Viral Video: ಪಂದ್ಯದ ವೇಳೆ ಒಂದೇ ಸಮನೆ 2 ಮಗ್​ ಬಿಯರ್ ಕುಡಿದ ಯುವತಿ!

ಅಚ್ಚರಿ ವಿಚಾರವೆಂದರೆ, ಮೊದಲೇ ಹೇಳಿದಂತೆ ಯುವತಿಯರು ಬಿಯರ್​ ಸೇವಿಸುವುದು ಸಾಮಾನ್ಯ. ಆದರೆ ಈಕೆ ಮಾತ್ರ ಕೈಯಲ್ಲಿ ಎರಡು ಮಗ್​ನಷ್ಟು ಬಿಯರ್​ ಅನ್ನು ಒಂದೇ ಸಮನೆ ಕುಡಿದಿದ್ದಾಳೆ. ಈ ಕಾರಣಕ್ಕೆ ಆಕೆಯ ದೃಶ್ಯ ವೈರಲ್​ ಆಗಿದೆ.

ಫೋಟೋ; ಟ್ವಿಟ್ಟರ್​

ಫೋಟೋ; ಟ್ವಿಟ್ಟರ್​

  • Share this:
    ಯುವತಿಯರು ಬಿಯರ್​ ಸೇವಿಸುತ್ತಾರೆ ಎಂಬುದು ಬಹುತೇಕರಿಗೆ ಗೊತ್ತಿದೆ. ಅದರಲ್ಲೂ ಬಹುತೇಕ ಯುವತಿಯರು ಬಿಯರ್​ ಮಾತ್ರವಲ್ಲ, ವೈನ್​ ಸೇರಿದಂತೆ ವಿದೇಶಿ ಮದ್ಯವನ್ನು ಸೇವಿಸುವವರು ಇದ್ದಾರೆ.  ಆದರೆ ಇಲ್ಲೊಬ್ಬಳು ಯುವತಿ ಒಂದೇ ಸಮನೆ ಎರಡು ಮಗ್​ ಬಿಯರ್​ ಸೇವಿಸಿದ್ದಾಳೆ. ಇದು ಆಕೆಯ ಕೌಶಲ್ಯವೋ ಅಥವಾ ಸಾಧನೆಯೋ ಎಂಬುದಕ್ಕೂ ಮೊದಲು ಈ ವಿಡಿಯೋ ಗಮನಸಿ..

    ನ್ಯೂಯಾರ್ಕ್​ನ ಫಸ್ಲಿಂಗ್​ ಮೆಡೋಸ್​ನಲ್ಲಿ ನಡೆಯುತ್ತಿದ್ದ ಯುಎಸ್​ ಓಪನ್​ ಟೆನಿಸ್​ ಪಂದ್ಯಗಳನ್ನು ವೀಕ್ಷಿಸಲು ಅನೇಕ ಕ್ರೀಡಾಪ್ರೇಮಿಗಳು ಧಾವಿಸಿದ್ದರು. ಅದರಂತೆ ಆಟವನ್ನು ವೀಕ್ಷಿಸಲೆಂದು ಬಂದ ಯುವತಿಯೊಬ್ಬಳು ಆಟದ ನಡುವಿನಲ್ಲಿ ಕೈಯಲ್ಲಿದ್ದ ಮಗ್​ ಬಿಯರ್​ ಹೀರಿದ್ದಾಳೆ. ಪ್ರೇಕ್ಷಕ ಗ್ಯಾಲರಿಯಲ್ಲಿ ಇಂತಹದೊಂದು ದೃಶ್ಯ ಕಂಡುಬಂದಿದ್ದೇ ತಡ ಅಲ್ಲಿದ್ದ ಕ್ಯಾಮೆರಾಮ್ಯಾನ್​ ​​ ಆಕೆಯತ್ತ ಕ್ಯಾಮೆರಾ ತಿರುಗಿಸಿದ್ದಾನೆ. ಯವತಿ ಬಿಯರ್​ ಕುಡಿಯುವ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಅನೇಕರು ಕಾಮೆಂಟ್​ ಬರೆಯುತ್ತಿದ್ದಾರೆ.

    ರಾಬರ್ಟೊ ವಾಟಿಸ್ಟಾ - ಅಗಟ್​  ಮತ್ತು ಫೆಲಿಕ್ಸ್​ ಅಗರ್​- ಅಲಿಯಾಸ್ಸಿಮೆ ನಡುವಿನ ಮೂರನೇ ಸುತ್ತಿನ ಪಂದ್ಯದ ವೇಳೆ ಕ್ಯಾಮೆರಾಮನ್​ ಯುವತಿ ಕೈಯಲ್ಲಿ ಬಿಯರ್ ​ನೋಡಿ ಆಕೆಯತ್ತ ಕ್ಯಾಮೆರಾ ತಿರುಗಿಸುತ್ತಾನೆ. ಇದು ಆಕೆಗೆ ಗೊತ್ತಾಗುತ್ತಿಂದಂತೆ ಗ್ಲಾಸ್​ನಲ್ಲಿದ್ದ ಬಿಯರ್​ ಅನ್ನು ಒಂದೇ ಸಮನೆ ಕುಡಿದು ಮುಗಿಸಿದ್ದಾಳೆ.

    ಅಚ್ಚರಿ ವಿಚಾರವೆಂದರೆ, ಮೊದಲೇ ಹೇಳಿದಂತೆ ಯುವತಿಯರು ಬಿಯರ್​ ಸೇವಿಸುವುದು ಸಾಮಾನ್ಯ. ಆದರೆ ಈಕೆ ಮಾತ್ರ ಕೈಯಲ್ಲಿ ಎರಡು ಮಗ್​ನಷ್ಟು ಬಿಯರ್​ ಅನ್ನು ಒಂದೇ ಸಮನೆ ಕುಡಿದಿದ್ದಾಳೆ. ಈ ಕಾರಣಕ್ಕೆ ಆಕೆಯ ದೃಶ್ಯ ವೈರಲ್​ ಆಗಿದೆ.

    ಇದನ್ನು ಓದಿ- Motorola ಅನಾವರಣಗೊಳಿಸಿದೆ ಏರ್​ ಚಾರ್ಜರ್​! 3 ಮೀಟರ್​ ದೂರವಿದ್ದರು ಏಕಕಾಲದಲ್ಲಿ ​4 ಸ್ಮಾರ್ಟ್​ಫೋನ್​​ಗಳನ್ನ ಚಾರ್ಜ್​ ಮಾಡುತ್ತೆ ಈ ಡಿವೈಸ್​!

    ಯುವತಿಯ ಸಾಹಸವನ್ನು ಕಂಡು ಸುತ್ತಲಿದ್ದ ಪ್ರೇಕ್ಷಕರು ಚಪ್ಪಾಳೆಯ ಸುರಿಮಳೆ ಸುರಿಸಿದ್ದಾರೆ. ಅಷ್ಟು ಮಾತ್ರದಲ್ಲದೆ ಟ್ವಿಟ್ಟರ್​ನಲ್ಲಿ ಆಕೆಯ ದೃಶ್ಯ ವೈರಲ್​ ಆಗಿದೆ.

    ಇಂತಹ ಅನೇಕ ದೃಶ್ಯಗಳು ಕ್ರೀಡಾ ಮೈದಾನದಲ್ಲಿ ಮತ್ತು  ಸ್ಟೇಡಿಯಂನಲ್ಲಿ ನಡೆಯುತ್ತಲೇ ಇರುತ್ತದೆ. ಹಿಂದೊಮ್ಮೆ ಕ್ರಿಕೆಟ್​​ ಪಂದ್ಯದ ವೇಳೆ ಭಾರತೀಯ ತನ್ನ ಪ್ರೇಯಸಿಗೆ ಪ್ರೇಮ ನಿವೇದನೆ ಮಾಡುವ ಮೂಲಕ ತನ್ನ ಪ್ರೀತಿಯನ್ನು ವ್ಯಕ್ತ ಪಡಿಸಿದ ದೃಶ್ಯ ವೈರಲ್​ ಆಗಿದೆ.





    ಕ್ರೀಡಾ ಸ್ಪರ್ಧಿಗಳ ದೃಶ್ಯಗಳು ಕೂಡ ವೈರಲ್​ ಆಗುತ್ತಿರುತ್ತದೆ. ಕಳೆದ ಕೆಲವು ದಿನಗಳ ದಿಂದೆ ಪ್ಯಾರಾಒಲಿಂಪಿಕ್​ನಲ್ಲಿ ಓಡಿದ ಓಟಗಾರ್ತಿಗೆ ಕೋಚ್ ಪ್ರೇಮ ನಿವೇದನೆ ಮಾಡಿದ ದೃಶ್ಯ ವೈರಲ್​ ಆಗಿದ್ದು, ಅನೇಕ ಮಾದ್ಯಮಗಳು ಈ ದೃಶ್ಯವನ್ನು ಹಂಚಿಕೊಂಡಿದ್ದವು. ಮಾತ್ರವಲ್ಲದೆ ಈ ವಿಡಿಯೋ ನೋಡಿ ಅನೇಕರು ಬಗೆ ಬಗೆಯ ಕಾಮೆಂಟ್​ ಬರೆದಿದ್ದರು.
    Published by:Harshith AS
    First published: