ಕೆಲವು ಜನರು ತಮ್ಮ ಮನೆಯಲ್ಲಿ (Home) ಸಾಕಿಕೊಂಡಿರುವ ನಾಯಿಗಳನ್ನು (Pet Dog) ಮತ್ತು ಬೆಕ್ಕುಗಳನ್ನು ಅವರ ಮನೆಯ ಮಕ್ಕಳಂತೆ ನೋಡಿಕೊಳ್ಳುತ್ತಾ ಇರುವುದನ್ನು ನಾವು ನೋಡಿದ್ದೇವೆ. ಸಾಕುಪ್ರಾಣಿಗಳನ್ನು ತುಂಬಾನೇ ಚೆನ್ನಾಗಿ ಆರೈಕೆ ಮಾಡುತ್ತಾರೆ. ಹೇಗೆ ಎಂದರೆ ಅವುಗಳಿಗೆ ತಮ್ಮ ಜೊತೆಯಲ್ಲಿಯೇ ಇರಲು ಸ್ಥಳಾವಕಾಶ ಮಾಡಿಕೊಡುತ್ತಾರೆ ಮತ್ತು ಅವುಗಳಿಗೆ ತಿನ್ನಲು ಒಳ್ಳೆಯ ಆಹಾರವನ್ನು ಸಹ ಒದಗಿಸುತ್ತಾರೆ, ಅವುಗಳನ್ನು ಹೊರಗಡೆ ಸುತ್ತಾಡಲು ಸಹ ಕರೆದುಕೊಂಡು ಹೋಗುತ್ತಾರೆ.
ಒಟ್ಟಿನಲ್ಲಿ ಈ ಸಾಕುಪ್ರಾಣಿಗಳು ತಮ್ಮ ಕುಟುಂಬದ ಒಂದು ಭಾಗವೆಂಬಂತೆ ನೋಡಿಕೊಳ್ಳುತ್ತಾರೆ. ಈ ಹಿಂದೆಯೂ ಸಹ ನಾವು ಒಂದು ಸುದ್ದಿಯಲ್ಲಿ ಪಕ್ಷಿಗಳಿಗಾಗಿ ಯಾರೋ ಒಬ್ಬರು ದೊಡ್ಡದಾದ ಗೂಡುಗಳಿರುವ ಮನೆಯನ್ನು ಕಟ್ಟಿಸಿದ್ದನ್ನು ನಾವು ನೋಡಿದ್ದೆವು. ಅದೇ ರೀತಿ ಇಲ್ಲಿಯೂ ಸಹ ತಾವು ಮನೆಯಲ್ಲಿ ಸಾಕಿಕೊಂಡಿರುವ ನಾಯಿಗೆ ಇರಲು ಒಂದು ಮಲಗುವ ಕೋಣೆಯನ್ನು ಮಾಡಿಕೊಟ್ಟಿದ್ದಾರೆ.
ನಾಯಿಗಾಗಿ ಒಂದು ಕೋಣೆ
ತಾವು ಸಾಕಿರುವ ನಾಯಿ ತಮ್ಮ ಮನೆಯಲ್ಲಿ ಆರಾಮದಾಯಕವಾಗಿ ಮತ್ತು ಸಂತೋಷವಾಗಿ ಮಲಗಲು ಒಂದು ಕೋಣೆಯನ್ನು ಮಾಡಿಕೊಟ್ಟಿದ್ದು, ಆ ಕೋಣೆಯು ಹೇಗಿದೆ ಎನ್ನುವುದನ್ನು ನೀವು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಇವರು ಸಾಕು ನಾಯಿಯ ಸಲುವಾಗಿ ಪ್ರತ್ಯೇಕವಾಗಿ ಯಾವುದೇ ಕೋಣೆಯನ್ನು ಮಾಡಿ ಕೊಟ್ಟಿಲ್ಲ, ಉಪಾಯ ಮಾಡಿ ತಮ್ಮ ಮನೆಯಲ್ಲಿರುವ ಮೆಟ್ಟಿಲುಗಳ ಕೆಳಗೆ ಉಳಿದ ಜಾಗವನ್ನು ಸದುಪಯೋಗ ಪಡಿಸಿಕೊಂಡು ಮುದ್ದಾದ ಪ್ರಾಣಿಗಾಗಿ ಒಂದು ಚಿಕ್ಕ ಕೋಣೆಯನ್ನು ನಿರ್ಮಿಸಿದ್ದಾರೆ. ಈ ವಿಡಿಯೋ ಈಗ ಅನೇಕ ಜನರ ಹೃದಯವನ್ನು ಗೆದ್ದಿದೆ, ಇದು ನಿಮ್ಮ ಮೇಲೂ ಅದೇ ಪರಿಣಾಮ ಬೀರುವ ಸಾಧ್ಯತೆಯಿದೆ.
ವಿಡಿಯೋ ವೈರಲ್
"ಮೆಟ್ಟಿಲುಗಳ ಕೆಳಗೆ ನಾಯಿಗಾಗಿ ಆಕೆ ಮಲಗುವ ಕೋಣೆಯನ್ನು ನಿರ್ಮಿಸಿದರು" ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮವಾದ ರೆಡ್ಡಿಟ್ನಲ್ಲಿ ಪೋಸ್ಟ್ ಮಾಡಲಾಗಿದೆ. ಮಹಿಳೆ ತನ್ನ ಮನೆಯ ಸಾಕು ನಾಯಿಗೆ ಕೋಣೆಯನ್ನು ಹೇಗೆ ಮಾಡಿಕೊಟ್ಟರು ಎಂಬುದನ್ನು ಈ ವಿಡಿಯೋದ ಪ್ರಾರಂಭದಲ್ಲಿ ನೋಡುತ್ತೇವೆ.
ಇದನ್ನೂ ಓದಿ:
Viral News: ಮೀನಿನ ರೀತಿ ಕಾಣುತ್ತೆ, ಆದ್ರೆ ಇದು ಮೀನಲ್ಲ! ಏನಿದು ಗೊತ್ತಾ ವಿಚಿತ್ರ ಪ್ರಾಣಿ?
ನಾಯಿಯ ರೂಂನಲ್ಲೂ ಡೆಕೊರೇಷನ್
ನಾಯಿ ಆರಾಮದಾಯಕವಾಗಿರುವಂತೆ ನಿರ್ಮಿಸಿದರು ಮತ್ತು ಆ ಪುಟ್ಟ ಕೋಣೆಯ ಚಿಕ್ಕ ಪುಟ್ಟ ಗೋಡೆಗಳನ್ನು ಹೇಗೆ ಚಿತ್ರಗಳಿರುವ ಪೋಸ್ಟರ್ನಿಂದ ವಿನ್ಯಾಸಗೊಳಿಸಿದರು ಎನ್ನುವುದನ್ನು ಇದರಲ್ಲಿ ನೋಡಬಹುದಾಗಿದೆ. ಈ ವಿಡಿಯೋ ನೋಡಿದರೆ ನಿಮಗೆ ಖುದ್ದು ಆ ನಾಯಿಯ ಮುದ್ದಾದ ಕೋಣೆಯಲ್ಲಿ ಒಂದು ರೌಂಡ್ ಹೋಗಿ ಬಂದಂತೆ ಅನ್ನಿಸುವುದಂತೂ ಗ್ಯಾರಂಟಿ.
43,000 ಕ್ಕೂ ಹೆಚ್ಚು ಅಪ್ ವೋಟ್
ಈ 51 ಸೆಕೆಂಡಿನ ಕ್ಲಿಪ್ ತಮ್ಮ ಹೊಸ ಕೋಣೆಯಲ್ಲಿ ಮುದ್ದಾದ ನಾಯಿಯ ಜೊತೆ ಕುಳಿತುಕೊಳ್ಳುವುದರೊಂದಿಗೆ ಕೊನೆಗೊಳ್ಳುತ್ತದೆ. ಆ ನಾಯಿಗೆ ಕೊನೆಯಲ್ಲಿ ಕುಳಿತುಕೊಳ್ಳಲು ಒಂದು ಮೆತ್ತನೆ ದಿಂಬಿನ ಹಾಸಿಗೆಯನ್ನು ಸಹ ಅಲ್ಲಿ ಇರಿಸಲಾಗಿದೆ. ಈ ವಿಡಿಯೋವನ್ನು ಸುಮಾರು ಒಂದು ದಿನದ ಹಿಂದೆ ಪೋಸ್ಟ್ ಮಾಡಲಾಗಿದೆ.
ಇದನ್ನೂ ಓದಿ: Viral News: ಕೂದಲಿಗಾಗಿ 40 ಸಾವಿರ ಖರ್ಚು ಮಾಡಿ ಗಳಗಳನೇ ಅತ್ತ ಚೆಲುವೆ: ನೆಟ್ಟಿಗರು ಸಾಂತ್ವಾನ ಹೇಳಿದ್ದು ಹೇಗೆ ಗೊತ್ತಾ?
ಪೋಸ್ಟ್ ಮಾಡಿದಾಗಿನಿಂದ, ಈ ಕ್ಲಿಪ್ 43,000 ಕ್ಕೂ ಹೆಚ್ಚು ಅಪ್ ವೋಟ್ಗಳನ್ನು ಸಂಗ್ರಹಿಸಿದೆ ಮತ್ತು ಆ ಸಂಖ್ಯೆ ಇನ್ನೂ ಹೆಚ್ಚುತ್ತಲೇ ಇವೆ. ಈ ವಿಡಿಯೋ ನೋಡಿ ನೆಟ್ಟಿಗರು ವಿವಿಧ ಕಾಮೆಂಟ್ಗಳನ್ನು ಪೋಸ್ಟ್ ಮಾಡಿದ್ದಾರೆ ಎಂದು ಹೇಳಬಹುದು. ಇದುವರೆಗೆ ಒಂದು ಸಾವಿರಕ್ಕಿಂತಲೂ ಹೆಚ್ಚು ಕಾಮೆಂಟ್ಗಳು ಇದಕ್ಕೆ ಲಭಿಸಿವೆ ಎಂದು ಹೇಳಬಹುದು.
ಕೋಣೆ ಮೆಚ್ಚಿಕೊಂಡ ಜನ
"ನನ್ನ ನಾಯಿ ಈ ರೀತಿ ಒಂದು ಕೋಣೆಯನ್ನು ಮಾಡಿಕೊಟ್ಟರೆ, ಅದನ್ನು ನಿರ್ಲಕ್ಷಿಸಿ ನನ್ನ ಸಾಕ್ಸ್ ಮೇಲೆ ಬಂದು ಮಲಗುತ್ತದೆ, ಏಕೆಂದರೆ ನಾಯಿಗಳು ತುಂಬಾನೇ ವಿಚಿತ್ರವಾಗಿ ಇರುತ್ತವೆ" ಎಂದು ರೆಡ್ಡಿಟ್ ಬಳಕೆದಾರರೊಬ್ಬರು ಪ್ರತಿಕ್ರಿಯೆಯನ್ನು ಹಂಚಿ ಕೊಂಡಿದ್ದಾರೆ. "ಇದಕ್ಕೆ ಎಷ್ಟು ಬಾಡಿಗೆ ನೀಡಬೇಕು..? ನನ್ನ ಸ್ಥಳಕ್ಕಿಂತ ಸುಂದರವಾಗಿ ಕಾಣುತ್ತಿದೆ ಈ ಕೋಣೆ" ಎಂದು ಇನ್ನೊಬ್ಬರು ಪೋಸ್ಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ