Viral Story: ಇಲ್ನೋಡಿ.. ಈ ಮಹಿಳೆ ಜನ್ಮ ನೀಡಿದ ಮಗುವಿನ ತೂಕ ಕೇಳಿದರೆ ನೀವು ಬೆಚ್ಚಿ ಬೀಳ್ತೀರಾ!

Big guy: ನವಜಾತ ಶಿಶುವಿನ ಸರಾಸರಿ ತೂಕದಿಂದ ಸರಿ ಸುಮಾರು ದುಪ್ಪಟ್ಟು ತೂಕ ಹೊಂದಿದೆ ಎಂದು ವೈದ್ಯರು ಹೇಳಿದಾಗ ತಾಯಿ ಮತ್ತು ತಂದೆಯಾದ ಕ್ಯಾರಿ ಮತ್ತು ಟಿಮ್ ಇಬ್ಬರೂ ದಿಗ್ಭ್ರಮೆಗೊಂಡರು. ಫಿನ್ಲಿಯ ಬಗ್ಗೆ ನಂಬಲಾಗದ ವಿಷಯವೊಂದಿದೆ, ಅದು ಏನೆಂದರೆ ಅವನಿಗೆ ಈಗಾಗಲೇ 6-9 ತಿಂಗಳ ಮಕ್ಕಳಿಗಾಗಿ ತಯಾರಿಸಿದ ಬಟ್ಟೆಗಳು ಸರಿ ಹೊಂದುತ್ತವೆ.

Photo: Google

Photo: Google

  • Share this:
    ಸಾಮಾನ್ಯವಾಗಿ ತಾಯಿ ಒಂದು ಮಗುವಿಗೆ ಜನ್ಮ (Birth) ನೀಡಿದಾಗ ಅದರ ತೂಕವು 2.7 ರಿಂದ 4 ಕಿಲೋಗ್ರಾಂನಷ್ಟು ಇರುವುದನ್ನು ನಾವೆಲ್ಲಾ ನೋಡಿರುತ್ತೇವೆ. ಹುಟ್ಟಿದ ಮಗು 2.7 ಕಿಲೋಗ್ರಾಂಕ್ಕಿಂತಲೂ ಕಡಿಮೆ ತೂಕವಿದ್ದರೆ ಮಗು ಸಾಮಾನ್ಯ ತೂಕಕ್ಕಿಂತ ಕಡಿಮೆ ಇದೆ ಎಂದು ಹೇಳುತ್ತೇವೆ.ಆದರೆ ಆರೋಗ್ಯವಂತ ಮಗು ಹೆಚ್ಚೆಂದರೆ 4.5 ಕಿಲೋಗ್ರಾಂವರೆಗೆ ಇರುತ್ತದೆ. ಆದರೆ ಇಲ್ಲಿ ಒಂದು ಮಗು ಜನಿಸಿದ್ದು, ಅದರ ತೂಕ ಕೇಳಿದರೆ ನೀವು ಖಂಡಿತವಾಗಿಯೂ ಬೆಚ್ಚಿ ಬೀಳ್ತೀರಾ. ಈಗಾಗಲೇ ತನ್ನ ದೇಹದ ತೂಕದಿಂದ ಸುದ್ದಿಯಲ್ಲಿರುವ ಆ ಮಗುವಿನ ಹೆಸರು ಫಿನ್ಲಿ ಪಟೊನಾಯ್ (Finnley Patonai) ಅಂತ ಹೇಳಲಾಗುತ್ತಿದ್ದು, ಅವನ ದೇಹದ ತೂಕ ಬರೋಬ್ಬರಿ 14 ಪೌಂಡ್ 1 ಓಜ್ ಆಗಿದ್ದು ಕಿಲೋಗ್ರಾಂಗಳಲ್ಲಿ ಇದು 6.3 ಆಗುತ್ತದೆ.

    ತಮ್ಮ ಮಗು ನವಜಾತ ಶಿಶುವಿನ ಸರಾಸರಿ ತೂಕದಿಂದ ಸರಿ ಸುಮಾರು ದುಪ್ಪಟ್ಟು ತೂಕ ಹೊಂದಿದೆ ಎಂದು ವೈದ್ಯರು ಹೇಳಿದಾಗ ತಾಯಿ ಮತ್ತು ತಂದೆಯಾದ ಕ್ಯಾರಿ ಮತ್ತು ಟಿಮ್ ಇಬ್ಬರೂ ದಿಗ್ಭ್ರಮೆಗೊಂಡರು. ಫಿನ್ಲಿಯ ಬಗ್ಗೆ ನಂಬಲಾಗದ ವಿಷಯವೊಂದಿದೆ, ಅದು ಏನೆಂದರೆ ಅವನಿಗೆ ಈಗಾಗಲೇ 6-9 ತಿಂಗಳ ಮಕ್ಕಳಿಗಾಗಿ ತಯಾರಿಸಿದ ಬಟ್ಟೆಗಳು ಸರಿ ಹೊಂದುತ್ತವೆ.

    ವರದಿಗಳ ಪ್ರಕಾರ, ಪೋಷಕರು ದೊಡ್ಡ ಮಗುವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಮೊದಲೇ ಹೇಳಿದ್ದರು. ಈ ಹಿಂದೆ ಅವನು ಸುಮಾರು 13 ಪೌಂಡ್ ತೂಕ ಹೊಂದಿರಬಹುದು ಎಂದು ವೈದ್ಯರು ಅವರಿಗೆ ಹೇಳಿದ್ದರು.

    ಆದರೆ ಫಿನ್ಲಿ ತಾಯಿಯ ಗರ್ಭದಿಂದ ಹೊರ ತೆಗೆದಾಗ ವೈದ್ಯರು ಹೇಳಿದ್ದಕ್ಕಿಂತಲೂ ಒಂದು ಪೌಂಡ್ ಹೆಚ್ಚಿರುವುದು ಕಂಡು ಬಂದಿತು.

    "ವೈದ್ಯರು ಅವನನ್ನು ಹೊರತೆಗೆದ ತಕ್ಷಣ, ಅವರೆಲ್ಲರೂ 'ಓಹ್ ಇಂತ ಭಾರಿ ತೂಕದ ಮಗು' ನಾವು ಇಷ್ಟು ತೂಕದ ಹುಟ್ಟಿದ ಮಗುವನ್ನು ನೋಡಿಯೇ ಇರಲಿಲ್ಲ ಎಂದು ಹೇಳಿದ್ದರು. ಎಲ್ಲಾ ರೀತಿಯಲ್ಲೂ ಆರೋಗ್ಯವಾಗಿದ್ದಾನೆ ನಮ್ಮ ಮಗು" ಎಂದು ತಂದೆ ಕ್ಯಾರಿ ಮಾಧ್ಯಮದವರ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

    Read Also: Nidhi Parmar: 37ನೇ ವಯಸ್ಸಿಗೆ ತಾಯಿಯಾಗಿ 100 ಲೀಟರ್ ಎದೆಹಾಲು ದಾನ​ ಮಾಡಿದ ಬಾಲಿವುಡ್ ನಿರ್ದೇಶಕಿ!

    "ಅವನು ತುಂಬಾ ದೊಡ್ಡವನಾಗಿದ್ದನು ಮತ್ತು ನಾನು ಆಮ್ನಿಯೋಟಿಕ್ ದ್ರವವನ್ನು ಬಹುತೇಕ ದುಪ್ಪಟ್ಟು ಹೊಂದಿದ್ದೆ, ಆದ್ದರಿಂದ ನನಗೆ ತುಂಬಾ ದೊಡ್ಡ ಹೊಟ್ಟೆ ಇತ್ತು ಮತ್ತು ನನಗೆ ತುಂಬಾನೇ ಅನಾನುಕೂಲವಾಗುತ್ತಿತ್ತು. ಇಂತಹ ಮಗು ಪಡೆಯಲು ಮತ್ತೊಮ್ಮೆ ಇದನ್ನು ಅನುಭವಿಸಬೇಕಾದರೂ ನನಗೆ ಯಾವುದೇ ರೀತಿಯ ಅಸಮಾಧಾನ ಇರುವುದಿಲ್ಲ" ಎಂದು ಫಿನ್ಲಿಯ ತಾಯಿ ಹೇಳಿದರು.

    ಫಿನ್ಲಿಯನ್ನು ಅರಿಜೋನಾದ ಗ್ಲೆಂಡೇಲ್‌ನಲ್ಲಿರುವ ಬ್ಯಾನರ್ ಥಂಡರ್ ಬರ್ಡ್ ವೈದ್ಯಕೀಯ ಕೇಂದ್ರದಲ್ಲಿ ಸಿಜೇರಿಯನ್ ಮೂಲಕ ಹೊರ ತೆಗೆಯಲಾಯಿತು. ಆಸ್ಪತ್ರೆಯಲ್ಲಿ ಲಭ್ಯವಿರುವ ನ್ಯಾಪಿಯ ಸ್ಟಾಕ್ ಫಿನ್ಲಿಗೆ ಸಾಕಾಗದ ಕಾರಣ ಆಸ್ಪತ್ರೆಯವರು ದೊಡ್ಡ ನ್ಯಾಪಿಗಳನ್ನು ತರಿಸಬೇಕಾಯಿತು.

    Read Also: Smartphones: ಈ ವಾರ ಮಾರುಕಟ್ಟೆಗೆ ಬರಲಿರುವ ಸ್ಮಾರ್ಟ್​ಫೋನ್​ಗಳಿವು!

    ವೈದ್ಯರು ಸಹ ಫಿನ್ಲಿಯನ್ನು ನೋಡಿ ತಮ್ಮ 30 ವರ್ಷಗಳ ವೈದ್ಯಕೀಯ ವೃತ್ತಿಜೀವನದಲ್ಲಿ ಇಂತಹ ಭಾರಿ ತೂಕದ ಮಗುವನ್ನು ನೋಡಿಲ್ಲ ಎಂದು ಹೇಳಿದರು. ಇದೇ ವರ್ಷದ ಮೇ ತಿಂಗಳಲ್ಲಿ, 27 ವರ್ಷದ ಮಹಿಳೆಯೊಬ್ಬಳು 12 ಪೌಂಡ್ ತೂಕದ ಮತ್ತು 2 ಅಡಿ ಎತ್ತರವಿರುವ ಗಂಡು ಮಗುವಿಗೆ ಜನ್ಮ ನೀಡಿದ್ದನ್ನು ಇಲ್ಲಿ ನೆನಪಿಸಿ ಕೊಳ್ಳಬಹುದಾಗಿದೆ.
    First published: