಪದ ಪ್ರತಿಭೆಯನ್ನು ಹೊಂದಿದ್ದಾರೆ.

ಚ್ಯೂಯಿಂಗ್ ಗಮ್ ನಿಂದ ಗುಳ್ಳೆ ಊದುವ ಮಹಿಳೆ

ಚ್ಯೂಯಿಂಗ್ ಗಮ್ ನಿಂದ ಗುಳ್ಳೆ ಊದುವ ಮಹಿಳೆ

  • Share this:
ಈಗಂತೂ ಈ ಹಣ ಸಂಪಾದನೆ  ಎನ್ನುವುದು ಒಬ್ಬರಿಗೆ ಒಂದೊಂದು ತರಹ ಅಂತ ಹೇಳಬಹುದು, ಏಕೆಂದರೆ ಕೆಲವರು ಕಷ್ಟ ಪಟ್ಟು ತಿಂಗಳು ಪೂರ್ತಿ ರಜೆ ತೆಗೆದುಕೊಳ್ಳದೆ ಕೆಲಸ ಮಾಡಿದರೂ ಅವರ ಕೆಲಸದಲ್ಲಿ (Work) ಅವರಿಗೆ ಬರುವ ಸಂಬಳ ಅವರ ಮನೆಯ ಖರ್ಚಿಗೆ ಮತ್ತು ಮಕ್ಕಳ ಶಾಲೆಯ ಖರ್ಚಿಗೂ ಸರಿ ಹೋಗುವುದಿಲ್ಲ ಅಂತ ಹೇಳಬಹುದು. ಆದರೆ ಕೆಲವರು ಮನೆಯಲ್ಲಿಯೇ ಕೂತು ತುಂಬಾ ಹಣ ಸಂಪಾದನೆ (Making Money) ಮಾಡುವವರು ಇದ್ದಾರೆ. ಹೀಗೆ ನೋಡಿ.. ಚೆನ್ನಾಗಿ ಓದಿಕೊಂಡವರು ಮನೆಯಲ್ಲಿಯೇ (Home) ಕೂತು ಕೆಲಸ ಮಾಡಿಕೊಂಡು ಕೈತುಂಬಾ ಸಂಪಾದನೆ ಮಾಡುತ್ತಿದ್ದಾರೆ. ಈಗ ಸಂಪಾದನೆ ಎನ್ನುವುದು ಅವರವರ ಬುದ್ದಿವಂತಿಕೆಗೆ (Intelligence) ಮತ್ತು ಅವರಿಗೆ ಸಿಗುವಂತಹ ಅವಕಾಶಗಳ (Opportunities) ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ ಎಂದು ಹೇಳಬಹುದು.

ಇದೆಂಥಾ ವಿಚಿತ್ರ ಪ್ರತಿಭೆ 
ಇಲ್ಲೊಬ್ಬ ಜರ್ಮನ್ ಮಹಿಳೆ ಇದ್ದಾರೆ ನೋಡಿ, ಆಕೆ ತನ್ನ ವಿಶಿಷ್ಟವಾದ ಪ್ರತಿಭೆಯಿಂದ ತಿಂಗಳಿಗೆ ಸುಮಾರು 67,000 ರೂಪಾಯಿಗಿಂತಲೂ ಹೆಚ್ಚು ಹಣವನ್ನು ಗಳಿಸುತ್ತಾರೆ. ಏನಪ್ಪಾ ಆಕೆಯ ವಿಶಿಷ್ಟವಾದ ಪ್ರತಿಭೆ ಅಂತೀರಾ? 30 ವರ್ಷದ ಜೂಲಿಯಾ ಫೋರಟ್ ಚ್ಯೂಯಿಂಗ್ ಗಮ್ ನ ಅನ್ನು ಬಾಯಲ್ಲಿ ಹಾಕಿಕೊಂಡು ಅದರಿಂದ ದೈತ್ಯ ಗುಳ್ಳೆಗಳನ್ನು ಊದುವ ಅಪರೂಪದ ಪ್ರತಿಭೆಯನ್ನು ಹೊಂದಿದ್ದಾರೆ. ಇದು ಅವರನ್ನು ಸಾಮಾಜಿಕ  ಸಾಕಷ್ಟು ಜನಪ್ರಿಯಗೊಳಿಸಿದೆ ಎಂದು ಹೇಳಬಹುದು.

ಇದನ್ನೂ ಓದಿ: Pink Life: ಎಲ್ಲವೂ ಪಿಂಕ್​! 1.5 ಕೋಟಿ ಖರ್ಚು ಮಾಡಿ ಬಾರ್ಬಿಯಂತೆ ಬದುಕುತ್ತಿದ್ದಾಳೆ ಈ ಯುವತಿ!

ಒಂದೇ ಸಮಯದಲ್ಲಿ ಈಕೆ 30 ಚ್ಯೂಯಿಂಗ್ ಗಮ್ ಗಳನ್ನು ಅಗಿಯುವ ಮತ್ತು ತನ್ನ ತಲೆಯ ಎರಡು ಪಟ್ಟು ಗಾತ್ರದ ಗುಳ್ಳೆಗಳನ್ನು ಊದುತ್ತಾರೆ. ಈ ಗುಳ್ಳೆಗಳನ್ನು ಊದುವಾಗ ಅವಳ ಫೋಟೋಗಳನ್ನು ಕ್ಲಿಕ್ಕಿಸಿ ಅಪರಿಚಿತರಿಗೆ ಮಾರಾಟ ಮಾಡುತ್ತಾರೆ. ಇಷ್ಟೇ ಅಲ್ಲದೆ ಅವರು ಸಾಮಾಜಿಕ ಮಾಧ್ಯಮದಲ್ಲಿ ತೆರೆದಿರುವ ಈ "ವ್ಯವಹಾರ"ಕ್ಕಾಗಿ, ಅವರ ಹೂಡಿಕೆಯು ತಿಂಗಳಿಗೆ ಸುಮಾರು 480 ರೂಪಾಯಿಯಾಗಿದ್ದು, ಆಕೆ ಈ ಮೊತ್ತವನ್ನು ದೊಡ್ಡ ಪ್ರಮಾಣದಲ್ಲಿ ಚ್ಯೂಯಿಂಗ್ ಗಮ್ ಗಳನ್ನು ಖರೀದಿಸಲು ಬಳಸುತ್ತಾಳೆ.

ಗುಳ್ಳೆಗಳನ್ನು ಊದುವ ತುಣುಕುಗಳು ಮತ್ತು ಫೋಟೋಗಳನ್ನು ಮಾರಾಟ
ಜೂಲಿಯಾಗೆ ತನ್ನ ಸ್ನೇಹಿತರೊಬ್ಬರು ತಮಾಷೆಯಾಗಿ ತನ್ನ ಚ್ಯೂಯಿಂಗ್ ಗಮ್ ಮತ್ತು ಗುಳ್ಳೆಗಳನ್ನು ಊದುವ ತುಣುಕುಗಳು ಮತ್ತು ಫೋಟೋಗಳನ್ನು ಮಾರಾಟ ಮಾಡಬಹುದು ಎಂದು ಹೇಳಿದ ನಂತರ ಗುಳ್ಳೆ ಈಕಾರ್ಯಕ್ಕೆ ಮುಂದಾದಳು. "ಇದು ಸ್ವಲ್ಪ ವಿನೋದವಾಗಿ ಪ್ರಾರಂಭವಾಯಿತು ಆದರೆ ನಾನು ಕೆಲವು ಸಂಶೋಧನೆಗಳನ್ನು ಮಾಡಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ:  Hairstyle: ಅಂದು ಈ ಹೇರ್​ಸೈಲ್​ಗೆ ಫಿದಾ ಆದವರೇ ಜಾಸ್ತಿ! ಆದ್ರೆ ಇಂದು ಹಲ್ಲುಬಿಟ್ಟುಕೊಂಡು ನಗೋದು ಗ್ಯಾರಂಟಿ

ಅವಳು ತನ್ನ ಈ ಪ್ರತಿಭೆಯ ವಿಷಯವನ್ನು ಮೈ ಡಾಟ್ ಕ್ಲಬ್ ನಲ್ಲಿ ಹಂಚಿಕೊಳ್ಳಲು ಪ್ರಾರಂಭಿಸಿದ್ದಾರೆ. ಅವರು ಬಯಸುವ ಮತ್ತು ಕೆಲವೊಮ್ಮೆ ಬೇರೆಡೆ ಹುಡುಕಲು ಸಾಧ್ಯವಾಗದ ವಿಷಯವನ್ನು ಪೂರೈಸಲು ನಾನು ಅವರಿಗೆ ಸಮರ್ಥಳಾಗಿದ್ದೇನೆ ಎಂದು ನನ್ನ ಅಭಿಮಾನಿಗಳು ಸಂತೋಷಗೊಂಡಿದ್ದಾರೆ" ಎಂದು ಅವರು ಹೇಳಿದರು. ಬಬಲ್ ಗಾತ್ರಗಳು, ಜೂಲಿಯಾ ಅವರ ಉಡುಗೆ ಮತ್ತು ಕ್ಯಾಮೆರಾ ಕೋನಗಳಲ್ಲಿ ವಿಭಿನ್ನವಾಗಿರುವ ಕಸ್ಟಮೈಸ್ ಮಾಡಿದ ಫೋಟೋಗಳ ವಿನಂತಿಗಳನ್ನು ಸ್ವೀಕರಿಸುತ್ತಾರೆ ಎಂದು ಅವರು ಹೇಳಿದರು.

ಮಹಿಳೆಯ ವಿಭಿನ್ನ ಹವ್ಯಾಸ 
ಜೂಲಿಯಾ ಗಣನೀಯ ಪ್ರಮಾಣದ ಹಣವನ್ನು ಗಳಿಸುತ್ತಾಳೆ. ಆದರೆ ಇದನ್ನು ಅವರ ಹವ್ಯಾಸವಾಗಿ ಮತ್ತು ಇನ್ನೊಂದು ಗಳಿಕೆಯಾಗಿರಿಸಿಕೊಳ್ಳಲು ಬಯಸುತ್ತಾಳೆ. ಅವಳು ಪ್ರಾಥಮಿಕವಾಗಿ ಮಾರ್ಕೆಟಿಂಗ್ ನಲ್ಲಿ ಕೆಲಸ ಮಾಡುತ್ತಾಳೆ. ಇದಲ್ಲದೆ, ಅವರು ವಾಸ್ತುಶಿಲ್ಪ ಮತ್ತು ಸಿವಿಲ್ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದಾರೆ. "ನಾನು ಬಬಲ್ ಗಮ್ ಅಗೆಯುವ ಮತ್ತು ಗುಳ್ಳೆಗಳನ್ನು ಊದುವುದನ್ನು ನಾನು ತುಂಬಾನೇ ಆನಂದಿಸುತ್ತೇನೆ. ನನಗೆ ಸವಾಲು ಹಾಕುವುದು ಮತ್ತು ಜನರು ವಿನಂತಿಸುವ ವಿಷಯವನ್ನು ರಚಿಸುವುದು ಮೋಜಿನ ಸಂಗತಿಯಾಗಿದೆ" ಎಂದು ಅವರು ಹೇಳಿದರು.
Published by:Ashwini Prabhu
First published: