VIDEO: ಸಮುದ್ರದಲ್ಲಿ ಬಿದ್ದ ಮೊಬೈಲ್ ತಂದುಕೊಟ್ಟಿತ್ತು ಆ ಜೀವಿ; ವಿಡಿಯೋ ವೈರಲ್

ನಾರ್​ವೇ ನಿವಾಸಿ ಮನ್​​ಸಿಕಾ ಎಂಬುವವರು ಗೆಳೆಯರ ಜೊತೆ ಸಮುದ್ರದಲ್ಲಿ ಪ್ರಯಾಣ ತೆರಳಿದ್ದರು. ಸೆಲ್ಫಿ ತೆಗೆಯುತ್ತಿದ್ದಾಗ ಮೊಬೈಲ್​ ನೀರಿಗೆ ಬಿದ್ದಿದೆ. ಈ ವೇಳೆ ಯಾರೂ ಊಹಿಸದ ಘಟನೆ ಒಂದು ನಡೆಯಿತು.

Rajesh Duggumane | news18
Updated:May 10, 2019, 1:36 PM IST
VIDEO: ಸಮುದ್ರದಲ್ಲಿ ಬಿದ್ದ ಮೊಬೈಲ್ ತಂದುಕೊಟ್ಟಿತ್ತು ಆ ಜೀವಿ; ವಿಡಿಯೋ ವೈರಲ್
ಮೊಬೈಲ್​ ತಂದುಕೊಟ್ಟ ತಿಮಿಂಗಿಲ
Rajesh Duggumane | news18
Updated: May 10, 2019, 1:36 PM IST
ಸಮುದ್ರ ಮಧ್ಯೆ ಬೋಟ್​ನಲ್ಲಿ ಸಾಗುತ್ತಿರುತ್ತೀರಿ. ಈ ವೇಳೆ ನಿಮ್ಮ ಕೈಯಲ್ಲಿದ್ದ ಮೊಬೈಲ್​ ಜಾರಿ ನೀರಿಗೆ ಬೀಳುತ್ತದೆ. ಹೀಗಾದರೆ, ಅದೆಷ್ಟೇ ಬೆಲೆಯ ಮೊಬೈಲ್​ ಆಗಿದ್ದರೂ ನೀವದರ ಆಸೆ ಬಿಡಬೇಕು. ಸಮುದ್ರದಲ್ಲಿ ಮೊಬೈಲ್​ ಕಳೆದುಕೊಂಡು ನಾರ್​ವೇ ಮಹಿಳೆ ಕೂಡ ಇದೇ ರೀತಿ ಭಾವಿಸಿದ್ದರು. ಆದರೆ, ಅಚ್ಚರಿಯ ರೀತಿಯಲ್ಲಿ ಅವರಿಗೆ ಮೊಬೈಲ್​ ವಾಪಾಸು​ ಸಿಕ್ಕಿದೆ.

ನಾರ್​ವೇ ನಿವಾಸಿ ಮನ್​​ಸಿಕಾ ಎಂಬುವವರು ಗೆಳೆಯರ ಜೊತೆ ಸಮುದ್ರದಲ್ಲಿ ಪ್ರಯಾಣ ತೆರಳಿದ್ದರು. ಈ ವೇಳೆ ಸೆಲ್ಫೀ ತೆಗೆದುಕೊಳ್ಳುವುದರಲ್ಲಿ ಅವರು ಬ್ಯಸಿಯಾಗಿದ್ದರು. ಆಗ ಅಚಾನಕ್ಕಾಗಿ ಮೊಬೈಲ್​ ನೀರಿಗೆ ಬಿದ್ದಿದೆ. ದುಬಾರಿ ಮೊಬೈಲ್​ ಆದ್ದರಿಂದ ಮನ್​ಸಿಕಾ ತುಂಬಾನೇ ಬೇಸರಗೊಂಡಿದ್ದರು.  ಯಾವುದೇ ರೀತಿಯಲ್ಲೂ ಅವರಿಗೆ ಮೊಬೈಲ್​ ವಾಪಸ್​​ ಸಿಗುವ ಲಕ್ಷಣ ಗೋಚರವಾಗಿಲ್ಲ.





ಈ ವೇಳೆ ಯಾರೂ ಊಹಿಸದ ಘಟನೆ ಒಂದು ನಡೆಯಿತು. ನೀರಿನಾಳದಿಂದ ಬೆಲುಗಾ ಜಾತಿಗೆ ಸೇರಿದ ತಿಮಿಂಗ ಮೇಲೆ ಬರುತ್ತಿರುವುದು ಕಂಡಿತ್ತು. ಅಚ್ಚರಿ ಎಂದರೆ, ಆ ತಿಮಿಂಗಿಲ ಬಾಯಲ್ಲಿ ನೀರಿನಲ್ಲಿ ಬಿದ್ದ ಮೊಬೈಲ್​ ಇತ್ತು! ತಿಮಿಂಗಿಲ ಅದನ್ನು ತಂದು ಮೊಬೈಲ್​ ಮಾಲೀಕರಿಗೆ ತಲುಪಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

First published:May 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...