ಅಮ್ಮ- ಮಗುವಿನ ಸಂಬಂಧ ಶ್ರೇಷ್ಠವಾದದ್ದು. ಮಗುವಿಗೆ ಏನಾದರು ಆದರೆ ತಾಯಿಯಾದವಳು ಜೀವ ಕೊಡಲು ಸಿದ್ಧಲಾಗಿರುತ್ತಾಳೆ. ಆದರೆ ಇಲ್ಲೊಬ್ಬಳು ಅಮ್ಮ ಮಾಡಿದ ಕೃತ್ಯ ನೋಡಿದರೆ ತಾಯಿತನಕ್ಕೆ ಕಳಂಕ ತಂದಂತಿದೆ. ತನ್ನ ಮೂರು ವರ್ಷ ಮಗುವನ್ನು ತಾಯಿಯೊಬ್ಬಳು ಹೊಡೆದು ಸಾಯಿಸಿದ್ದಾಳೆ. ಆದರೆ ಆಕೆ ಯಾವ ಕಾರಣಕ್ಕಾಗಿ ಮಗುವನ್ನು ಕೊಂದಳು ಎಂದು ತಿಳಿದರೆ ಎಂಥವರಿಗೂ ಕೋಪ ಬರದೇ ಇರದು.
ಮೂರು ವರ್ಷ ಪ್ರಾಯದ ಹೆಣ್ಣು ಮಗುವನ್ನು ತಾಯಿ ಕೊಲೆ ಮಾಡಿದ್ದಾಳೆ. ಪ್ರಿಯಕರನೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ವೇಳೆ ಮಗು ತೊಂದರೆ ಮಾಡಿತೆಂದು ಎಳೆಯ ಮಗುವನ್ನು ಹೊಡೆದು ಸಾಯಿಸಿದ್ದಾಳೆ. ಪ್ರಕರಣ ಸಂಬಂಧಿಸಿದಂತೆ ತಾಯಿ ಹಾಗೂ ಆಕೆಯ ಪ್ರಿಯಕರನಿಗೆ ಜೈಲು ಪಾಲಾಗಿದ್ದಾರೆ.
ಬರ್ನಿಂಗ್ಹ್ಯಾಮ್ನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ತಾಯಿ ನಿಕೋಲಾ ಪ್ರೀಸ್ಟ್ ಎಂಬಾಕೆ ಆಕೆಯ ಗೆಳೆಯ ಕ್ಯಾಲಮ್ ರೆಡ್ಫರ್ನ್ ಜತೆಗೆ ಸಂಬಂಧದಲ್ಲಿ ಇದ್ದಳು. ಒಂದು ದಿನ ಇವರಿಬ್ಬರು ಲೈಗಿಂಕ ಕ್ರಿಯೆ ನಡೆಸಲು ಬಯಸುತ್ತಾರೆ. ಹಾಗೆ ಆಕೆ ಗೆಳೆಯನನ್ನು ಮನೆಗೆ ಕರೆಸಿಕೊಳ್ಳುತ್ತಾಳೆ.
ನಿಕೋಲಾ ಪ್ರೀಸ್ಟ್ ಮತ್ತು ಕ್ಯಾಲಮ್ ರೆಡ್ಫರ್ನ್ ಸೆಕ್ಸ್ ಮಾಡುತ್ತಿರುವ ವೇಳೆ ಮೂರು ವರ್ಷದ ಚಿಮುಕಲಿ ಆಟವಾಡಲು ಮತ್ತು ಏಳಲು ಪ್ರಯತ್ನಿಸಿ ಅಳುತ್ತದೆ. ಇದರಿಂದ ಕೋಪಗೊಂಡ ತಾಯಿ ಮಗುವನ್ನು ಹೊಡೆದು ಸಾಯಿಸುತ್ತಾಳೆ. ಪರಿಣಾಮ ಮಗು ಸ್ಥಳದಲ್ಲಿ ಸಾವನ್ನಪ್ಪುತ್ತದೆ.
ಮಗುವನ್ನು ಕೊಂದದ್ದಕ್ಕಾಗಿ ಬರ್ನಿಂಗ್ಹ್ಯಾಮ್ ಕ್ರೌನ್ಕೋರ್ಟ್ ನಿಕೋಲಾ ಪ್ರೀಸ್ಟ್ ಮತ್ತು ಗೆಳೆಯ ಕ್ಯಾಲಮ್ ರೆಡ್ಫರ್ನ್ ಅವರಿಗೆ 15 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ