ಕಳೆದ ಮೂರು ತಿಂಗಳಿನಿಂದ ಸೋಶಿಯಲ್ ಮೀಡಿಯಾ(Socia Media)ದಲ್ಲಿ ಕಚ್ಚಾ ಬದಾಮ್ (Kachcha Badam) ಹಾಡು ಟಾಪ್ ಸ್ಥಾನದಲ್ಲಿದೆ. ಇತ್ತೀಚೆಗಷ್ಟೇ ಧಕ್ ಧಕ್ ಗರ್ಲ್ ಮಾಧುರಿ ದೀಕ್ಷಿತ್ (Madhuri Dixit) ಮತ್ತು ನಟ ರಿತೇಶ್ ದೇಶಮುಖ್ (Ritiesh Deshmukh) ಸಹ ಕಚ್ಚಾ ಬದಾಮ್ ಗೆ ರೀಲ್ಸ್ ಮಾಡಿದ್ದರು. ಸ್ಟಾರ್ ನಟರಿಂದ ಹಿಡಿದು ಚಿಕ್ಕ ಮಕ್ಕಳಿಗೂ ಕಚ್ಚಾ ಬದಾಮ್ ಗೆ ರೀಲ್ಸ್ (Reels) ಮಾಡೋದು ಅಂದ್ರೆ ಇಷ್ಟ. ಕಚ್ಚಾ ಬದಾಮ್ ರೀಲ್ ಗೆ ಶೇ.99.9 ರಷ್ಟು ಜನರು ಒಂದೇ ಸ್ಟೈಲಿನಲ್ಲಿ ಹೆಜ್ಜೆ ಹಾಕಿದ್ದಾರೆ. ಕೆಲ ಕೊರಿಯೋಗ್ರಾಫರ್ (choreographer) ಗಳು ತಮ್ಮ ಯುನಿಕ್ ಸ್ಟೈಲಿನಲ್ಲಿ ಹೆಜ್ಜೆ ಹಾಕಿದ್ದುಂಟು. ಆದ್ರೆ ಕಚ್ಚಾ ಬದಾಮ್ ಸಿಗ್ನೇಚರ್ ಸ್ಟೆಪ್ (Signature Step) ಮುಂದೆ, ಯಾವುದು ಕ್ಲಿಕ್ ಆಗಿರಲಿಲ್ಲ. ಇದೀಗ ಮಹಿಳೆ(Woman)ಯೊಬ್ಬರು ಯಾರು ಮಾಡದ ಶೈಲಿಯಲ್ಲಿ ಕಚ್ಚಾ ಬದಾಮ್ ಗೆ ಹೆಜ್ಜೆ ಹಾಕಿರುವ ವಿಡಿಯೋ ವೈರಲ್ (Video Viral) ಆಗಿದೆ.
ಮಹಿಳೆಯೊಬ್ಬರು ಸಮಾರಂಭದಲ್ಲಿ ವಿಚಿತ್ರವಾಗಿ ಕಚ್ಚಾ ಬದಾಮ್ ಗೆ ಹೆಜ್ಜೆ ಹಾಕಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ನಕ್ಕು ನಕ್ಕು ಸುಸ್ತಾಗಿದ್ದಾರೆ. ಆದ್ರೆ ಈ ವಿಡಿಯೋ ಎಲ್ಲಿಯದ್ದು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ವಿಡಿಯೋ ನೋಡಿದ ನೆಟ್ಟಿಗರು, ಲೈಕ್ಸ್ ಮತ್ತು ಶೇರ್ ಮಾಡಿಕೊಳ್ಳುತ್ತಿದ್ದಾರೆ.
butterfly__mahi ಹೆಸರಿನ ಇನ್ ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದುವರೆಗೂ 17 ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಈ ವಿಡಿಯೋಗೆ ಬಂದಿದೆ. 500ಕ್ಕೂ ಹೆಚ್ಚು ಕಮೆಂಟ್ ಗಳು ಸಹ ಬಂದಿವೆ.
ಏನದು ವೈರಲ್ ವಿಡಿಯೋ ..?
ಜನರ ಗುಂಪಿನಲ್ಲಿನ ಕಾಣುವ ನೀಲಿ ಸೀರೆ ಧರಿಸಿದ ಮಹಿಳೆ ಕಚ್ಚಾ ಬದಾಮ್ ಗೆ ಹೆಜ್ಜೆ ಹಾಕೋದನ್ನು ನೋಡಬಹುದು. ಎರಡೂ ಕೈಗಳನ್ನು ಮುಂದೆ ಮಾಡುತ್ತಾ ನಾಗಿಣ್ ಸ್ಟೈಲಿನಲ್ಲಿ ಸ್ಟೆಪ್ ಹಾಕುತ್ತಿದ್ರೆ, ಹಿಂದೆ ನಿಂತಿರುವ ಮಹಿಳೆಯರು ಚಪ್ಪಾಳೆ ಹೊಡೆಯುತ್ತಾ ನಕ್ಕಿದ್ದಾರೆ.
ಇದನ್ನೂ ಓದಿ: Viral News: ಈತನ ತಲೆ ನೋಡಿದ್ರೆ ಯಾರಿಗಾದರೂ ಸರಿ ತಿನ್ನಬೇಕನಿಸುತ್ತೆ! ನೀವೂ ನೋಡಿ
ಗ್ರಾಹಕರನ್ನು ವಿಚಿತ್ರವಾಗಿ ಕರೆದ ಕಲ್ಲಂಗಡಿ ವ್ಯಾಪಾರಿಯ ವಿಡಿಯೋ ವೈರಲ್
ಭುವನ್ ಬದ್ಯಾಕರ್ ರೀತಿಯಲ್ಲಿ ಹಲವು ಮಾರಾಟಗಾರರ ವಿಡಿಯೋ(Videos)ಗಳು ಸೋಶಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗಿವೆ. ಇತ್ತೀಚೆಗೆ ಮಜ್ಜಿಗೆ, ದ್ರಾಕ್ಷಿ, ಸೀಬೆ ಹಣ್ಣು ಮಾರುವ ವ್ಯಾಪಾರಿಗಳ ವಿಡಿಯೋ (Fruit Sellers Videos) ನೆಟ್ಟಿಗರನ್ನು ಸೆಳೆದಿದ್ದವು. ಇವರ ಗ್ರಾಹಕರನ್ನು ಕರೆಯುವ ಜಿಂಗಲ್ ಕೇಳುಗರಿಗೆ ಇಷ್ಟವಾಗಿತ್ತು. ಆದ್ರೆ ಕಳೆದ ಎರಡ್ಮೂರು ದಿನಗಳಿಂದ ಕಲ್ಲಂಗಡಿ ವ್ಯಾಪಾರಿಯ ವಿಡಿಯೋ (Watermen seller Funny Video) ಹರಿದಾಡುತ್ತಿದೆ.
ಈ ವಿಡಿಯೋ ನೋಡಿದ ನೆಟ್ಟಿಗರು ಈ ಕಲ್ಲಂಗಡಿ ವ್ಯಾಪಾರಿ ಗ್ರಾಹಕರನ್ನು ಕರೆಯುತ್ತಿದ್ದಾನೆಯೇ ಅಥವಾ ಹೆದರಿಸುತ್ತಿದ್ದಾನೆಯೇ? ಇದೊಂದು ಹಾಸ್ಯ ಅನ್ನೋದಕ್ಕಿಂತ ವಿಚಿತ್ರ ವಿಡಿಯೋ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಈ ಕಲ್ಲಂಗಡಿ ವ್ಯಾಪಾರಿ ಜನರನ್ನು ನಗಿಸಲು ತನ್ನ ಮುಖದ ಭಾವವನ್ನು ವಿಚಿತ್ರವಾಗಿ ತೋರಿಸಿದ್ದಾನೆ. ಈ ವ್ಯಾಪಾರಿ ಕಲ್ಲಂಗಡಿ ಮಾರಾಟ ಮಾಡುವ ಪರಿಯನ್ನು ಕಂಡು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Viral News: ಮದುವೆಯಲ್ಲಿ ವರನಿಗೆ ನಿಂಬೆಹಣ್ಣು ನೀಡಿದ ಸ್ನೇಹಿತರು & ಸಂಬಂಧಿಕರು
ಏನಿದು ವೈರಲ್ ವಿಡಿಯೋ..?
ರಸ್ತೆ ಬದಿ ಕಲ್ಲಂಗಡಿ ಮಾರುತ್ತಿರುವ ವ್ಯಕ್ತಿ ಹಣ್ಣನ್ನು ಎರಡು ಭಾಗಗಳಾಗಿ ಕತ್ತರಿಸುತ್ತಾನೆ. ನಂತರ ಎರಡೂ ತುಂಡುಗಳನ್ನು ಕೈಯಲ್ಲಿ ಹಿಡಿದುಕೊಂಡು ವಿಚಿತ್ರವಾಗಿ ಕೂಗುತ್ತಾ, ಒಂದು ಬಗೆಯಲ್ಲಿ ಕಣ್ಣು ಮತ್ತು ಮುಖ ಭಾವ ಬದಲಿಸುತ್ತಾ ಚೀರುತ್ತಾನೆ. ಈತನ ಮಾರಾಟ ಶೈಲಿ ಕಂಡು ಪಕ್ಕದಲ್ಲಿ ನಿಂತಿರುವ ಯುವಕ ನಗುತ್ತಿರೋದನ್ನು ಸಹ ವಿಡಿಯೋದಲ್ಲಿ ಗಮನಿಸಬಹುದು.
ಈ ವಿಡಿಯೋವನ್ನು giedde ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. "Garmio ke lalam lal tarbuzzz" ಎಂಬ ಶೀರ್ಷಿಕೆ ಬರೆದು ಇನ್ ಸ್ಟಾದಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋಗೆ ಆರು ಸಾವಿರಕ್ಕೂಅಧಿಕ ಲೈಕ್ಸ್ ಬಂದಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ