ಸಾಕಷ್ಟು ಜನರು ಉದ್ಯೋಗ (Job) ಹುಡುಕಿಕೊಂಡು ಊರಿಂದ ಊರಿಗೆ, ರಾಜ್ಯದಿಂದ ರಾಜ್ಯಕ್ಕೆ ಬರುತ್ತಾರೆ. ಇಲ್ಲಿ ಬಂದು ಜೀವನ ಕಟ್ಟಿಕೊಳ್ಳುತ್ತಾರೆ. ಈ ದುಬಾರಿ ಕಾಲದಲ್ಲಿ ಬದುಕುವುದು ಜನಸಾಮಾನ್ಯರಿಗೆ ಕಷ್ಟ. ಅದರಲ್ಲೂ ಪರ ಊರಿನಿಂದ ಬಂದು ದುಡಿದ ಹಣದಲ್ಲಿ ಮನೆ ಹುಡುಕುವುದು, ಖರ್ಚುಗಳನ್ನು ನಿಭಾಯಿಸುವುದು ಸ್ವಲ್ಪ ಕಷ್ಟವೇ ಹೌದು. ಅದರಲ್ಲೂ ವೃತ್ತಿಜೀವನದ ಆರಂಭದಲ್ಲಿ ಅಥವಾ ಫ್ರೆಶರ್‌ಗಳಿಗೆ (Fresher) ಸಹಜವಾಗಿಯೇ ಸಂಬಳವು ಕಡಿಮೆ ಇರುತ್ತದೆ. ಬಹಳಷ್ಟು ಜನರು 10 ಸಾವಿರ ಸಂಬಳದಲ್ಲೂ ಹಿತ ಮಿತವಾಗಿ ಬದುಕು ನಡೆಸಿ, ಉಳಿತಾಯವನ್ನೂ ಮಾಡುತ್ತಾರೆ. ಅನಗತ್ಯ ವೆಚ್ಚಗಳಿಂದ ದೂರವೇ ಇರುತ್ತಾರೆ. ಆದ್ರೆ ಇಲ್ಲೊಬ್ಬರು ಮಹಿಳೆ ಮೆಟ್ರೋ ಸಿಟಿಯಲ್ಲಿ (Metro City) ಬದುಕಲು ಫ್ರೆಶರ್‌ಗೆ 50,000 ರೂ ಸಂಬಳ ಸಾಕಾಗುವುದಿಲ್ಲ ಅಂತ ಟ್ವೀಟ್ ಮಾಡಿದ್ದಾರೆ.
ಮೆಟ್ರೊ ಸಿಟಿಯಲ್ಲಿ ಫ್ರೆಶರ್‌ಗೆ 50 ಸಾವಿರ ಸಂಬಳ ಸಾಕಾಗುವುದಿಲ್ಲ!
ಹೌದು, ಮೇಧಾ ಗಂಟಿ ಎಂಬ ಬಳಕೆದಾರರು ಟ್ವಿಟ್ಟರ್‌ನಲ್ಲಿ ಈ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಮೆಟ್ರೋ ಸಿಟಿಯಲ್ಲಿ ಬದುಕಲು ಫ್ರೆಶರ್‌ಗೆ 50,000 ರೂ ಸಂಬಳ ಸಾಕಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
Why are fresher salaries so low? How is someone supposed to survive on it in a metro city? With 50k a month you'll barely have any savings.
Not everyone can take money from their families!
— Medha Ganti (@mehhh_duh) April 25, 2023
“ಇದಕ್ಕೆ ಉತ್ತರವಾಗಿ ಉತ್ತಮ ವೃತ್ತಿ ಆಯ್ಕೆಗಳನ್ನು ಮಾಡಿ ಎಂದು ಹೇಳಲು ಸಾಧ್ಯವಿಲ್ಲ! ಜನರು ವಿಭಿನ್ನ ಕೌಶಲ್ಯಗಳನ್ನು ಹೊಂದಿದ್ದಾರೆ. ವೃತ್ತಿ ಜೀವನದ 3ನೇ ವರ್ಷದಿಂದ ನೀವು ಏನು ಮಾಡಬಯಸುತ್ತೀರಿ ಎಂಬ ಸ್ಪಷ್ಟ ಕಲ್ಪನೆಯನ್ನು ಪಡೆಯಲು ಪ್ರಾರಂಭಿಸುತ್ತೀರಿ." ಎಂದು ಅವರು ಪೋಸ್ಟ್ ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಮಳೆಗಾಗಿ ನಡೆಯಿತು ಕಪ್ಪೆಗಳ ಮದುವೆ! ಮಂಡೂಕ ದಂಪತಿಗೆ ಆಶೀರ್ವದಿಸುತ್ತಾನಾ ವರುಣ ದೇವ?
ಮೇಧಾ ಗಂಟಿ ಮಾಡಿರುವ ಟ್ವೀಟ್ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ವೈರಲ್ ಆಗಿದ್ದು, 1.2 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಇದಕ್ಕೆ ನೂರಾರು ಕಾಮೆಂಟ್‌ಗಳು ಹರಿದುಬಂದಿದ್ದು, ನೆಟ್ಟಿಗರು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.
ಜೀವನಶೈಲಿ ಬದಲಿಸಿಕೊಂಡರೆ ಎಲ್ಲವೂ ಸಾಧ್ಯ ಎಂದ ನೆಟ್ಟಿಗರು!
ಒಬ್ಬ ಬಳಕೆದಾರರು, "ಇದು ನಿಮ್ಮ ಜೀವನಶೈಲಿಯ ಮೇಲೆ ಅವಲಂಬಿತವಾಗಿದೆ. ನನಗೆ 50k ಗಿಂತ ಕಡಿಮೆ ಸಂಬಳವಿದೆ. ಆದರೆ ಇನ್ನೂ ತಿಂಗಳಿಗೆ ಕನಿಷ್ಠ 8-10k ಉಳಿಸುತ್ತಿದ್ದೇನೆ” ಎಂದು ಬರೆದಿದ್ದಾರೆ.
ಇನ್ನೊಬ್ಬರು ಹೀಗೆ ಬರೆದಿದ್ದಾರೆ, "ಮೆಟ್ರೋ ನಗರದಲ್ಲಿ 50 ಸಾವಿರ ಕಡಿಮೆ ಎಂದು ನಾನು ಒಪ್ಪುತ್ತೇನೆ. ಆದರೆ ಇದು ಸಂಪೂರ್ಣವಾಗಿ ನಿಮ್ಮ ಜೀವನಶೈಲಿಯ ಮೇಲೆ ಅವಲಂಬಿತವಾಗಿರುತ್ತದೆ.
ಉದಾಹರಣೆಗೆ, ನಾನು ಬೆಂಗಳೂರಿನಲ್ಲಿ ಕೇವಲ 30 ಸಾವಿರ ಪಡೆಯುತ್ತಿದ್ದೇನೆ. ನಾನು ನನ್ನ ಕುಟುಂಬಕ್ಕೆ 10 ಸಾವಿರ ಕಳುಹಿಸುತ್ತೇನೆ. ಆದರೆ ಸುಮಾರು 5 ಸಾವಿರ ಉಳಿತಾಯ ಮಾಡುತ್ತೇನೆ" ಎಂದು ಬರೆದಿದ್ದಾರೆ.
ಮತ್ತೊಬ್ಬರು, "ಹೆಚ್ಚಿನ ಫ್ರೆಶರ್‌ಗಳಿಗೆ ತಿಂಗಳಿಗೆ 20K ಗಿಂತ ಕಡಿಮೆ ವೇತನ ನೀಡಲಾಗುತ್ತದೆ. 50K/ತಿಂಗಳಿಗೆ ನೀಡಿದರೆ ಅವರು 7 ನೇ ಸ್ವರ್ಗದಲ್ಲಿ ಇರುತ್ತಾರೆ” ಎಂದು ಹೇಳಿದ್ದಾರೆ.
"ನೀವು ಹೇಳಿದಂತೆ ಫ್ರೆಶರ್‌ಗಳಿಗೆ 50 ಸಾವಿರ ಕಡಿಮೆಯಲ್ಲ. ಆದರೆ ಫ್ರೆಷರ್ ಅಂಬಾನಿ ಮಗಳು ಅಥವಾ ಮಗನಂತೆ ವರ್ತಿಸಿದರೆ ಖಂಡಿತವಾಗಿಯೂ 50 ಸಾವಿರ ಕಡಿಮೆಯೇ." ಎಂದು ಕಾಲೆಳೆದಿದ್ದಾರೆ.
ಇದನ್ನೂ ಓದಿ: ಎಲ್ಲಾ ಪ್ರಾಣಿಗಳ ಹಾಲು ಬಿಳಿ ಬಣ್ಣದಲ್ಲಿ ಇರೋದು ಏಕೆ? ಇದರ ಹಿಂದಿದೆ ಕುತೂಹಲಕಾರಿ ಮಾಹಿತಿ
ಇನ್ನೊಬ್ಬರು, “50 ಸಾವಿರ ಫ್ರೆಶರ್‌ಗಳ ಹೊಸ ಸಂಬಳವಲ್ಲ. ನೀವು ಅದನ್ನು ಸ್ವೀಕರಿಸುತ್ತಿದ್ದರೆ ಅಭಿನಂದನೆಗಳು. ನೀವು ತಿಂಗಳಿಗೆ 1ಲಕ್ಷ ಪಡೆದರೆ ನೀವು ದೇಶದ ಅಗ್ರ 10% ರಲ್ಲಿರುವಿರಿ. ಮೆಟ್ರೋ ಸಿಟಿಗಳಲ್ಲಿ ಜನರು 15 ಸಾವಿರದಲ್ಲಿ ಬದುಕುತ್ತಾರೆ. ಜೀವನಶೈಲಿ ಬದಲಾಗುತ್ತದೆ.
ನನ್ನ ಮೊದಲ ಕೆಲಸ 28k ಆಗಿತ್ತು. ಒಂದು ಶ್ರೇಣಿ 1 ನಗರದಲ್ಲಿ ನಾನು ವಾಸಿಸುತ್ತಿದ್ದೆ ಮತ್ತು ಅದನ್ನು ನಾನು ಆನಂದಿಸಿದೆ. ನೀವು 30 ಸಾವಿರ ಬಾಡಿಗೆ ಇರುವ ಸ್ಥಳದಲ್ಲಿ ವಾಸಿಸಲು ಬಯಸಿದರೆ ನೀವು ಯಾವುದೇ ಸಂಬಳದಲ್ಲಿ ಎಲ್ಲಿಯೂ ಬದುಕಲಾಗುವುದಿಲ್ಲ” ಎಂದು ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ