ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಮಹಿಳೆಯರು (Women's) ಮನೆಯಲ್ಲಿ ಹೆಚ್ಚಾಗಿ ಸೀರೆಯನ್ನುಟ್ಟುಕೊಳ್ಳುತ್ತಾರೆ ಮತ್ತು ದಿನಪೂರ್ತಿ ಮನೆಯ ಬಹುತೇಕ ಕೆಲಸಗಳನ್ನು ಮಹಿಳೆಯರು ಸೀರೆ ಧರಿಸಿಕೊಂಡೇ ಮಾಡಿಕೊಳ್ಳುತ್ತಾರೆ. ನಮ್ಮ ಮಹಿಳೆಯರಿಗೆ ಸಾಂಪ್ರದಾಯಿಕ ಉಡುಗೆ ಎಂದರೆ ಅದು ಸೀರೆ ಆಗಿದೆ. ಆದರೆ ಈಗ ಅನೇಕ ಮಹಿಳೆಯರು ಸೀರೆಯನ್ನು ಧರಿಸಿಕೊಂಡು ಮನೆಯ ಕೆಲಸಗಳನ್ನು ಮಾಡಿಕೊಳ್ಳಬಹುದು, ಆದರೆ ಮಕ್ಕಳ (Children) ಜೊತೆಗೆ ಸಂಜೆ ಹೊತ್ತು ಮನೆಯ ಹೊರಗೆ ಕೆಲವು ಕ್ರೀಡೆಗಳನ್ನು ಆಡಲು ಅಷ್ಟೊಂದು ಅನುಕೂಲಕರವಾಗುವುದಿಲ್ಲ ಅಂತ ಹೇಳಿ ಸ್ಪೋರ್ಟ್ಸ್ ವೇರ್ (Sports Wear) ಗಳನ್ನು ಧರಿಸುತ್ತಿರುವುದನ್ನು ಇತ್ತೀಚಿನ ದಿನಗಳಲ್ಲಿ ನಾವು ಹೆಚ್ಚಾಗಿ ನೋಡುತ್ತಿದ್ದೇವೆ.
ಹೌದು, ಮನೆಯ ಕೆಲಸಗಳನ್ನು ಸೀರೆಯಲ್ಲಿ ತುಂಬಾನೇ ಸರಾಗವಾಗಿ ಮಾಡಿಕೊಳ್ಳಬಹುದು, ಆದರೆ ಕೆಲವು ಕ್ರೀಡೆಗಳಿಗೆ ಸೀರೆ ಅಷ್ಟೊಂದು ಅನುಕೂಲಕರವಾಗಿರುವುದಿಲ್ಲ ಅಂತ ತುಂಬಾ ಜನ ಮಹಿಳೆಯರು ಹೇಳುತ್ತಾರೆ. ಅದರಲ್ಲೂ ಯಾವುದಾದರೂ ಮ್ಯಾರಥಾನ್ ರೇಸ್, ಸೈಕಲ್ ರೇಸ್ ಮತ್ತು ಇನ್ನಿತರೆ ಕ್ರೀಡೆಗಳನ್ನು ಆಡುವಾಗ ಮಹಿಳೆಯರು ಸ್ಪೋರ್ಟ್ಸ್ ಬಟ್ಟೆಗಳನ್ನು ಧರಿಸುತ್ತಾರೆ.
ಇದೆಲ್ಲಾ ಈಗೇಕೆ ನಾವು ಹೇಳುತ್ತಿದ್ದೇವೆ ಇಲ್ಲಿ ಅಂತ ನಿಮಗೆ ಅನ್ನಿಸಬಹುದು, ಇಲ್ಲೊಂದು ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ನೋಡಿ. ಆ ಫೋಟೋದಲ್ಲಿ ಮಹಿಳೆಯೊಬ್ಬಳು ಸೀರೆಯನ್ನುಟ್ಟುಕೊಂಡು ಮ್ಯಾರಥಾನ್ ಓಡುತ್ತಿರುವುದು ಕಂಡು ಬಂದಿದೆ.
ಸೀರೆಯನ್ನುಟ್ಟುಕೊಂಡು ಮ್ಯಾರಥಾನ್ ಓಡಿದ ಯುಕೆಯಲ್ಲಿರುವ ಭಾರತದ ಮಹಿಳೆ!
ಏನು ಮಹಿಳೆಯೊಬ್ಬಳು ಸೀರೆಯನ್ನುಟ್ಟುಕೊಂಡು ಮ್ಯಾರಥಾನ್ ಓಡಿದರೆ ಅಂತ ನೀವು ಒಂದು ಕ್ಷಣ ಶಾಕ್ ಆಗಬಹುದು. ಇಂತದಕ್ಕೆಲ್ಲಾ ಸೀರೆಯನ್ನು ಸೂಕ್ತವಾದ ಉಡುಗೆ ಅಂತ ತಿಳಿಯುವ ಜನರು ನಮ್ಮ ಮಧ್ಯೆ ತುಂಬಾನೇ ವಿರಳವಾಗಿರುತ್ತಾರೆ.
ಏಕೆಂದರೆ ಸೀರೆ ಓಡಲು ಕಾಲಿಗೆ ಅಡ್ಡಪಡಿಸುತ್ತದೆ ಅಂತ ಅನೇಕರು ಹೇಳುತ್ತಾರೆ. ಇಲ್ಲಿ 41 ವರ್ಷದ ಯುಕೆ ಮಹಿಳೆಯೊಬ್ಬರು ಮ್ಯಾರಥಾನ್ ನಲ್ಲಿ ಸೀರೆಯನ್ನುಟ್ಟುಕೊಂಡು ಓಡಿ, ಸೀರೆಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಸಂಪೂರ್ಣವಾಗಿ ಹುಸಿಗೊಳಿಸಿದ್ದಾರೆ.
ಇದನ್ನೂ ಓದಿ: ಭಾರತದ ಕೊನೆಯ ರೈಲು ನಿಲ್ದಾಣ, ನೀವು ಇಲ್ಲಿಂದ ಇಳಿದು ಬೇರೆ ದೇಶಕ್ಕೆ ಹೋಗಬಹುದು!
ಮ್ಯಾಂಚೆಸ್ಟರ್ ನಲ್ಲಿ ಪ್ರೌಢಶಾಲಾ ಶಿಕ್ಷಕಿಯಾಗಿರುವ ಒಡಿಯಾ ಮೂಲದ ಮಧುಸ್ಮಿತಾ ಜೆನಾ ಅವರು 42.5 ಕಿಲೋಮೀಟರ್ ಉದ್ದದ ಮ್ಯಾಂಚೆಸ್ಟರ್ ಮ್ಯಾರಥಾನ್ ಅನ್ನು ನಾಲ್ಕು ಗಂಟೆ 50 ನಿಮಿಷಗಳಲ್ಲಿ ಓಡಿ ಪೂರ್ಣಗೊಳಿಸಿದರು.
An Odia living in Manchester, UK ran the UK’s second largest Manchester Marathon 2023 wearing a Sambalpuri Saree !
What a great gesture indeed 👏
Loved her spirit 👍#Sambalpur you have a distinct inclusive cultural identity that arises from the strong association of the… pic.twitter.com/zqsUtQcO4e
— dD@$h (@dashman207) April 18, 2023
ಮಹಿಳೆಯ ಮ್ಯಾರಥಾನ್ ನಲ್ಲಿ ಓಡಿದ ಫೋಟೋ ಸಿಕ್ಕಾಪಟ್ಟೆ ವೈರಲ್
ಮ್ಯಾರಥಾನ್ ನಲ್ಲಿ ಸೀರೆಯನ್ನುಟ್ಟುಕೊಂಡು ಓಡಿದ ಜೆನಾ ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
View this post on Instagram
ಇದನ್ನೂ ಓದಿ: ಅಪರೂಪದಲ್ಲಿ ಅಪರೂಪ! 24 ಬೆರಳುಗಳಿರೋ ಗಂಡು ಮಗು ಜನನ!
ತನ್ನ ಮ್ಯಾರಥಾನ್ ಅನುಭವದ ಬಗ್ಗೆ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಜೆನಾ ಅವರು "ಸೀರೆ ಧರಿಸಿ ಮ್ಯಾರಥಾನ್ ಓಡಿದ ಏಕೈಕ ಮಹಿಳೆ ನಾನು. ಇಷ್ಟು ದೀರ್ಘಾವಧಿಯವರೆಗೆ ಓಡುವುದು ತುಂಬಾನೇ ಕಷ್ಟದ ಕೆಲಸವಾಗಿತ್ತು, ಆದರೆ ಇಡೀ ದೂರವನ್ನು 4 ಗಂಟೆ 50 ನಿಮಿಷಗಳಲ್ಲಿ ಪೂರ್ಣಗೊಳಿಸಲು ನನಗೆ ಸಾಧ್ಯವಾಯಿತು ಎಂಬುದು ನನಗೆ ಹೆಚ್ಚು ಸಂತೋಷ ಕೊಟ್ಟಿದೆ” ಅಂತ ಹೇಳಿದರು.
ತನ್ನ ಸೀರೆಯ ಆಯ್ಕೆಯು ತನ್ನ ಸುತ್ತಲೂ ಯಾವಾಗಲೂ ಸೀರೆಯನ್ನು ಧರಿಸಿಕೊಂಡಿದ್ದ ತನ್ನ ಅಜ್ಜಿ ಮತ್ತು ತಾಯಿಯಿಂದ ಸ್ಫೂರ್ತಿ ಪಡೆದಿದೆ ಎಂದು ಅವರು ಹೇಳಿದರು ಮತ್ತು "ಮಹಿಳೆಯರು ಸೀರೆಗಳನ್ನು ಧರಿಸಿ ಓಡಲು ಸಾಧ್ಯವಿಲ್ಲ ಎಂದು ಅನೇಕರು ಹೇಳುತ್ತಾರೆ, ಆದರೆ ಸಂಬಲ್ಪುರಿ ಕೈಮಗ್ಗದ ಸೀರೆಯನ್ನು ಧರಿಸಿ ನಾನು ಮ್ಯಾರಥಾನ್ ನಲ್ಲಿ ಓಡಿ ಅದನ್ನು ತಪ್ಪೆಂದು ಸಾಬೀತುಪಡಿಸಿದೆ. ನಾನು ಯುಕೆಯಲ್ಲಿ ಬೇಸಿಗೆಕಾಲದಲ್ಲಿ ಸೀರೆಯನ್ನೆ ಧರಿಸುತ್ತೇನೆ" ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ