ಸಿಚ್ಲಿಡ್ ಮೀನುಗಳು (Cichlids Fish) ತಮ್ಮ ಮರಿಗಳನ್ನು ಬಾಯಿಯಲ್ಲಿಯೇ ಇರಿಸಿ ಪೋಷಣೆ ಮಾಡುತ್ತವೆ ಎಂಬುದಾಗಿ ಸೆಂಟ್ರಲ್ ಮಿಚಿಗನ್ ವಿದ್ಯಾಲಯದ ವಿಜ್ಞಾನಿಗಳು ಕಂಡುಹಿಡಿದಿದ್ದು, ತಮ್ಮ ಸಂತತಿಯಲ್ಲಿ 40% ದಷ್ಟನ್ನು ಅವು ಈ ಸಮಯದಲ್ಲಿ ಸೇವಿಸುತ್ತವೆ ಎಂಬ ಆಘಾತಕಾರಿ ವಿಷಯವನ್ನು ಬಯಲು ಮಾಡಿದ್ದಾರೆ. ಸಿಚ್ಲಿಡ್ ಮೀನುಗಳು ತಮ್ಮ ಮೊಟ್ಟೆಗಳ ಫಲವತ್ತತೆಯ ನಂತರ ಎರಡು ವಾರಗಳವರೆಗೆ ತಮ್ಮ ಮರಿಗಳನ್ನು ಬಾಯಿಯಲ್ಲಿ ಇಟ್ಟು ಪೋಷಿಸುತ್ತವೆ ಎಂದು ಹಿಂದಿನ ಸಂಶೋಧನೆಯು ತೋರಿಸಿದೆ. ಕೆಲವೊಮ್ಮೆ, ತಾಯಿ ಮೀನುಗಳು ಇದೇ ಮರಿಗಳು ಪ್ರಬುದ್ಧರಾಗುವ ಮೊದಲು ಮತ್ತು ಸ್ವತಂತ್ರರಾಗಲು ಅವಕಾಶವನ್ನು ಹೊಂದುವ ಮೊದಲೇ ತಮ್ಮ ಮರಿಗಳನ್ನು ತಿನ್ನುತ್ತವೆ ಎಂದು ಸೂಚಿಸುವ ಕೆಲವು ಪುರಾವೆಗಳಿವೆ ಎಂದು ಸಂಶೋಧನೆ ದೃಢೀಕರಿಸಿದೆ. ಈ ಹೊಸ ಪ್ರಯತ್ನದಲ್ಲಿ, ಸಂಶೋಧಕರು (Research) ಮೀನುಗಳ ಸಂತಾನೋತ್ಪತ್ತಿ ಅಭ್ಯಾಸಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅವುಗಳನ್ನು ಅತಿ ಸಮೀಪದಿಂದ ವಿಶ್ಲೇಷಣೆ ನಡೆಸಿದ್ದಾರೆ.
ಸಂಶೋಧಕರು ತಮ್ಮ ಪ್ರಯೋಗಾಲಯದಲ್ಲಿ, 80 ಹೆಣ್ಣು ಮೀನುಗಳು ಫಲವತ್ತಾದ ಮೊಟ್ಟೆಗಳನ್ನು ಹಾಕಿದವು. ಫಲೀಕರಣದ ನಂತರ, ಮೊಟ್ಟೆಗಳ ಪೋಷಣೆ ಹೇಗೆ ಮುಂದುವರೆಯಿತು ಎಂಬುದನ್ನು ಸಂಶೋಧಕರು ಗಮನಿಸಿದರು. ನಿರೀಕ್ಷೆಯಂತೆ, ತಾಯಿ ಮೀನುಗಳು ತಮ್ಮ ಸಂತತಿಯನ್ನು ಎರಡು ವಾರಗಳವರೆಗೆ ತಮ್ಮ ಬಾಯಿಯಲ್ಲಿ ಇಟ್ಟುಕೊಂಡವು. ಈ ಸಮಯದಲ್ಲಿ ತಾಯಿ ಮೀನುಗಳು ಸಾಮಾನ್ಯವಾಗಿ ಆಹಾರವನ್ನು ಸೇವಿಸುವುದಿಲ್ಲ ಎಂಬುದನ್ನು ಸಂಶೋಧಕರು ಗಮನಿಸಿದರು.
ಒತ್ತಡಕ್ಕೆ ಒಳಗಾದ ತಾಯಿ ಮೀನುಗಳು ಮರಿಗಳನ್ನು ಸೇವಿಸುವುದಕ್ಕೆ ಹೆಚ್ಚು ಪ್ರೇರಿತರಾಗಿವೆ
ಈ ಸಮಯದಲ್ಲಿ ತಾಯಿ ಮೀನುಗಳ ಒತ್ತಡಕ್ಕೆ ಒಳಗಾದಂತೆ ವರ್ತಿಸುತ್ತಿರುವುದನ್ನು ಗಮನಿಸಿದರು. ಹಾಗೆಯೇ ವಿವಿಧ ಹಂತದ ಒತ್ತಡವನ್ನು ಪ್ರದರ್ಶಿಸುವ ತಾಯಿ ಮೀನುಗಳನ್ನು ವಿಭಜಿಸಿದರು ಹಾಗೂ ಹೆಚ್ಚು ಒತ್ತಡಕ್ಕೆ ಒಳಗಾದ ಮೀನುಗಳಲ್ಲಿ ಹೆಚ್ಚಿನ ಮಟ್ಟದ ರಾಸಾಯನಿಕ ಬಿಡುಗಡೆಯಾಗುವುದನ್ನು ಕಂಡುಕೊಂಡರು. ಈ ಮೀನುಗಳಲ್ಲಿ 40% ದಷ್ಟು ತಮ್ಮ ಸಂತತಿಯನ್ನು ತಿನ್ನುತ್ತವೆ ಎಂಬುದನ್ನು ಸಂಶೋಧಕರು ಪತ್ತೆಹಚ್ಚಿದ್ದು, 93% ದಷ್ಟು ತಾಯಿ ಮೀನುಗಳು ಮರಿಗಳನ್ನು ಸೇವಿಸುವುದಾಗಿಯೂ ಕಂಡುಕೊಂಡಿದ್ದಾರೆ. ಹೆಚ್ಚು ಒತ್ತಡಕ್ಕೊಳಗಾದ ತಾಯಿ ಮೀನುಗಳು ಮರಿಗಳನ್ನು ಸೇವಿಸಲು ಹೆಚ್ಚು ಒಲವು ತೋರಿದ್ದಾರೆ ಎಂಬ ಆಘಾತಕಾರಿ ಅಂಶವನ್ನು ಬಹಿರಂಗಗೊಳಿಸಿದ್ದಾರೆ.
ಭೂಮಿಯ ಮೇಲಿನ ಅತ್ಯಂತ ಪೂರ್ವ ಜೀವಿಗಳ ಬಗ್ಗೆ ಪತ್ತೆಯಾಗಿದ್ದು, ಮಂಗಳದ ಗ್ರಹದಲ್ಲಿನ ಜೀವನದ ಬಗ್ಗೆ ಸುಳಿವುಗಳನ್ನು ನೀಡುತ್ತದೆ
ವಿಜ್ಞಾನಿಗಳು ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಲೇಯರ್ಡ್ ಬಂಡೆಗಳಲ್ಲಿ ಭೂಮಿಯ ಮೇಲಿನ ಪೂರ್ವ ಜೀವಿಗಳ ಕುರಿತು ಪುರಾವೆಗಳನ್ನು ಕಂಡುಹಿಡಿದಿದ್ದಾರೆ. ದ್ಯುತಿಸಂಶ್ಲೇಷಕ ಸೂಕ್ಷ್ಮಜೀವಿಗಳ ವಿಸರ್ಜನೆಯಿಂದ ರೂಪುಗೊಂಡ ಪದರವಿರುವ ಬಂಡೆಗಳಾದ ಸ್ಟ್ರೋಮಾಟೊಲೈಟ್ಗಳ ಪಳೆಯುಳಿಕೆಗಳನ್ನು ಲಂಡನ್ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿ ಸಂಶೋಧಕರು ಪತ್ತೆಹಚ್ಚಿದ್ದಾರೆ. ಪಶ್ಚಿಮ ಆಸ್ಟ್ರೇಲಿಯಾದ ಡ್ರೆಸ್ಸರ್ ರಚನೆಯಲ್ಲಿ, 3.48 ಶತಕೋಟಿ ವರ್ಷಗಳ ಹಿಂದಿನ ಸ್ಟ್ರೋಮಾಟೊಲೈಟ್ಗಳು ಕಂಡುಬಂದಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಈ ಆಟೋ ಡ್ರೈವರ್ ಜ್ಞಾನ ನೋಡಿದ್ರೆ ಮೂಗಿನ ಮೇಲೆ ಬೆರಳು ಇಟ್ಕೊತ್ತೀರಿ ; ವಿಡಿಯೋ ವೈರಲ್
ಸ್ಟ್ರೋಮಾಟೊಲೈಟ್ಗಳಲ್ಲಿನ ಸಾವಯವ ವಸ್ತುಗಳ ಕುರುಹುಗಳನ್ನು ಅಳಿಸಿಹಾಕಲಾಗಿದ್ದು, ಅವುಗಳು ನಿಜವಾಗಿಯೂ ಸೂಕ್ಷ್ಮಜೀವಿಗಳಿಂದ ರೂಪುಗೊಂಡಿವೆಯೇ ಅಥವಾ ಇತರ ಭೂವೈಜ್ಞಾನಿಕ ಪ್ರಕ್ರಿಯೆಗಳಿಂದ ಮಾಡಲ್ಪಟ್ಟಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಕಪ್ಪು ಕುಳಿಯು ಸಮೀಪದ ನಕ್ಷತ್ರವನ್ನು ಹಾಳುಗೆಡವುದನ್ನು ಪತ್ತೆಹಚ್ಚಿದ ವಿಜ್ಞಾನಿಗಳು
ವಿಜ್ಞಾನಿಗಳು ಕುಬ್ಜ ನಕ್ಷತ್ರಪುಂಜದಲ್ಲಿ ಗುರುತಿಸಲಾಗದ ಮಧ್ಯಂತರ-ದ್ರವ್ಯರಾಶಿ ಕಪ್ಪು ಕುಳಿಯು ಸಮೀಪದಲ್ಲಿರುವ ದಾರಿತಪ್ಪಿದ ನಕ್ಷತ್ರವನ್ನು ಹಾಳುಗೆಡವುದನ್ನು ಪತ್ತೆಹಚ್ಚಿದ್ದಾರೆ. ಟಿಡಿಇ ಎಂದು ಕರೆಯಲಾದ ನಕ್ಷತ್ರದ ಚೂರು ವಿಕಿರಣ ಜ್ಞಾಲೆಯನ್ನುಂಟು ಮಾಡಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಕೃತಕ ದ್ಯುತಿಸಂಶ್ಲೇಷಣೆಯು ಹೆಚ್ಚಿನ ಇಂಧನವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ
ಹಿಂದಿನ ಕೃತಕ ವ್ಯವಸ್ಥೆಗಳಿಗಿಂತ ಹೆಚ್ಚು ಉತ್ಪಾದಕವಾಗಿರುವ ನವೀನ ಹೊಸ ವ್ಯವಸ್ಥೆಯನ್ನು ಕೃತಕ ದ್ಯುತಿಸಂಶ್ಲೇಷಣೆಗಾಗಿ ಚಿಕಾಗೋ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ನಿರ್ಮಿಸಿದ್ದಾರೆ. ಕಾರ್ಬನ್ ಡೈಆಕ್ಸೈಡ್ ಮತ್ತು ನೀರಿನಿಂದ ಕಾರ್ಬೋಹೈಡ್ರೇಟ್ಗಳನ್ನು ಉತ್ಪಾದಿಸುವ ನಿಯಮಿತ ದ್ಯುತಿಸಂಶ್ಲೇಷಣೆಗಿಂತ ಭಿನ್ನವಾಗಿ, ಕೃತಕ ದ್ಯುತಿಸಂಶ್ಲೇಷಣೆಯು ಎಥೆನಾಲ್, ಮೀಥೇನ್ ಅಥವಾ ಇತರ ಇಂಧನಗಳನ್ನು ಉತ್ಪಾದಿಸುತ್ತದೆ.
ಪಳೆಯುಳಿಕೆ ಇಂಧನಗಳಿಗೆ ಪರ್ಯಾಯಗಳನ್ನು ರಚಿಸಲು ಹುಡುಕುತ್ತಿರುವ ಸಂಶೋಧಕರು ಎಥೆನಾಲ್ ಅಥವಾ ಮೀಥೇನ್ನಂತಹ ಶಕ್ತಿ-ದಟ್ಟ ಇಂಧನಗಳನ್ನು ರಚಿಸಲು ದ್ಯುತಿಸಂಶ್ಲೇಷಣೆಯ ಪ್ರಕ್ರಿಯೆಯನ್ನು ಮರುವಿನ್ಯಾಸಗೊಳಿಸಬೇಕು ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ