ಕಂಡಕಂಡಲ್ಲಿ ಹಾವಿನಿಂದ ಕಚ್ಚಿಸಿಕೊಳ್ಳುತ್ತಿರುವ ದಾವಣಗೆರೆಯ ಮಹಿಳೆ

news18
Updated:July 2, 2018, 4:49 PM IST
ಕಂಡಕಂಡಲ್ಲಿ ಹಾವಿನಿಂದ ಕಚ್ಚಿಸಿಕೊಳ್ಳುತ್ತಿರುವ ದಾವಣಗೆರೆಯ ಮಹಿಳೆ
news18
Updated: July 2, 2018, 4:49 PM IST
ನ್ಯೂಸ್​ 18 ಕನ್ನಡ 

ದಾವಣಗೆರೆ: ದಾವಣಗೆರೆ ಜಿಲ್ಲೆ ಹರಿಹರದಲ್ಲಿ ಹಾವೊಂದು ಮಹಿಳೆಯೊಬ್ಬರಿಗೆ ಕಳೆದ ನಾಲ್ಕು ದಿನಗಳಲ್ಲಿ ಮೂರು ಬಾರಿ ಕಚ್ಚಿದ ಘಟನೆ ವರದಿಯಾಗಿದೆ.

ಹರಿಹರ ನಗರದ ಜೆ ಸಿ 5 ನೇ ಬಡಾವಣೆ,12 ನೇ ಕ್ರಾಸ್​ನ ನಿವಾಸಿ ಖಮರ್ತಾಜ್( 32)ಗೆ ಹಾವೊಂದು ಕಳೆದ ನಾಲ್ಕು ದಿನಗಳಿಂದ ಮೂರು ಬಾರಿ ಕಚ್ಚಿದೆ. ಮೊದಲ ಬಾರಿ ಮನೆಯಲ್ಲೇ ಹಾವು ಕಚ್ಚಿದ್ದು ಈ ವೇಳೆ ದಾವಣಗೆರೆ ಹೈಟೆಕ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು.ಬಳಿಕ ಮತ್ತೊಮ್ಮೆ ಹಾವು ಕಚ್ಚಿದ ಸಂದರ್ಭದಲ್ಲಿ ಹರಿಹರ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವೇಳೆ ಆಸ್ಪತ್ರೆ ಕ್ಯಾಂಟಿನ್ ಬಳಿ ಮತ್ತೆ ಹಾವು ಕಚ್ಚಿದೆ ಎಂದು ಕಚ್ಚಿದೆ ಖಮರ್ತಾಜ್​ ಹೇಳಿದ್ದಾರೆ.

ಯಾವುದೋ ಹಾವಿನ ದೋಷ ಇರಬಹುದೆಂದು ಹುತ್ತಕ್ಕೆ ಹಾಲೆರೆಯಬೇಕು, ಸುಬ್ರಹ್ಮಣ್ಯಕ್ಕೆ ಹೋಗಬೇಕು ಅಂದುಕೊಂಡ ಮೇಲೂ ಹಾವು ಕಚ್ಚಿದೆ. ಇದೇ ಆತಂಕದಲ್ಲಿ ಖಮರ್ತಾಜ್​ ಕುಟುಂಬ ಸುಬ್ರಹ್ಮಣ್ಯಕ್ಕೆ ತೆರಳಿ ಸೇವೆ ಸಲ್ಲಿಸಿದ್ದಾರೆ.
First published:July 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...