HOME » NEWS » Trend » WOMAN ATTACHED HER NOSE RING TO THE MASK SESR

Viral Photo: ಮಾಸ್ಕ್​ನಲ್ಲಿಯೂ ಮೂಗತಿ: ಮಹಿಳೆಯ ಐಡಿಯಾಗೆ ನೆಟ್ಟಿಗರು ಶಾಕ್​

ಮಾಸ್ಕ್​ ಜೊತೆಗೆ ಹೇಗೆ ತಮ್ಮ ಮೂಗುತಿ ಆಭರಣವನ್ನು ಪ್ರದರ್ಶಿಸಬಹುದು ಎಂಬ ಈ ಮಹಿಳೆ ತಂತ್ರಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

news18-kannada
Updated:May 8, 2021, 9:51 PM IST
Viral Photo: ಮಾಸ್ಕ್​ನಲ್ಲಿಯೂ ಮೂಗತಿ: ಮಹಿಳೆಯ ಐಡಿಯಾಗೆ ನೆಟ್ಟಿಗರು ಶಾಕ್​
ಮಹಿಳೆ ಚಿತ್ರಣ
  • Share this:
ಸೋಂಕಿನ ಈ ಸಂದರ್ಭದಲ್ಲಿ ಹುಡುಗಿಯರ ಅಲಂಕಾರಕ್ಕೆ ಮಾಸ್ಕ್​ ಅಡ್ಡಿಯಾಗಿದೆ ಎಂದರೆ ಸುಳ್ಳಲ್ಲ. ಜೀವ ರಕ್ಷಕ ಮಾಸ್ಕ್​ ತಗಿಯದೇ ಹೊರಗೆ ಹೋಗುವಂತಿಲ್ಲ.  ಮಾಸ್ಕ್​ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿದೆ. ​  ಅದೇ ಕಾರಣಕ್ಕೆ ಮಾಸ್ಕ್​ ಮೇಲೆ ಅನೇಕ ಪ್ರಯೋಗಗಳನ್ನು ನಡೆಸಿ ಮೇಕಪ್​ ನಡೆಸುವ ತಂತ್ರವನ್ನು ಯುವತಿಯರು ಅನುಸರಿಸುತ್ತಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಮಾಸ್ಕ್​ ಹಾಕಿದ್ದರೂ ಲಿಪ್​ಸ್ಟಿಕ್​ ಹಾಕಿ ಮೆರೆಯುತ್ತಿದ್ದಾರೆ. ಮಾಸ್ಕ್​ ಇಲ್ಲದೇಯೂ ಇರುವಂತಿಲ್ಲ. ಮೇಕಪ್​ ಇಲ್ಲದೇ ಇರುವಂತೆಯೂ ಇಲ್ಲ ಎಂಬ ಪರಿಸ್ಥಿತಿ ನಡುವೆ ಅನೇಕರು ಮಾಸ್ಕ್​ ಜೊತೆಯೇ ಫ್ಯಾಷನ್​ ಹುಟ್ಟು ಹಾಕಿ ಗಮನಸೆಳೆದಿದ್ದಾರೆ.

ಆಭರಣ ಪ್ರಿಯ ಮಹಿಳೆಯರಿಗೆ ತಮ್ಮ ಚಿನ್ನವನ್ನು ಪ್ರದರ್ಶಿಸುವುದಕ್ಕೆ ಹೆಚ್ಚು ಉತ್ಸಹವೇ. ಅದೇ ರೀತಿ ಇಲ್ಲೊಬ್ಬರು ಮಹಿಳೆ ಕೂಡ ಮಾಸ್ಕ್​ನಲ್ಲಿಯೇ ತಮ್ಮ ಆಭರಣವನ್ನು ಪ್ರದರ್ಶನ ಮಾಡಿರುವ ಕಲೆಗೆ ನೆಟ್ಟಿಗರು ಶಾಕ್ ಆಗಿದ್ದಾರೆ. ಮಾಸ್ಕ್​ ಜೊತೆಗೆ ಹೇಗೆ ತಮ್ಮ ಮೂಗುತಿ ಆಭರಣವನ್ನು ಪ್ರದರ್ಶಿಸಬಹುದು ಎಂಬ ಈ ಮಹಿಳೆ ತಂತ್ರಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.




ಐಪಿಎಸ್​ ಅಧಿಕಾರಿ ದೀಪಾಂಶು ಕಬ್ರಾ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಈ ಫೋಟೊ ಹಂಚಿಕೊಂಡಿದ್ದಾರೆ.











ಮಾಸ್ಕ್​ನಲ್ಲಿಯೂ ಹೊಸ ಪ್ರಯೋಗ ನಡೆಸುತ್ತಿರುವ ಈ ಐಡಿಯಾಗಳು ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ ಎಂಬ ಮಾತುಗಳು ಕೇಳಿಬಂದಿದೆ
Published by: Seema R
First published: May 8, 2021, 9:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories