• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • Selfie: ಒಂದೇ ರಾತ್ರಿಯಲ್ಲಿ 400 ಸೆಲ್ಫಿಗಳನ್ನ ಕ್ಲಿಕ್ಕಿಸಿಕೊಂಡ ಕರಡಿ! ಹೇಗಿದೆ ನೋಡಿ ಫೋಟೋಸ್​

Selfie: ಒಂದೇ ರಾತ್ರಿಯಲ್ಲಿ 400 ಸೆಲ್ಫಿಗಳನ್ನ ಕ್ಲಿಕ್ಕಿಸಿಕೊಂಡ ಕರಡಿ! ಹೇಗಿದೆ ನೋಡಿ ಫೋಟೋಸ್​

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಕೊಲರಾಡೊದ ಓಪನ್ ಸ್ಪೇಸ್ ಅಂಡ್ ಮೌಂಟೇನ್ ಪಾರ್ಕ್ಸ್ (ಒಎಸ್ಎಂಪಿ) ನ ಬೌಲ್ಡರ್ ನಲ್ಲಿ ವನ್ಯಜೀವಿ ಚಟುವಟಿಕೆಗಳು ಮತ್ತು ಜೀವಂತ ಪ್ರಾಣಿಗಳನ್ನು ಚಿತ್ರೀಕರಿಸಲು ಅಧಿಕಾರಿಗಳು ಕ್ಯಾಮೆರಾವನ್ನು ಇರಿಸಿದ್ದರು. ಅದರಲ್ಲಿ ಸೆರೆಯಾದ ಫೋಟೋಗಳನ್ನು ಅವರು ಬಹಿರಂಗಪಡಿಸಿದಾಗ, ಒಟ್ಟು 580 ಫೋಟೋಗಳಲ್ಲಿ, 400 ಫೋಟೋಗಳು ಕರಡಿ ತೆಗೆಸಿಕೊಂಡ ಸೆಲ್ಫಿಗಳಾಗಿವೆ ಎಂದು ಅವರು ಹೇಳಿದ್ದಾರೆ. 

ಮುಂದೆ ಓದಿ ...
 • News18 Kannada
 • 3-MIN READ
 • Last Updated :
 • New Delhi, India
 • Share this:

ಈಗಂತೂ ಸೆಲ್ಫಿ ತೆಗೆದುಕೊಳ್ಳುವುದು ಒಂದು ಕ್ರೇಝ್ ಆಗಿ ಬಿಟ್ಟಿದೆ ಅಂತ ಹೇಳಿದರೆ ಸುಳ್ಳಲ್ಲ, ಚಿಕ್ಕ ಪಿಕ್ನಿಕ್ ಗೆ ಹೋದ ಶಾಲಾ ಮಕ್ಕಳಿಂದ (School Students) ಹಿಡಿದು ಮದುವೆ ಸಮಾರಂಭಗಳಿಗೆ ಮತ್ತು ಪ್ರವಾಸಕ್ಕೆ ಹೋದ ವಯಸ್ಕರು ಮತ್ತು ವಯೋ ವೃದ್ದರವರೆಗೂ ಈ ಸೆಲ್ಫಿ ಕ್ರೇಝ್ (Selfie craze) ಅನ್ನು ನಾವು ಕಾಣಬಹುದಾಗಿದೆ. ಹೌದು ಜನರು ಎಲ್ಲೇ ಹೋದರೂ ಒಂದು ಸೆಲ್ಫಿ ಇರಲಿ ಅಂತ ಕ್ಲಿಕ್ಕಿಸಿಕೊಳ್ಳುವುದು ಮತ್ತು ಅದನ್ನು ಕೂಡಲೇ ವಾಟ್ಸಪ್ ನಂತಹ ಮೆಸೇಜಿಂಗ್ ಅಪ್ಲಿಕೇಷನ್ (Application) ನಲ್ಲಿ ಸ್ಟೇಟಸ್ ಹಾಕಿಕೊಳ್ಳುವುದು ಹೊಸ ಟ್ರೆಂಡ್ ಆಗಿದೆ ಅಂತ ಹೇಳಬಹುದು.


ಮನುಷ್ಯರಿಗಷ್ಟೇ ಅಲ್ಲ ಈ ಸೆಲ್ಫಿ ಕ್ರೇಝ್ ಇರೋದು


ಈ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ಬರೀ ಮನುಷ್ಯನಿಗಷ್ಟೇ ಸೀಮಿತವಾಗಿಲ್ಲ, ಇತ್ತೀಚೆಗೆ ಪ್ರಾಣಿಗಳು ಸಹ ತಮ್ಮ ಸೆಲ್ಫಿಯನ್ನು ಕ್ಲಿಕ್ಕಿಸಿಕೊಳ್ಳುತ್ತಿವೆ ಅಂತ ಹೇಳಿದರೆ ನಿಮಗೆ ಸ್ವಲ್ಪ ಆಶ್ಚರ್ಯವಾಗಬಹುದು. ಸೆಲ್ಫಿ ಕ್ರೇಝ್ ಈಗ ಬರೀ ಮನುಷ್ಯನಿಗಷ್ಟೇ ಸೀಮಿತವಾಗಿಲ್ಲ ಅಂತ ನಾವು ಹೇಳಿದ್ದು ಈ ಕರಡಿಯನ್ನ ನೋಡಿ. ಇದಕ್ಕೆ ಕಾರಣ ಏನೆಂದರೆ ಇತ್ತೀಚೆಗೆ ವನ್ಯಜೀವಿಗಳು ಸಹ ಈ ಅಭ್ಯಾಸವನ್ನು ಅಳವಡಿಸಿಕೊಂಡಿವೆ. ಮೊನ್ನೆ ಕೋತಿಗಳ ಮುಂದೆ ಮೊಬೈಲ್ ಫೋನ್ ಹಿಡಿದರೆ ಅವುಗಳು ತುಂಬಾನೇ ಕುತೂಹಲದಿಂದ ಆ ಸ್ಕ್ರೀನ್ ಅನ್ನು ಕೆಳಕ್ಕೆ ಮೇಲಕ್ಕೆ ಸ್ಕ್ರಾಲ್ ಮಾಡುತ್ತಿದ್ದ ವೀಡಿಯೋವನ್ನ ಸಾಮಾಜಿಕ ಮಾಧ್ಯಮದಲ್ಲಿ ನೋಡಿದ್ದೆವು.


ಕ್ಯಾಮೆರಾದಲ್ಲಿ ಸೆರೆಯಾಗಿವೆಯಂತೆ ಕರಡಿಯ 400 ಸೆಲ್ಫಿಗಳು


ಕೊಲರಾಡೊದ ಓಪನ್ ಸ್ಪೇಸ್ ಅಂಡ್ ಮೌಂಟೇನ್ ಪಾರ್ಕ್ಸ್ (ಒಎಸ್ಎಂಪಿ) ನ ಬೌಲ್ಡರ್ ನಲ್ಲಿ ವನ್ಯಜೀವಿ ಚಟುವಟಿಕೆಗಳು ಮತ್ತು ಜೀವಂತ ಪ್ರಾಣಿಗಳನ್ನು ಚಿತ್ರೀಕರಿಸಲು ಅಧಿಕಾರಿಗಳು ಕ್ಯಾಮೆರಾವನ್ನು ಇರಿಸಿದ್ದರು. ಅದರಲ್ಲಿ ಸೆರೆಯಾದ ಫೋಟೋಗಳನ್ನು ಅವರು ಬಹಿರಂಗಪಡಿಸಿದಾಗ, ಒಟ್ಟು 580 ಫೋಟೋಗಳಲ್ಲಿ, 400 ಫೋಟೋಗಳು ಕರಡಿ ತೆಗೆಸಿಕೊಂಡ ಸೆಲ್ಫಿಗಳಾಗಿವೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: Different Gowns: ತಲೆ ಕೆಳಗಾಗೂ ಗೌನ್ ಧರಿಸಬಹುದಾ? ಈ ಮಾಡೆಲ್‌ಗಳನ್ನು ನೋಡಿದ್ರೆ ಬಿದ್ದೂ ಬಿದ್ದು ನಗ್ತೀರಿ!

ಪ್ರಕಟಣೆಯ ಪ್ರಕಾರ ಒಎಸ್ಎಂಪಿ ಸಿಬ್ಬಂದಿ ತನ್ನ 46,000 ಎಕರೆ ಭೂಮಿಯಲ್ಲಿ ಸರಿ ಸುಮಾರು ಒಂಬತ್ತು ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಪ್ರಾಣಿಗಳು ಆ ಕ್ಯಾಮೆರಾಗಳ ಮುಂದೆ ಬಂದಾಗ ಈ ಕ್ಯಾಮೆರಾಗಳು ಸಕ್ರಿಯವಾಗಿ ಆ ಪ್ರಾಣಿಗಳ ಸ್ಟಿಲ್ ಛಾಯಾಚಿತ್ರವನ್ನು ಸೆರೆ ಹಿಡಿಯುತ್ತವೆ. ಈ ಕ್ಯಾಮೆರಾಗಳು 10 ರಿಂದ 30 ಸೆಕೆಂಡುಗಳವರೆಗೆ ವೀಡಿಯೋವನ್ನು ಸೆರೆ ಹಿಡಿಯುವ ಸಾಮರ್ಥ್ಯವನ್ನು ಸಹ ಹೊಂದಿವೆ. ರಾತ್ರಿ ಹೊತ್ತಿನಲ್ಲಿ ಈ ಕ್ಯಾಮೆರಾಗಳು ಇನ್ಫ್ರಾರೆಡ್ ಬೆಳಕನ್ನು ಬಳಸಿಕೊಂಡು ಛಾಯಾಚಿತ್ರಗಳನ್ನು ತೆಗೆಯುತ್ತವೆ, ಅದು ರಾತ್ರಿಯ ವನ್ಯಜೀವಿಗಳಿಗಾಗುವ ತೊಂದರೆ ಕಡಿಮೆ ಮಾಡುತ್ತದೆ.


ಈ ಕ್ಯಾಮೆರಾಗಳ ಬಗ್ಗೆ ಏನ್ ಹೇಳ್ತಾರೆ ಹಿರಿಯ ವನ್ಯಜೀವಿ ಪರಿಸರಶಾಸ್ತ್ರಜ್ಞ?


"ಪ್ರಾಣಿಗಳ ಚಲನೆಯನ್ನು ಪತ್ತೆ ಹಚ್ಚುವ ಕ್ಯಾಮೆರಾಗಳು ಕೆಲವೊಮ್ಮೆ ಇಂತಹ ಕುತೂಹಲಕಾರಿ ಸಂಗತಿಗಳನ್ನೂ ಸಹ ಪತ್ತೆಹಚ್ಚುತ್ತವೆ ಎಂದು ಓಪನ್ ಸ್ಪೇಸ್ ಮತ್ತು ಮೌಂಟೇನ್ ಪಾರ್ಕ್ಸ್ ನ ಹಿರಿಯ ವನ್ಯಜೀವಿ ಪರಿಸರಶಾಸ್ತ್ರಜ್ಞ ವಿಲ್ ಕೀಲೆ ಹೇಳಿದರು."ಪ್ರಮುಖ ವನ್ಯಜೀವಿ ಪ್ರದೇಶಗಳನ್ನು ಗುರುತಿಸಲು ಒಎಸ್ಎಂಪಿ ಸಿಬ್ಬಂದಿಗೆ ಸಹಾಯ ಮಾಡುವಲ್ಲಿ ಈ ಕ್ಯಾಮೆರಾಗಳು ಪ್ರಮುಖ ಪಾತ್ರವಹಿಸುತ್ತವೆ. ನಾವು ಅವರಿಂದ ಸಂಗ್ರಹಿಸುವ ಮಾಹಿತಿಯನ್ನು ಸೂಕ್ಷ್ಮ ನೈಸರ್ಗಿಕ ಪ್ರದೇಶಗಳನ್ನು ರಕ್ಷಿಸಲು ಸಹಾಯ ಮಾಡಲು ಆವಾಸಸ್ಥಾನ-ಸಂರಕ್ಷಣಾ ಕ್ರಮಗಳನ್ನು ಶಿಫಾರಸು ಮಾಡಲು ಬಳಸುತ್ತೇವೆ ಎಂದು ಅವರು ಹೇಳಿದ್ದಾರೆ.


ರಸ್ತೆ ಅಂಡರ್ ಪಾಸ್ ಗಳಂತಹ ಪ್ರಾಣಿಗಳು ಪ್ರಯಾಣಿಸುವ ಸಾಧ್ಯತೆಯಿರುವ ಕಾರಿಡಾರ್ ಗಳಲ್ಲಿ ಒಎಸ್‌ಎಂಪಿ ತನ್ನ ಕ್ಯಾಮೆರಾಗಳನ್ನು ಇರಿಸುತ್ತದೆ ಎಂದು ಕೊಲೊರಾಡೊ ಆಡಳಿತ ಹೇಳಿದೆ. ಅಲ್ಲದೆ ಹಿಮದಲ್ಲಿ ಹೆಜ್ಜೆ ಗುರುತುಗಳು ಅಥವಾ ಬೇಲಿ ರೇಖೆಗಳನ್ನು ದಾಟುವ ವನ್ಯಜೀವಿ ಚಟುವಟಿಕೆಯ ಚಿಹ್ನೆಗಳಿರುವ ಪ್ರದೇಶಗಳಲ್ಲಿ ಇಲಾಖೆ ಈ ಕ್ಯಾಮೆರಾಗಳನ್ನು ಇರಿಸುತ್ತದೆ.


First published: