Insemination Kit ಬಳಸಿ ಮನೆಯಲ್ಲಿಯೇ ಕೃತಕ ಗರ್ಭಧಾರಣೆ ಮಾಡಿಕೊಂಡ ಮಹಿಳೆ

ಮಕ್ಕಳನ್ನು ಪಡೆಯುವ ವಿಚಾರಕ್ಕೆ ಬಂದರೆ ಗಂಡು-ಹೆಣ್ಣಿನ ಸಮ್ಮಿಲನದಿಂದ ಮಾತ್ರ ಮಕ್ಕಳಾಗುತ್ತವೆ ಎಂಬ ಕಾಲ ಹೊರಟು ಹೋಗಿದೆ. ಈಗ ಮಕ್ಕಳನ್ನು ಪಡೆಯಲು ಹಲವಾರು ಮಾರ್ಗಗಳಿವೆ. ಅದರಲ್ಲಿ ಒಂದು ಕೃತಕ ಗರ್ಭಧಾರಣೆ. ಹೌದು, ಇಲ್ಲೊಬ್ಬಳು ಮಹಿಳೆ ಸಂಗಾತಿಯನ್ನು ಹೊಂದಲು ಬಯಸಿರಲಿಲ್ಲ, ಆದರೆ ಒಂದು ಮಗ ಬೇಕು ಎಂದು ಹಪಹಪಿಸುತ್ತಿದ್ದಳು. ಹೀಗಾಗಿ ಇದಕ್ಕೆ ಕೃತಕ ಗರ್ಭಧಾರಣೆಯ ಮೊರೆ ಹೋದ ಈಕೆ ಸ್ವತಃ ಮನೆಯಲ್ಲಿ ಚಿಕಿತ್ಸೆ ಪಡೆದು ಮುದ್ದಾದ, ಆರೋಗ್ಯಯುತವಾದ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಮನೆಯಲ್ಲಿಯೇ ಇನ್ಸೆಮಿನೇಷನ್ ಕಿಟ್ ಬಳಸಿ ಗರ್ಭಧಾರಣೆ

ಮನೆಯಲ್ಲಿಯೇ ಇನ್ಸೆಮಿನೇಷನ್ ಕಿಟ್ ಬಳಸಿ ಗರ್ಭಧಾರಣೆ

  • Share this:
ಕೆಲವು ಪ್ರಕರಣಗಳನ್ನು ನೋಡಿದರೆ ವೈದ್ಯಕೀಯ ಲೋಕದಲ್ಲಿ ಅಸಾಧ್ಯವಾದದ್ದು ಯಾವುದು ಇಲ್ಲ ಎಂದೆನಿಸುವುದು ನಿಜ. ಮಕ್ಕಳನ್ನು (Children) ಪಡೆಯುವ ವಿಚಾರಕ್ಕೆ ಬಂದರೆ ಗಂಡು-ಹೆಣ್ಣಿನ ಸಮ್ಮಿಲನದಿಂದ ಮಾತ್ರ ಮಕ್ಕಳಾಗುತ್ತವೆ ಎಂಬ ಕಾಲ ಹೊರಟು ಹೋಗಿದೆ. ಈಗ ಮಕ್ಕಳನ್ನು ಪಡೆಯಲು ಹಲವಾರು ಮಾರ್ಗಗಳಿವೆ. ಅದರಲ್ಲಿ ಒಂದು ಕೃತಕ ಗರ್ಭಧಾರಣೆ (Artificial insemination). ಹೌದು, ಇಲ್ಲೊಬ್ಬಳು ಮಹಿಳೆ (Women) ಸಂಗಾತಿಯನ್ನು ಹೊಂದಲು ಬಯಸಿರಲಿಲ್ಲ, ಆದರೆ ಒಂದು ಮಗು ಬೇಕು ಎಂದು ಹಪಹಪಿಸುತ್ತಿದ್ದಳು. ಹೀಗಾಗಿ ಇದಕ್ಕೆ ಕೃತಕ ಗರ್ಭಧಾರಣೆಯ ಮೊರೆ ಹೋದ ಈಕೆ ಸ್ವತಃ ಮನೆಯಲ್ಲಿ ಚಿಕಿತ್ಸೆ (Treatment) ಪಡೆದು ಮುದ್ದಾದ, ಆರೋಗ್ಯಯುತವಾದ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಮನೆಯಲ್ಲಿಯೇ ಇನ್ಸೆಮಿನೇಷನ್ ಕಿಟ್ ಬಳಸಿ ಗರ್ಭಧಾರಣೆ
ಬೈಲಿ ಎನ್ನಿಸ್ ಮದುವೆಯಾಗಲು ಇಚ್ಛಿಸಿರಲಿಲ್ಲ ಆದ್ದರಿಂದ, ಅವಳು ಮನೆಯಲ್ಲಿಯೇ ಇನ್ಸೆಮಿನೇಷನ್ ಕಿಟ್ ಅನ್ನು ತೆಗೆದುಕೊಂಡು ಮತ್ತು ಯಾವುದೇ ವೃತ್ತಿಪರ ಸಹಾಯವಿಲ್ಲದೆ ಸ್ವತಃ ಗರ್ಭಧಾರಣೆ ವಿಧಾನವನ್ನು ಅಳವಡಿಸಿಕೊಂಡಳು. ಪ್ರಸ್ತುತ ತಾಯಿಯಾಗಿರುವ ಬೈಲಿ ಎನ್ನಿಸ್ ಕಳೆದ ತಿಂಗಳು 2.32 ಕೆಜಿ ತೂಕದ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಕೃತಕ ಗರ್ಭಧಾರಣೆ ಗರ್ಭಿಣಿಯಾಗಲು ಸ್ತ್ರೀಯರ ಲೈಂಗಿಕ ಅಂಗಗಳಲ್ಲಿ ವೀರ್ಯವನ್ನು ಉದ್ದೇಶಪೂರ್ವಕವಾಗಿ ಪರಿಚಯಿಸುವ ಪ್ರಕ್ರಿಯೆಯನ್ನು ಸೂಚಿಸುತ್ತದೆ. ಕೃತಕ ಗರ್ಭಧಾರಣೆಯು ವೈದ್ಯಕೀಯ ಅಥವಾ ಪಶುವೈದ್ಯಕೀಯ ವಿಧಾನವಾಗಿದ್ದು, ಸ್ತ್ರೀಯರ ಗರ್ಭಕಂಠ ಅಥವಾ ಗರ್ಭಾಶಯದ ಕುಹರದೊಳಗೆ ವೀರ್ಯವನ್ನು ಚುಚ್ಚುಮದ್ದು ಮಾಡುವುದರ ಮೂಲಕ ಇನ್-ವಿವೋ ಫಲೀಕರಣದ ಮೂಲಕ ಗರ್ಭಧಾರಣೆ ನಡೆಯುತ್ತದೆ. ಇದನ್ನು ಅನುಭವಿ ವೈದ್ಯರು ಮತ್ತು ವಾಣಿಜ್ಯ ಕೃತಕ ಗರ್ಭಧಾರಣೆಯ ನಿರ್ವಾಹಕರು ನಿರ್ವಹಿಸುತ್ತಾರೆ ಏಕೆಂದರೆ ಕಾರ್ಯವಿಧಾನದ ಸಮಯದಲ್ಲಿ ತಪ್ಪುಗಳು ಸೋಂಕು, ಚುಕ್ಕೆ ಅಥವಾ ಬಹು ಗರ್ಭಧಾರಣೆಗೆ ಕಾರಣವಾಗಬಹುದು.

4 ಸಾವಿರ ವೆಚ್ಚದಲ್ಲಿ ಕೃತಕ ಗರ್ಭಧಾರಣೆ ಮಾಡಿ ಗಂಡು ಮಗು ಜನನ
ಇಷ್ಟೇಲ್ಲಾ ಸವಾಲುಗಳಿದ್ದರೂ, ಇದರ ಮಧ್ಯೆ 24 ವರ್ಷದ ಮಹಿಳೆ ಬೈಲಿ ಎನ್ನಿಸ್ ಮನೆಯಲ್ಲಿಯೇ ಕೃತಕ ಗರ್ಭಧಾರಣೆ ಕಿಟ್ನೊಂದಿಗೆ ಗರ್ಭಧರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತು ಈಕೆಗೆ ಅದಕ್ಕೆ ತಗುಲಿದ್ದ ವೆಚ್ಚ ಕೂಡ ಕಡಿಮೆಯಾಗಿದ್ದು, ಕೇವಲ ನಾಲ್ಕು ಸಾವಿರ ರೂದಲ್ಲಿ ಈ ವೈದ್ಯಕೀಯ ಪವಾಡ ಸೃಷ್ಟಿಸಿದ್ದಾರೆ.

ಇದನ್ನೂ ಓದಿ: Arthur: 8 ಹೆಂಡತಿಯರಿಗೆ ಬಂಗಲೆ ನಿರ್ಮಿಸುತ್ತಿರುವ ದೇವರಂಥಾ ಗಂಡ! ಅವರೊಂದಿಗೆ ಮುದ್ದಾಡಲು ಟೈಂ ಟೇಬಲ್​ ಕೂಡ ಫಿಕ್ಸ್

ಇವಳ ಈ ಧೈರ್ಯ ಮತ್ತು ಸಹಾಸದ ಪ್ರತಿಫಲವಾಗಿ 2.32 ಕೆಜಿ ತೂಕದ ಆರೋಗ್ಯವಂತ ಗಂಡು ಮಗು ಬೈಲಿ ಕೈ ಸೇರಿದೆ.

ಈ ಕೃತಕ ಗರ್ಭಧಾರಣೆಗೆ US ನಲ್ಲಿ ಎಷ್ಟು ವೆಚ್ಚ ತಗಲುತ್ತದೆ ಗೊತ್ತಾ?
Parents.com ಪ್ರಕಾರ, ಕೃತಕ ಗರ್ಭಧಾರಣೆಯ ಮೂಲಕ ಗರ್ಭಿಣಿಯಾಗುವ ಯಶಸ್ಸಿನ ಪ್ರಮಾಣವು ಐದರಿಂದ 30 ಪ್ರತಿಶತದವರೆಗೆ ಇರುತ್ತದೆ ಎಂದಿದೆ. ವೆಚ್ಚಗಳಿಗೆ ಸಂಬಂಧಿಸಿದಂತೆ, ಕ್ಲಿನಿಕ್ನಲ್ಲಿ ಕೃತಕ ಗರ್ಭಧಾರಣೆಯ ಪ್ರಕ್ರಿಯೆಯು US ನಲ್ಲಿ $1,000 (Rs 80,000) ವರೆಗೆ ವೆಚ್ಚವಾಗಬಹುದು.

ಈ ಬಗ್ಗೆ ಬೈಲಿ ಅವರು ಏನು ಹೇಳಿದ್ದಾರೆ
ಈ ಬಗ್ಗೆ ಮಾತನಾಡಿದ ಬೈಲಿ “ಒಬ್ಬ ಅನುಭವಿ ಮತ್ತು ಆರೋಗ್ಯವಂತ ದಾನಿ ಸಿಕ್ಕ ಕೂಡಲೇ ತಾನು ಸ್ವತಃ ಗರ್ಭಧಾರಣೆಯ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಹೇಳಿದರು. ಇನ್ನೂ ವಿಶೇಷ ಎಂದರೆ ಆಕೆ ತನ್ನ ಮೊದಲ ಪ್ರಯತ್ನದಲ್ಲಿಯೇ ಮಗು ಪಡೆಯಲು ಯಶಸ್ವಿಯಾಗಿದ್ದಾಳೆ. ಅಂದರೆ ಅಕ್ಟೋಬರ್ 2021ರ ಪ್ರಯತ್ನದಲ್ಲಿಯೇ ಅವಳು ಗರ್ಭಿಣಿಯಾದಳು.

ಇದನ್ನೂ ಓದಿ:  Viral Story: ಮಲಮಗನಿಂದ ಗರ್ಭಿಣಿಯಾಗಿ ಮಗು ಪಡೆದ ತಾಯಿ! ಇದು ಕಲಿಗಾಲವಯ್ಯಾ

"ಆರೋಗ್ಯಕರ ವೈದ್ಯಕೀಯ ದಾಖಲೆಯನ್ನು ಹೊಂದಿರುವ ಮತ್ತು ಇಬ್ಬರು LGBTQ ದಂಪತಿಗಳಿಬ್ಬರಿಗೆ ಈ ಮೊದಲು ದಾನಿಯಾಗಿದ್ದ ವ್ಯಕ್ತಿಯನ್ನು ನಾನು ಭೇಟಿ ಮಾಡಿದೆ. ನಾನು ನನ್ನ ದಾನಿ ಸಿಕ್ಕ ಬಳಿಕ ಅವರ ಜೊತೆ ಮಾತನಾಡಿದೆ. ಅದಕ್ಕೆ ಇಬ್ಬರು ಒಪ್ಪಿಕೊಂಡರು. ನಂತರ ದಾನಿಗಳು ಬಂದು ಕಿಟ್ಗೆ ಸಹಾಯ ಮಾಡಿದರು ಎಂದು ಬೈಲಿ ಹೇಳಿದರು. ದಾನಿಗಳು ತಮ್ಮ ವೀರ್ಯಾಣು ವೀರ್ಯ ಬ್ಯಾಂಕ್ ತಂದರು ಮತ್ತು ನಂತರ ಕಿಟ್ ಅನ್ನು ಬಳಸಲು ನನಗೆ ಸಹಾಯ ಮಾಡಿದರು. ಈ ಮನೆಯಲ್ಲಿ ನಡೆಸುವ ಪ್ರಯೋಗ ಕೇವಲ ಸ್ಟೆರೈಲ್ ಕಪ್ಗಳು, ಸಿರಿಂಜ್ಗಳು, ಅಂಡೋತ್ಪತ್ತಿ ಪರೀಕ್ಷೆಗಳನ್ನು ಒಳಗೊಂಡಿದೆ ಅಷ್ಟೇ ಎಂದು ತಿಳಿಸಿದರು.

ಕೊನೆಯ ಮಾತು 
ವೈದ್ಯರ ಸಲಹೆ ಇಲ್ಲದೇ ಈ ರೀತಿಯ ಪ್ರಯೋಗಳನ್ನು ಮನೆಯಲ್ಲಿ ಮಾಡುವ ಹುಚ್ಚು ಸಾಹಸಕ್ಕೆ ಕೈ ಹಾಕುವುದು ಒಳಿತಲ್ಲ ಎಂಬುವುದು ನಮ್ಮ ಅಭಿಪ್ರಾಯ. ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ ಮೇರೆಗೆ ಕ್ರಮ ತೆಗೆದುಕೊಳ್ಳುವುದು ಉತ್ತಮ.
Published by:Ashwini Prabhu
First published: