ಇದ್ದಪ್ಪಾ ವರಸೆ.. ಮಾಜಿ ಪ್ರಿಯಕರನಿಗೆ ಹೊಟ್ಟೆ ಉರಿಸಲು ನಕಲಿ ಮದುವೆ ಸೃಷ್ಟಿಸಿದ ಐನಾತಿ ಹುಡುಗಿ..!

ಪ್ರೀತಿ ಫಲಿಸಿದರೆ ಸ್ವರ್ಗ, ಹಳಸಿದರೆ ದ್ವೇಷ, ಪ್ರತಿಕಾರ.. ಇಲ್ಲಾಗಿದ್ದು ಅದೇ. ಮಾಜಿ ಪ್ರಿಯಕರನಿಗೆ ಬುದ್ಧಿ ಕಲಿಸಲು ಯುವತಿಯೊಬ್ಬಳು ಮದುವೆಯ ನಾಟಕವಾಡಿದ್ದಾಳೆ.

ನಕಲಿ ಮದುವೆ ಫೋಟೋಗಳು

ನಕಲಿ ಮದುವೆ ಫೋಟೋಗಳು

 • Share this:
  24 ವರ್ಷದ ಸಾರಾ ವಿಲಾರ್ಡ್ ಎಂಬ ಯುವತಿ ಇತ್ತೀಚೆಗೆ ಟಿಕ್‌ಟಾಕ್‌ನಲ್ಲಿ ವೈರಲ್ ಆಗಿದ್ದಾಳೆ. ತನ್ನನ್ನು ಕೆಟ್ಟದಾಗಿ ನಡೆಸಿಕೊಂಡು ದೌರ್ಜನ್ಯ ಎಸಗುತ್ತಿದ್ದ ಮಾಜಿ ಗೆಳೆಯನ ಮೇಲೆ ಸೇಡು ತೀರಿಸಿಕೊಳ್ಳಲು ವಿಚಿತ್ರ ಐಡಿಯಾ ಮಾಡಿ ಸುದ್ದಿಯಾಗಿದ್ದಾರೆ. ತನ್ನ ನಕಲಿ ಮದುವೆಯನ್ನು ಸೃಷ್ಟಿಸಿದ್ದಾಗಿ ಹೇಳಿಕೊಂಡಿದ್ದಾಳೆ. ಈಗ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಈ ಪರಿಕಲ್ಪನೆಯನ್ನು ನಿಜವೆಂದು ನಂಬಿಸಲು ಫೋಟೋ ಶೂಟ್ ಮಾಡಿಸಿದ್ದಾಳೆ ಎಂದು ವಿಲಾರ್ಡ್ ಹೇಳಿಕೊಂಡಿದ್ದಾಳೆ. ವಧುವಿನ ಉಡುಗೆಯಲ್ಲಿ ಹುಡುಗನೊಂದಿಗೆ ಕಾಣಿಸಿಕೊಂಡಿರುವ ಫೋಟೋ ಇದಾಗಿದೆ.

  ವಿಲಾರ್ಡ್ ತನ್ನ ಟಿಕ್‌ಟಾಕ್ ಪೋಸ್ಟ್‌ನಲ್ಲಿ ಒಂದಷ್ಟು ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾಳೆ. ಒಂದು ಸೊಗಸಾದ ವಿವಾಹದ ಮಂಟಪದಲ್ಲಿ ತನ್ನ ಪತಿಯನ್ನು ಅಪ್ಪಿಕೊಂಡಿರುವ ಚಿತ್ರವನ್ನು ಆಕೆ ಹಂಚಿಕೊಂಡಿದ್ದಾಳೆ. ವೀಡಿಯೊದೊಂದಿಗಿನ ಶೀರ್ಷಿಕೆಯಲ್ಲಿ, ಹೌದು ನಾನು ಕ್ರೇಜಿಯಾಗಿದ್ದೇನೆ ಎಂದು ಅವರು ಹೇಳಿದ್ದಾರೆ. ವೀಡಿಯೊವನ್ನು ಈಗಾಗಲೇ ಟಿಕ್‌ಟಾಕ್‌ನಲ್ಲಿ 2.4 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ.

  ಪ್ರಸ್ತುತ ಜರ್ಮನಿಯ ಫ್ರ್ಯಾಂಕ್ಫರ್ಟ್‌ನಲ್ಲಿ ನೆಲೆಸಿರುವ ಇನ್ಸ್ಟಾಗಾಂ ಫಿಟ್ನೆಸ್ ಇನ್ಫ್ಲುಯೆನ್ಸರ್ ಆಗುವ ಮಹತ್ವಕಾಂಕ್ಷೆ ಇರುವ ವಿಲಾರ್ಡ್ ಸ್ನೇಹಿತರ ಸಹಾಯದಿಂದ ಈ ಯೋಜನೆಯನ್ನು ರೂಪಿಸಿದ್ದಾಳೆ. ತನ್ನ ಮಾಜಿ ಪ್ರಿಯಕರನ ಜೊತೆಗಿನ ಸಂಬಂಧವನ್ನು ಕೊನೆಗೊಳಿಸುವ ಮಾರ್ಗವಾಗಿ ಈ ಪರಿಹಾರ ಕಂಡುಕೊಂಡಿದ್ದಾಗಿ ಹೇಳಿದ್ದಾಳೆ. ವಿಲಾರ್ಡ್ "ಇದು 2019 ರಲ್ಲಿ ಆಗಿತ್ತು" ಎಂದು ನೆನಪಿಸಿಕೊಳ್ಳುತ್ತಾಳೆ. ಈ ಕೆಲಸ ಮಾಡಿರದಿದ್ದರೆ ನಾನು ಅವನೊಂದಿಗೆ ಮತ್ತೆ ಹೋಗಬೇಕಿತ್ತು ಎಂದು ತಿಳಿಸುತ್ತಾಳೆ. ನಾನು ಮದುವೆಯಾಗಿದ್ದೇನೆ ಎಂದು ನಂಬುವುದೇ ಇದನ್ನು ಕೊನೆಗೊಳಿಸುವ ಏಕೈಕ ಮಾರ್ಗವೆಂದು ನಾನು ಭಾವಿಸಿದೆ ಎನ್ನುತ್ತಾಳೆ.

  ಇದನ್ನೂ ಓದಿ: ಬ್ಲ್ಯಾಕ್ ಫಂಗಸ್ ಈರುಳ್ಳಿ ಮೇಲೆ, ಫ್ರಿಡ್ಜ್​​​ನಲ್ಲಿ ಬೆಳೆಯುತ್ತದೆಯೇ..? ತಜ್ಞ ವೈದ್ಯರು ಈ ಬಗ್ಗೆ ಏನಂತಾರೆ?

  ಇದು ಕೂಡ ಕೆಲಸ ಮಾಡಿದೆ. ತನ್ನ ಕೆಲವು ನಕಲಿ ವಿವಾಹದ ಫೋಟೋಗಳನ್ನು ತನ್ನ ಸಾಮಾಜಿಕ ಮಾಧ್ಯಮ ಖಾತೆಗೆ ಪೋಸ್ಟ್ ಮಾಡಿದ ನಂತರ, ವಿಲಾರ್ಡ್‌ನ ಗೆಳೆಯ ಅಪನಂಬಿಕೆ ತೋರಿಸಿದ್ದಾನೆ. ಇದು ಸುಳ್ಳು ಎಂದು ಹೇಳಿದ್ದಾನೆ, ಮೋಸ ಮಾಡಿದೆ ಎಂದು ಆರೋಪಿಸಿದ್ದಾನೆ. "ಅವನು ಮದುವೆಯ ಫೋಟೋಗಳನ್ನು ನೋಡಿದ ತಕ್ಷಣ, ನಾನು ಅವುಗಳನ್ನು ಅಳಿಸಿಹಾಕಿದೆ ಮತ್ತು ಅವನನ್ನು ಎಲ್ಲೆಡೆ ಬ್ಲಾಕ್ ಮಾಡಿದೆ" ಎನ್ನುತ್ತಾಳೆ. ಆತ ಒಂದಷ್ಟು ವಾರ ನನ್ನನ್ನು ಹಿಂಬಾಲಿಸಿದ, ಆ ನಂತರ ಮನೆಗೆ ಬಂದ. ನಂತರ ದೇಶವನ್ನೇ ತೊರೆದ ಎಂದಿದ್ದಾರೆ.

  ಕಳೆದ ವಾರ ಈ ವಿಷಯವನ್ನು ಬಹಿರಂಗಪಡಿಸಿದ ನಂತರ ಆಕೆಯ ವರ್ತನೆಗೆ ಟೀಕೆಗಳು ಕೇಳಿ ಬಂದವು. ಆದರೆ ವಿಲಾರ್ಡ್ ಈಗ ಟಿಕ್ಟಾಕ್ನಲ್ಲಿ ಸಾಕಷ್ಟು ಅನುಯಾಯಿಗಳನ್ನು ಹೊಂದಿದ್ದಾರೆ. ಕೆಲವರು "ಸಣ್ಣತನವನ್ನು ಪ್ರೀತಿಸುತ್ತಾರೆ" ಎಂದು ಹೇಳಿಕೊಳ್ಳುತ್ತಾರೆ ಅಥವಾ ಅದೇ ಸನ್ನಿವೇಶದಲ್ಲಿದ್ದರೆ ಅವರು ಹೀಗೆ ಮಾಡುವುದು ಎಂದು ವ್ಯಾಖ್ಯಾನಿಸಿದ್ದಾರೆ. ಖಂಡಿತವಾಗಿಯೂ ನನ್ನ ಬಗ್ಗೆ ದ್ವೇಷ ಮೂಡಬಹುದು. ಆದರೆ ನನ್ನ ಸಂತೋಷಕ್ಕಾಗಿ ಜೊತೆಗೆ ನನ್ನ ಮಾನಸಿಕ ಆರೋಗ್ಯಕ್ಕಾಗಿ ನಾನು ಹೀಗೆಲ್ಲಾ ನಡೆದುಕೊಂಡೆ. ಇದನ್ನು ಒಪ್ಪುವ ಜನರಿದ್ದಾರೆ ಎನ್ನುವುದು ನನಗೆ ತಿಳಿದಿದೆ ಎಂದಿದ್ದಾರೆ. ಸುಳ್ಳು ಮದುವೆಗೆ ಎಷ್ಟು ಖರ್ಚು ಮಾಡಿದೆ ಎಂಬುದರ ಬಗ್ಗೆ ಮಾತನಾಡಲು ನಾನು ಬಯಸುವುದಿಲ್ಲ." ಎಂದು ವಿಲಾರ್ಡ್ ಹೇಳಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾನು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  First published: