ಪ್ರತಿ ದಿನ ಏನಾದರೊಂದು ವಿಚಿತ್ರ ಘಟನೆಗಳು ಬೆಳಕಿಗೆ ಬರುತ್ತಲೇ ಇರುತ್ತದೆ. ಅದರಂತೆ ಇದೀಗ 51 ವರ್ಷದ ಮಹಿಳೆ ಮೊಮ್ಮಗಳಿಗೆ ಜನ್ಮ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಆದರೆ ವಿಚಿತ್ರ ಘಟನೆಯ ಹಿಂದೆ ಬೇರೆಯೇ ಕಥೆಯಿದೆ.
ಹೌದು. ಅಮೆರಿಕದಲ್ಲಿ ಈ ಘಟನೆ ನಡೆದಿದೆ. ಹೀಗೊಂದು ಅಚ್ಚರಿಯ ಪ್ರಕರಣ ಅನೇಕರನ್ನು ಬೆರಗುಗೊಳಿಸಿದೆ. ಹಲವರು ಇದು ಹೇಗೆ ಸಾಧ್ಯವೆಂದು ಮಾತನಾಡುತ್ತಿದ್ದಾರೆ. ಆದರೆ ಮಗಳ ಆಸೆಯನ್ನು ಈಡೇರಿಸಲು ತಾಯಿ ಗರ್ಭಧರಿಸಿ ಮೊಮ್ಮಳಿಗೆ ಜನ್ಮ ನೀಡಿರುವುದಂತು ಸತ್ಯ.
ಚಿಕಾಗೊ ಮೂಲಕ ಇಲಿನಾಯ್ಸ್ ನಗರದಲ್ಲಿ ವಾಸಿಸುವ 29 ವರ್ಷದ ಬ್ರೆನ್ನಾ ಲಾಕ್ವಡ್ ಗರ್ಭಿಣಿ ಆಗಲು ಸಾಕಷ್ಟು ಪ್ರಯತ್ನ ಪಡುತ್ತಾಳೆ. ಆದರೆ ಆಕೆಗೆ ಗರ್ಭನಿಲ್ಲದೆ ಆಗಾಗ ಗರ್ಭಪಾತಕ್ಕೆ ಒಳಗಾಗುತ್ತಿದ್ದಳು. ಪತಿ ಆ್ಯರೂನ್ ಕೂಡ ಆಕೆಯನ್ನು ಡಾಕ್ಟರ್ ಬಳಿ ಕರೆದೊಯ್ದು ತೋರಿಸಿದನು. ಆತನು ಕೂಡ ಪ್ರನಾಳೀಯ ಫಲೀಕರನ (ಐವಿಎಫ್) ಮಾಡಲು ಮುಂದಾದನು. ಆದರೆ ಏನೇ ಮಾಡಿದರು ಬ್ರೆನ್ನಾ ಲಾಕ್ವಡ್ಗೆ ಗರ್ಭ ನಿಲ್ಲುತ್ತಿರಲಿಲ್ಲ. ಹೀಗೆ ದಂಪತಿಗಳು 4 ವರ್ಷದಿಂದ ನಾನಾ ಪ್ರಯತ್ನ ಮಾಡಿದರು ಫಲಿಸಲಿಲ್ಲ.
ಕೊನೆಗೆ ಡಾಕ್ಟರ್ ಮಗು ಬೇಕೆಂದರೆ ಬಾಡಿಗೆ ತಾಯ್ತನವೊಂದೆ ದಾರಿ ಎಂದು ಬ್ರೆನ್ನಾ ಲಾಕ್ವಡ್ ಮತ್ತು ಆ್ಯರೂನ್ ಬಳಿ ಹೇಳಿದರು. ಕೊನೆಗೂ ಗರ್ಭಧರಿಸಲಾಗಿಲ್ಲವೆಂದು ನೊಂದಿದ್ದ ಬ್ರೆನ್ನಾ ಲಾಕ್ವಡ್ಗೆ ಆಕೆಯ ತಾಯಿ ಜೂಲಿ ಬಂದು ನೆರವಾಗುತ್ತಾರೆ.
ಬಾಡಿಗೆ ತಾಯ್ತನದ ಮೂಲಕ ಮಗಳಿಗೆ ಮಗು ಹೆತ್ತು ಕೊಡಲು ಜೂಲಿ ಮುಂದಾಗುತ್ತಾರೆ. ನಂತರ ಗರ್ಭಧರಿಸಿದ ಜೂಲಿ ನವೆಂಬರ್ 2ರಂದು ಮುದ್ದಾದ ಮೊಮ್ಮಗಳು ಬ್ರಿಯಾರ್ ಜೂಲಿಯೆಟ್ ಲಾಕ್ವಡ್ಗೆ ಜನ್ಮ ನೀಡುತ್ತಾರೆ.
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ