Winter Travel: ಚಳಿಗಾಲದಲ್ಲಿ ಪ್ರವಾಸದ ಜೊತೆಗೆ ತಪ್ಪದೇ ಈ ಉತ್ಸವಗಳಲ್ಲಿ ಭಾಗಿಯಾಗಿ

Winter Festival: ರಾಜಸ್ಥಾನದಲ್ಲಿ ಮರಳಿನ ಮರುಭೂಮಿ ಹೇಗೆ ಇದೆಯೋ ಹಾಗೆನೇ ಗುಜರಾತಿನಲ್ಲಿ ಉಪ್ಪಿನ ಮರುಭೂಮಿ ಇದೆ. ಇದನ್ನು ರಾನ್ ಆಫ್ ಕಚ್ ಎನ್ನುತ್ತಾರೆ. ಕಚ್ ಬಹುಶಃ ಭಾರತದ ಅತ್ಯಂತ ಸುಂದರವಾದ, ಆದರೆ ಅತಿವಾಸ್ತವಿಕವಾದ ಸ್ಥಳಗಳಲ್ಲಿ ಒಂದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಚಳಿಗಾಲ(Winter) ಬೇರೆ ಶುರುವಾಗಿದೆ ಹೊಸ ವರ್ಷದ(New  Year) ಆರಂಭ ಆಗಿದೆ.. ಹೊಸವರ್ಷದ ಆರಂಭದಲ್ಲಿ ಹೊಸ ಹೊಸ ತಾಣಗಳಿಗೆ(Place) ಪ್ರವಾಸ(Travel) ಹೋಗಬೇಕು ಅನ್ನೋದು ಎಲ್ಲರ ಆಸೆಯಾಗಿರುತ್ತದೆ.. ಅದರಲ್ಲೂ ಚಳಿಗಾಲ ಮುಗಿಯುವ ವೇಳೆಗೆ ಎಲ್ಲಿಗಾದರೂ ಉತ್ತಮವಾಗಿ ಇರುವ ಸ್ಥಳಗಳಿಗೆ ಪ್ರವಾಸಕ್ಕೆ ಹೋದರು ಸಖತ್ ಎಂಜಾಯ್(Enjoy) ಮಾಡಬಹುದು ಎಂಬ ಚಿಂತೆಯಲ್ಲಿ ಎಲ್ಲರೂ ಇರುತ್ತಾರೆ.. ಹೀಗಾಗಿಯೇ ಗೂಗಲ್(Google) ಮಾಡುವುದರ ಜೊತೆಗೆ ಪರಿಚಯ ಇರುವ ಹಲವರನ್ನು ಯಾವ ಸ್ಥಳಕ್ಕೆ ಪ್ರವಾಸಕ್ಕೆ ಹೋದರೆ ಸೂಕ್ತ ಎಂದು ಹುಡುಕುತ್ತಲೇ ಇರುತ್ತಾರೆ. ನೀವು ಚಳಿಗಾಲದಲ್ಲಿ ಪ್ರವಾಸಕ್ಕೆ ಹೋಗಬೇಕು ಅಂದುಕೊಂಡಿದ್ದರೆ ಕೇವಲ ಚಳಿಗಾಲವನ್ನು ಎಂಜಾಯ್ ಮಾಡುವುದು ಮಾತ್ರವಲ್ಲ ಚಳಿಗಾಲದಲ್ಲಿ ಭಾರತದಲ್ಲಿ ವಿಶೇಷವಾಗಿ .ಕೆಲವೊಂದಷ್ಟು ಉತ್ಸವಗಳು ನಡೆಯುತ್ತವೆ.. ಅಂತಹ ಉತ್ಸವ ನಡೆಯುವ ಸ್ಥಳಗಳಿಗೆ ಹೋದರೆ ನಿಮ್ಮ ಚಳಿಗಾಲದ ಪ್ರವಾಸ ಮತ್ತಷ್ಟು ಸುಂದರವಾಗಿ ಇರಲಿದೆ. ಇದ್ರೆ ಚಳಿಗಾಲದಲ್ಲಿ ನಾವು ಮಿಸ್ ಮಾಡದೆ ನೋಡಬೇಕಾಗಿರುವ ಉತ್ಸವಗಳು ಹಾಗು ಸ್ಥಳಗಳು ಯಾವುವು ಎನ್ನುವ ಮಾಹಿತಿ ಇಲ್ಲಿದೆ.

  1)ರಣ್ ಉತ್ಸವ್: ರಾಜಸ್ಥಾನದಲ್ಲಿ ಮರಳಿನ ಮರುಭೂಮಿ ಹೇಗೆ ಇದೆಯೋ ಹಾಗೆನೇ ಗುಜರಾತಿನಲ್ಲಿ ಉಪ್ಪಿನ ಮರುಭೂಮಿ ಇದೆ. ಇದನ್ನು ರಾನ್ ಆಫ್ ಕಚ್ ಎನ್ನುತ್ತಾರೆ. ಕಚ್ ಬಹುಶಃ ಭಾರತದ ಅತ್ಯಂತ ಸುಂದರವಾದ, ಆದರೆ ಅತಿವಾಸ್ತವಿಕವಾದ ಸ್ಥಳಗಳಲ್ಲಿ ಒಂದಾಗಿದೆ. ರಾನ್ ಆಫ್ ಕಚ್ ಪ್ರದೇಶದಲ್ಲಿ ಬಿಳಿ ಉಪ್ಪು ಮರುಭೂಮಿಯ ವಿಸ್ತಾರದೊಂದಿಗೆ, ಇದು ಸಾಕ್ಷಿಯಾಗಲು ಅದ್ಭುತ ಅನುಭವವಾಗಿದೆ. ದೃಷ್ಟಿ ಹಾಯಿಸಿದಷ್ಟು ದೂರ ಶುದ್ಧ ಬಿಳಿ ಭೂಮಿಯ ವಿಸ್ತಾರವನ್ನು ನೋಡಲು ಸಾಧ್ಯವಾಗುತ್ತದೆ.ಅಲ್ಲದೆ ಇಲ್ಲಿ ನವೆಂಬರ್‌ನಿಂದ ಫೆಬ್ರವರಿವರೆಗೂ ಗುಜರಾತ್‌ನ ಕುಛ್‌ನಲ್ಲಿ ರಣ್ ಉತ್ಸವ್ ನಡೆಯುತ್ತದೆ. ಭಾರತದ ಬಿಳಿ ಮರಳುಗಾಡಾದ ಕುಛ್‌ನಲ್ಲಿ ನಡೆಯುವ ಜಾನಪದ ನೃತ್ಯ, ಹಾಡು, ಜಾತ್ರೆಗಳ ಸಮಾಗಮ. ಈಗಲೇ ಬುಕ್ ಮಾಡಿಕೊಂಡು ರಣ್ ಉತ್ಸವ್‌ನಲ್ಲಿ ಭಾಗಿಯಾಗಿ.

  ಇದನ್ನೂ ಓದಿ: ಲಡಾಕ್​ನ ರಸ್ತೆಗಳಲ್ಲಿ ಮೊಬೈಲ್​ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ಪ್ರಕೃತಿಯ ಸೌಂದರ್ಯ..!

  2)ತೆಯ್ಯಮ್ ಹಬ್ಬ: ಉತ್ತರ ಕೇರಳದ ಹಸಿರಿನ ಪರಿಸರದಲ್ಲಿ `ತೆಯ್ಯಂ' ಎಂಬ ಪ್ರಾಚೀನ, ಸಾಂಪ್ರದಾಯಿಕ ನೃತ್ಯ ನಡೆಯುತ್ತಿರುತ್ತದೆ. ಸ್ಥಳೀಯ ದೇವ-ದೇವತೆಗಳು ಹಾಗೂ ಮಹಾಪುರುಷರನ್ನು ಆರಾಧಿಸುವ, ಹೊಗಳುವ ನೃತ್ಯ ಪ್ರಕಾರವಿದು.
  ಕೇರಳದ ಪೆರುಮ್ತಿಟ್ಟ ಥರವಾಡ್ ತೆಯ್ಯಂ ಹಬ್ಬವು ಈ ವರ್ಷಾಂತ್ಯದ ಟ್ರಿಪ್‌ನಲ್ಲಿ ನೀವು ಸವಿಯಬಹುದಾದ ಸೊಗಸಾದ ಉತ್ಸವ. ಡಿಸೆಂಬರ್ ಕಾಸರಗೋಡಿನಲ್ಲಿ ತೆಯ್ಯಮ್ ಆರಂಭವಾಗುತ್ತದೆ.

  3)ವಿಂಟರ್ ಫೆಸ್ಟಿವಲ್, ರಾಜಸ್ಥಾನ: ಅರಮನೆಗಳ ನಗರವಾಗಿರುವ ರಾಜಸ್ಥಾನ ಮರುಭೂಮಿ ಮಾತ್ರವಲ್ಲ ವಿವಿಧ ಆಚರಣೆಗಳಿಗೂ ಕೂಡಾ ಸಾಕಷ್ಟು ಪ್ರಸಿದ್ಧಿ ಪಡೆದಿದೆ..ಅದರಲ್ಲೂ ಚಳಿಗಾಲದಲ್ಲಿ ರಾಜಸ್ಥಾನಕ್ಕೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ. ರಾಜಸ್ಥಾನದ ಜನಪ್ರಿಯ ಸ್ಥಳವಾದ ಮೌಂಟ್ ಅಬುವಿನಲ್ಲಿ ಚಳಿಗಾಲದಲ್ಲಿ ನಡೆಯುವ ವಿಂಟರ್ ಫೆಸ್ಟಿವಲ್ ಪ್ರವಾಸಕ್ಕೆ ಹೋಗಬೇಕು ಎಂದುಕೊಂಡವರು ಭೇಟಿ ನೀಡಲು ಇರುವ ಸೂಕ್ತವಾದ ಸ್ಥಳ. ಇನ್ವೆಂಟರ್ ಫೆಸ್ಟಿವಲ್ ನಲ್ಲಿ ವಿಶಿಷ್ಟ ಸಂಸ್ಕೃತಿ ಸಂಪ್ರದಾಯಗಳು ರಾಜಸ್ಥಾನ ಶೈಲಿಯ ನೃತ್ಯ ಎಲ್ಲವೂ ಕೂಡ ಗಮನ ಸೆಳೆಯುತ್ತದೆ.

  4)ಗಂಗಾಸಾಗರ್ ಮೇಳ: ಪಶ್ಚಿಮ ಬಂಗಾಳದ ಕೋಲ್ಕತಾ ನಗರ ದೀಪದಲ್ಲಿ ಪ್ರತಿವರ್ಷ ಕುಂಭಮೇಳದ ರೀತಿಯಲ್ಲೇ ಗಂಗಾಸಾಗರ ಮೇಳವು ನಡೆಸಲಾಗುತ್ತದೆ.
  ಕುಂಭಮೇಳದ ಬಳಿಕ ಅತಿ ಹೆಚ್ಚು ಜನರು ಸೇರುವ ಉತ್ಸವಗಳಲ್ಲಿ ಗಂಗಾಸಾಗರ ಮೇಳ ಕೂಡ ಒಂದು. ಮಕರ ಸಂಕ್ರಾಂತಿಯೆಂದು ನಡೆಯಲಿರುವ ಈ ಗಂಗಾ ಸಾಗರ ಮೇಳದಲ್ಲಿ ಲಕ್ಷಾಂತರ ಭಕ್ತರು ಗಂಗೆಯಲ್ಲಿ ಮುಳುಗೆದ್ದು ಪವಿತ್ರ ಗಂಗಾನದಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಸುಮಾರು ಎರಡು ತಿಂಗಳುಗಳ ಕಾಲ ಗಂಗಾಸಾಗರ ಮೇಳ ನಡೆಯುತ್ತದೆ.

  ಇದನ್ನೂ ಓದಿ: ಚಳಿಗಾಲದಲ್ಲಿ ನೀವು ಪ್ರವಾಸ ಹೋಗಬೇಕು ಅಂದುಕೊಂಡಿದ್ದರೆ ಮಿಸ್ ಮಾಡದೇ ಈ ಸ್ಥಳಗಳಿಗೆ ಹೋಗಿ

  5)ಗಾಳಿಪಟ ಉತ್ಸವ: ಗುಜರಾತ್‌ನಲ್ಲಿ ಪ್ರತಿ ವರ್ಷ ಮಕರ ಸಂಕ್ರಾಂತಿಯ ದಿನ ನಡೆವ ಗಾಳಿಪಟ ಉತ್ಸವ ಈ ರಾಜ್ಯದ ಅತಿ ದೊಡ್ಡ ಸಂಭ್ರಮಗಳಲ್ಲೊಂದು. ಇಡೀ ರಾಜ್ಯದ ಜನತೆ, ಹೊರಗಿನ ಗಾಳಿಪಟ ಉತ್ಸಾಹಿಗಳೆಲ್ಲರೂ ಇದರಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಸವೇ ಮುಚ್ಚುವಂತೆ ಗಾಳಿಪಟ ಹಾರಿಸುವುದನ್ನು ನೋಡುವುದಕ್ಕಿಂತ ಸೊಬಗು ಮತ್ತೊಂದಿರಲಾರದು. ಗುಜರಾತ್‌ನಲ್ಲಿ ಪ್ರತಿ ವರ್ಷ ಮಕರ ಸಂಕ್ರಾಂತಿಯ ದಿನ ನಡೆವ ಗಾಳಿಪಟ ಉತ್ಸವ ಈ ರಾಜ್ಯದ ಅತಿ ದೊಡ್ಡ ಸಂಭ್ರಮಗಳಲ್ಲೊಂದು. ಇಡೀ ರಾಜ್ಯದ ಜನತೆ, ಹೊರಗಿನ ಗಾಳಿಪಟ ಉತ್ಸಾಹಿಗಳೆಲ್ಲರೂ ಇದರಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಸವೇ ಮುಚ್ಚುವಂತೆ ಗಾಳಿಪಟ ಹಾರಿಸುವುದನ್ನು ನೋಡುವುದಕ್ಕಿಂತ ಸೊಬಗು ಮತ್ತೊಂದಿರಲಾರದು.
  Published by:ranjumbkgowda1 ranjumbkgowda1
  First published: