Watermelon art: ಇದು ಅಂತಿಂತ ಕಲಾಕೃತಿ ಅಲ್ಲ! ಕಲ್ಲಂಗಡಿ ಹಣ್ಣಿನಲ್ಲಿ ಮೂಡಿಬಂದ ಕಲಾತ್ಮಕ ಚಿತ್ತಾರ

ಸಾಮಾಜಿಕ ಮಾಧ್ಯಮದಲ್ಲಿ ಜಗತ್ತಿನೆಲ್ಲೆಡೆಯ ಕಲಾವಿದರು ತಮ್ಮ ಕಲಾಕೃತಿಗಳ ಕುರಿತ ವಿಡಿಯೋ ಅಥವಾ ಫೋಟೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅಂದದ್ದೇ ಒಂದು ಕಲಾಕೃತಿಯ ಪೋಸ್ಟ್ ಇದು.

ಕಲ್ಲಂಗಡಿ ಹಣ್ಣಿನಲ್ಲಿ ಮೂಡಿಬಂದ ಕಲಾತ್ಮಕ ಚಿತ್ತಾರ

ಕಲ್ಲಂಗಡಿ ಹಣ್ಣಿನಲ್ಲಿ ಮೂಡಿಬಂದ ಕಲಾತ್ಮಕ ಚಿತ್ತಾರ

  • Share this:
ಬೇಸಿಗೆಯಲ್ಲಿ (Summer) ನಿರ್ಜಲೀಕರಣದ ಭಯ ಸಾಮಾನ್ಯ. ಹಾಗಾಗಿ, ದೇಹವನ್ನು ಹೈಡ್ರೇಟ್ (Hydrate) ಆಗಿಡಲು ನೀರು ಕುಡಿಯುವುದು (Drinking Water) ಇಲ್ಲವೇ, ಅತ್ಯಧಿಕ ನೀರಿನ ಪ್ರಮಾಣವನ್ನು ಹೊಂದಿರುವ ಹಣ್ಣುಗಳನ್ನು ಸೇವಿಸುವುದು ಉತ್ತಮ ಅಭ್ಯಾಸ. ಬೇಸಿಗೆಯ ಜನಪ್ರಿಯ ಹಣ್ಣುಗಳಲ್ಲಿ ಕಲ್ಲಂಗಡಿ ಹಣ್ಣು (Watermelon) ಕೂಡ ಒಂದು. ಈ ಹಣ್ಣಲು ತಿನ್ನಲು ರುಚಿಕರ ಮಾತ್ರವಲ್ಲ, ಹೇರಳ ನೀರಿನ ಪ್ರಮಾಣವನ್ನು ಹೊಂದಿರುತ್ತದೆ ಕೂಡ. ಬೇಸಿಗೆ ಈ ನಮ್ಮ ಒಡನಾಡಿಯನ್ನು ಸುಂದರವಾಗಿ ಸಿಂಗರಿಸಿದರೆ, ಅಂದರೆ ಕಲ್ಲಂಗಡಿ ಹಣ್ಣಿನ ಮೇಲೆ ಸುಂದರವಾದ ಚಿತ್ತಾರವನ್ನು ಬಿಡಿಸಿದರೆ ನೋಡಲು ಹೇಗಿರುತ್ತದೆ? ಆ ಕುತೂಹಲ ನಿಮಗೂ ಇದೆಯೇ? ಹಾಗಾದರೆ, ಕಲ್ಲಂಗಡಿ ಹಣ್ಣಿನ ಮೇಲೆ ಕಲಾತ್ಮಕ ಚಿತ್ತಾರಗಳನ್ನು (Watermelon art) ಬಿಡಿಸುತ್ತಿರುವ ವಿಡಿಯೋವುಳ್ಳ ಈ ಪೋಸ್ಟ್ ಅನ್ನು ನೀವು ನೋಡಲೇಬೇಕು.

ಸಾಮಾಜಿಕ ಮಾಧ್ಯಮದಲ್ಲಿ ಜಗತ್ತಿನೆಲ್ಲೆಡೆಯ ಕಲಾವಿದರು ತಮ್ಮ ಕಲಾಕೃತಿಗಳ ಕುರಿತ ವಿಡಿಯೋ ಅಥವಾ ಫೋಟೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅಂದದ್ದೇ ಒಂದು ಕಲಾಕೃತಿಯ ಪೋಸ್ಟ್ ಇದು.

ಕಲ್ಲಂಗಡಿ ಹಣ್ಣಿನ ಮನಮೋಹಕ ಚಿತ್ತಾರ
ಮಹಿಳೆಯೊಬ್ಬರು, ಕಲ್ಲಂಗಡಿ ಹಣ್ಣಿನ ಮನಮೋಹಕ ಚಿತ್ತಾರವನ್ನು ಕೆತ್ತುತ್ತಿರುವ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಬ್ಯುಟೆಂಗೆಬೀಡೆನ್ ಎಂಬ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಈ 42 ಸೆಕೆಂಡ್ ಅವಧಿಯ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, “ ವಾಟರ್ ಮೆಲನ್ ಆರ್ಟ್” ಎಂಬ ಅಡಿಬರಹವನ್ನು ನೀಡಲಾಗಿದೆ.

ಈ ವಿಡಿಯೋವನ್ನು ಈಗಾಗಲೇ ಸುಮಾರು 6.7 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ವಿಡಿಯೋ 31,000 ಲೈಕ್‍ಗಳನ್ನು ಕೂಡ ಪಡೆದಿದೆ. ಅಷ್ಟೇ ಅಲ್ಲ, ವಿಡಿಯೋದಲ್ಲಿನ ಮಹಿಳೆ ಕಲ್ಲಂಗಡಿಯ ಮೇಲೆ ರಚಿಸುತ್ತಿರುವ ಚಿತ್ತಾರದ ಸೌಂದರ್ಯ ಮತ್ತು ಆಕೆಯ ಕಲಾ ಪ್ರತಿಭೆಯನ್ನು ಕಂಡು ಸಾಮಾಜಿಕ ಮಾಧ್ಯಮ ಬಳಕೆದಾರರು ಮಂತ್ರಮುಗ್ಧರಾಗಿದ್ದಾರೆ ಮತ್ತು ಲೆಕ್ಕವಿಲ್ಲದಷ್ಟು ಪ್ರಂಶಸೆಯ ಪ್ರತಿಕ್ರಿಯೆಗಳ ಸುರಿಮಳೆಯನ್ನು ಸುರಿಸಿದ್ದಾರೆ.

ಟ್ವಿಟ್ಟರ್ ನಲ್ಲಿ ಹರಿದುಬಂದ ಕಾಮೆಂಟ್ ಗಳು
“ಅದು ಅದ್ಭುತವಾಗಿದೆ ! ಎಂತಹಾ ಒಂದು ಪ್ರತಿಭೆ ! ಅದು ಕೇವಲ ಕೊಳೆಯುತ್ತದೆ ಎಂಬುವುದು ನಾಚಿಗೆಗೇಡು” ಎಂದು ಒಬ್ಬ ಟ್ವಿಟ್ಟರ್ ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: Eating Job: ತಿನ್ನೋದೇ ಇಲ್ಲಿ ಕೆಲಸ! ತಿಂಗಳ ಸಂಬಳ ಭರ್ತಿ 1 ಲಕ್ಷ!

“ಅತ್ಯಂತ ಸುಂದರ ಮತ್ತು ಈ ಅನನ್ಯ ವಸ್ತು ಎಷ್ಟೇ ಅಲ್ಪಕಾಲಿಕವಾಗಿರಲಿ ಮತ್ತು ತಾತ್ಕಾಲಿಕವಾಗಿರಲಿ, ಇದನ್ನು ರಚಿಸಲು ಸಮಯ ಮತ್ತು ಶ್ರಮವನ್ನು ಮೀಸಲಿಟ್ಟದ್ದು ಸಾರ್ಥಕವಾಗಿದೆ. ಈ ವಿಡಿಯೋದ ಸೌಂದರ್ಯ ಮತ್ತು ಉದ್ದೇಶವನ್ನು ಅರ್ಥ ಮಾಡಿಕೊಳ್ಳುಬೇಕಿದ್ದರೆ, ಅದಕ್ಕೂ ಮೊದಲು ಕಲೆ ಸೌಂದರ್ಯ ಮತ್ತು ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ನೀವು ಆಹಾರವಾಗಿಯಷ್ಟೇ ನೋಡುತ್ತಿದ್ದರೆ, ಅದು ಕೂಡ ಪರವಾಗಿಲ್ಲ “ ಎಂದು ಮತ್ತೊಬ್ಬ ನೆಟ್ಟಿಗ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.“ಅದ್ಭುತವಾದ ಪ್ರತಿಭೆ” ಎಂದು ಮತ್ತೊಬ್ಬ ಟ್ವಿಟ್ಟರ್ ಬಳಕೆದಾರ ಪ್ರಶಂಸಿಸಿದ್ದರೆ, “ಓಹ್, ಇದು ಅತ್ಯಂತ ಸುಂದರವಾಗಿದೆ, ನನಗೆ ಸಿಕ್ಕಾಪಟ್ಟೆ ಇಷ್ಟವಾಯಿತು” ಎಂದು ಮತ್ತೊಬ್ಬರು ಹೊಗಳಿದ್ದಾರೆ. “ಅತ್ಯುತ್ತಮ, ಆದರೆ ಇದು ಆಹಾರವನ್ನು ಪೋಲು ಮಾಡಿದಂತೆ ಅಲ್ಲವೇ? “ ಎಂದು ಇನ್ನೊಬ್ಬ ನೆಟ್ಟಿಗ ಪ್ರಶ್ನಿಸಿದ್ದರೆ, “ನಿಜಕ್ಕೂ ವಾವ್, ಆದರೆ ಏಕೆ ಮಾಡಬೇಕಿತ್ತು? “ ಎಂದು ಮತ್ತೊಬ್ಬರು ಕೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯವಾದ ಟ್ಯಾಟೂ
ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಅದ್ಭುತ ವಿಡಿಯೋಗಳು ಸಾವಿರಾರು ಜನರನ್ನು ಆಕರ್ಷಿಸುತ್ತವೆ. ಅಂತವುಗಳಲ್ಲಿ ಟ್ಯಾಟೂ ಕಲೆಯ ಕುರಿತ ವಿಡಿಯೋಗಳು ಕೂಡ ಸೇರಿವೆ. ಕಲಾವಿದರು ತಮ್ಮ ಗ್ರಾಹಕರ ದೇಹದ ಮೇಲೆ ಟ್ಯಾಟೂಗಳನ್ನು ಮಾಡುವ ಸಾಕಷ್ಟು ವಿಡಿಯೋಗಳನ್ನು ಕಾಣಬಹುದು.

ಇದನ್ನೂ ಓದಿ: McDonald: ಕೂಲ್‌ ಡ್ರಿಂಕ್ಸ್ ಕೊಡಿ ಅಂದ್ರೆ ಸತ್ತ ಹಲ್ಲಿಯನ್ನೂ ಸೇರಿಸಿ ಕೊಡೋದಾ? ಈ ವಿಡಿಯೋ ನೋಡಿದ್ರೆ ನೀವು ವ್ಯಾಕ್ ಅಂತೀರಿ!

ಇತ್ತೀಚೆಗೆ, ನಟ ವಿಲ್‍ಸ್ಮಿತ್ ಅವರು ಕಾಮಿಡಿಯನ್ ಕ್ರಿಸ್ ರಾಕ್ ಕೆನ್ನೆಗೆ ಹೊಡೆಯುತ್ತಿರುವ ಚಿತ್ರವುಳ್ಳ ಟ್ಯಾಟೂ ತುಂಬಾ ಜನಪ್ರಿಯವಾಗಿದೆ. ಆಸ್ಕರ್‍ನಲ್ಲಿ ನಡೆದ ಆ ಘಟನೆ ನೆನಪನ್ನು ಸದಾ ಉಳಿಸಿಕೊಳ್ಳುವ ಉದ್ದೇಶದಿಂದ, ದೊಡ್ಡ ದೇಶಗಳಲ್ಲಿ ಬಹಳಷ್ಟು ಮಂದಿ ಆ ಟ್ಯಾಟೂವನ್ನು ಹಾಕಿಸಿಕೊಳ್ಳಲು, ಟ್ಯಾಟೂ ಸ್ಟೂಡಿಯೋಗಳಿಗೆ ಮುಗಿ ಬೀಳುತ್ತಿದ್ದಾರಂತೆ.
Published by:Ashwini Prabhu
First published: