Viral Video: ಚಲಿಸುವ ಬಸ್ನಲ್ಲಿ ಡ್ರೈವರ್ಗೆ ಹೃದಯಾಘಾತ, ತಾನೇ ಬಸ್ ಚಲಾಯಿಸಿಕೊಂಡು ಬಂದ ಪ್ರಯಾಣಿಕ ಮಹಿಳೆ
women drive bus: ವಾಘೋಲಿಯಿಂದ 22ರಿಂದ 23 ಮಹಿಳೆಯರ ತಂಡ ಶಿರೂರು ತಾಲೂಕಿನ ಮೊರಚಿ ಚಿಂಚೋಳಿಗೆ ಪ್ರವಾಸಕ್ಕೆಂದು ಹೋಗಿದ್ದರು.. ಪ್ರವಾಸ ಮುಗಿಸಿ ಮಹಿಳೆಯರ ಜೊತೆ ಮೊರಚಿ ಚಿಂಚೋಳಿಯಿಂದ ವಾಪಸ್ ಬರುವಾಗ ಯೋಗಿತಾ ಧರ್ಮೇಂದ್ರ ಹಾಗೂ ಇತರ ಮಹಿಳೆಯರು ಇದ್ದ ಬಸ್ ಚಾಲಕನಿಗೆ ಹೃದಯಾಘಾತ ಸಂಭವಿಸಿದೆ
ಬಸ್ ಚಾಲನೆ(Bus Driving) ಮಾಡುವಾಗ ಚಾಲಕನಿಗೆ ಹೃದಯಾಘಾತವಾಯಿತು(Heart attack) ಎಂಬ ಅನೇಕ ಸುದ್ದಿಗಳನ್ನು(News) ನಾವು ಕೇಳಿದ್ದೇವೆ ನೋಡಿದ್ದೇವೆ.. ಈ ರೀತಿ ಹೃದಯಾಘಾತವಾದಾಗ ಅನೇಕ ಬಾರಿ ಅಪಘಾತಗಳು(Accident) ಸಂಭವಿಸಿದ್ರೆ,ಕೆಲವೊಂದು ಬಾರಿ ಚಾಲಕ ಸಮಯಪ್ರಜ್ಞೆ ಬಸ್ಸಿನಲ್ಲಿ ಇದ್ದ ಪ್ರಯಾಣಿಕರನ್ನು ಕಾಪಾಡಿ ಮಾನವೀಯತೆ(Humanity) ಬರೆದಿರುವ ಹಲವಾರು ಘಟನೆಗಳು ಉದಾಹರಣೆಗಳಾಗಿ ನಮ್ಮ ಕಣ್ಣ ಮುಂದೆಯೇ ಇದೆ.ಯಾವ ಪ್ರಯಾಣಿಕರಿಗೆ ತೊಂದರೆಯಾಗದಂತೆ ಸುರಕ್ಷಿತವಾಗಿ ಬಸ್ ನಿಲ್ಲಿಸಿ ತಮ್ಮ ಪ್ರಾಣವನ್ನು ಬಿಟ್ಟಿರುವ ಅನೇಕ ಬಸ್ ಚಾಲಕರ ಉದಾಹರಣೆಗಳು ನಮ್ಮ ಮುಂದಿವೆ.. ಇಲ್ಲಿ ನಡೆದಿರುವ ಘಟನೆ ಸ್ವಲ್ಪ ವಿಭಿನ್ನವಾಗಿದೆ.. ಬಸ್ ಚಾಲಕನಿಗೆ ಹೃದಯಾಘಾತವಾಗಿದೆ ಎಂದು ತಿಳಿದ ಕೂಡಲೇ ಮಹಿಳೆಯೊಬ್ಬಳು ಪ್ರಯಾಣಿಕರಿಗೆ ತೊಂದರೆಯಾಗದಂತೆ ಬಸ್ ಚಲಾಯಿಸಿಕೊಂಡು ಬಂದ ಘಟನೆ ನಡೆದಿದೆ.
10 ಕಿಲೋಮೀಟರ್ ಬಸ್ ಚಲಾಯಿಸಿದ ಮಹಿಳೆ
ಯೋಗಿತಾ ಧರ್ಮೇಂದ್ರ ಸತವ್ ಎಂಬ ಮಹಿಳೆ ಪುಣೆಯ ವಾಘೋಲಿಯಿಂದ 22ರಿಂದ 23 ಮಹಿಳೆಯರ ತಂಡ ಶಿರೂರು ತಾಲೂಕಿನ ಮೊರಚಿ ಚಿಂಚೋಳಿಗೆ ಪ್ರವಾಸಕ್ಕೆಂದು ಹೋಗಿದ್ದರು.. ಪ್ರವಾಸ ಮುಗಿಸಿ ಮಹಿಳೆಯರ ಜೊತೆ ಮೊರಚಿ ಚಿಂಚೋಳಿಯಿಂದ ವಾಪಸ್ ಬರುವಾಗ ಯೋಗಿತಾ ಧರ್ಮೇಂದ್ರ ಹಾಗೂ ಇತರ ಮಹಿಳೆಯರು ಇದ್ದ ಬಸ್ ಚಾಲಕನಿಗೆ ಹೃದಯಾಘಾತ ಸಂಭವಿಸಿದೆ.. ಬಸ್ ಚಾಲಕ ಹೃದಯಾಘಾತ ಸಂಭವಿಸುತ್ತಿದ್ದಂತೆ ಬಸ್ಸನ್ನು ರಸ್ತೆಬದಿಗೆ ಹಾಕಿದ್ದಾನೆ...
ಡ್ರೈವರ್ಗೆ ತಕ್ಷಣ ಪ್ರಥಮ ಚಿಕಿತ್ಸೆಯ ನೆರವಿನ ಅಗತ್ಯವಿತ್ತು. ಆದರೆ ಹತ್ತಿರದಲ್ಲಿ ಯಾವುದೇ ಆಸ್ಪತ್ರೆ ಇರಲಿಲ್ಲ. ಹಳ್ಳಿ ದಾರಿಯಾಗಿದ್ದ ಕಾರಣ ಆಸ್ಪತ್ರೆಗೆ ತೆರಳಲು ಮುಂದೆ ಸಾಗಲೇಬೇಕಿತ್ತು. ಬಸ್ನಲ್ಲಿ ಮಹಿಳೆಯರು ಯಾರೂ ಇದುವರೆಗೆ ಬಸ್ ಡ್ರೈವಿಂಗ್ ಮಾಡಿಲ್ಲ, ಕಲಿತಿಲ್ಲ.ಹೀಗಾಗಿ ಬಸ್ಸಿನಲ್ಲಿದ್ದ ಮಹಿಳೆಯರು ಗಾಬರಿಯಾಗಿ ಅಳಲು ಶುರು ಮಾಡಿದ್ದಾರೆ.. ಆದರೆ ಯೋಗಿತಾ ಎಂಬ ಮಹಿಳೆ ಕಾರು ಹಾಗೂ ಜೀಪು ಚಲಾವಣೆ ಮಾಡಿ ಇದ್ದ ಅಭ್ಯಾಸವನ್ನೇ ಬಳಸಿಕೊಂಡು, ಡ್ರೈವರ್ ಪ್ರಾಣ ನನ್ನ ಕಾಪಾಡಲು ಕಾಲು ಹಾಗೂ ಜೀಪು ಚಲಾಯಿಸಿದ ಅನುಭವ ಇಟ್ಟುಕೊಂಡು ಬರೋಬ್ಬರಿ ಹತ್ತು ಕಿಲೋಮೀಟರ್ ದೂರ ಬಸ್ ಚಲಾಯಿಸಿದ್ದಾರೆ.
ಯೋಗಿತಾ ಧೈರ್ಯದಿಂದ ಬರೋಬ್ಬರಿ ಹತ್ತು ಕಿಲೋಮೀಟರ್ ಬಸ್ ಚಲಾಯಿಸಿಕೊಂಡು ಬಂದು ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.. ಅಲ್ಲದೆ ಈ ವೇಳೆ ಧೃತಿಗೆಡದಂತೆ ಬಸ್ಸಿನಲ್ಲಿದ್ದ ಎಲ್ಲ ಮಹಿಳೆಯರಿಗೂ ಧೈರ್ಯ ತುಂಬಿದ್ದಾರೆ.
ಪ್ರವಾಸಕ್ಕೆ ಹೋದಾಗ ಹೃದಯಾಘಾತವಾಗಿ ಚಾಲಕ ಪರದಾಡುತ್ತಿದ್ದಾರೆ ಆತನನ್ನ ಯಶಸ್ವಿಯಾಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿಸಿದ ಬಳಿಕ ಯೋಗಿತಾ ಮತ್ತೊಬ್ಬರ ಚಾಲಕನನ್ನು ಕರೆಸಿಕೊಂಡು 22ರಿಂದ 23 ಮಹಿಳೆಯರನ್ನು ಸುರಕ್ಷಿತವಾಗಿ ವಾಘೋಲಿ ಗೆ ಬಂದು ತಲುಪುವಂತೆ ನೋಡಿಕೊಂಡಿದ್ದಾರೆ. ಸದ್ಯ ಯೋಗಿತಾ ಬಸ್ ಚಲಾವಣೆ ಮಾಡಿದ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದ್ದು ಆಕೆಯ ಸಮಯಪ್ರಜ್ಞೆ ಹಾಗೂ ದೈರ್ಯಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.
ಯೋಗಿತಾ ಗೆ ಮಹಿಳೆಯರಿಂದ ಸನ್ಮಾನ
ಮೊರಚಿ ಚಿಂಚೋಳಿ ಪ್ರವಾಸದಿಂದ ವಾಪಸ್ ಬರುವಾಗ ಹೃದಯಾಘಾತವಾಗಿದೆ ಚಾಲಕನ ಆಸ್ಪತ್ರೆಗೆ ಸೇರಿಸಲು ಬರೋಬ್ಬರಿ ಹತ್ತು ಕಿಲೋಮೀಟರ್ ದೂರ ಬಸ್ ಚಲಾಯಿಸಿದ ಯೋಗಿತಾಳ ಧೈರ್ಯಕ್ಕೆ ವಾಘೋಲಿ ಗ್ರಾಮದ ಮಾಜಿ ಸರಪಂಚರಾದ ಜಯಶ್ರೀ ಸತವ್ ಪಾಟೀಲ್ ಅವರು ತಮ್ಮ ಸಹೋದ್ಯೋಗಿ ಮತ್ತು ಪಿಕ್ನಿಕ್ ಆಯೋಜಕಿ ಆಶಾ ವಾಘಮಾರೆ ಮೆಚ್ಚುಗೆ ಸೂಚಿಸಿದ್ದು ಯೋಗಿತಾ ಮನೆಗೆ ತೆರಳಿ ಗೌರವ ಸಲ್ಲಿಕೆ ಮಾಡಿದ್ದಾರೆ.. ಇದ್ದ ಯೋಗಿತಾ ಬಸ್ ಚಲಾಯಿಸಿ ಸಮಯಪ್ರಜ್ಞೆ ಹಾಗೂ ಧೈರ್ಯ ತೋರಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇನ್ನು ಮಹಿಳೆಯರು ಇದೀಗ ಎಲ್ಲಾ ಕ್ಷೇತ್ರದಲ್ಲಿ ಪುರುಷರಷ್ಟೇ ಸಾಧನೆ ಮಾಡುತ್ತಿದ್ದಾರೆ. ತಮ್ಮ ಕೆಲಸ, ಮನೆ ನಿರ್ವಹಣೆ ಸೇರಿದಂತೆ ಅಗತ್ಯಕ್ಕೆ ಅನುಗುಣವಾಗಿ ಎಲ್ಲವನ್ನೂ ಕಲಿತಿರುತ್ತಾರೆ. ಇದರ ಜೊತೆಗೆ ಮಹಿಳೆಯರು ಡ್ರೈವಿಂಗ್ ಸೇರಿದಂತೆ ಎಲ್ಲಾ ವಿದ್ಯೆಗಳನ್ನು ಕಲಿತಿರುವುದು ಅತೀ ಅವಶ್ಯಕ ಅನ್ನೋದು ಈ ಘಟನೆ ಪುನರುಚ್ಚರಿಸಿದೆ.
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ