Plastic ಚೀಲಗಳನ್ನು ಸಂಗ್ರಹಿಸಿದ್ದಷ್ಟೇ ಈಕೆ ಮಾಡಿದ ಕೆಲಸ, ಈಗ ಅದರ ಬೆಲೆ ಹಲವು ಲಕ್ಷಗಳಷ್ಟು!

ಆಕೆಯ ಸಂಗ್ರಹವು ಬೆಳೆದಂತೆ ಅವಳು ಪ್ರಪಂಚದಾದ್ಯಂತದ ಎಲ್ಲ ಕಡೆಯಿಂದ ಚೀಲಗಳನ್ನು ಸ್ವೀಕರಿಸಲು ಪ್ರಾರಂಭಿಸಿದಳು. ಆಕೆಯ ಸಂಗ್ರಹದಲ್ಲಿ ಕೆಲವು ಪಡೆಯಲು ಅಸಾಧ್ಯವಾದ ಡಿಸ್ನಿ ಕ್ಯಾರಿಯರ್ ಬ್ಯಾಗ್‌ಗಳಂತಹ ಅಪರೂಪದ ಚೀಲಗಳೂ ಸೇರಿವೆ .

ತಾನು ಸಂಗ್ರಹಿಸಿದ ಪ್ಲಾಸ್ಟಿಕ್ ಜೊತೆ ಏಂಜೆಲಾ

ತಾನು ಸಂಗ್ರಹಿಸಿದ ಪ್ಲಾಸ್ಟಿಕ್ ಜೊತೆ ಏಂಜೆಲಾ

  • Share this:
ಪ್ಲಾಸ್ಟಿಕ್ ಚೀಲಗಳು (Plastic bags) ಪರಿಸರಕ್ಕೆ ಹಾನಿಕಾರಕ (Environment pollution), ಆದರೆ ಅವು ಮನೆಯಲ್ಲಿ ತುಂಬಾ ಉಪಯುಕ್ತವಾಗಿವೆ. ಅನೇಕ ಜನರು ಭವಿಷ್ಯದ ಬಳಕೆಗಾಗಿ ಹಾಸಿಗೆಗಳ ಅಡಿಯಲ್ಲಿ, ಕಂಟೇನರ್‌ಗಳಲ್ಲಿ ಅವುಗಳನ್ನು ಸಂಗ್ರಹಿಸುತ್ತಾರೆ (collection). ಸಾಮಾನ್ಯವಾಗಿ ಇವುಗಳು ಸರಕುಗಳನ್ನು ಸಾಗಿಸಲು ಬಳಸಲಾಗುವ ವಸ್ತುವಾಗಿದ್ದು ಅದನ್ನು ಸಂಗ್ರಹಯೋಗ್ಯವೆಂದು ಯಾರಾದರೂ ಪರಿಗಣಿಸುವುದು ಅಪರೂಪ. ಆದರೆ 55 ವರ್ಷದ ಏಂಜೆಲಾ ಕ್ಲಾರ್ಕ್‌ ಎಂಬ ಮಹಿಳೆಯ ಪಾಲಿಗೆ ಮಾತ್ರ ಪ್ಲಾಸ್ಟಿಕ್ ಚೀಲಗಳು ಮೌಲ್ಯಯುತವಾಗಿವೆ (Valuable). ವೇಲ್ಸ್ ಆನ್‌ಲೈನ್ ಪ್ರಕಾರ, ಅವರು ಈಗ ಸುಮಾರು 10,000 ಪ್ಲಾಸ್ಟಿಕ್ ಚೀಲಗಳ ಅದ್ಭುತ ಸಂಗ್ರಹವನ್ನು ಹೊಂದಿದ್ದಾರೆ. ಏಂಜೆಲಾ ಅವರ ಈ ಅತಿ ದೊಡ್ಡ ಸಂಗ್ರಹವು ಅವರ ಪತಿಯ ಕಾರ್ಖಾನೆಯಲ್ಲಿ ನಲವತ್ತು ವರ್ಷಗಳಿಂದ ವಿಶೇಷವಾಗಿ ಈ ಉದ್ದೇಶಕ್ಕಾಗಿಯೇ ನಿರ್ಮಿಸಲಾದ ಶೇಖರಣಾ ಸೌಲಭ್ಯದಲ್ಲಿ ಸಂಗ್ರಹಿಸಲಾಗಿದೆ.

ಮೂಲತಃ ಯುನೈಟೆಡ್ ಕಿಂಗ್‌ಡಮ್‌ನ ಅಬರ್‌ಡೇರ್‌ನ ನಿವಾಸಿಯಾದ , ಏಂಜೆಲಾಳ ಪ್ಲಾಸ್ಟಿಕ್ ಚೀಲಗಳ ಪ್ರೀತಿಯು 1976 ರಲ್ಲಿ ತನ್ನ ಕುಟುಂಬದೊಂದಿಗೆ ಸೇರಿಕೊಂಡು ಕ್ವೀನ್ಸ್ ಸಿಲ್ವರ್ ಜ್ಯೂಬಿಲಿ ಓಟದಲ್ಲಿ ಭಾಗವಹಿಸಿದಾಗ ಪ್ರಾರಂಭವಾಯಿತು. ಆ ನೆನಪುಗಳನ್ನು ಮೆಲುಕು ಹಾಕುತ್ತಾ " ಪ್ರತಿ ಮೂಲೆಯಲ್ಲೂ ಯೂನಿಯನ್ ಧ್ವಜವಿದ್ದು ಅವೆಲ್ಲವನ್ನೂ ಸುಂದರವಾಗಿ ಅಲಂಕರಿಸಲಾಗಿತ್ತು. ಹೆಚ್ಚಿನ ಅಂಗಡಿಗಳಲ್ಲಿ ಯೂನಿಯನ್ ಧ್ವಜ ಅಥವಾ ರಾಣಿಯ ಚಿತ್ರವನ್ನು ಹೊಂದಿದ ಕ್ಯಾರಿಯರ್ ಬ್ಯಾಗ್‌ಗಳಿದ್ದವು. ಆ ಅಲಂಕಾರಗಳು ಅದ್ಭುತವಾಗಿದ್ದು ನಮ್ಮ ಕಿಟಕಿಗಳನ್ನೂ ಅವುಗಳಿಂದ ಅಲಂಕರಿಸಲು ನನ್ನ ತಾಯಿ ನನ್ನನ್ನು ಪ್ರೋತ್ಸಾಹಿಸಿದರು. ಯೂನಿಯನ್ ಧ್ವಜವನ್ನು ಕಿಟಕಿಯಲ್ಲಿ ಕಡಿಮೆ ಬೆಲೆಗೆ ಹಾಕಲು ಇದು ಉತ್ತಮ ಮಾರ್ಗವಾಗಿತ್ತು " ಎಂದು ಏಂಜೆಲಾ ವೇಲ್ಸ್ ಆನ್‌ಲೈನ್‌ಗೆ ತಿಳಿಸಿದರು.

ಸಾವಿರಾರು ಪೌಂಡ್ ಬೆಲೆಯ  ಪ್ಲಾಸ್ಟಿಕ್

ದಿ ಮಿರರ್ ಪ್ರಕಾರ, ಆಕೆಯ ಸಂಗ್ರಹವು ಈಗ ಸಾವಿರಾರು ಪೌಂಡ್‌ಗಳ ಮೌಲ್ಯದ್ದಾಗಿದೆ. ಏಂಜೆಲಾ ಈ ಪ್ಲಾಸ್ಟಿಕ್ ಚೀಲಗಳನ್ನು ನೇತುಹಾಕಿ ತನ್ನ ಕೋಣೆಯನ್ನು ಅಲಂಕರಿಸಲು ಪ್ರಾರಂಭಿಸಿದಳು ಮತ್ತು ಕ್ರಮೇಣ ಅದರ ಗೀಳನ್ನು ಅಂಟಿಸಿಕೊಂಡಳು . ಅದರ ನಂತರ, ಏಂಜೆಲಾ ತನ್ನ ಸಂಗ್ರಹವನ್ನು ವಿಸ್ತರಿಸುತ್ತಲೇ ಹೋದಳು , ಅದರಲ್ಲಿ ಕೆಲವು ಚೀಲಗಳು ಈಗ ಆನ್‌ಲೈನ್‌ನಲ್ಲಿ £200 (ಸುಮಾರು ರೂ 20,000) ಗಿಂತ ಹೆಚ್ಚು ಮೌಲ್ಯವನ್ನು ಹೊಂದಿವೆ .

ಇದನ್ನೂ ಓದಿ: COVID-19 PPE Waste: ಕೋವಿಡ್-19 ಪಿಪಿಇ ತ್ಯಾಜ್ಯದಿಂದ ಉಪಯುಕ್ತ ಉತ್ಪನ್ನ ತಯಾರಿಕೆಗೆ ಜಂಟಿಯಾಗಿ ಕೈ ಜೋಡಿಸಿದ CSIR-NCL and RIL

ಜೊತೆಗೆ, ತನ್ನ ಅಸಾಮಾನ್ಯ ಹವ್ಯಾಸಕ್ಕಾಗಿ ಬಿಬಿಸಿ ಶೋನಲ್ಲಿ ಕಾಣಿಸಿಕೊಂಡಿದ್ದನ್ನು ಅವಳು ನೆನಪಿಸಿಕೊಂಡಳು. ಶೋ ನ ನಂತರ ಏಂಜೆಲಾ ಪ್ರಪಂಚದಾದ್ಯಂತದ ವಿನ್ಯಾಸಕಾರರಿಂದ ಹಸ್ತಾಕ್ಷರಗೊಂಡ ಪ್ಲಾಸ್ಟಿಕ್ ಚೀಲಗಳನ್ನು ಪಡೆಯಲು ಪ್ರಾರಂಭಿಸಿದರು. ಬಿಬಿಸಿ ಮತ್ತು ಹೌಸ್ ಆಫ್ ಲಾರ್ಡ್ಸ್ ಸಹಿ ಮಾಡಿದ ಅನೇಕ ಪ್ಲಾಸ್ಟಿಕ್ ಚೀಲಗಳನ್ನು ಅವಳಿಗೆ ಕಳುಹಿಸಲಾಯಿತು. ಏಂಜೆಲಾ ತನ್ನ ಸಂಗ್ರಹದ ಪ್ರತಿಯೊಂದು ತುಣುಕನ್ನು ಸ್ವಂತ ಕಂದನಂತೆ ಪರಿಗಣಿಸುತ್ತಾಳೆ.

ಪ್ರಪಂಚದ ಮೂಲೆಮೂಲೆಗಳಿಂದ ಚೀಲ ಸಂಗ್ರಹ

ಆಕೆಯ ಸಂಗ್ರಹವು ಬೆಳೆದಂತೆ ಅವಳು ಪ್ರಪಂಚದಾದ್ಯಂತದ ಎಲ್ಲ ಕಡೆಯಿಂದ ಚೀಲಗಳನ್ನು ಸ್ವೀಕರಿಸಲು ಪ್ರಾರಂಭಿಸಿದಳು. ಆಕೆಯ ಸಂಗ್ರಹದಲ್ಲಿ ಕೆಲವು ಪಡೆಯಲು ಅಸಾಧ್ಯವಾದ ಡಿಸ್ನಿ ಕ್ಯಾರಿಯರ್ ಬ್ಯಾಗ್‌ಗಳಂತಹ ಅಪರೂಪದ ಚೀಲಗಳೂ ಸೇರಿವೆ . ಡಿಸ್ನಿ ತನ್ನ ಎಲ್ಲಾ ಸ್ಟೋರ್‌ಗಳನ್ನು ಸಂಪೂರ್ಣವಾಗಿ ಮುಚ್ಚಿರುವುದರಿಂದ ಈಗ ಡಿಸ್ನಿ ಚೀಲವನ್ನು ಪಡೆಯಲು ಸಾಧ್ಯವೇ ಇಲ್ಲ " ಎಂಬುದಾಗಿ ಏಂಜೆಲಾ ಉತ್ತರಿಸುತ್ತಾರೆ.

ಇದನ್ನೂ ಓದಿ: Elephants Death: ಪ್ಲಾಸ್ಟಿಕ್ ತ್ಯಾಜ್ಯ ಸೇವಿಸಿ 20 ಆನೆಗಳ ದಾರುಣ ಸಾವು..!

ಅಂಗಡಿಗಳು ಮುಚ್ಚಲ್ಪಟ್ಟವು ಮತ್ತು ಜೀವನ ಮುಂದುವರಿಯಿತು. ನಾನು ಒಮ್ಮೆ ಅತಿಯಾಗಿ ಇಷ್ಟಪಡುತ್ತಿದ್ದ ಅಂಗಡಿಗಳಾದ C&A, Woolworth ಮತ್ತು BHS ನಂತಹ ಕೆಲವು ಐತಿಹಾಸಿಕ ಸಂಗ್ರಹಗಳನ್ನು ನಾನು ಹೊಂದಿದ್ದೇನೆ ಎಂಬುದು ಏಂಜೆಲಾ ಹೇಳಿಕೆಯಾಗಿದೆ. ನನ್ನ ಪತಿ ನಾನು ಸಂಗ್ರಹಕ್ಕೆ ಇನ್ನಷ್ಟನ್ನು ಸೇರಿಸಬಾರದು ಎಂದು ಹೇಳುತ್ತಿರುತ್ತಾರೆ ಆದರೆ ಅದರ ಬಗ್ಗೆ ನಾನೇನು ಮಾಡಲಾರೆ. ನಮ್ಮ ಮದುವೆಯಾಗಿ 47 ವರ್ಷಗಳಾಗಿವೆ ಮತ್ತವರು ನನ್ನ ಹವ್ಯಾಸಕ್ಕೆ ಒಗ್ಗಿಕೊಂಡಿದ್ದಾರೆ. ಎಂಬುದನ್ನು ತಿಳಿಸಿದ್ದಾರೆ.
Published by:Soumya KN
First published: