• Home
  • »
  • News
  • »
  • trend
  • »
  • ಚಿಂಪಾಂಜಿಯ ಜೊತೆ ಮಹಿಳೆಯ ಲವ್: ವಿಷಯ ಗೊತ್ತಾಗಿ ಭೇಟಿಯಾಗುವುದನ್ನು ನಿಷೇಧಿಸಿದ ಮೃಗಾಲಯ!

ಚಿಂಪಾಂಜಿಯ ಜೊತೆ ಮಹಿಳೆಯ ಲವ್: ವಿಷಯ ಗೊತ್ತಾಗಿ ಭೇಟಿಯಾಗುವುದನ್ನು ನಿಷೇಧಿಸಿದ ಮೃಗಾಲಯ!

ಜಿಂಪಾಂಜಿಯೊಂದಿಗೆ ಪ್ರೀತಿಗೆ ಬಿದ್ದು ಕಣ್ಣೀರಾಕುತ್ತಿರುವ ಮಹಿಳೆ

ಜಿಂಪಾಂಜಿಯೊಂದಿಗೆ ಪ್ರೀತಿಗೆ ಬಿದ್ದು ಕಣ್ಣೀರಾಕುತ್ತಿರುವ ಮಹಿಳೆ

woman Having an Affair With Chimpanzee: ಪ್ರೀತಿಗೆ ಕಣ್ಣಿಲ್ಲ ಅಂತಾರೆ, ಆದರೆ ಇಲ್ಲಿ ಪ್ರಾಣಿ ಪ್ರೀತಿಗೂ ಕಣ್ಣಿಲ್ಲ. ಝೋನಲ್ಲಿರುವ ಜಿಂಪಾಂಜಿ ಹಾಗೂ ಮಹಿಳೆ ಮಧ್ಯೆ ಮೂಡಿದ ಸಂಬಂಧಕ್ಕೆ ಮೃಗಾಲಯದ ಆಡಳಿತ ಮಂಡಳಿಯೇ ವಿಲನ್​ ಆಗಿದೆಯಂತೆ. ಜಿಂಪಾಂಜಿಯನ್ನು ಭೇಟಿಯಾಗಲು ಸಾಧ್ಯವಾಗದೆ ಮಹಿಳೆ ಕಣ್ಣೀರಿಡುತ್ತಿದ್ದಾರೆ.

ಮುಂದೆ ಓದಿ ...
  • Share this:

ಪ್ರಾಣಿಗಳ ಮೇಲೆ ಪ್ರೀತಿ-ಕಾಳಜಿ ಹೊಂದಿರುವುದು ಸಾಮಾನ್ಯ. ಅದರಲ್ಲೂ ನಾಯಿ-ಬೆಕ್ಕು, ಪಕ್ಷಿಗಳು, ಮೀನುಗಳನ್ನು ಮನೆಯಲ್ಲಿ ಸಾಕಿಕೊಳ್ಳೋದನ್ನು ನೋಡಿದ್ದೇವೆ. ಶ್ವಾನಪ್ರೇಮದ ಕಥೆಗಳಂತೂ ನಮ್ಮ ಮಧ್ಯೆಯೇ ಸಾಕಷ್ಟಿದೆ. ಆದರೆ ಎಲ್ಲದಕ್ಕೂ ಒಂದು ಮಿತಿ ಅನ್ನೋದು ಇರುತ್ತಲ್ಲವೇ. ಅತಿಯಾದರೆ ಅಮೃತವೂ ವಿಷ. ಇಲ್ಲಿ ಆಗಿರುವುದು ಅದೇ. ಪ್ರಾಣಿ ಮೇಲಿನ ಪ್ರೀತಿ ಸಹಜ ಎಂಬ ಗೆರೆಯನ್ನು ದಾಟಿದೆ. ಝೋನಲ್ಲಿರುವ ಜಿಂಪಾಂಜಿಯೊಂದಿಗೆ ಮಹಿಳೆಯೊಬ್ಬರು ಪ್ರೇಮ ಸಂಬಂಧ ಹೊಂದಿರುವುದನ್ನು ಆಕೆ ಖುದ್ದು ಹೇಳಿಕೊಂಡಿದ್ದಾರೆ. ಇಂಥ ವಿಲಕ್ಷಣ ಘಟನೆ ನಡೆದಿರೋದು ಬೆಲ್ಜಿಯಂನ ಆಂಟ್‌ವರ್ಪ್‌ನಲ್ಲಿ(Antwerp, Belgium).


ಮಹಿಳೆ ಮೃಗಾಲಯದಲ್ಲಿ ಚಿಂಪಾಂಜಿಯೊಂದಿಗೆ 4 ವರ್ಷಗಳ ಕಾಲ ಸಂಬಂಧ ಹೊಂದಿದ್ದಾಗಿ ಹೇಳಿಕೊಂಡಿದ್ದಾರೆ.  ಮೃಗಾಲಯದಲ್ಲಿರುವ ಚಿಟಾ(Chita) ಹೆಸರಿನ ಚಿಂಪಾಂಜಿ ಜೊತೆ ತನಗೆ ಸಂಬಂಧವಿದೆ ಎಂದು ಆಡಿ ಟಿಮ್ಮರ್ಮನ್ಸ್‌ (Adie Timmermans) ಬಾಯ್ಬಿಟ್ಟಿದ್ದಾರೆ. ಇವರ ಪ್ರೇಮ ಕಹಾನಿಯನ್ನು ಕೇಳಿದ ಮೃಗಾಲಯದ ಆಡಳಿತ ಮಂಡಳಿ ಆಟಿ ಟಿಮ್ಮರ್ಮನ್ಸ್​​ ಮೃಗಾಲಯಕ್ಕೆ ಭೇಟಿ ನೀಡುವುದನ್ನು ನಿಷೇಧಿಸಿದೆ.


ಮಹಿಳೆ ಹಾಗೂ ಜಿಂಪಾಂಕಿ ನಡುವೆ ಇದ್ದ ಗಾಜಿನ ತಡೆ ಅವರಿಬ್ಬರ ನಡುವಿನ ಪ್ರೇಮಕ್ಕೆ ಅಡ್ಡಿ ಬಂದಿಲ್ಲವಂತೆ. ಗ್ಲಾಸ್​​​ ನ ಆ ಕಡೆ ಜಿಂಪಾಂಜಿ ಈ ಕಡೆ ಮಹಿಳೆ ಪರಸ್ಪರ ಸಂವಹನ ನಡೆಸಿದ್ದಾರೆ. ಪರಸ್ಪರ ಚುಂಬಿಸುತ್ತಿದ್ದರು ಕೂಡ ಎಂದು ತಿಳಿದು ಬಂದಿದೆ. ಚಿತಾ ಜೊತೆ ಆಡಿ ಸಂಬಂಧ ಒಳ್ಳೆಯದಲ್ಲ. ಇದು ಇತರ ಚಿಂಪಾಂಜಿಗಳೊಂದಿಗಿನ ಬಾಂಧವ್ಯಕ್ಕೆ ಹಾನಿಕಾರಕವೆಂದು ಮೃಗಾಲಯ ನಿಷೇಧವೇರಿದೆ. ಇನ್ಮುಂದೆ ಜಿಂಪಾಂಜಿಯನ್ನು ಮಹಿಳೆ ಭೇಟಿಯಾಗಬಾರದು. ಇದಕ್ಕಾಗಿ ಝೋಗೆ ಭೇಟಿ ನೀಡಬಾರದು ಎಂದು ತಾಕೀತು ಮಾಡಿದೆ.


ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಿಳೆ, ನಾನು ಆ ಪ್ರಾಣಿಯನ್ನು ಪ್ರೀತಿಸುತ್ತೇನೆ. ಅವನು ನನ್ನನ್ನು ಪ್ರೀತಿಸುತ್ತಾನೆ. ನನಗೆ ಜೀವನದಲ್ಲಿ ಬೇರೆ ಏನೂ ಸಿಕ್ಕಿಲ್ಲ. ಈಗ ಅವನಿಂದ ಸಿಕ್ಕಿರುವ ಪ್ರೀತಿಯನ್ನು ತೆಗೆದುಕೊಳ್ಳಲು ಏಕೆ ಬಯಸುತ್ತಾರೆ. ನಮ್ಮ ಸಂಬಂಧಕ್ಕೆ ಈ ಅಡ್ಡಿ ಏಕೆ ಎಂದು ಪ್ರಶ್ನಿಸಿದ್ದಾರೆ.


ಪ್ರೀತಿಗೆ ಕಣ್ಣಿಲ್ಲ ಅಂತಾರೆ, ಆದರೆ ಇಲ್ಲಿ ಪ್ರಾಣಿ ಪ್ರೀತಿಗೂ ಕಣ್ಣಿಲ್ಲ. ಝೋನಲ್ಲಿರುವ ಜಿಂಪಾಂಜಿ ಹಾಗೂ ಮಹಿಳೆ ಮಧ್ಯೆ ಮೂಡಿದ ಸಂಬಂಧಕ್ಕೆ ಮೃಗಾಲಯದ ಆಡಳಿತ ಮಂಡಳಿಯೇ ವಿಲನ್​ ಆಗಿದೆಯಂತೆ. ಜಿಂಪಾಂಜಿಯನ್ನು ಭೇಟಿಯಾಗಲು ಸಾಧ್ಯವಾಗದೆ ಮಹಿಳೆ ಕಣ್ಣೀರಿಡುತ್ತಿದ್ದಾರೆ.


ಇನ್ನು ಮಹಿಳೆಯ ಜೊತೆ ಸಂಬಂಧ ಹೊಂದಿರುವ ಜಿಂಪಾಂಜಿ ಇತರೆ ಪ್ರಾಣಿಗಳೊಂದಿಗೆ ಸೇರುತ್ತಿಲ್ಲವಂತೆ. ಮಹಿಳೆಯ ಆಗಮನವನ್ನೇ ನಿರೀಕ್ಷಿಸುತ್ತಾ ಕೂತಿರುತ್ತದೆ. ಅದು ಈಗ ಪ್ರಾಣಿಗಳೊಂದಿಗೆ ಬೆರೆಯುವದನ್ನು ಬಿಟ್ಟಿದೆ ಎನ್ನಲಾಗುತ್ತಿದೆ. ಆದರೆ ಮೃಗಾಲಯ ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದೆ.


ಇದನ್ನೂ ಓದಿ: ಈ ವಿಡಿಯೋ ನೋಡಿದ್ರೆ ನೀವು ಗೋಲ್‍ಗೊಪ್ಪ ತಿನ್ನೋದೇ ಇಲ್ಲ..!


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

Published by:Kavya V
First published: