ಸುಂದರವಾದ ವೈವಾಹಿಕ ಜೀವನಕ್ಕೆ (Life) ಅಡಿಪಾಯ ಎಂದರೆ ಸಂಗಾತಿಗಳು ಪರಸ್ಪರರ ಮೇಲೆ ಇಡುವ ನಂಬಿಕೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಗಂಡ-ಹೆಂಡತಿಯ ನಡುವೆ ಒಮ್ಮೆ ನಂಬಿಕೆ ಎಂಬುದು ಕಡಿಮೆ ಆಗಿ ಸಂಶಯ ಹುಟ್ಟಿಕೊಂಡಿತು ಅಂತಾದರೆ, ಅಲ್ಲಿಗೆ ಸಂಬಂಧ ನಿಧಾನವಾಗಿ ಹಾಳಾಗುವುದಕ್ಕೆ ಶುರುವಾಗುತ್ತದೆ. ಆದರೆ ಈಗಂತೂ ಗಂಡ ತನ್ನ ಹೆಂಡತಿಗೆ ವಂಚಿಸಿ ಬೇರೆಯೊಬ್ಬಳೊಂದಿಗೆ ಸಂಬಂಧ ಇಟ್ಟುಕೊಳ್ಳುವುದು, ಹೆಂಡತಿ ತನ್ನ ಗಂಡನಿಗೆ (Husband) ಗೊತ್ತಾಗದಂತೆ ಬೇರೊಬ್ಬ ಗಂಡಸಿನ ಜೊತೆಯಲ್ಲಿ ಸಂಬಂಧ ಇಟ್ಟುಕೊಳ್ಳುವುದು ಅನೇಕ ಪ್ರಕರಣಗಳಲ್ಲಿ ನಾವು ನೋಡಿರುತ್ತೇವೆ. ಜೀವನ ಸಂಗಾತಿಯನ್ನು ವಂಚಿಸುವುದು ಕಾನೂನುಬಾಹಿರವಾಗಿದೆ ಮತ್ತು ಇದು ದಂಪತಿಗಳ ನಡುವೆ ಗಂಭೀರ ಕೌಟುಂಬಿಕ ಭಿನ್ನಾಭಿಪ್ರಾಯವನ್ನು ತಂದೊಡ್ಡುತ್ತದೆ.
ಈ ರೀತಿಯ ಸಂಬಂಧಗಳು ಗಂಡ ಮತ್ತು ಹೆಂಡತಿಯ ನಡುವಿನ ಹಾಲಿನಂತಹ ಸಂಸಾರದಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತವೆ ಅಂತ ಗೊತ್ತಿದ್ದರೂ ಸಹ ಜನರು ಈ ತಪ್ಪನ್ನು ಮಾಡುತ್ತಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಎಷ್ಟೋ ಸಂಸಾರಗಳು ಈ ವಿಷಯಕ್ಕೆ ಒಡೆದು ಹೋಗಿರುವುದನ್ನು ನಾವೆಲ್ಲಾ ಪ್ರತಿದಿನ ನೋಡುತ್ತಲೇ ಇರುತ್ತೇವೆ ಅಂತ ಹೇಳಬಹುದು.
ತನ್ನ ಗಂಡ ತನಗೆ ಮೋಸ ಮಾಡಿದ್ದಾನೆ:
ಒಮ್ಮೆ ತನ್ನ ಗಂಡ ತನಗೆ ಮೋಸ ಮಾಡುತ್ತಿದ್ದಾನೆ ಅಥವಾ ತನ್ನ ಹೆಂಡತಿ ತನಗೆ ಮೋಸ ಮಾಡುತ್ತಿದ್ದಾಳೆ ಅಂತ ಒಮ್ಮೆ ಸ್ವಲ್ಪ ಸುಳಿವು ಸಿಕ್ಕರೆ ಸಾಕು ಅವರ ನಡೆ-ನುಡಿಗಳನ್ನು ಹಿಂಬಾಲಿಸಲು ಶುರು ಮಾಡುತ್ತೇವೆ. ಕೆಲವರು ಏನೂ ಮಾಡಲಾಗದೆ ಅಸಹಾಯಕರಾಗಿ ಉಳಿದರೆ, ಇನ್ನೂ ಕೆಲವರು ಅದನ್ನು ಪ್ರತಿಭಟಿಸುತ್ತಾರೆ. ಖಂಡಿತವಾಗಿಯೂ, ಮೋಸ ಹೋಗಿರುವ ವ್ಯಕ್ತಿಗೆ ತಾನು ತನ್ನ ಸಂಗಾತಿಯಿಂದಲೇ ಈ ರೀತಿಯಾಗಿ ಮೋಸ ಹೋಗಿದ್ದೇವೆ ಅಂತ ತಿಳಿದು ಒಂದು ಕ್ಷಣ ಏನು ಮಾಡುವುದು ಅಂತ ತೋಚದೆ ಉಳಿದು ಬಿಡುತ್ತಾರೆ.
Is ko konsa kalesh kaha jayega? pic.twitter.com/6eX0Nu8tKB
— GJ0082 (@gj0082) December 15, 2022
ವೈರಲ್ ಆದ ಈ ವೀಡಿಯೋ:
ವೀಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಗಂಡನೊಂದಿಗೆ ಬೀದಿಯಲ್ಲಿ ನಿಂತು ಜಗಳವಾಡುತ್ತಿರುವುದನ್ನು ಪ್ರಾರಂಭದಲ್ಲಿ ನೋಡಬಹುದು. ಮಹಿಳೆ ತನ್ನ ಗಂಡನನ್ನು ಕೂಗಿ ದೂರಕ್ಕೆ ತಳ್ಳುತ್ತಿರುವಾಗ, ಅರೆ ನಗ್ನನಾಗಿರುವ ಆ ಗಂಡ ಅವಳನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು. ನಂತರ, ಅವಳು ತನ್ನ ಮನೆಯೊಳಗೆ ಹೋಗಿ ತನ್ನ ಗಂಡನ ಬಟ್ಟೆಗಳನ್ನು ಹೊರಗೆ ಬೀಸಾಡುತ್ತಾಳೆ.
ಇದನ್ನೂ ಓದಿ: Village Story: ಭಾರತದಲ್ಲೇ ಇದೆ ಅಲೆಕ್ಸಾಂಡರ್ನ ಸೈನಿಕರ ಗ್ರಾಮ, ಇಲ್ಲಿ ಹೊರಗಿನಿಂದ ಬಂದವರು ಏನೂ ಮುಟ್ಟುವಂತಿಲ್ಲ!
ಏತನ್ಮಧ್ಯೆ, ನೆರೆಹೊರೆಯವರು ಬೀದಿಯಲ್ಲಿ ದಂಪತಿಗಳ ಮಧ್ಯೆ ನಡೆಯುತ್ತಿರುವ ಈ ಜಗಳವನ್ನು ನೋಡುತ್ತಾ ನಿಂತಿರುತ್ತಾರೆ. ಮುಂದಿನ ದೃಶ್ಯಗಳಲ್ಲಿ ಆ ಮಹಿಳೆ ಗಂಡನ ಜೊತೆ ಇದ್ದ ಹುಡುಗಿಯನ್ನು ಓಡಿಸಿಕೊಂಡು ಹೋಗುತ್ತಾಳೆ. ಆ ಹುಡುಗಿ ಟವೆಲ್ ಸುತ್ತಿಕೊಂಡು ಓಡಿ ಹೋಗುವುದನ್ನು ನಾವು ನೋಡಬಹುದು. ಇನ್ನೂ ಮುಂದಿನ ದೃಶ್ಯಗಳಲ್ಲಿ, ಮಹಿಳೆ ತನ್ನ ಮನೆಯ ಗೇಟಿನ ಪಕ್ಕದಲ್ಲಿ ನಿಂತು ತನ್ನ ಗಂಡನ ಮೇಲೆ ಕೂಗಾಡುತ್ತಿರುವುದನ್ನು ಕಾಣಬಹುದು. ಏತನ್ಮಧ್ಯೆ, ಅದೇ ಮನೆಯ ಬಾಲ್ಕನಿಯಲ್ಲಿ ಹುಡುಗಿಯೊಬ್ಬಳು ಟವೆಲ್ ಸುತ್ತಿಕೊಂಡು ನಿಂತಿರುವುದನ್ನು ನೋಡಬಹುದು. ಆ ಗೇಟನ್ನು ಲಾಕ್ ಮಾಡುತ್ತಿರುವ ಮಹಿಳೆಯನ್ನು ಪತ್ತೆ ಹಚ್ಚಲು ಅವಳು ಕೆಳಗಡೆ ಇಣುಕಿ ನೋಡುತ್ತಾಳೆ.
ದಂಪತಿಗಳು ಸ್ವಲ್ಪ ಸಮಯದವರೆಗೆ ವಾದಿಸಿದರು ಮತ್ತು ಮಹಿಳೆ ಗೇಟ್ ತೆರೆದ ನಂತರ ತನ್ನ ಮನೆಯನ್ನು ಪ್ರವೇಶಿಸಿದಳು. ಇದನ್ನು ಒಂದು ಅವಕಾಶವೆಂದು ಕಂಡುಕೊಂಡ ಹುಡುಗಿ ಬಾಲ್ಕನಿಯಿಂದ ಇಳಿಯಲು ಪ್ರಯತ್ನಿಸುತ್ತಾಳೆ. ಆದರೆ ಅವಳು ನೆಲದ ಮೇಲೆ ಕಾಲಿಡುವುದಕ್ಕೂ ಮುಂಚಿತವಾಗಿಯೇ ಆ ಮಹಿಳೆ ಹೊರಗೆ ಬರುತ್ತಾಳೆ. ಹೇಗೋ ಮಾಡಿ ಕೊನೆಗೆ ಆ ಹುಡುಗಿ ಮನೆಯಿಂದ ಹೊರಗೆ ಓಡಿ ಹೋಗುತ್ತಾಳೆ. ಈ ವೈರಲ್ ವೀಡಿಯೋದಲ್ಲಿ ನಡೆದಿರುವ ಘಟನೆಯ ಸ್ಥಳವನ್ನು ಪತ್ತೆಹಚ್ಚಲಾಗಿಲ್ಲವಾದರೂ, ಅದನ್ನು ಜಿಜೆ0082 ಎಂಬ ಹೆಸರಿನ ಟ್ವಿಟ್ಟರ್ ಖಾತೆಯು ಇದನ್ನು ಮರು-ಹಂಚಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ