Pregnant Lady: ಗರ್ಭಿಣಿಯಾಗಿದ್ದಾಗಲೇ ಮತ್ತೊಮ್ಮೆ ಗರ್ಭಿಣಿಯಾದ ಮಹಿಳೆ: ಇದೇನಿದು ವಿಚಿತ್ರ!

30 ವರ್ಷದ ಅಮೆರಿಕದ ಮಹಿಳೆಯೊಬ್ಬಳು ಇಂತಹ ಒಂದು ಅಪರೂಪದ ಗರ್ಭಧಾರಣೆಯನ್ನು ಅನುಭವಿಸಿದ ನಂತರ ತದ್ರೂಪಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಮಹಿಳೆ ಟೆಕ್ಸಾಸ್ ನ ಕಾರಾ ವಿನ್‌ಹೋಲ್ಡ್ ಎಂದು ಹೇಳಲಾಗುತ್ತಿದೆ ಮತ್ತು ಇವರ ಈ ಕಥೆ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

  • Share this:
ನಾವೆಲ್ಲಾ ಒಬ್ಬ ಗರ್ಭಿಣಿ ಮಹಿಳೆಗೆ (Pregnant Lady) ಅವಳಿ ಮಕ್ಕಳು (Children) ಹುಟ್ಟಿರುವುದು ಅಥವಾ ಎರಡಕ್ಕಿಂತ ಹೆಚ್ಚು ಮಕ್ಕಳು ಜನಿಸಿರುವುದರ ಬಗ್ಗೆ ಕೇಳಿರುತ್ತೇವೆ. ಆದರೆ ಒಬ್ಬ ಮಹಿಳೆ ಗರ್ಭಿಣಿಯಾಗಿದ್ದಾಗಲೇ ಮತ್ತೊಮ್ಮೆ ಗರ್ಭಿಣಿ ಆಗಿರುವುದು ನಾವು ಕೇಳಿರುವುದಕ್ಕೆ ಸಾಧ್ಯವೇಯಿಲ್ಲ ಎಂದು ಹೇಳಬಹುದು. ಆದರೆ ಅಮೆರಿಕದಲ್ಲಿ ಇದು ನೈಜವಾಗಿ ನಡೆದಿದೆ. ಹೌದು. 30 ವರ್ಷದ ಅಮೆರಿಕದ (America) ಮಹಿಳೆಯೊಬ್ಬಳು ಇಂತಹ ಒಂದು ಅಪರೂಪದ ಗರ್ಭಧಾರಣೆಯನ್ನು ಅನುಭವಿಸಿದ ನಂತರ ತದ್ರೂಪಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಮಹಿಳೆ (Women) ಟೆಕ್ಸಾಸ್ ನ ಕಾರಾ ವಿನ್‌ಹೋಲ್ಡ್ ಎಂದು ಹೇಳಲಾಗುತ್ತಿದೆ ಮತ್ತು ಇವರ ಈ ಕಥೆ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ (Viral) ಆಗುತ್ತಿದೆ.

ವಿನ್‌ಹೋಲ್ಡ್ ಅವರು ಮೊದಲು ಮೂರು ಬಾರಿ ಗರ್ಭಪಾತಗಳನ್ನು ಅನುಭವಿಸಿದ್ದರು ಮತ್ತು ಅವರು ಈಗ ಗರ್ಭಿಣಿಯಾಗಿದ್ದ ಸಮಯದಲ್ಲಿ ಮತ್ತೊಮ್ಮೆ ಗರ್ಭಿಣಿಯಾದ ಸುದ್ದಿ ಅವರಿಗೆ ವೈದ್ಯರು ತಿಳಿಸಿದ್ದರು. ಗರ್ಭಿಣಿ ಆದಾಗ ಮತ್ತೊಮ್ಮೆ ಗರ್ಭಿಣಿ ಆಗುವುದು ಹೇಗೆ ಅಂತ ನೀವು ತಲೆ ಕೆಡೆಸಿಕೊಂಡಿದ್ದರೆ, ಮುಂದೆ ಓದಿ ನಿಮಗೆ ಎಲ್ಲವೂ ಅರ್ಥವಾಗುತ್ತದೆ.

‘ಸೂಪರ್ಫೆಟೇಶನ್’
ಹೆಲ್ತ್‌ಲೈನ್ ಪ್ರಕಾರ, ಈ ಸ್ಥಿತಿಯನ್ನು ‘ಸೂಪರ್ಫೆಟೇಶನ್’ ಎಂದು ಕರೆಯಲಾಗುತ್ತದೆ, ಆರಂಭಿಕ ಗರ್ಭಧಾರಣೆಯ ಸಮಯದಲ್ಲಿ ಹೊಸ ಗರ್ಭಧಾರಣೆಯು ಸಂಭವಿಸಿದಾಗ ಹೀಗಾಗುತ್ತದೆ. ಮೊದಲ ಗರ್ಭಧಾರಣೆಯ ನಂತರ ಕೆಲವು ದಿನಗಳು ಅಥವಾ ವಾರಗಳ ನಂತರ ಎರಡನೆಯದು ಸಂಭವಿಸಬಹುದು.

"ನಾನು ವೈದ್ಯರಿಗೆ ಏನಾಯಿತು ಎಂದು ಕೇಳಿದಾಗ, ಅವರು ನನಗೆ ಮೊದಲ ಬಾರಿ ನನ್ನನ್ನು ಪರೀಕ್ಷಿಸಿದಾಗ ಗರ್ಭಿಣಿ ಆಗಿರುವುದು ಗೊತ್ತಾಗಿತ್ತು, ಆದರೆ ಮತ್ತೊಮ್ಮೆ ಹೋದಾಗ ನಾನು ಎರಡು ಬಾರಿ ಸಂತಾನೋತ್ಪತ್ತಿ ಮಾಡಿದ್ದೇನೆ, ಮತ್ತು ಅವು ಸುಮಾರು ಒಂದು ವಾರದ ಅಂತರದಲ್ಲಿ ವಿವಿಧ ಸಮಯಗಳಲ್ಲಿ ಸಂತಾನೋತ್ಪತ್ತಿ ಮಾಡಿವೆ ಎಂದು ವೈದ್ಯರು ನನಗೆ ಹೇಳಿದರು" ಎಂದು ವಿನ್‌ಹೋಲ್ಡ್ ಹೇಳಿದ್ದಾರೆ. "ನನ್ನ ಗರ್ಭಾವಸ್ಥೆಯ ಪ್ರಯಾಣದಲ್ಲಿ ನಡೆದ ಎಲ್ಲದರಿಂದಾಗಿ ಇದು ಪವಾಡವೇ ಎಂದು ನಾನು ನೂರು ಪ್ರತಿಶತ ನಂಬುತ್ತೇನೆ" ಎಂದು ಅವರು ಹೇಳಿದರು.

ಕಷ್ಟಕರವಾದ ಜೀವನವನ್ನು ಅನುಭವಿಸಿದ ದಂಪತಿಗಳು
ವಿನ್‌ಹೋಲ್ಡ್ ಮತ್ತು ಅವರ ಪತಿ ಇಬ್ಬರೂ ಈ ಹಿಂದೆ ಕಷ್ಟಕರವಾದ ಜೀವನವನ್ನು ಅನುಭವಿಸಿದ್ದರು. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಅವರ ಮೊದಲ ಮಗ 2018 ರಲ್ಲಿ ಜನಿಸಿದನು, ನಂತರ ದಂಪತಿಗಳು ತಮ್ಮ ಎರಡನೇ ಮಗುವನ್ನು ಮಾಡಿಕೊಳ್ಳಲು ಇಷ್ಟಪಟ್ಟರು ಎಂದು ಹೇಳಲಾಗುತ್ತಿದೆ. ಆದರೆ ಇದರ ಮಧ್ಯೆ ವಿನ್‌ಹೋಲ್ಡ್ ಮೂರು ಗರ್ಭಪಾತಗಳಿಗೆ ಒಳಗಾಗಿದ್ದರು. 2019ರಲ್ಲಿ ಒಂದು ಹೆಣ್ಣು ಮಗು ಮತ್ತು 2020ರಲ್ಲಿ ಮತ್ತೊಂದು ಗರ್ಭಪಾತವಾಯಿತು.

ಇದನ್ನೂ ಓದಿ: Viral Video: ಡ್ರೈವ್ ಮಾಡ್ತಾ ರಸ್ತೆಯುದ್ದಕ್ಕೂ ನೋಟು ಎಸೆದ ಯುವಕ! ಇವನೇನು ಕುಬೇರನಾ?

ಪೋಸ್ಟ್ ವರದಿಯ ಪ್ರಕಾರ, ಕೊನೆಯ ಮಗು ಜನಿಸಿದ್ದಾಗ ವಿನ್‌ಹೋಲ್ಡ್ ತುಂಬಾನೇ ಅನಾರೋಗ್ಯಕ್ಕೆ ತುತ್ತಾಗಿದ್ದರು. ಇದೆಲ್ಲಾ ನಡೆದಿರುವುದರಿಂದ ದಂಪತಿಗಳಿಬ್ಬರು ಅವರು ಭರವಸೆಯನ್ನು ಕಳೆದು ಕೊಂಡಿದ್ದರು. 30 ವರ್ಷದ ಮಹಿಳೆ ತಾನು ಮತ್ತೆ ಗರ್ಭಿಣಿಯಾಗಲು ಹೆದರುತ್ತಿದ್ದೆ ಎಂದು ಆಗ ಹೇಳಿದ್ದರು.

ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ
"ನನಗೆ ಮಕ್ಕಳೆಂದರೆ ತುಬಾ ಇಷ್ಟ ಆದ್ದರಿಂದ ನಾನು ನನ್ನ ಆರೋಗ್ಯವನ್ನು ಸುಧಾರಿಸಿಕೊಂಡಿದ್ದೇನೆ. ನಾನು ಮತ್ತೆ ತಾಯಾಗುತ್ತೇನೆ ಎಂದು ನನಗೆ ತಿಳಿದಿತ್ತು ಮತ್ತು ಇದು ನನ್ನ ಜೀವನ ಪ್ರಯಾಣದ ಒಂದು ಮುಖ್ಯವಾದ ಭಾಗವಾಗಿದೆ ಎಂದು ನನಗೆ ತಿಳಿದಿತ್ತು. ನನ್ನ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆದುಕೊಂಡು ಸಂಪೂರ್ಣವಾಗಿ ಗುಣಮುಖವಾಗಲು ಸಾಕಷ್ಟು ಸಮಯ ತೆಗೆದುಕೊಂಡಿತು" ಎಂದು ಅವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: Baby Cry: ವೈದ್ಯರು ಮಗು ಹುಟ್ಟಿದ ತಕ್ಷಣ ಏಕೆ ಅಳಿಸ್ತಾರೆ? ನಿಜಾಂಶ ಇಲ್ಲಿದೆ

ಕಳೆದ ವರ್ಷ ಫೆಬ್ರವರಿಯಲ್ಲಿ ಅವರು ಮತ್ತೆ ಗರ್ಭಿಣಿಯಾದರು ಮತ್ತು ಒಂದು ತಿಂಗಳ ನಂತರ, ವೈದ್ಯರು ಈ ಸಂತೋಷದ ವಿಚಾರವನ್ನು ದಂಪತಿಗಳಿಗೆ ಹೇಳಿದರು. ಗಂಡು ಮಕ್ಕಳಿಬ್ಬರೂ ಆರು ನಿಮಿಷಗಳ ಅಂತರದಲ್ಲಿ ಜನಿಸಿದರು.
Published by:Ashwini Prabhu
First published: