Father Love: ತಂದೆಯ ಬ್ಲೇಜರ್ ಧರಿಸಿ ಅಕ್ಕನ ಜೊತೆ ತಂಗಿ ಡ್ಯಾನ್ಸ್! ಅಪ್ಪನ ನೆನೆದು ಸಹೋದರಿಯರು ಭಾವುಕ

ತನ್ನ ತಂದೆಯ ಅನುಪಸ್ಥಿತಿಯನ್ನು ಸರಿದೂಗಿಸಲು, ಮಹಿಳೆಯೊಬ್ಬಳು ತನ್ನ ಮದುವೆಯಲ್ಲಿ ತಂದೆಯ ಬ್ಲೇಜರ್ ಧರಿಸಿದ ತನ್ನ ಸಹೋದರಿಯೊಂದಿಗೆ ಡ್ಯಾನ್ಸ್ ಮಾಡಿದಳು. ಅವರ ತಂದೆ ಆ ಮಹಿಳೆಯ ಮದುವೆಗೆ ಮುಂಚಿತವಾಗಿಯೇ ನಿಧನರಾಗಿದ್ದರು

ವೈರಲ್ ವಿಡಿಯೋ

ವೈರಲ್ ವಿಡಿಯೋ

  • Share this:
ಮದುವೆ (Marriage) ಎನ್ನುವುದು ಬಹುತೇಕ ಎಲ್ಲರ ಜೀವನದಲ್ಲಿ ಬರುವ ಒಂದು ಅತ್ಯಂತ ವಿಶೇಷ ದಿನವೆಂದು (Special Day) ಹೇಳಬಹುದು. ತಮ್ಮ ಮದುವೆಯ ದಿನ ಎಲ್ಲರೂ ತಮ್ಮ ಇಡೀ ಕುಟುಂಬದ ಸದಸ್ಯರು (Family Members) ಮತ್ತು ತಮ್ಮ ಪ್ರೀತಿಪಾತ್ರರು ಆ ವಿಶೇಷವಾದ ದಿನದಂದು ಮದುವೆಗೆ ಆಗಮಿಸಿ ಅವರ ಸಂತೋಷದಲ್ಲಿ ಪಾಲ್ಗೊಳ್ಳಬೇಕು ಎಂಬುದು ಎಲ್ಲರ ಆಸೆಯಾಗಿರುತ್ತದೆ. ಹಾಗೆಯೇ ಕುಟುಂಬದಲ್ಲಿ ಇರುವಂತಹ ಹಿರಿಯರು ಸಹ ತಪ್ಪದೆ ಮದುವೆಗೆ ಬಂದು ಅವರನ್ನು ಆಶೀರ್ವದಿಸಬೇಕೆಂದು ನವ ವಧು-ವರರು ಬಯಸುತ್ತಾರೆ.

ಅದರಲ್ಲೂ ಯಾರಾದರೂ ತಮ್ಮ ಹೆತ್ತವರನ್ನು ಮೊದಲೇ ಕಳೆದುಕೊಂಡಿದ್ದರೆ, ಅವರು ಮದುವೆಯ ದಿನದಂದು ಅವರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಾರೆ ಎಂದು ಹೇಳಬಹುದು. ಅನೇಕ ಮಹಿಳೆಯರು ತಮ್ಮ ಮದುವೆಯಲ್ಲಿ ತಮ್ಮ ತಂದೆಯೊಂದಿಗೆ ಡ್ಯಾನ್ಸ್ ಮಾಡಬೇಕು ಎಂಬ ಕನಸು ಕಾಣುತ್ತಾರೆ.

ಅಪ್ಪನ ಅನುಪಸ್ಥಿತಿ ಕಾಡುತ್ತದೆ

ಆದರೆ ಕೆಲವೊಮ್ಮೆ ತಂದೆಯನ್ನು ಮೊದಲೇ ಕಳೆದುಕೊಂಡಿದ್ದರೆ, ಮದುವೆಯ ದಿನದಂದು ತಂದೆಯ ಅನುಪಸ್ಥಿತಿ ವಧುವಿಗೆ ತುಂಬಾನೇ ಕಾಡುತ್ತದೆ. ತನ್ನ ತಂದೆ ತನ್ನ ಮದುವೆಯ ದಿನ ಇಲ್ಲವಲ್ಲ ಎಂಬ ವಿಷಯವೇ ತುಂಬಾ ನೋವು ಉಂಟು ಮಾಡುತ್ತದೆ. ಆದರೆ ಇಲ್ಲೊಬ್ಬ ಕಿರಿಯ ಸಹೋದರಿ ತನ್ನ ಅಕ್ಕನ ಮದುವೆಯಲ್ಲಿ ತನ್ನ ಅಕ್ಕನಿಗೆ ತಂದೆಯ ಅನುಪಸ್ಥಿತಿಯ ಬಗ್ಗೆ ನೋವು ಹೆಚ್ಚಾಗಿ ಕಾಡದಿರಲಿ ಎಂದು ಒಂದು ಒಳ್ಳೆಯ ಐಡಿಯಾ ಮಾಡಿದ್ದಾಳೆ ನೋಡಿ.

ಸಹೋದರಿಗಾಗಿ ಅಪ್ಪನ ಬ್ಲೇಝರ್ ಧರಿಸಿ ಬಂದ ಯುವತಿ

ತನ್ನ ತಂದೆಯ ಅನುಪಸ್ಥಿತಿಯನ್ನು ಸರಿದೂಗಿಸಲು, ಮಹಿಳೆಯೊಬ್ಬಳು ತನ್ನ ಮದುವೆಯಲ್ಲಿ ತಂದೆಯ ಬ್ಲೇಜರ್ ಧರಿಸಿದ ತನ್ನ ಸಹೋದರಿಯೊಂದಿಗೆ ಡ್ಯಾನ್ಸ್ ಮಾಡಿದಳು. ಅವರ ತಂದೆ ಆ ಮಹಿಳೆಯ ಮದುವೆಗೆ ಮುಂಚಿತವಾಗಿಯೇ ನಿಧನರಾಗಿದ್ದರು ಮತ್ತು ಅವಳು ತನ್ನ ವಿಶೇಷ ದಿನದಂದು ಅವರೊಂದಿಗೆ ಡ್ಯಾನ್ಸ್ ಮಾಡಲು ಬಯಸಿದ್ದಳು. ವಿಡಿಯೋ ನೋಡಿದರೆ ನಿಜವಾಗಿಯೂ ಎಂತಹವರ ಕಣ್ಣುಗಳೂ ಒದ್ದೆಯಾಗಿ ಹೃದಯವು ಕರಗುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

77,000 ಕ್ಕೂ ಹೆಚ್ಚು ವೀಕ್ಷಣೆ

ಈ ವಿಡಿಯೋವನ್ನು ಎರಡು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಖಾತೆಯಲ್ಲಿನ ವೆಡ್‌ಅಬೌಟ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ಇದು ಇಲ್ಲಿಯವರೆಗೆ 77,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ ಮತ್ತು 4,300 ಕ್ಕೂ ಅಧಿಕ ಲೈಕ್‌ಗಳನ್ನು ಸಹ ಈ ವಿಡಿಯೋ ಗಳಿಸಿದೆ ಎಂದು ಹೇಳಬಹುದು.










View this post on Instagram






A post shared by WedAbout.com (@wedabout)






ಪ್ರತಿ ವಧುವಿನ ಕನಸು, ತಂದೆಯನ್ನು ಮಿಸ್ ಮಾಡ್ಕೊಂಡ ಯುವತಿ

"ಛಾಯಾ ತನ್ನ ಮದುವೆಗೆ ಮುಂಚಿತವಾಗಿ ತನ್ನ ತಂದೆಯನ್ನು ಕಳೆದುಕೊಂಡಳು. ಆದರೆ ಪ್ರತಿಯೊಬ್ಬ ವಧುವಿನಂತೆ, ಅವಳು ತನ್ನ ಮದುವೆಯಲ್ಲಿ ಆಕೆಯ ತಂದೆಯೊಂದಿಗೆ ಡ್ಯಾನ್ಸ್ ಮಾಡಲು ಬಯಸಿದ್ದಳು. ಆದ್ದರಿಂದ ಅವಳ ಸಹೋದರಿ ತನ್ನ ತಂದೆಯ ಬ್ಲೇಜರ್ ಧರಿಸಿ ತಾಯಿ ಮತ್ತು ವಧುವನ್ನು ಹಿಡಿದುಕೊಂಡು ಡ್ಯಾನ್ಸ್ ಮಾಡುವುದರ ಮೂಲಕ ತಂದೆಯ ಅನುಪಸ್ಥಿತಿಯನ್ನು ಸ್ವಲ್ಪ ಮಟ್ಟಿಗಾದರೂ ದೂರ ಮಾಡಿದಳು. ಅಲ್ಲಿ ಬಂದಿರುವ ಎಲ್ಲರೂ ಕಣ್ಣೀರಿಟ್ಟರು. ಆದರೆ ಪ್ರತಿಯೊಬ್ಬರೂ ಅವರ ಉಪಸ್ಥಿತಿಯನ್ನು ಸುತ್ತಲೂ ಅನುಭವಿಸಿದರು" ಎಂದು ವಿಡಿಯೋದ ಪಠ್ಯವು ಸಂದರ್ಭವನ್ನು ಚೆನ್ನಾಗಿ ವಿವರಿಸಿದೆ.

ಇದನ್ನೂ ಓದಿ: Auto Rickshaw Garden: ಆಟೋ ರಿಕ್ಷಾದ ಮೇಲೆ ಉದ್ಯಾನವನ ಬೆಳೆಸಿದ ಚಾಲಕ

ಅಕ್ಕ ತಂಗಿಯ ಡ್ಯಾನ್ಸ್

ನೀಲಿ ಬ್ಲೇಜರ್ ಧರಿಸಿದ ಹುಡುಗಿ ತನ್ನ ಅಕ್ಕನ ಮದುವೆಯಲ್ಲಿ ತನ್ನ ಸಹೋದರಿ ಮತ್ತು ತಾಯಿಯೊಂದಿಗೆ ಡ್ಯಾನ್ಸ್ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

"ನೀವು ನಮ್ಮನ್ನು ಗಮನಿಸುತ್ತಿದ್ದೀರಿ ಎಂದು ನಮಗೆ ತಿಳಿದಿತ್ತು, ನೀವು ನಮ್ಮ ಮಧ್ಯದಲ್ಲಿಯೇ ಇರುವಂತೆ ಅನುಭವವಾಯಿತು, ಸಂತೋಷ ಮತ್ತು ಭಾವನೆಗಳ ಪ್ರತಿ ಕ್ಷಣವೂ ನೀವು ನಮ್ಮ ಭಾಗವಾಗಿದ್ದಿರಿ. ನಾವು ಪ್ರತಿದಿನ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಮತ್ತು ಪ್ರತಿ ಕ್ಷಣವೂ ನಿಮ್ಮನ್ನು ನೆನಪಿಸಿಕೊಳ್ಳುತ್ತೇವೆ ಅಪ್ಪ" ಎಂದು ವಿಡಿಯೋದ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: Baby Drives Car: ಒಂಟಿಯಾಗಿ ಅಮ್ಮನ ಕಾರು ಡ್ರೈವ್ ಮಾಡಿದ 4 ವರ್ಷದ ಮಗು, ಆಕ್ಸಿಡೆಂಟ್ ನಂತ್ರ ಅರೆಸ್ಟ್

"ತುಂಬಾನೇ ಮುದ್ದಾಗಿದೆ ಈ ವಿಡಿಯೋ" ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಹೃದಯದ ಎಮೋಜಿಗಳೊಂದಿಗೆ ಕಾಮೆಂಟ್ ಮಾಡಿದ್ದಾರೆ. ವೀಡಿಯೋದಲ್ಲಿ ವಧುವನ್ನು ಛಾಯಾ ಭಜಂಕಾ ಎಂದು ಗುರುತಿಸಲಾಗಿದೆ. ಅವಳು ತನ್ನ ಇನ್‌ಸ್ಟಾಗ್ರಾಮ್ ಬಯೋ ಪ್ರಕಾರ ವಾಸ್ತುಶಿಲ್ಪಿ ಮತ್ತು ಭೂದೃಶ್ಯ ವಿನ್ಯಾಸಕಿ ಎಂದು ತಿಳಿದುಬಂದಿದೆ.
Published by:Divya D
First published: