• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Video: ಕ್ಷಣ ಮಾತ್ರದಲ್ಲಿ ಸಾವಿನಿಂದ ತಪ್ಪಿಸಿಕೊಂಡ ಮಹಿಳೆ! ಎಲ್ಲವೂ ನಸೀಬು ಎಂದ ನೆಟ್ಟಿಗರು

Viral Video: ಕ್ಷಣ ಮಾತ್ರದಲ್ಲಿ ಸಾವಿನಿಂದ ತಪ್ಪಿಸಿಕೊಂಡ ಮಹಿಳೆ! ಎಲ್ಲವೂ ನಸೀಬು ಎಂದ ನೆಟ್ಟಿಗರು

ರೈಲು ಹಳಿ ದಾಟುತ್ತಿರುವ ಮಹಿಳೆ

ರೈಲು ಹಳಿ ದಾಟುತ್ತಿರುವ ಮಹಿಳೆ

ಮಹಿಳೆಯೊಬ್ಬರು ರೈಲಿನ ಹಳಿಯನ್ನು ದಾಟುವ ಸಂದರ್ಭದಲ್ಲಿ ವೇಗವಾಗಿ ಬಂದ ರೈಲಿನಿಂದ ಕೇವಲ ಎರಡು ಸೆಕೆಂಡುಗಳಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವೀಡೀಯೋ ಇದೀಗ ವೈರಲ್ ಆಗುತ್ತಿದ್ದು ಜನರನ್ನು ಬೆಚ್ಚಿಬಿಳಿಸಿದೆ.

  • Share this:

ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳುವ ಅವಕಾಶಗಳು ನಮ್ಮ ಕೈಯಲ್ಲಿರುತ್ತವೆ. ಆದರೆ ಮಾನವ ತನ್ನ ಅಜಾಗ್ರೂಕತೆಯಿಂದಾಗಿ ಜೀವನವನ್ನು ರೂಪಿಸಬೇಕಾದ ಜೀವವನ್ನೆ ಕಳೆದುಕೊಂಡಂತಹ ಅನೇಕ ಘಟನೆಗಳನ್ನು ನಾವು ಕಂಡಿದ್ದೇವೆ. ಕೆಲವರು ಬೇಕು ಬೇಕೆಂದೆ ಆತ್ಮಹತ್ಮೆ (Suicide) ಮಾಡಿಕೊಳ್ಳುವ ಮೂಲಕ ತಮ್ಮ ಜೀವವನ್ನು ಕಳೆದುಕೊಳ್ಳತ್ತಾರೆ. ಮತ್ತೆ ಕೆಲವರು ತಮ್ಮ ನಿರ್ಲಕ್ಷ್ಯದಿಂದ ತಮ್ಮ ಪ್ರಾಣ ಕಳೆದುಕೊಳ್ಳತ್ತಾರೆ. ಅಂತಹ ನಿರ್ಲಕ್ಷಗಳಲ್ಲಿ ಒಂದು ರಸ್ತೆ ದಾಟುವಾಗ (Road Crossing) ನಿಗಾವಹಿಸದೆ ಇರುವುದು. ಈ ಬಗ್ಗೆ ಎಷ್ಟೇ ಜಾಗ್ರತೆಯನ್ನು ಹೇಳಿದರೂ ಜನ ಪದೇ ಪದೇ ಈ ರೀತಿಯ ತಪ್ಪುಗಳನ್ನು ಮಾಡುತ್ತಲೇ ಇರುತ್ತಾರೆ. ಇದೀಗ ಅಂತಹದೇ ಒಂದು ಘಟನೆಯ ವೀಡಿಯೋ ತುಂಬಾನೇ  ವೈರಲ್ (Viral) ಆಗುತ್ತಿದ್ದು ಇದು ಜನರನ್ನು ಬೆಚ್ಚಿ ಬಿಳಿಸಿದೆ. ಮಹಿಳೆಯೊಬ್ಬಳು (Woman) ರೈಲು ಹಳಿ (Railway Track) ದಾಟುವಾಗ ನಿರ್ಲಕ್ಷವಹಿಸಿದ್ದು. ಎರಡೇ ಸೆಕೆಂಡುಗಳ (Two Seconds) ಅವಧಿಯಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ.


ಮಧ್ಯಹಳಿಯಲ್ಲಿ ನಿಂತ ರೈಲು
ರೈಲು ನಡುರಸ್ತೆಯಲ್ಲಿ ನಿಂತಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ರೈಲ್ವೆ ಪ್ಲಾಟ್‌ಫಾರ್ಮ್ ಇರಲಿಲ್ಲ. ಒಬ್ಬ ಮಹಿಳೆ ಮತ್ತು ಆಕೆಯ ಕುಟುಂಬದವರು ಮಾತ್ರವಲ್ಲದೆ ಅನೇಕರು ರೈಲಿನಿಂದ ಇಳಿಯಲು ನಿರ್ಧರಿಸಿದರು ಮತ್ತು ರೈಲ್ವೆ ಹಳಿ ದಾಟಲು ಪ್ರಯತ್ನಿಸಿದರು.


ಇದನ್ನೂ ಓದಿ: Cave Restaurant: ಮಿಲಿಯನ್​ಗಳಷ್ಟು ಹಳೆಯ ಗುಹೆಯಲ್ಲಿ ರೆಸ್ಟೋರೆಂಟ್! ಸಾವು ಸಂಭವಿಸುವ ಭಯವೇಕೆ?


ರೈಲು ಹಳಿ ದಾಟಲು ಪ್ರಯತ್ನಿಸಿದ ಮಹಿಳೆ


ರೈಲಿನಿಂದ ಇಳಿದ ಮಹಿಳೆ ಒಮ್ಮೆ ತನ್ನ ಬ್ಯಾಗ್ ಗಳನ್ನು ಈ ಬದಿಯಿಂದ ಇನ್ನೊಂದು ಬದಿಗೆ ಸಾಗುಸುತ್ತಾಳೆ. ಮತ್ತೆ ಆಕೆ ಹಿಂದಿರುಗುತ್ತಾಳೆ. ಆದರೆ ಹಿಂದೆ ಬರುವ ಸಂದರ್ಭದಲ್ಲಿ ವೇಗವಾಗಿ ಬಂದ ರೈಲಿನಿಂದ ಕೇವಲ ಎರಡೇ ಸೆಕೆಂಡ್ನಲ್ಲಿ ಪಾರಾಗಿದ್ದಾಳೆ.
ಹೆಚ್ಚಿನ ಜನರು ಸಮಾನಾಂತರ ಹಳಿಗಳ ಮಧ್ಯದಲ್ಲಿರುವ ಜಾಗದಲ್ಲಿ ಸುರಕ್ಷಿತವಾಗಿ ಓಡಿಹೋದರೆ, ನಿಂತ ರೈಲಿನ ಇತರ ಪ್ರಯಾಣಿಕರು ಹಳಿಗಳಿಂದ ಇಳಿಯುವಂತೆ ಕೂಗಿದಾಗಲೂ ಮಹಿಳೆ ತನ್ನ ಸಾಮಾನುಗಳನ್ನು ಬದಲಾಯಿಸುತ್ತಾ ಹಳಿಗಳ ಉದ್ದಕ್ಕೂ ಓಡುವುದನ್ನು ಮುಂದುವರೆಸಿದ್ದಾಳೆ.



ಟ್ವಿಟ್ಟರ್ ನಲ್ಲಿ ವೀಡೀಯೋ ಶೇರ್ ಮಾಡಿದ ಐಎಎಸ್ ಅಧಿಕಾರಿ ಅವಿನಾಶ್ ಶರಣ್
ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಸಲಹೆಯೊಂದಿಗೆ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ. ಈ ಅಪಾಯಕಾರಿ ಸಾಹಸವು ಪ್ರಯಾಣಿಕರಲ್ಲಿ ಒಬ್ಬರ ಪ್ರಾಣವನ್ನು ಕಳೆದುಕೊಳ್ಳಬಹುದು. ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, 1 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ.


"ಜೀವ ನಿಮ್ಮದು, ನಿರ್ಧಾರವು ನಿಮ್ಮದೇ" ಎಂಬ ಶೀರ್ಷಿಕೆಯೊಂದಿಗೆ ವೀಡೀಯೊವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋವನ್ನು ನೋಡಿದ ಜನ ಒಮ್ಮೆಗೆ ಬೆಚ್ಚಿಬಿದ್ದಿದ್ದಾರೆ. ಅನೇಕ ನೆಟಿಜನ್‌ಗಳು ಅಂತಹ ಅಜಾಗರೂಕ ನಡವಳಿಕೆಯನ್ನು ಪ್ರೋತ್ಸಾಹಿಸಲಿಲ್ಲ. ಅವರು ಪ್ರಯಾಣಿಕರಿಗೆ, ವಿಶೇಷವಾಗಿ ಮಹಿಳೆಗೆ, ಪ್ರಾಣ ಕಳೆದುಕೊಳ್ಳಬಹುದಾದ ಎಚ್ಚರಿಕೆ ನೀಡಿದರು.


ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ರೈಲು ಅಪಘಾತಗಳು
2021 ರಲ್ಲಿ ಬಿಡುಗಡೆಯಾದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ದ ದತ್ತಾಂಶವು 2020 ರಲ್ಲಿ ದೇಶಾದ್ಯಂತ 13,000 ಕ್ಕೂ ಹೆಚ್ಚು ರೈಲು ಅಪಘಾತಗಳು ಸುಮಾರು 12,000 ರೈಲ್ವೆ ಪ್ರಯಾಣಿಕರನ್ನು ಬಲಿ ತೆಗೆದುಕೊಂಡಿದೆ ಎಂದು ತೋರಿಸುತ್ತದೆ.


ಇದನ್ನೂ ಓದಿ: Viral Wedding Video: ಮಾಜಿ ಪ್ರಿಯಕರನ ಮದುವೆಗೆ ಕರೆದ ಯುವತಿ! ನಂತರ ಫಜೀತಿ, ಇದೆಲ್ಲಾ ಬೇಕಿತ್ತಾ?


ಅಂದರೆ ಈ ಅಪಘಾತಗಳಲ್ಲಿ ಪ್ರತಿದಿನ ಸರಾಸರಿ 32 ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ರೈಲ್ವೇ ಅಪಘಾತಗಳಲ್ಲಿ 70 ಪ್ರತಿಶತ ಅಥವಾ 8,400 ಪ್ರಯಾಣಿಕರು ರೈಲಿನಿಂದ ಬಿದ್ದು ಅಥವಾ ರೈಲ್ವೇ ಹಳಿ ದಾಟುವಾಗ ಓಡಿದ ಕಾರಣ ಸಂಭವಿಸಿದೆ ಎಂದು ವರದಿ ಹೇಳಿದೆ.

Published by:Nalini Suvarna
First published: