• Home
 • »
 • News
 • »
 • trend
 • »
 • Shocking: ತಾಯಿಯನ್ನು ಕೊಲೆ ಮಾಡಿದವನನ್ನೇ ಬೆಸ್ಟ್​​ ಫ್ರೆಂಡ್​ ಮಾಡಿಕೊಂಡ ಯುವತಿ! ಇದೆಂಥಾ ಕಥೆ

Shocking: ತಾಯಿಯನ್ನು ಕೊಲೆ ಮಾಡಿದವನನ್ನೇ ಬೆಸ್ಟ್​​ ಫ್ರೆಂಡ್​ ಮಾಡಿಕೊಂಡ ಯುವತಿ! ಇದೆಂಥಾ ಕಥೆ

ಮರಿಯಾ ಲ್ಯುಕಾಸ್- ಜೇಸನ್ ಕ್ಲಾರ್ಕ್

ಮರಿಯಾ ಲ್ಯುಕಾಸ್- ಜೇಸನ್ ಕ್ಲಾರ್ಕ್

Viral Story: ಮರಿಯಾ 15 ತಿಂಗಳ ಮಗುವಾಗಿದ್ದಳು. ಆಗ ವ್ಯಕ್ತಿಯೋರ್ವ ಮರಿಯಾ ತಾಯಿಯನ್ನು ಹತ್ಯೆ ಮಾಡುತ್ತಾನೆ. ಇದರಿಂದಾಗಿ 15 ವರ್ಷದ ಪುಟ್ಟ ಮಗು ಮರಿಯಾ ತಾಯಿಯ ಪ್ರೀತಿಯಿಂದ ವಂಚಿತಳಾಗುತ್ತಾಳೆ.ಆದರೆ ಮರಿಯಾ ದೊಡ್ಡವಳಾದ ನಂತರ ತಾಯಿಯನ್ನು ಕೊಲೆ ಮಾಡಿದ್ದ ಕೊಲೆಗಾರನನ್ನು ಸ್ನೇಹಿತನನ್ನಾಗಿ ಸ್ವೀಕರಿಸಿಕೊಂಡಿದ್ದಾಳೆ. ಮಾತ್ರವಲ್ಲದೆ ಆ ವ್ಯಕ್ತಿಯನ್ನು ಕ್ಷಮಿಸಿದ್ದಾಳೆ.

ಮುಂದೆ ಓದಿ ...
 • Share this:

  ಕೆಲವರಂತೂ ವ್ಯಕ್ತಿ ಸ್ವಭಾವವನ್ನು (The nature of the person) ಅರಿತುಕೊಂಡು ಆತನ ಸ್ನೇಹ (Friendship) ಮಾಡುತ್ತಾರೆ. ಇನ್ನು ಕೆಲವರು ಸರಿಯಾಗಿ ಗಮನಿಸಿ ಆತನನ್ನು ತಿಳಿದುಕೊಂಡು ನಂತರ ಫ್ರೆಂಡ್​ಶಿಪ್​ ಬೆಳೆಸುತ್ತಾರೆ. ಆದರೆ ಇಲ್ಲೊಬ್ಬಳು ಯುವತಿ ಕೊಲೆಗಾರನನ್ನೇ (Killer) ಬೆಸ್ಟ್​​ ಫ್ರೆಂಡ್ (Best Friend)​ ಆಗಿ ಸ್ವೀಕರಿಸಿದ್ದಾಳೆ. ಅಚ್ಚರಿಯ ವಿಚಾರವೆಂದರೆ, ಆ ವ್ಯಕ್ತಿ​ ಯುವತಿಯ ತಾಯಿಯನ್ನೇ ಕೊಲೆ ಮಾಡಿದ್ದ ಎಂಬುದು ಸತ್ಯ ಸಂಗತಿ.


  ಅಮೆರಿಕದ ಟೆಕ್ಸಾಸ್‌ನ ಈ ಘಟನೆ ವೈರಲ್​ ಆಗಿದೆ. ಮರಿಯಾ ಲ್ಯುಕಾಸ್​ ಕೇವಲ 15 ತಿಂಗಳ ಮಗುವಾಗಿದ್ದಾಗ, ಕೊಲೆಗಾರ ಆಕೆಯ ತಾಯಿಯನ್ನು ಹತ್ಯೆ ಮಾಡಿದ್ದ. ಆದರೆ ಮರಿಯಾ ಬೆಳೆದು ನಿಂತಾಗ ಕೊಲೆಗಾರ ​ಜೇಸನ್ ಕ್ಲಾರ್ಕ್​ ಮಾಡಿದ್ದ ನಿಜಾಂಶ ತಿಳಿದುಕೊಂಡಿದ್ದಾಳೆ. ಆದರೂ ಆತನಿಗೆ ಏನೂ ಮಾಡದೇ ತನ್ನ ಬೆಸ್ಟ್​​ ಫ್ರೆಂಡ್​ ಆಗಿ ಮಾಡಿಕೊಂಡಿದ್ದಾಳೆ.


  ಮರಿಯಾ 15 ತಿಂಗಳ ಮಗುವಾಗಿದ್ದಳು. ಆಗ ವ್ಯಕ್ತಿಯೋರ್ವ ಮರಿಯಾ ತಾಯಿಯನ್ನು ಹತ್ಯೆ ಮಾಡುತ್ತಾನೆ. ಇದರಿಂದಾಗಿ 15 ವರ್ಷದ ಪುಟ್ಟ ಮಗು ಮರಿಯಾ ತಾಯಿಯ ಪ್ರೀತಿಯಿಂದ ವಂಚಿತಳಾಗುತ್ತಾಳೆ. ಆದರೆ ಮರಿಯಾ ದೊಡ್ಡವಳಾದ ನಂತರ ತಾಯಿಯನ್ನು ಕೊಲೆ ಮಾಡಿದ್ದ ಕೊಲೆಗಾರನನ್ನು ಸ್ನೇಹಿತನನ್ನಾಗಿ ಸ್ವೀಕರಿಸಿಕೊಂಡಿದ್ದಾಳೆ. ಮಾತ್ರವಲ್ಲದೆ ಆ ವ್ಯಕ್ತಿಯನ್ನು ಕ್ಷಮಿಸಿದ್ದಾಳೆ.


  ಬಹಳ ದಿನಗಳಿಂದ ತಾಯಿಯ ಸಾವಿಗೆ ಕಾರಣ ತಿಳಿಯಲಿಲ್ಲ.


  ಸಂದರ್ಶನದಲ್ಲಿ ಮಾತನಾಡಿದ ಮರಿಯಾ, 7-8 ವರ್ಷಗಳಿಂದ ತಾಯಿ ಎಲ್ಲಿದ್ದಾರೆ ಎಂದು ನನಗೆ ತಿಳಿದಿರಲಿಲ್ಲ. ತಂದೆ ಹಿಂಸಾಚಾರದ ಆರೋಪದಲ್ಲಿ ಜೈಲಿಗೆ ಹೋದ ನಂತರ, ನಾನು ನನ್ನ ತಂದೆಯ ಸಹೋದರ ಮತ್ತು ಅತ್ತಿಗೆಯೊಂದಿಗೆ ವಾಸಿಸಲು ಪ್ರಾರಂಭಿಸಿದೆ. ಬಳಿಕ ನನ್ನ ತಾಯಿಯನ್ನು ಕೊಲೆ ಮಾಡಲಾಗಿದೆ ಎಂದು ಗೊತ್ತಾಯಿತು ಎಂದು ಹೇಳಿದ್ದಾಳೆ.


  ಇದನ್ನು ಓದಿ: Viral Story: ಗರ್ಭಿಣಿ ಆಗೋಕೂ ಮುಂಚೆಯೇ ಮುಂದೆ ಹುಟ್ಟೋ ಮಗುಗಾಗಿ 3 ಲಕ್ಷ ರೂ ಬಟ್ಟೆ ಖರೀದಿಸಿದ ಮಹಿಳೆ!


  ಮಾರಿಯಾ ದೊಡ್ಡವಳಾದ ನಂತರ ಗೆಳೆಯನೊಬ್ಬನ ಪ್ರೀತಿಗೆ ಬಿದ್ದಳು. ಆತನವೊಂದಿಗಿನ ಸಂಬಂಧದಲ್ಲಿ ಗರ್ಭಿಣಿಯಾದಳು. ಆದರೆ ಅವನನ್ನು ತೊರೆದ ನಂತರ ಅವಳು ಕೋಡಿ ಎಂಬ ವ್ಯಕ್ತಿಯನ್ನು ಮದುವೆಯಾಗುತ್ತಾಳೆ ಮತ್ತು ಈಗ ಆಕೆಗೆ ಒಟ್ಟು 3 ಮಕ್ಕಳಿದ್ದಾರೆ. ಈ ವೇಳೆ ತಾಯಿಯನ್ನು ಕೊಂದವನ ಹೆಸರು ಜೇಸನ್ ಕ್ಲಾರ್ಕ್ ಎಂದು ಮಾರಿಯಾಗೆ ತಿಳಿಯಿತು. ಮಾರಿಯಾಳ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಉದ್ಭವಿಸುತ್ತಿದ್ದವು ಆದರೆ ಅವಳು ಎಂದಿಗೂ ಉತ್ತರಗಳನ್ನು ಹುಡುಕಲು ಪ್ರಯತ್ನಿಸಲಿಲ್ಲ.


  ಕೊಲೆಗಾರನನ್ನು ಕ್ಷಮಿಸಲು ಕಾರಣವೇನು?


  2015 ರಲ್ಲಿ, ಬಾಯಿಯಲ್ಲಿ ಸೋಂಕಿನಿಂದಾಗಿ ಮರಿಯಾ ಅವರನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು ಮತ್ತು ಅವರು ಕೋಮಾಕ್ಕೆ ಹೋದ ಸಂದರ್ಭವಿತ್ತು. ಆಕೆಯ ಸ್ಥಿತಿ ಹದಗೆಟ್ಟಿತು ಮತ್ತು ಹೃದಯ ಬಡಿತದಲ್ಲೂ ವ್ಯತ್ಯಾಸವಿತ್ತು ಆದರೆ ವೈದ್ಯರು ಆಕೆಯ ಜೀವವನ್ನು ಉಳಿಸಿದರು. ಮರಿಯಾ ಬದುಕಿಬಂದ ನಂತರ, ಜೀವನವು ತುಂಬಾ ಚಿಕ್ಕದಾಗಿದೆ ಎಂದು ಅವರು ಭಾವಿಸಿದರು. ಒಬ್ಬ ವ್ಯಕ್ತಿಯು ಅದರಲ್ಲಿ ಯಾರ ಬಗ್ಗೆಯೂ ಕೋಪ ಅಥವಾ ಅಸಮಾಧಾನದಿಂದ ಬದುಕಬಾರದು ಎಂದು ಅಂದುಕೊಂಡರು. ನಂತರ ಕೊಲೆಗಾರ ಜೇಸನ್‌ಗೆ ಪತ್ರ ಬರೆದು ಆತನ್ನು ಕ್ಷಮಿಸಿದರು.


  ಇದನ್ನು ಓದಿ: Mia Khalifa ಇನ್ನಿಲ್ಲ? ಆಘಾತಕ್ಕೊಳಗಾಗಿದ್ದಾರೆ ಅಭಿಮಾನಿಗಳು, ಮಾಜಿ ನೀಲಿ ಸುಂದರಿಗೆ ಏನಾಯ್ತು?


  ಜೇಸನ್ 23 ವರ್ಷಗಳ ನಂತರ ಶಿಕ್ಷೆ ಅನುಭವಿಸಿದ ನಂತರ ಹೊರಬಂದಾಗ, ಅವರು 2016 ರಲ್ಲಿ ಅವರನ್ನು ಭೇಟಿಯಾದರು. ಅವರು ತುಂಬಾ ಹೆದರುತ್ತಿದ್ದರು ಮತ್ತು 50 ವರ್ಷಕ್ಕೆ ಕಾಲಿಟ್ಟಿದ್ದರು. ಅವರು ಅಳುತ್ತಾ ಮಾರಿಯಾಗೆ ಕ್ಷಮೆಯಾಚಿಸಿದರು. ತಾಯಿಯನ್ನು ಏಕೆ ಕೊಂದಿದ್ದೀರಿ ಎಂದು ಮಾರಿಯಾ ಅವರನ್ನು ಕೇಳಿದಾಗ, ಆತ ನಿಮ್ಮ ತಾಯಿ ಮಾದಕ ವ್ಯಸನಿಯಾಗಿದ್ದರು ಮತ್ತು ತಾನು ಡ್ರಗ್ಸ್ ಸರಬರಾಜು ಮಾಡುತ್ತಿದ್ದೆ ಎಂದು ಹೇಳಿದ. ಮಾರಿಯಾಳ ತಾಯಿ ತನ್ನ ಹಣವನ್ನು ಬಹಳ ಸಮಯದಿಂದ ಜೇಸನ್ ಕ್ಲಾರ್ಕ್​ಗೆ ಹಿಂದಿರುಗಿಸಲಿಲ್ಲ. ಹೀಗಿರುವಾಗ ಒಮ್ಮೆ ಇದ್ದಕ್ಕಿದ್ದಂತೆಯೇ ಆಕೆ ಜೇಸನ್​ಗೆ ಕಾಣಿಸಿಕೊಂಡಳು. ಆಗ ಜೇಸನ್ ಡ್ರಗ್ಸ್ ನ ನಶೆಯಲ್ಲಿದ್ದ. ಕೂಡಲೇ ಮಹಿಳೆಯೊಂದಿಗೆ ಜಗಳ ಆರಂಭಿಸಿದ. ಅಮಲಿನಲ್ಲಿ ಮಹಿಳೆಗೆ ಚಾಕುವಿನಿಂದ ಇರಿದಿದ್ದಾನೆ.


  ಈ ವಿಚಾರ ಕೇಳಿ ಮಾರಿಯಾ ಆಶ್ಚರ್ಯಪಟ್ಟಳು, ಆದರೆ ಜೀವನದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು ಎಂದು ತೃಪ್ತಿ ಹೊಂದಿದ್ದಳು. ಅಂದಿನಿಂದ, ಮಾರಿಯಾ ಮತ್ತು ಜೇಸನ್ ಉತ್ತಮ ಸ್ನೇಹಿತರಾಗಿದ್ದಾರೆ. ಜೇಸನ್ ಆಗಾಗ್ಗೆ ಮಾರಿಯಾ ಮತ್ತು ಅವಳ ಕುಟುಂಬವನ್ನು ಭೇಟಿ ಮಾಡುತ್ತಾನೆ.

  Published by:Harshith AS
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು