• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Post: ಈ ಯುವತಿಗೆ ತನ್ನ ಪ್ರಿಯಕರನ ಬಗ್ಗೆ ಹೀಗೊಂದು ಕಂಪ್ಲೇಂಟ್ ಅಂತೆ! ಪೋಸ್ಟ್ ನೋಡಿದವರು ಏನಂದ್ರು

Viral Post: ಈ ಯುವತಿಗೆ ತನ್ನ ಪ್ರಿಯಕರನ ಬಗ್ಗೆ ಹೀಗೊಂದು ಕಂಪ್ಲೇಂಟ್ ಅಂತೆ! ಪೋಸ್ಟ್ ನೋಡಿದವರು ಏನಂದ್ರು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇಲ್ಲೊಬ್ಬ ಮಹಿಳೆ ತನ್ನ ಪ್ರಿಯಕರ ಎಲ್ಲರೊಂದಿಗೆ ಮಾತಾಡುತ್ತಾನೆ ಅಂತ ಹೇಳಿ ದೂರು ನೀಡಿದ್ದಾರೆ ನೋಡಿ. ಟ್ವಿಟ್ಟರ್ ನ ಬಳಕೆದಾರರೊಬ್ಬರು ಪೋಸ್ಟ್ ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ ಈಗ ಈ ಪೋಸ್ಟ್ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

  • Share this:

ಯಾವುದೇ ಒಂದು ಹೊಸ ಸಂಬಂಧವನ್ನು (Relationship) ನಾವು ಶುರು ಮಾಡುತ್ತಿದ್ದರೆ, ಮೊದಲಿಗೆ ಆ ವ್ಯಕ್ತಿ ಬೇರೆಯವರ ಬಳಿ ಹೇಗೆ ನಡೆದುಕೊಳ್ಳುತ್ತಾರೆ, ಅದರಲ್ಲೂ ಅವರಿಗಿಂತಲೂ ಬಡವರಾದವರ (Poor) ಮುಂದೆ ಹೇಗೆ ನಡೆದುಕೊಳ್ಳುತ್ತಾರೆ ಅಂತ ಅನೇಕರು ನೋಡುತ್ತಾರೆ. ಇಷ್ಟೇ ಅಲ್ಲದೆ ಎಷ್ಟೋ ಹುಡುಗಿಯರು ತಮ್ಮ ಮದುವೆಯಾಗುವ (Marriage) ಹುಡುಗ ಬೇರೆಯವರ ಜೊತೆ ಹೇಗೆ ನಡೆದುಕೊಳ್ಳುತ್ತಾನೆ ಅಂತ ಗಮನಿಸಿ, ಆ ವ್ಯಕ್ತಿ ಬೇರೆಯವರಿಗೆ ಗೌರವ ನೀಡುತ್ತಾನೋ ಅಥವಾ ಇಲ್ಲವೋ ಅಂತ ತಿಳಿದುಕೊಂಡು ಆ ಸಂಬಂಧದಲ್ಲಿ ಮುಂದುವರೆಯುವುದನ್ನು ನಾವು ನೋಡುತ್ತೇವೆ. ಹೆಚ್ಚಾಗಿ ನಾವು ಮದುವೆಯಾಗುವ ಹುಡುಗ (Boy) ಅಥವಾ ಹುಡುಗಿ (Girl) ಬೇರೆ ಜನರನ್ನು ಎಷ್ಟರ ಮಟ್ಟಿಗೆ ಗೌರವದಿಂದ ಕಾಣುತ್ತಾರೆ ಅಂತ ನಾವು ತಿಳಿದುಕೊಳ್ಳಲು ಬಯಸುವ ಮುಖ್ಯವಾದ ಅಂಶವಾಗಿರುತ್ತದೆ.


ಆದರೆ ಇತ್ತೀಚೆಗೆ ಕೆಲವು ವಿಲಕ್ಷಣ ಕಾರಣಗಳಿಗಾಗಿ ಈ ಸಂಬಂಧಗಳು ಮುರಿದು ಬೀಳುವ ಕಥೆಗಳು ನಮಗೆ ಈ ಸಾಮಾಜಿಕ ಮಾಧ್ಯಮಗಳಲ್ಲಿ ನೋಡಲು ಸಿಗುತ್ತಿವೆ.


ಈ ಮಹಿಳೆಯ ಸಮಸ್ಯೆ ಏನು ನೋಡಿ 
ಈಗ ಇಲ್ಲೊಬ್ಬ ಮಹಿಳೆ ತನ್ನ ಪ್ರಿಯಕರ ಎಲ್ಲರೊಂದಿಗೆ ಮಾತಾಡುತ್ತಾನೆ ಅಂತ ಹೇಳಿ ದೂರು ನೀಡಿದ್ದಾರೆ ನೋಡಿ. ಟ್ವಿಟ್ಟರ್ ನ ಬಳಕೆದಾರರೊಬ್ಬರು ಪೋಸ್ಟ್ ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ, ಅಲ್ಲಿ ಮಹಿಳೆಯೊಬ್ಬರು ರಿಕ್ಷಾ ಚಾಲಕರ ಜೊತೆಗೆ ಚೆನ್ನಾಗಿ ವಿನಯತೆಯಿಂದ ಮಾತಾಡುವ ತನ್ನ ಗೆಳೆಯನ ಬಗ್ಗೆ ದೂರು ನೀಡಿರುವುದನ್ನು ನಾವು ನೋಡಬಹುದು.


ಇದನ್ನೂ ಓದಿ:  Marriage with Doll: ಇವನಿಗೆ ಬೊಂಬೆ ಮೇಲೆ ಪ್ಯಾರ್‌ಗೇ ಆಗ್ಬಿಟ್ಟೈತೆ! ಅದನ್ನೇ ಮದ್ವೆಯಾಗ್ತಾನಂತೆ ಈ ಭೂಪ!


ಸ್ಕ್ರೀನ್ ಶಾಟ್ ನಲ್ಲಿ, ಅವಳು ಅವನ ಬಗ್ಗೆ ಈ ಗುಣವನ್ನು ತಾನು ಹೇಗೆ ಬದಲಾಯಿಸಬಹುದು ಎಂದು ನೆಟ್ಟಿಗರನ್ನು ಕೇಳುವುದನ್ನು ಕಾಣಬಹುದು. ಇದಲ್ಲದೆ, ಅವನು ರಸ್ತೆ ಬದಿಯಲ್ಲಿ ನಿಂತುಕೊಂಡು ಚಾಯ್ ಕುಡಿಯುತ್ತಾನೆ ಮತ್ತು ಅವನು 'ಹೆಚ್ಚು ಕ್ಲಾಸಿ' ಮತ್ತು 'ಆಧುನಿಕ' ಆಗಿರಬೇಕು ಎಂದು ನಾನು ಬಯಸುತ್ತೇನೆ. ಇವೆಲ್ಲಾ ಅಂಶಗಳ ಬಗ್ಗೆಯೂ ಅವಳಿಗೆ ಸಮಸ್ಯೆ ಇದೆ ಎಂದು ಹೇಳಿಕೊಂಡಿದ್ದಾಳೆ.


ಈ ಬಗ್ಗೆ ಟ್ವಿಟ್ಟರ್ ಪೋಸ್ಟ್ ನಲ್ಲಿ ಏನಿದೆ
"ನನ್ನ ಗೆಳೆಯ ಕೆಳಮಧ್ಯಮ ವರ್ಗದ ಕುಟುಂಬದಿಂದ ಬಂದವನು. ಅವನು ದೊಡ್ಡ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕೈ ತುಂಬಾ ಹಣ ಗಳಿಸುತ್ತಿದ್ದಾನೆ. ಆದರೆ ಅವನು ಇನ್ನೂ ಈ ರಿಕ್ಷಾ ಚಾಲಕರು ಮತ್ತು ಸಣ್ಣ ಸಣ್ಣ ವ್ಯಾಪಾರ ಮಾಡುವ ಜನರೊಂದಿಗೆ ಮಾತನಾಡುತ್ತಾನೆ ಮತ್ತು ರಸ್ತೆಬದಿಯ ಚಾಯ್ ಕುಡಿಯುತ್ತಾನೆ. ನಾನು ನನ್ನ ಗೆಳೆಯನನ್ನು ಹೆಚ್ಚು ಕ್ಲಾಸಿ ಮತ್ತು ಆಧುನಿಕನನ್ನಾಗಿ ಮಾಡುವುದು ಹೇಗೆ" ಎಂದು ಅವರ ಟ್ವಿಟ್ಟರ್ ಪೋಸ್ಟ್ ನಲ್ಲಿ ಬರೆದಿದ್ದಾರೆ.


ವೈರಲ್ ಪೋಸ್ಟ್ ನೋಡಿ ನೆಟ್ಟಿಗರು ಏನಂದ್ರು
ಈ ಪೋಸ್ಟ್ ಅಪ್ಲೋಡ್ ಮಾಡಿದಾಗಿನಿಂದ, ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮತ್ತು ನೆಟ್ಟಿಗರು ಕಾಮೆಂಟ್ ಮಾಡುವುದನ್ನು ನಿಲ್ಲಿಸಲು ಸಾಧ್ಯವೇ ಆಗುತ್ತಿಲ್ಲ ಎಂದು ಹೇಳಬಹುದು. ಈ ಪೋಸ್ಟ್ ನೋಡಿದ ನೆಟ್ಟಿಗರು ‘ಒಳ್ಳೆಯ ಹುಡುಗನಿರಬೇಕು, ಅದಕ್ಕೆ ಎಲ್ಲರನ್ನು ತುಂಬಾನೇ ಗೌರವದಿಂದ ಕಾಣುತ್ತಾನೆ’ ಅಂತ ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ‘ಆ ಹುಡುಗಿಯನ್ನು ಬಿಟ್ಟುಬಿಡಿ’ ಅಂತ ಆ ಹುಡುಗನಿಗೆ ಹೇಳಿದ್ದಾರೆ.


"ನಮಗಿಂತಲೂ ಕೆಳಗೆ ಇರುವ ಜನರನ್ನು ಮಾತನಾಡಿಸದೆ ಇರುವುದು ಕ್ಲಾಸ್ ಮತ್ತು ಮಾರ್ಡನ್ ಅಂತ ತಿಳಿದುಕೊಂಡರೆ ಏನು ಹೇಳುವುದು” ಅಂತ ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಟ್ವಿಟ್ಟರ್ ಬಳಕೆದಾರರು "ನಾನು ಇದನ್ನು ಅತ್ಯಂತ ಅಪರೂಪದ ಸಂದರ್ಭ ಅಂತ ಹೇಳುತ್ತೇನೆ, ಆದರೆ ಹುಡುಗ ಒಳ್ಳೆಯವನು" ಅಂತ ಕಾಮೆಂಟ್ ಮಾಡಿದ್ದಾರೆ. ಟ್ವಿಟರ್ ಬಳಕೆದಾರರು ಈ ಸ್ಕ್ರೀನ್‌ಶಾಟ್ ಇರುವ ಟ್ವೀಟ್ ಅನ್ನು ಮರು ಟ್ವೀಟ್ ಮಾಡಿರುವುದನ್ನು ಸಹ ನಾವು ನೋಡಬಹುದಾಗಿದೆ.


ಇದನ್ನೂ ಓದಿ:  Family Fight: ಹೆಂಡ್ತಿ ಯಾಕ್ ಹಿಂಗ್ ಕಾಡ್ತಿ ಅಂತ 80 ಅಡಿ ಮರವೇರಿದ ಗಂಡ! ಒಂದು ತಿಂಗಳಾದ್ರೂ ಕೆಳಕ್ಕೆ ಬರಲೇ ಇಲ್ಲ!


"ಈಗಷ್ಟೇ ತಿಳಿಯಿತು... ಕಡಿಮೆ ಆದಾಯ ಹೊಂದಿರುವ ಜನರನ್ನು ಮನುಷ್ಯರೆಂದು ಪರಿಗಣಿಸದೇ ಇರುವುದು ಮಾರ್ಡನ್ ಮತ್ತು ಕ್ಲಾಸಿಯಾಗಿ ಕಾಣಿಸಲು ಇರುವ ಒಂದು ಮಾನದಂಡ ಅಂತ" ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

top videos
    First published: