OMG ಪ್ರಳಯ ಫಿಕ್ಸ್! "2060ಕ್ಕೆ ಪ್ರಪಂಚದ ಕಥೆ ಮುಗಿದೇ ಹೋಗುತ್ತೆ!" ಪ್ರಸಿದ್ಧ ವಿಜ್ಞಾನಿಯ ಪತ್ರ ವೈರಲ್

"2012 ಡಿಸೆಂಬರ್ 21ಕ್ಕೆ ಜಗತ್ತು ಸರ್ವನಾಶ ಆಗುತ್ತದೆ" ಎಂದು ನಾವು, ನೀವೆಲ್ಲಾ ಕೇಳಿದ್ದೆವು ಮತ್ತು ಭಾವಿಸಿದ್ದೆವು. ಆದರೆ ಅದೆಲ್ಲಾ ಸುಳ್ಳಾಗಿತ್ತು. ಆದರೆ 2060ಕ್ಕೆ ಜಗತ್ತು ನಾಶವಾಗುವುದು ಶತಸಿದ್ಧ ಅಂತ ಪ್ರಪಂಚದ ಖ್ಯಾತ ವಿಜ್ಞಾನಿಯೊಬ್ಬರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಕುತೂಹಲಕಾರಿ ವರದಿ ಇಲ್ಲಿದೆ ಓದಿ...

ಕಾಲ್ಪನಿಕ ಚಿತ್ರ

ಕಾಲ್ಪನಿಕ ಚಿತ್ರ

 • Share this:
  2012 ರಲ್ಲಿ ಪ್ರಳಯ ಆಗುತ್ತೆ, ಜಗತ್ತು ಅಂತ್ಯ (The End Of The World) ಕಾಣುತ್ತೆ ಎಂಬ ವದಂತಿಗಳ ಬಗ್ಗೆ ನಿಮಗೆಲ್ಲಾ ಚೆನ್ನಾಗಿಯೇ ತಿಳಿದಿದೆ. 2009 ರಿಂದ 2012ರವರೆಗೆ ವಿಶ್ವದಲ್ಲಿ ಪ್ರಳಯಾಂತಕಾರಿ ಘಟನೆಗಳು ನಡೆದು 2012 ಡಿಸೆಂಬರ್ 21ಕ್ಕೆ ಜಗತ್ತು ಸರ್ವನಾಶ (The world is in ruins) ಆಗುತ್ತದೆ ಎಂದು ನಾವು, ನೀವೆಲ್ಲಾ ಕೇಳಿದ್ದೆವು ಮತ್ತು ಭಾವಿಸಿದ್ದೆವು. ಆದರೆ ಅದೆಲ್ಲಾ ಸುಳ್ಳಾಗಿತ್ತು. ಈವರೆಗೆ ವಿಶ್ವ ಅಸ್ತಿತ್ವದಲ್ಲಿರುವುದು ನಮ್ಮ ಕಣ್ಣಿಗೆ ಕಾಣುತ್ತಿದೆ. ಆದರೆ ಇದೇ ರೀತಿಯ ವಿಚಾರವನ್ನು ಭೌತವಿಜ್ಞಾನಿ (Physicist), ಗಣಿತಜ್ಞ (Mathematician), ಖಗೋಳಶಾಸ್ತ್ರಜ್ಞರೊಬ್ಬರು (Astronomer) ಭವಿಷ್ಯ ವಾಣಿ ನುಡಿದಿದ್ದಾರೆ. ಅವರು ಜಗತ್ತಿನ ಅಂತ್ಯವನ್ನು 1706ರಲ್ಲಿ ಬರೆದ ಪತ್ರದಲ್ಲಿ (Letter) ಉಲ್ಲೇಖ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಈಗ ಪ್ರಪಂಚದಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

  ವೈರಲ್ ಆಗುತ್ತಿದೆ ಈ ಸುದ್ದಿ!

  ಪ್ರಪಂಚದ ಅಂತ್ಯವು ಬಹಳಷ್ಟು ಜನರಿಗೆ ಒಂದು ಕುತೂಹಲಕಾರಿ ವಿಷಯವಾಗಿದೆ. ಈ ವಿಶಾಲವಾದ ತೀರ್ಮಾನದ ಬಗ್ಗೆ ಯೋಚಿಸುವುದು ನಮ್ಮ ಮೆದುಳಿಗಿಂತ ಹೆಚ್ಚಾಗಿ ನಮ್ಮ ಮನಸ್ಸನ್ನು ವಿಚಲಿತಗೊಳಿಸುತ್ತದೆ. ಸಂಬಂಧಿಸಿದ ಅತೀಂದ್ರಿಯ ನೀತಿಕಥೆಗಳಿಂದ ವಿಜ್ಞಾನದಿಂದ ಹಿಡಿದು ಜನಸಾಮಾನ್ಯರಿಗೆ ಸೂಚಿಸಲಾದ ಉತ್ತಮ ವಿಶ್ಲೇಷಣೆ ಮತ್ತು ಧರ್ಮದೊಂದಿಗೆ, ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಪ್ರಚಾರದಲ್ಲಿ ಜಗತ್ತನ್ನು ಕೊನೆಗೊಳಿಸಿದರು.

  ‘2060ರಲ್ಲಿ ಪ್ರಪಂಚದ ಅಂತ್ಯ’

  ಇಂತಹ ವಿಚಾರಗಳನ್ನು ವಿಜ್ಞಾನ ಲೋಕದ ಪ್ರಭಾವಿ ಸರ್ ಐಸಾಕ್ ನ್ಯೂಟನ್ ಸಹ ಚಿತ್ರಿಸಿಕೊಟ್ಟಿದ್ದಾರೆ. ಹೆಟೆರೊಡಾಕ್ಸಿಕ್ ಸಿದ್ಧಾಂತಗಳ ನಡುವೆ, ಆಚರಣೆಗಳು ಮತ್ತು ನಂಬಿಕೆಗಳ ವಿಷಯದಲ್ಲಿ ನ್ಯೂಟನ್ ಕೆಲವು ವಿಷಯಗಳನ್ನು ರೂಪಿಸಿದ್ದಾರೆ. ಪ್ರಪಂಚದ ಅಂತ್ಯವನ್ನು ಊಹಿಸಿರುವ ನ್ಯೂಟನ್ 2060ರಲ್ಲಿ ವಿಶ್ವವು ಕೊನೆಗೊಳ್ಳುತ್ತದೆ ಎಂಬ ವಿಚಾರವನ್ನು ಪತ್ರದಲ್ಲಿ ಬರೆದಿಟ್ಟಿದ್ದಾರೆ.

  ಇದನ್ನೂ ಓದಿ: Women Inventors: ನೀವು ದಿನನಿತ್ಯ ಬಳಕೆ ಮಾಡುವ ವಸ್ತುಗಳನ್ನು ಆವಿಷ್ಕಾರ ಮಾಡಿದ ಮಹಿಳೆಯರ ಹೆಸರು ಕೇಳಿದ್ದೀರಾ?

  ಈ ಪತ್ರ ಈಗ ಎಲ್ಲಿ ಇದೆ ಗೊತ್ತಾ?

  ಜೆರುಸಲೆಮ್‌ನ ಹೀಬ್ರೂ ವಿಶ್ವವಿದ್ಯಾನಿಲಯದಲ್ಲಿ ಪ್ರದರ್ಶಿಸಲಾದ ಈ ಪತ್ರದಲ್ಲಿ, ನ್ಯೂಟನ್ ತನ್ನ ಪ್ರವಾದಿಯ ಅಲ್ಗಾರಿದಮ್‌ಗಳನ್ನು ಬರೆದಿದ್ದಾರೆ ಮತ್ತು ನ್ಯೂಟನ್ ಅದನ್ನು'ಲೆಕ್ಕ' ಎಂದು ವಿವರಿಸಿದ್ದಾರೆ. ಸರ್ ಐಸಾಕ್ ನ್ಯೂಟನ್ 1706ರಲ್ಲಿ ಬರೆದ ಈ ಪತ್ರದಲ್ಲಿ, ಜಗತ್ತು 2060ರಲ್ಲಿ ಅಂತ್ಯ ಕಾಣುತ್ತದೆ ಎಂದು ಉಲ್ಲೇಖಿಸುವ ಮೂಲಕ ಜಗತ್ತಿನ ಅಂತ್ಯವನ್ನು ಸೂಚಿಸಿರುವ ಮತ್ತೊಬ್ಬ ಪ್ರಭಾವಿ ವ್ಯಕ್ತಿಯಾಗಿದ್ದಾರೆ .

  ಪತ್ರದಲ್ಲಿ ನ್ಯೂಟನ್ ಬರೆದಿದ್ದು ಏನು?

  ಪತ್ರದಲ್ಲಿ ವಿವರಿಸುತ್ತಾ, ನ್ಯೂಟನ್ ಬರೆಯುತ್ತಾರೆ, “ಅಲ್ಪಾವಧಿಯ ದಿನಗಳು ಮೃಗಗಳು ಬದುಕಿದ ಸಾಮ್ರಾಜ್ಯಗಳ ವರ್ಷಗಳಿಗೆ ಇಡಲಾಗಿದೆ ,1260 ದಿನಗಳ ಅವಧಿಯು ದಿನಾಂಕವನ್ನು ನೀಡುವುದಾದರೆ, ಮೂರು ರಾಜರ ಸಂಪೂರ್ಣ ವಿಜಯದಿಂದ ಕ್ರಿ.ಶ.800ರಲ್ಲಿ ಆರಂಭವಾಗಿ ಕ್ರಿ.ಶ.2060ರಲ್ಲಿ ಜಗತ್ತು ಅಂತ್ಯ ಕಾಣುತ್ತದೆ, ಆದರೆ ಶೀಘ್ರದಲ್ಲೇ ಕೊನೆಗೊಳ್ಳಲು ಯಾವುದೇ ಕಾರಣವಿಲ್ಲ ಎಂದು ತಮ್ಮ ಪತ್ರದಲ್ಲಿ ಬರೆದಿದ್ದಾರೆ.

  ಸರ್ ಐಸಾಕ್ ನ್ಯೂಟನ್ ಹಿನ್ನೆಲೆ

  1643ರಲ್ಲಿ ಇಂಗ್ಲೆಂಡ್‌ನಲ್ಲಿ ಜನಿಸಿದ ನ್ಯೂಟನ್ ಯಾವಾಗಲೂ ಅಸಾಂಪ್ರದಾಯಿಕ ವ್ಯಕ್ತಿಯಾಗಿದ್ದರು. ಲೇಖಕ ಫ್ಲೋರಿಯನ್ ಫ್ರೀಸ್ಟೆಟರ್ ತನ್ನ ಪುಸ್ತಕದಲ್ಲಿ ನ್ಯೂಟನ್‌ರನ್ನು "ವಿಚಿತ್ರ ಮತ್ತು ಅಪಾಯಕಾರಿ" ವ್ಯಕ್ತಿ ಎಂದು ವಿವರಿಸಿದ್ದಾರೆ. ನ್ಯೂಟನ್ ಜನಪದ ಆಧಾರಿತ ಸಿದ್ಧಾಂತಗಳಿಂದ ಆಕರ್ಷಿತರಾಗಿದ್ದರೂ ಸಹ ಅವರು ವಿಜ್ಞಾನದೊಂದಿಗೆ ಇದ್ದರು.

  ಗುರುತ್ವಾಕರ್ಷಣ ಸಿದ್ಧಾಂತದ ಪ್ರತಿಪಾದಕ

  ನ್ಯೂಟನ್‌ರು ಭೂಮಿಯ ಮೇಲಿನ ವಸ್ತುಗಳ ಚಲನೆ ಹಾಗೂ ಬಾಹ್ಯಾಕಾಶ ವಸ್ತುಗಳ ಚಲನೆಯೂ ಒಂದೇ ಗುಂಪಿನ ನೈಸರ್ಗಿಕ ಸೂತ್ರಗಳನ್ನು ಪಾಲಿಸುತ್ತವೆ ಎಂದು ಕೆಪ್ಲರನ ಗ್ರಹಗಳ ಚಲನೆಯ ಮೇಲಿನ ಸೂತ್ರಗಳು ಹಾಗೂ ತನ್ನ ಗುರುತ್ವಾಕರ್ಷಣಾ ಸಿದ್ಧಾಂತಗಳ ನಡುವಿನ ಸಾಮರಸ್ಯವನ್ನು ತೋರಿಸಿದರು. ಆ ಮೂಲಕ ಸೂರ್ಯಕೇಂದ್ರಿತವ್ಯವಸ್ಥೆಯ ಉಳಿದ ಅನುಮಾನಗಳನ್ನು ಪರಿಹರಿಸಿ ವೈಜ್ಞಾನಿಕ ಕ್ರಾಂತಿಯನ್ನು ಮುನ್ನಡೆಸಿದರು ಮತ್ತು ಅವರು ರಸವಾದದ ಬಗ್ಗೆಯೂ ಸಾಕಷ್ಟು ಸಮಯವನ್ನು ಮೀಸಲಿಟ್ಟಿದ್ದರು.

  ಬೈಬಲ್ ಬಗ್ಗೆಯೂ ನ್ಯೂಟನ್ ಉಲ್ಲೇಖ

  ವಿಜ್ಞಾನ, ಗಣಿತ, ತತ್ವಜ್ಞಾನದ ಕ್ಷೇತ್ರದಲ್ಲಿ ಇವರ ಕೊಡುಗೆ ಅಪಾರವಾಗಿದೆ. ದೇವತಾವಾದ ಮತ್ತು ನೈಸರ್ಗಿಕತೆಯ ಅಡಿಪಾಯದಲ್ಲಿ ಧಾರ್ಮಿಕತೆಗೆ ನ್ಯೂಟನ್‌ನ ಕೌಶಲ್ಯವು ಕೊಡುಗೆ ನೀಡಿದೆ. 1690ರ ದಶಕದಲ್ಲಿ, ನ್ಯೂಟನ್‌ರು ಬೈಬಲ್‌ ವಾಚ್ಯಾರ್ಥಗಳ ವ್ಯಾಖ್ಯಾನದ ಬಗ್ಗೆ ಅನೇಕ ಧಾರ್ಮಿಕ ಲಘುಪುಸ್ತಕಗಳನ್ನು ಬರೆದರು.

  ಇದನ್ನೂ ಓದಿ: 'ಹುಡುಗಿ' ಅಂದುಕೊಂಡು ಅಪ್ಪನನ್ನೇ ಪ್ರೀತಿಸಿದ ಮಗ! ಇದು Facebook ಅಲ್ಲ ಸ್ವಾಮಿ, 'Fake'book!

  ನ್ಯೂಟನ್, ಪತ್ರದಲ್ಲಿ 2060ರಲ್ಲಿ ಜಗತ್ತು ಕೊನೆಗೊಳ್ಳುತ್ತದೆ ಎಂದು ಪ್ರವಾದಿಯ ಲೆಕ್ಕಾಚಾರಗಳನ್ನು ಬರೆದಿದ್ದಾರೆ. ಆದರೆ, ಪತ್ರವನ್ನು ಈ ಜಗತ್ತು ಕಂಡ ಮಹಾನ್ ವ್ಯಕ್ತಿ ಬರೆದಿದ್ದರೂ ಸಹ ಅದನ್ನು ಇನ್ನೂ ಗಣನೆಗೆ ತೆಗೆದುಕೊಳ್ಳಲಾಗಿಲ್ಲ.
  Published by:Annappa Achari
  First published: