ಈಗಂತೂ ಈ ಅನೈತಿಕ ಸಂಬಂಧಗಳು (Illigal Relationships), ಮದುವೆಯಾಗಿ (Wedding) ಮಕ್ಕಳಿದ್ದರೂ (Child) ಸಹ ತಾಳಿ ಕಟ್ಟಿದ ಗಂಡನನ್ನು (Husband) ಬಿಟ್ಟು ತನ್ನ ಪ್ರಿಯಕರನ ಜೊತೆಯಲ್ಲಿ ಓಡಿ ಹೋಗುವುದು ಮತ್ತು ತನ್ನ ಪತ್ನಿಗೆ ಮೋಸ ಮಾಡಿ ಬೇರೆ ಯಾವುದೋ ಊರಿನಲ್ಲಿ ಕದ್ದು ಮುಚ್ಚಿ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗುವುದು ಹೀಗೆ ಅನೇಕ ರೀತಿಯ ಘಟನೆಗಳು ನಡೆಯುತ್ತಿವೆ ಅಂತ ಹೇಳಬಹುದು. ಹಾಗಾಗಿ ಅನೇಕ ಪತಿ-ಪತ್ನಿಯರು ತಮ್ಮ ಸಂಗಾತಿಗಳ ಚಲನ-ವಲನಗಳ ಮೇಲೆ ಒಂದು ನಿಗಾ ಇಟ್ಟಿರುತ್ತಾರೆ ಅಂತ ಹೇಳಬಹುದು. ಇದರ ಬಗ್ಗೆ ಈಗೇಕೆ ಮಾತು ಅಂತೀರಾ?
ಇಲ್ಲೊಂದು ಇಂತಹದೇ ಒಂದು ಘಟನೆ ನಡೆದಿದೆ ನೋಡಿ. ಈ ಘಟನೆಯಲ್ಲಿ ತನ್ನ ಪತಿ ಮಹಾಶಯ ಕದ್ದು ಮುಚ್ಚಿ ಮೂರನೇ ಮದುವೆ ಆಗುತ್ತಿರುವ ಸಮಯಕ್ಕೆ ಸರಿಯಾಗಿ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟ ಹೆಂಡತಿ ತನ್ನ ಗಂಡನ ನಿಜ ಬಣ್ಣವನ್ನು ಹೇಗೆ ಬಯಲು ಮಾಡಿದ್ದಾಳೆ ನೋಡಿ.
ಪತ್ನಿಗೆ ಮೋಸ ಮಾಡಿ ಮೂರನೇ ಮದುವೆಯಾಗುತ್ತಿದ್ದ ಪತಿ ಮಹಾಶಯ..
ಮಹಿಳೆಯೊಬ್ಬಳು ತನ್ನ ಗಂಡನು ತನಗೆ ಮೋಸ ಮಾಡಿ ಮೂರನೇ ಮದುವೆಯಾಗುತ್ತಿರುವ ಸಮಯದಲ್ಲಿ ಹೋಗಿ ಮದುವೆ ಮಂಟಪದಲ್ಲಿ ಗಂಡನನ್ನು ಹಿಡಿದು ಎಳೆದಾಡಿ ಹೈ-ವೋಲ್ಟೇಜ್ ಡ್ರಾಮಾವನ್ನೇ ಸೃಷ್ಟಿಸಿದ್ದಾಳೆ. ಈಗ ಈ ಇಡೀ ಘಟನೆಯನ್ನು ಸೆರೆ ಹಿಡಿದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಒಂದು ನಿಮಿಷ 39 ಸೆಕೆಂಡುಗಳ ಈ ವೀಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಮಗನೊಂದಿಗೆ ಮದುವೆಯ ಸ್ಥಳಕ್ಕೆ ಬರುತ್ತಾಳೆ ಮತ್ತು ಅಲ್ಲಿಗೆ ಬಂದವಳೆ ಮದುವೆಯಾಗುತ್ತಿರುವ ವರನು ತನ್ನ ಪತಿ ಎಂದು ಹೇಳಿಕೊಂಡು ಅವಳು ಸ್ಥಳದಲ್ಲಿ ರಂಪಾಟವನ್ನು ಸೃಷ್ಟಿಸುತ್ತಾಳೆ.
"ಅವರು ನನ್ನ ಪತಿ ಮತ್ತು ನನ್ನ ಮಗುವಿನ ತಂದೆ. ಅವರು ಮೂರು ದಿನಗಳ ಕಾಲ ತಾನು ಹೈದರಾಬಾದ್ ಗೆ ಹೋಗುವುದಾಗಿ ಹೇಳಿದರು ಮತ್ತು ಈಗ ಅವರು ಇಲ್ಲಿ ಮೂರನೇ ಮದುವೆಯಾಗಲು ಸಜ್ಜಾಗಿದ್ದಾರೆ" ಎಂದು ಮಹಿಳೆ ವೀಡಿಯೋದಲ್ಲಿ ಹೇಳಿದ್ದಾರೆ.
ಗಲಾಟೆ ಮಾಡುತ್ತಿರುವ ಮಹಿಳೆಯನ್ನು ಮತ್ತೊಂದು ಕೋಣೆಗೆ ಕರೆದೊಯ್ದು ಆಕೆಯ ಕಥೆ ಕೇಳಿದರಂತೆ..
ಮದುವೆಯ ಸ್ಥಳದಲ್ಲಿ ಆ ಮಹಿಳೆ ಸಹ ಜೋರಾಗಿ ಮೂರನೇ ಮದುವೆ ಆಗುತ್ತಿರುವುದು ನಿಮಗೆ ಗೊತ್ತಿಲ್ಲವೇ? ಇವರಿಗೆ ಈಗಾಗಲೇ ಎರಡು ಮದುವೆಗಳು ಆಗಿವೆ, ಮಕ್ಕಳು ಇದ್ದಾರೆ ಅಂತ ಅಲ್ಲಿ ನೆರೆದಿದ್ದ ಅತಿಥಿಗಳಿಗೆ ಹೇಳುತ್ತಲೇ ಇದ್ದಳು.
ಇದನ್ನೂ ಓದಿ: ತನ್ನ ಪತಿಗಾಗಿ ಹೊಸ ಗರ್ಲ್‌ಫ್ರೆಂಡ್ ಹುಡುಕಿ ಮನೆಗೆ ಕರೆದುಕೊಂಡು ಬಂದ ಪತ್ನಿ! ಇದರ ಹಿಂದಿದೆ ವಿಚಿತ್ರ ಕಾರಣ
ಸ್ವಲ್ಪ ಹೊತ್ತಿನ ನಂತರ ಆಕೆಯನ್ನು ಮತ್ತೊಂದು ಕೋಣೆಗೆ ಕರೆದೊಯ್ಯುತ್ತಾರೆ ಮತ್ತು ಅಲ್ಲಿ ಕೂರಿಸಿ ಆಕೆಯ ಮಾತುಗಳನ್ನು ಸಮಾಧಾನದಿಂದ ಕೇಳುತ್ತಾರೆ. ಆಗ ಮಹಿಳೆಯ ಮಾತುಗಳನ್ನು ಕೇಳಿ ಅಲ್ಲಿದ್ದ ಜನರಿಗೆ ಒಂದು ಕ್ಷಣ ಶಾಕ್ ಆಗುತ್ತದೆ.
Kalesh B/w Wife and her Husband over 2nd Marriage of Her Husband pic.twitter.com/z3WavXAbi6
— Ghar Ke Kalesh (@gharkekalesh) March 26, 2023
ತನ್ನ ಗಂಡನ ಎರಡನೇ ಹೆಂಡತಿಗೆ ಮೂರನೇ ಮದುವೆಯ ಬಗ್ಗೆ ಮಾಹಿತಿ ನೀಡಿದ್ದೇನೆ, ಆದರೆ ಆಕೆ ಅನಾರೋಗ್ಯದಿಂದ ಬಳಲುತ್ತಿದ್ದರಿಂದ, ಇಲ್ಲಿಗೆ ಬರಲು ಆಕೆಗೆ ಸಾಧ್ಯವಾಗಲಿಲ್ಲ ಎಂದು ಈ ಮಹಿಳೆ ಹೇಳಿದಳು.
ಮಹಿಳೆಯ ಮಾತನ್ನು ಕೇಳಿದ ನಂತರ ವರನನ್ನು ಚೆನ್ನಾಗಿ ಥಳಿಸಿದ್ರಂತೆ..
"ಈಗ ಎರಡನೇ ಮದುವೆಯ ನಾಲ್ಕು ವರ್ಷಗಳ ನಂತರ ಅವನು ಮೂರನೇ ಮದುವೆಯಾಗುತ್ತಿದ್ದಾನೆ" ಎಂದು ಮಹಿಳೆ ಹೇಳಿದರು. ಈ ಸ್ಥಳದಲ್ಲಿ ಹಾಜರಿದ್ದ ಪತಿಯ ಕುಟುಂಬವನ್ನು ಸಹ ಆ ಮಹಿಳೆ ದೂಷಿಸಿದಳು.
ಕೆಲವು ಕ್ಷಣಗಳ ನಂತರ, ಆ ವ್ಯಕ್ತಿ ಶರ್ಟ್ ಬಿಚ್ಚಿದ್ದು ಮತ್ತು ಒಂದು ಹಳದಿ ಲುಂಗಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮೋಸ ಮಾಡಿದ್ದಕ್ಕಾಗಿ ಮದುವೆಗೆ ಬಂದ ಅತಿಥಿಗಳು ಮತ್ತು ವಧುವಿನ ಕುಟುಂಬವು ಅವನನ್ನು ಕೆಟ್ಟದಾಗಿ ಥಳಿಸಿದೆ ಎಂದು ತೋರುತ್ತದೆ.
ಇದನ್ನೂ ಓದಿ: ಭಾರತದ ಈ ಒಂದು ಹಳ್ಳಿಯಲ್ಲಿ ಸೈರನ್ ಮೊಳಗಿದ್ರೆ ಟಿವಿ, ಮೊಬೈಲ್, ಲ್ಯಾಪ್‌ಟಾಪ್ ಎಲ್ಲವೂ ಸ್ವಿಚ್ ಆಫ್!
‘ಘರ್ ಕೆ ಕಲೇಶ್’ ಎಂಬ ಟ್ವಿಟ್ಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿರುವ ಈ ವೀಡಿಯೋ ಇದುವರೆಗೆ 81 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು ಅನೇಕರು ಈ ವೀಡಿಯೋ ನೋಡಿ ಆ ಪತಿ ಮಹಾಶಯನನ್ನು ಕಟುವಾಗಿ ಟೀಕಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ