• Home
  • »
  • News
  • »
  • trend
  • »
  • Viral Video: ದೀಪಾವಳಿಗೆ ಹಿಂಗೆಲ್ಲಾ ಮನೆ ಕ್ಲೀನ್‌ ಮಾಡ್ತಾರಾ! ಸ್ವಲ್ಪ ಮಿಸ್‌ ಆದ್ರೂ ಕಥೆ ಅಷ್ಟೇ

Viral Video: ದೀಪಾವಳಿಗೆ ಹಿಂಗೆಲ್ಲಾ ಮನೆ ಕ್ಲೀನ್‌ ಮಾಡ್ತಾರಾ! ಸ್ವಲ್ಪ ಮಿಸ್‌ ಆದ್ರೂ ಕಥೆ ಅಷ್ಟೇ

ಮನೆ ಕ್ಲೀನ್ ಮಾಡುತ್ತಿರುವ ಮಹಿಳೆ

ಮನೆ ಕ್ಲೀನ್ ಮಾಡುತ್ತಿರುವ ಮಹಿಳೆ

ಮನೆಯನ್ನು ಸ್ವಚ್ಛ ಮಾಡುವುದರ ಬಗ್ಗೆ ಮಹಿಳೆಯರು ಎಷ್ಟರ ಮಟ್ಟಿಗೆ ಗಂಭೀರವಾಗಿರುತ್ತಾರೆ. ಇಲ್ಲೊಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ಜೋರಾಗಿ ಹರಿದಾಡುತ್ತಿದೆ ನೋಡಿ. ಈಗಾಗಲೇ ಸಿಕ್ಕಾಪಟ್ಟೆ ವೈರಲ್ ಆಗಿರುವ ಈ ವಿಡಿಯೋ ನೋಡಿದರೆ ನಿಮಗೆ ಸ್ಪಷ್ಟವಾಗಿ ಅರ್ಥವಾಗುತ್ತೆ.

  • Share this:

ದೀಪಗಳ ಹಬ್ಬ  ಮತ್ತು ಬೆಳಕಿನ ಹಬ್ಬ ಅಂತ ಹೇಳುವ ದೀಪಾವಳಿ (Diwali) ಹಬ್ಬದ ಆಚರಣೆಗೆ ತಯಾರಿಗಳು ಎಲ್ಲರ ಮನೆಯಲ್ಲಿ ಈಗಾಗಲೇ ಶುರುವಾಗಿವೆ. ದೀಪಾವಳಿ ಹಬ್ಬ ಎಂದರೆ ಎಲ್ಲೆಡೆ ಒಂದು ರೀತಿಯ ಸಡಗರ, ಸಂಭ್ರಮ ಮನೆ ಮಾಡುವುದಂತೂ ಗ್ಯಾರೆಂಟಿ. ಇಡೀ ದೇಶಾದ್ಯಂತ ದೀಪಾವಳಿ ಹಬ್ಬವನ್ನು ತುಂಬಾನೇ ಸಡಗರದಿಂದ ಮತ್ತು ಭಕ್ತಿ ಭಾವದಿಂದ ಆಚರಿಸುತ್ತಾರೆ (Celebrate). ಅದರಲ್ಲೂ ಮನೆಯಲ್ಲಿರುವ ಗಂಡಸರೆಲ್ಲರೂ ಮನೆಯ ಮುಂದೆ ತೂಗು ಹಾಕಲು ಎಂತಹ ಲೈಟ್ ಗಳನ್ನು ತರಬೇಕು, ಮನೆಯ ಮುಂದೆ ಹೇಗೆ ಅಲಂಕಾರ (Decoration) ಮಾಡಬೇಕು ಮತ್ತು ಎಲ್ಲದಕ್ಕೂ ಹೆಚ್ಚಾಗಿ ಯಾವ ಯಾವ ಪಟಾಕಿಗಳನ್ನು (Fireworks) ಮನೆಗೆ ತಂದು ಮನೆಯವರ ಜೊತೆಗೆ ಸೇರಿಕೊಂಡು ಹೊಡೆಯಬೇಕು ಅಂತ ಆಲೋಚನೆಯಲ್ಲಿರುತ್ತಾರೆ.


ಮನೆಯಲ್ಲಿರುವ ಮಹಿಳೆಯರು ಮನೆಯನ್ನೆಲ್ಲಾ ಮೊದಲು ಹೇಗೆ ಸ್ವಚ್ಛ ಮಾಡಬೇಕು? ಮನೆಯಲ್ಲಿ ಪೂಜೆ ಹೇಗೆ ಮಾಡಬೇಕು? ಯಾವ ಬಟ್ಟೆ ಹಾಕಿಕೊಳ್ಳಬೇಕು ಹಬ್ಬಕ್ಕೆ ಅಂತೆಲ್ಲಾ ಆಲೋಚನೆ ಮಾಡುತ್ತಾ ಇರುತ್ತಾರೆ.


ದೀಪಾವಳಿ ಹಬ್ಬಕ್ಕೆ ಇಡೀ ಮನೆಯನ್ನು ಸ್ವಚ್ಛ ಮಾಡುತ್ತಾರೆ
ಈ ದೀಪಾವಳಿ ಮತ್ತು ದಸರಾ ಹಬ್ಬಕ್ಕೆ ಅನೇಕರು ತಮ್ಮ ಮನೆಗಳನ್ನು ಸ್ವಚ್ಛ ಮಾಡಿಕೊಳ್ಳುತ್ತಾರೆ ಮತ್ತು ಅಗತ್ಯಬಿದ್ದರೆ ಅದಕ್ಕೆ ಬಣ್ಣ ಸಹ ಹಚ್ಚುತ್ತಾರೆ. ಮಹಿಳೆಯರಂತೂ ಈ ಹಬ್ಬಗಳು ಇನ್ನೂ ಒಂದು ವಾರ ಇರುವಾಗಲೇ ಮನೆಯ ಸ್ವಚ್ಛತೆ ಕೆಲಸವನ್ನು ಶುರು ಮಾಡಿರುತ್ತಾರೆ. ಪ್ರತಿದಿನ ಒಂದು ಕೋಣೆಯಂತೆ ಮನೆಯಲ್ಲಿರುವ ಪ್ರತಿ ಕೋಣೆಯ ಮೂಲೆ ಮೂಲೆಯಲ್ಲಿರುವ ಕಿಂಚಿತ್ತೂ ಕಸವನ್ನು ಬಿಡದೆ ಸ್ವಚ್ಛ ಮಾಡುತ್ತಾರೆ. ಅವರಷ್ಟೇ ಅಲ್ಲದೆ ಅವರೊಡನೆ ಮನೆಯಲ್ಲಿರುವ ಮಕ್ಕಳ ಮತ್ತು ಗಂಡನ ಸಹಾಯ ಸಹ ಈ ಮನೆಯ ಸ್ವಚ್ಛತೆಯ ಕೆಲಸಕ್ಕೆ ಪಡೆಯುತ್ತಾರೆ.


ಇದನ್ನೂ ಓದಿ: Viral Video: ತುತ್ತು ಅನ್ನ ಕೊಟ್ಟವ ಸತ್ತು ಮಲಗಿದಾಗ ಮರುಗಿದ ಮಂಗ! ಶವದ ಮುಂದೆ ಕೋತಿ ಗೋಳಾಟ


ಅಂದಹಾಗೆ ಈ ಮನೆಯನ್ನು ಸ್ವಚ್ಛ ಮಾಡುವುದರ ಬಗ್ಗೆ ಮಹಿಳೆಯರು ಎಷ್ಟರ ಮಟ್ಟಿಗೆ ಗಂಭೀರವಾಗಿರುತ್ತಾರೆ. ಇಲ್ಲೊಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ಜೋರಾಗಿ ಹರಿದಾಡುತ್ತಿದೆ ನೋಡಿ. ಈಗಾಗಲೇ ಸಿಕ್ಕಾಪಟ್ಟೆ ವೈರಲ್ ಆಗಿರುವ ಈ ವಿಡಿಯೋ ನೋಡಿದರೆ ನಿಮಗೆ ಸ್ಪಷ್ಟವಾಗಿ ಅರ್ಥವಾಗುತ್ತೆ.. ದೀಪಾವಳಿ ಹಬ್ಬಕ್ಕೆ ಮನೆ ಸ್ವಚ್ಛ ಮಾಡುವುದು ಅಷ್ಟೊಂದು ಸುಲಭದ ಕೆಲಸವಲ್ಲ ಅಂತ.


ಮಹಿಳೆ ಎಲ್ಲಿ ಹತ್ತಿ ನಿಂತು ಕಿಟಕಿ ಸ್ವಚ್ಛ ಮಾಡ್ತಿದ್ದಾಳೆ ನೋಡಿ
ಹೆಚ್ಚಾದರೆ ಅಮೃತವು ವಿಷ ಅಂತ ಹೇಳುವ ಮಾತು ಈ ವಿಡಿಯೋಗೆ ತುಂಬಾನೇ ಚೆನ್ನಾಗಿ ಒಪ್ಪುತ್ತದೆ ನೋಡಿ. ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಮನೆಯ ಕಿಟಕಿಗಳನ್ನು ಅಪಾಯಕಾರಿಯಾದ ಸ್ಥಳದಲ್ಲಿ ನಿಂತು ಸ್ವಲ್ಪವೂ ಹೆದರಿಕೆ ಇಲ್ಲದೆ ಕಿಟಕಿಗಳನ್ನು ಸ್ವಚ್ಛಗೊಳಿಸುತ್ತಿರುವುದನ್ನು ನೀವು ನೋಡಿದರೆ ಶಾಕ್ ಆಗುವುದಂತೂ ಗ್ಯಾರೆಂಟಿ. ಈ ವಿಡಿಯೋ ನೆಟ್ಟಿಗರನ್ನು 'ಸಫಾಯಿ ಅಭಿಯಾನ' ವನ್ನು ಸ್ವಲ್ಪ ಗಂಭೀರವಾಗಿ ಪರಿಗಣಿಸಿದ್ದಾರೆಯೇ ಎಂದು ಆಶ್ಚರ್ಯ ಪಡುವಂತೆ ಮಾಡಿದೆ.


ಇದನ್ನೂ ಓದಿ:  Swiggy: ತಂದೆಗೆ ಸ್ವಿಗ್ಗಿಯಲ್ಲಿ ಕೆಲಸ ಸಿಕ್ಕಿದ್ದಕ್ಕೆ ಖುಷಿಯಿಂದ ಕುಣಿದಾಡಿದ ಮಗಳು: ವೀಡಿಯೋ ನೋಡಿ


ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಈ ಕ್ಲಿಪ್ ನಲ್ಲಿ ಮಹಿಳೆ ಕಿಟಕಿಯ ಹೊರಗೆ ಅಂಚಿನ ಮೇಲೆ ನಿಂತಿರುವುದನ್ನು ತೋರಿಸಲಾಗಿದೆ. ಅವಳು ಕಿಟಕಿಗಳನ್ನು ಸ್ವಚ್ಛವಾಗಿ ಒರೆಸುವುದನ್ನು ಕಾಣಬಹುದು. ಮನೆ ನೆಲಮಹಡಿಯಲ್ಲಿ ಇದ್ದಿದ್ದರೆ ಪರವಾಗಿರುತ್ತಿರಲಿಲ್ಲ, ಮನೆ ಇರುವುದು ತುಂಬಾ ಮೇಲೆ ಎಂಬುದು ಅವರಿಗೆ ನೆನಪಿದ್ದರೆ ಅಷ್ಟೇ ಸಾಕು. ಸ್ವಚ್ಛತೆಗಾಗಿ ಇಂತಹ ಅಪಾಯಕಾರಿ ಸ್ಟಂಟ್ ಮಾಡುವುದು ಸರಿಯಲ್ಲ ಬಿಡಿ.


ಸಿಕ್ಕಾಪಟ್ಟೆ ವೈರಲ್ ಆಗಿದೆ ವಿಡಿಯೋ
ಈ ಕ್ಲಿಪ್ ಅನ್ನು ಒಂದು ಮಿಲಿಯನ್ ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಕೆಲವರು ವಿಡಿಯೋ ಎಷ್ಟು ಆಘಾತಕಾರಿಯಾಗಿದೆ ಎಂದು ಬರೆದರೆ, ಇತರರು ಸ್ಟಂಟ್ ಮಾರಣಾಂತಿಕ ಅಪಘಾತಕ್ಕೆ ಹೇಗೆ ಕಾರಣವಾಗಬಹುದು ಎಂಬುದರ ಬಗ್ಗೆ ಕಾಮೆಂಟ್ ಮಾಡಿದ್ದಾರೆ.

Published by:Ashwini Prabhu
First published: