ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸುವಾಗ ನಮ್ಮ ಮಕ್ಕಳಿಗೆ ಎದೆಹಾಲು ಉಣಿಸಲು ತೊಂದರೆ ಆಗಬಹುದೆಂದು ಹಾಲನ್ನು ಬಾಟಲಿಯಲ್ಲಿ ತುಂಬಿಸಿಕೊಂಡು ಹೋಗುವುದುಂಟು. ಆದರೆ ಇಲ್ಲೊಂದು ವಿಚಿತ್ರ ಘಟನೆಯಲ್ಲಿ ವಿಮಾನದಲ್ಲಿದ್ದ(Plane) ಮಹಿಳೆಯೊಬ್ಬಳು ಎಲ್ಲಾ ಸಹ ಪ್ರಯಾಣಿಕರ ಮತ್ತು ವಿಮಾನ ಸಿಬ್ಬಂದಿ ಮುಂದೆಯೇ ತನ್ನ ಸಾಕು ಬೆಕ್ಕಿಗೆ (Cat)ಹಸಿವಾದಾಗ ಎದೆಹಾಲು (Breastfeeding)ಉಣಿಸಿದ್ದಾಳೆ. ಸುದ್ದಿ ಮಾಧ್ಯಮದ ಪೋರ್ಟಲ್ ಪ್ರಕಾರ, ಅಪರಿಚಿತ ಮಹಿಳೆಯೊಬ್ಬಳು ನ್ಯೂಯಾರ್ಕ್ನ (Newyork)ಸಿರಕ್ಯೂಸ್ನಿಂದ ಜಾರ್ಜಿಯಾದ (Georgia )ಅಟ್ಲಾಂಟಾಗೆ ಡೆಲ್ಟಾ ಏರ್ಲೈನ್ಸ್ (Delta Airlines flight )ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ ತನ್ನ ಬೆಕ್ಕಿಗೆ ಹಾಲುಣಿಸಲು ಪ್ರಾರಂಭಿಸಿದಳು ಎಂದು ಹೇಳಲಾಗಿದೆ. ಈ ಘಟನೆಯನ್ನು ನೋಡಿದ ಸಹ ಪ್ರಯಾಣಿಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಕ್ಯಾರಿಯರ್ನಲ್ಲಿ ಹಾಕಲು ಒಪ್ಪಲಿಲ್ಲ
ವಿಮಾನದಲ್ಲಿ ನಡೆಯುತ್ತಿರುವ ಘಟನೆಯನ್ನು ‘ಏರ್ಕ್ರಾಫ್ಟ್ ಕಮ್ಯುನಿಕೇಷನ್ಸ್ ಅಡ್ರೆಸ್ಸಿಂಗ್ ಮತ್ತು ರಿಪೋರ್ಟಿಂಗ್ ಸಿಸ್ಟಮ್’ ಬಳಸಿ ವಿಮಾನ ಸಿಬ್ಬಂದಿಯು ವಿಮಾನ ನಿಲ್ದಾಣದಲ್ಲಿರುವ ಕಂಟ್ರೋಲ್ ರೂಂಗೆ ರವಾನಿಸಿದ ಸಂದೇಶದ ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: Breastfeeding: ಎದೆಹಾಲು ನೀಡಿದ್ರೆ ಮಗುವಿಗೆ ಕ್ಯಾನ್ಸರ್ನಿಂದ ರಕ್ಷಣೆ ಸಿಗುತ್ತೆ, ಹಾಲೂಡಿಸುವ ಸರಿಯಾದ ವಿಧಾನ ಏನು? ವೈದ್ಯರು ತಿಳಿಸಿದ್ದಾರೆ..
"ಪ್ರಯಾಣಿಕರೊಬ್ಬರು ಸೀಟ್ ಸಂಖ್ಯೆ 13ಎ ಯಲ್ಲಿ 'ತಮ್ಮ ಸಾಕು ಬೆಕ್ಕಿಗೆ ಎದೆಹಾಲು ಉಣಿಸುತ್ತಿದ್ದಾರೆ ಮತ್ತು ವಿಮಾನ ಸಿಬ್ಬಂದಿ ವಿನಂತಿಸಿಕೊಂಡಾಗ ಆ ಸಾಕು ಬೆಕ್ಕನ್ನು ಕ್ಯಾರಿಯರ್ನಲ್ಲಿ ಹಾಕಲು ಒಪ್ಪಲಿಲ್ಲ' ಎಂದು ಸಂದೇಶದಲ್ಲಿ ವರದಿ ಮಾಡಲಾಗಿದೆ.
ವಿಮಾನವು ಲ್ಯಾಂಡಿಂಗ್ ಆದ ನಂತರ ವಿಮಾನಯಾನದ "ರೆಡ್ ಕೋಟ್" ತಂಡವು ಪರಿಸ್ಥಿತಿಯನ್ನು ಪರಿಹರಿಸಬೇಕೆಂದು ಸಂದೇಶದಲ್ಲಿ ವಿನಂತಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಡೆಲ್ಟಾದ ರೆಡ್ ಕೋಟ್ ತಂಡವು ಅವರ ವಿಮಾನ ನಿಲ್ದಾಣ ಗ್ರಾಹಕ ಸೇವಾ ತಜ್ಞರಾಗಿದ್ದು, ಅವರು ಗ್ರಾಹಕರ ಸಮಸ್ಯೆಗಳನ್ನು ನಿರ್ವಹಿಸಲು ವಿಶೇಷವಾಗಿ ತರಬೇತಿ ಪಡೆದಿರುತ್ತಾರೆ.
ನವೆಂಬರ್ 13ರಂದು ಹಂಚಿಕೊಳ್ಳಲಾದ ಟಿಕ್ಟಾಕ್ ವಿಡಿಯೋದಲ್ಲಿ ವಿಮಾನ ಪರಿಚಾರಕ ಐನ್ಸ್ಲೇ ಎಲಿಜಬೆತ್ ಕೂಡ ಈ ಘಟನೆಯ ಬಗ್ಗೆ ಮಾತನಾಡಿದ್ದಾರೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.
ಕಂಬಳಿಯಲ್ಲಿ ಮುಚ್ಚಿಕೊಂಡಿದ್ದರು
ಐನ್ಸ್ಲೇ ಎಲಿಜಬೆತ್ ತಾವು ಹಂಚಿಕೊಂಡ ವಿಡಿಯೋದಲ್ಲಿ "ಈ ಮಹಿಳೆಯು ಬೆಕ್ಕನ್ನು ತನ್ನ ಕಂಬಳಿಯಲ್ಲಿ ಮುಚ್ಚಿಕೊಂಡು ಬಂದಳು. ಅದು ಮಗುವಿನಂತೆ ನಮಗೆ ಕಾಣುತ್ತಿತ್ತು" ಎಂದು ಹೇಳಿದರು. ಅವಳ ಶರ್ಟ್ ಮೇಲಕ್ಕೆ ಇತ್ತು ಮತ್ತು ಅವಳು ಬೆಕ್ಕನ್ನು ಕ್ಯಾರಿಯರ್ನಲ್ಲಿ ಹಾಕಲು ಪ್ರಯತ್ನಿಸಿದರೂ ಸಹ ಬೆಕ್ಕು ಜೋರಾಗಿ ಕಿರುಚುತ್ತಿತ್ತು" ಎಂದು ಹೇಳಿದರು. ಅಲ್ಲೇ ಇರುವ ಭದ್ರತೆ ಸಿಬ್ಬಂದಿಯವರು ಆ ಮಹಿಳೆ ಕುಳಿತಿರುವ ಆಸನದ ಕಡೆಗೆ ಬಂದು ಆಕೆಯು ತನ್ನ ಬೆಕ್ಕಿಗೆ ಎದೆಹಾಲು ಕುಡಿಸುವುದನ್ನು ನಿಲ್ಲಿಸಲು ಕೇಳಿಕೊಂಡರೂ ಸಹ ಅದನ್ನು ನಿಲ್ಲಿಸಲಿಲ್ಲ” ಎಂದು ಅವರು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ವೈರಲ್
ಘಟನೆಯ ಹೆಚ್ಚಿನ ವಿವರಗಳನ್ನು ವಾಯುಯಾನ ಉತ್ಸಾಹಿಯೊಬ್ಬರು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ಘಟನೆಯನ್ನು ನೋಡಿದ ಸಹ ಪ್ರಯಾಣಿಕರೊಂದಿಗೆ ಮಾತನಾಡಿದರು. ಅವರ ಪ್ರಕಾರ, ಕ್ಯಾಬಿನ್ ಸಿಬ್ಬಂದಿ ಅವರನ್ನು ನಿಲ್ಲಿಸಲು ಕೇಳಿಕೊಂಡರೂ ಮಹಿಳೆ ತನ್ನ ಬೆಕ್ಕಿಗೆ ಹಾಲುಣಿಸುವುದನ್ನು ಹಾಗೆಯೇ ಮುಂದುವರೆಸಿದರು ಎಂದು ಹೇಳಿದರು. ಡೆಲ್ಟಾ ಏರ್ಲೈನ್ಸ್ ಈ ಘಟನೆಯ ಬಗ್ಗೆ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ಘಟನೆ ಭಾರಿ ಸುದ್ದಿ ಮಾಡಿದ್ದು, ಅನೇಕರು ವಿಚಾರ ಕೇಳಿ ನಗಾಡುತ್ತಿದ್ದಾರೆ. ಅಲ್ಲದೇ ವಿಚಾರವನ್ನು ಶೇರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ.
ಇದನ್ನೂ ಓದಿ: Breast Feeding: ಹಾಲುಣಿಸುವ ಮಹಿಳೆಯರು ಯಾವುದೇ ಕಾರಣಕ್ಕೂ ಈ ಆಹಾರಗಳನ್ನು ತಿನ್ನಬಾರದು
ವಿಮಾನ ಹಾರಟದ ವೇಳೆ ಇಂತಹ ಅನೇಕ ವಿಲಕ್ಷಣ ಘಟನೆಗಳು ನಡೆಯುತ್ತಿರುತ್ತವೆ, ಇಂತಹ ಪ್ರಯಾಣಿಕರು ಮಾಡುವ ಕೆಲ ವಿಚಿತ್ರ ವರ್ತನೆಗಳನ್ನು ಕಂಡು ಸಿಬ್ಬಂದಿ ಸುಸ್ತು ಆಗಿದ್ದಾರೆ, ವಿಮಾನದಲ್ಲಿ ಏನೇ ಆದರೂ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸೌಂಡ್ ಮಾಡುತ್ತವೆ, ರಕ್ಷಣ ಸಿಬ್ಬಂದಿಗಳು ಇಂತಹ ಘಟನೆಗಳಿಂದ ಪೇಚಿಗೆ ಸಿಲುಕುವುದುಂಟು, ಇನ್ನು ಕೆಲ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದರೇ, ಇನ್ನು ಕೆಲವರು ವಿಡಿಯೋ ಮಾಡಿ ಶೇರ್ ಮಾಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ