HOME » NEWS » Trend » WITH SPECIAL PASSENGERS ONBOARD AIR NEW ZEALAND BOEING 787 DRAWS A KIWI IN THE SKY STG HG

ವಿಶೇಷ ಸಾಮರ್ಥ್ಯ ಹೊಂದಿರುವ ಮಕ್ಕಳಿಗೆ ದೇಶ ಸುತ್ತಿಸಿದ ನ್ಯೂಜಿಲೆಂಡ್ ಬೋಯಿಂಗ್ 787 ವಿಮಾನ! ನೆಟ್ಟಿಗರಿಂದ ಶ್ಲಾಘನೆ

ಈ ವಿಮಾನ ಕ್ರೈಸ್ಟ್‌ಚರ್ಚ್‌ನಿಂದ ಪಶ್ಚಿಮ ಕರಾವಳಿಯ ಕಡೆಗೆ ಹೊರಟು ತಾರಾನಕಿಯನ್ನು ದಾಟಿದ ನಂತರ ಮತ್ತೆ ಕ್ರೈಸ್ಟ್‌ಚರ್ಚ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಈ ಪ್ರವಾಸ ಕೋರು ಕೇರ್ ಎಂಬ ಚಾರಿಟಿ ಉಪಕ್ರಮದ ಒಂದು ಭಾಗವಾಗಿತ್ತು. ಕೋರು ಕೇರ್ ವಿಕಲಾಂಗ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳಿಗೆ ವಿಶೇಷ ಅನುಭವಗಳನ್ನು ಆಯೋಜಿಸುತ್ತದೆ.

news18-kannada
Updated:May 18, 2021, 11:27 AM IST
ವಿಶೇಷ ಸಾಮರ್ಥ್ಯ ಹೊಂದಿರುವ ಮಕ್ಕಳಿಗೆ ದೇಶ ಸುತ್ತಿಸಿದ ನ್ಯೂಜಿಲೆಂಡ್ ಬೋಯಿಂಗ್ 787 ವಿಮಾನ! ನೆಟ್ಟಿಗರಿಂದ ಶ್ಲಾಘನೆ
Photo by @flightradar24 / Twitter.
  • Share this:
ಏರ್ ನ್ಯೂಜಿಲೆಂಡ್‌ನ ಹೃದಯ ಸ್ಪರ್ಶಿ ಗೆಸ್ಚರ್ ಆನ್‌ಲೈನ್‌ನಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದೆ. ವಿಶೇಷ ಸಾಮರ್ಥ್ಯವಿರುವ ಮಕ್ಕಳನ್ನು ದೇಶಾದ್ಯಂತ ವಿಮಾನದಲ್ಲಿ ಕರೆದೊಯ್ಯುವ ಈ ರೀತಿಯ ಕಾರ್ಯವು ಹಲವರ ಹೃದಯಗಳನ್ನು ಗೆಲ್ಲುತ್ತಿದೆ. ಬೋಯಿಂಗ್ 787-9 ಡ್ರೀಮ್‌ಲೈನರ್ ವಿಮಾನವು ಟರ್ಮಿನಲ್ ಅನಾರೋಗ್ಯ ಹೊಂದಿದ್ದ 50 ಮಕ್ಕಳನ್ನು ಆಕಾಶದಲ್ಲಿ ಹಾರಾಡಿಸಿತು. ಮತ್ತು ಆಕಾಶದಲ್ಲಿ ನ್ಯೂಜಿಲೆಂಡ್‌ನ ರಾಷ್ಟ್ರೀಯ ಪಕ್ಷಿ ಕಿವಿಯ ಚಿತ್ರವನ್ನು ತನ್ನ ಹಾರಾಟದ ಮಾರ್ಗದ ಮೂಲಕ ಬರೆದಿದೆ. ನ್ಯೂಸ್‌ಹಬ್‌ನಲ್ಲಿನ ವರದಿಯ ಪ್ರಕಾರ ಶನಿವಾರ ಏರ್‌ ನ್ಯೂಜಿಲೆಂಡ್‌ ಮುಖ್ಯ ಪೈಲಟ್ ಕ್ಯಾಪ್ಟನ್ ಡೇವಿಡ್ ಮೋರ್ಗಾನ್ ಶನಿವಾರ ಮಕ್ಕಳಿಗೆ ದೇಶ ಸುತ್ತಿಸುವ ಈ ಕಾರ್ಯದ ಪೈಲಟ್‌ ಆಗಿದ್ದರು.

ಈ ವಿಮಾನ ಕ್ರೈಸ್ಟ್‌ಚರ್ಚ್‌ನಿಂದ ಪಶ್ಚಿಮ ಕರಾವಳಿಯ ಕಡೆಗೆ ಹೊರಟು ತಾರಾನಕಿಯನ್ನು ದಾಟಿದ ನಂತರ ಮತ್ತೆ ಕ್ರೈಸ್ಟ್‌ಚರ್ಚ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಈ ಪ್ರವಾಸ ಕೋರು ಕೇರ್ ಎಂಬ ಚಾರಿಟಿ ಉಪಕ್ರಮದ ಒಂದು ಭಾಗವಾಗಿತ್ತು. ಕೋರು ಕೇರ್ ವಿಕಲಾಂಗ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳಿಗೆ ವಿಶೇಷ ಅನುಭವಗಳನ್ನು ಆಯೋಜಿಸುತ್ತದೆ.

ಅಧಿಕೃತ ಟ್ವಿಟ್ಟರ್‌ ಹ್ಯಾಂಡಲ್ Flighttrader24 ಈ ವಿಮಾನದ ಹಾರಾಟದ ಚಿತ್ರವನ್ನು ಹಂಚಿಕೊಂಡಿದೆ. ಆಶ್ಚರ್ಯಕರವಾಗಿ, ಇದು ಕಿವಿಯ ಆಕಾರವನ್ನು ಸಂಪೂರ್ಣವಾಗಿ ವಿವರಿಸಿದೆ.

ಇನ್ನು, ಈ ವಿಮಾನದ ಹಾರಾಟದ ನಂತರ, ಏರ್ ನ್ಯೂಜಿಲೆಂಡ್ ತಮ್ಮ ಅನುಭವವನ್ನು ಟ್ವೀಟ್ ಮಾಡಿದೆ. ''ಈಗಷ್ಟೇ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆದೆವು ಮತ್ತು ಇನ್ನೂ ಕಿವಿಯಲ್ಲಿ ಝೇಂಕರಿಸುತ್ತಿದೆ. ಎಂತಹ ಮರೆಯಲಾಗದ ಹಾರಾಟ. ಹೃದಯ ಆಕಾರದ ಕಣ್ಣುಗಳೊಂದಿಗೆ ನಗುತ್ತಿದ್ದೇನೆ'' ಎಂದು ತನ್ನ ಅಧಿಕೃತ ಟ್ವಿಟ್ಟರ್‌ ಹ್ಯಾಂಡಲ್‌ನಲ್ಲಿ ಬರೆದುಕೊಂಡಿದೆ.

ಈ ವಿಮಾನದಲ್ಲಿದ್ದ ಏರ್‌ ನ್ಯೂಜಿಲೆಂಡ್‌ ಸಿಇಒ ಗ್ರೆಗ್ ಫೋರನ್, ಈ ಮಕ್ಕಳು ಸಾಮಾನ್ಯವಾಗಿ ಅವರ ವೈದ್ಯಕೀಯ ಪರಿಸ್ಥಿತಿಗಳು ಅಥವಾ ಕುಟುಂಬದ ಸಂದರ್ಭಗಳಿಂದಾಗಿ ಕಡಲಾಚೆಯ ಪ್ರಯಾಣ ಮಾಡಲು ಸಾಧ್ಯವಾಗದ ಕಾರಣ ವಿಮಾನ ಪ್ರಯಾಣವು ''ಅಪ್‌ಲಿಫ್ಟಿಂಗ್'' ಎಂದು ಬಹಿರಂಗಪಡಿಸಿತು. "ಇಂದಿನ ಹಾರಾಟವು ನಿಜವಾಗಿಯೂ ಹೃದಯವನ್ನು ಬೆಚ್ಚಗಾಗಿಸುತ್ತದೆ'' ಎಂದು ಅವರು ಹೇಳಿದರು. ಅಲ್ಲದೆ, ಅವರು ಹಾರಾಟದ ಉತ್ಸಾಹವನ್ನು ಅನುಭವಿಸಬೇಕೆಂದು ಅವರು ಬಯಸಿದ್ದರು ಮತ್ತು "ಲಿಟಲ್ ಹೀರೋಸ್" ಗಾಗಿ ಮಾಂತ್ರಿಕ ಅನುಭವವನ್ನು ಸೃಷ್ಟಿಸಲು ಅವರ ತಂಡ ಎಲ್ಲಾ ವಿಮಾನ ನಿಲ್ದಾಣಗಳನ್ನು ರೆಡಿ ಮಾಡಿತ್ತು ಎಂದು ಗ್ರೆಗ್ ಫೋರನ್ ಹೇಳಿದರು.

ವಿಮಾನ ಟೇಕ್‌ಆಫ್ ಆಗುವ ಮೊದಲು, ಮಕ್ಕಳು ವಿಮಾನ ನಿಲ್ದಾಣದಲ್ಲಿ ಸೂಪರ್ ಹೀರೋ ಥೀಮ್ ಪಾರ್ಟಿಯನ್ನು ಸಹ ಆನಂದಿಸಿದರು. ಅವರು ತಮ್ಮ ಮುಖಗಳನ್ನು ಪೇಂಟ್‌ ಮಾಡಿಕೊಂಡಿದ್ದರು, ಸೂಪರ್‌ಹೀರೋ ಭಾವಚಿತ್ರಗಳಿಗೆ ಪೋಸ್ ನೀಡಿದರು ಮತ್ತು ಸೈಲೆಂಟ್‌ ಡಿಸ್ಕೋದಲ್ಲಿ ನೃತ್ಯವನ್ನೂ ಮಾಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ನಡೆದ ಈ ಸಪ್ರೈಸ್‌ ಪಾರ್ಟಿಯನ್ನು ನ್ಯೂಜಿಲೆಂಡ್‌ನ ಪಾಪ್ ಬ್ಯಾಂಡ್‌ ಡ್ರಾಕ್ಸ್ ಪ್ರಾಜೆಕ್ಟ್ ಆಯೋಜನೆ ಮಾಡಿತ್ತು.
Youtube Video
ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ವಿಶೇಷ ಸಾಮರ್ಥ್ಯ ಹೊಂದಿರುವ ಮಕ್ಕಳ ಪ್ರವಾಸ ಆಯೋಜನೆ ಮಾಡಿದ್ದಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅವರು ಸಕಾರಾತ್ಮಕ ಪ್ರತಿಕ್ರಿಯೆಗಳೊಂದಿಗೆ ಈ ಪೋಸ್ಟ್‌ಗೆ ಲೈಕ್ಸ್‌ ಹಾಗೂ ಕಮೆಂಟ್ಸ್‌ಗಳನ್ನು ಮಾಡುತ್ತಿದ್ದಾರೆ.
First published: May 18, 2021, 11:26 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories