HOME » NEWS » Trend » WILD CHEETAHS SET TO RETURN TO INDIA AFTER 70 YEARS STG LG

70 ವರ್ಷಗಳ ಬಳಿಕ ಭಾರತಕ್ಕೆ ಮರಳುತ್ತಿರುವ ಚೀತಾ...! ಏನಿದರ ವಿಶೇಷ?

ಜನವರಿ 2020 ರಲ್ಲಿ ದಕ್ಷಿಣ ಆಫ್ರಿಕಾದ ಚಿರತೆಗಳನ್ನು ಪುನಃ ಪರಿಚಯಿಸಲು ಸುಪ್ರೀಂ ಕೋರ್ಟ್ ಗ್ರೀನ್‌ ಸಿಗ್ನಲ್‌ ನೀಡಿದೆ

news18-kannada
Updated:June 10, 2021, 4:11 PM IST
70 ವರ್ಷಗಳ ಬಳಿಕ ಭಾರತಕ್ಕೆ ಮರಳುತ್ತಿರುವ ಚೀತಾ...! ಏನಿದರ ವಿಶೇಷ?
ಚಿರತೆ
  • Share this:
ಭಾರತದಲ್ಲಿ ಈ ಹಿಂದೆ ಸಾಕಷ್ಟು ಚಿರತೆ ಸಂತತಿಗಳಿದ್ದವು. ಮೊಘಲ್‌ ರಾಜ ಅಕ್ಬರ್‌ ಕಾಲದಲ್ಲಿ ದೇಶದಲ್ಲಿ ಸುಮಾರು 10,000 ಚೀತಾಗಳು ಇದ್ದವಂತೆ. ಆ ಪೈಕಿ ಅಕ್ಬರ್‌ ಆಸ್ಥಾನದಲ್ಲೇ ಸುಮಾರು ಸಾವಿರ ಚೀತಾಗಳಿದ್ದವು ಎಂದು ಅಕ್ಬರ್‌ ತನ್ನ ದಾಖಲೆ ಪುಸ್ತಕದಲ್ಲಿ ಬರೆದುಕೊಂಡಿದ್ದರು ಎಂದು ವರದಿಗಳು ಹೇಳುತ್ತವೆ. ಕ್ರಮೇಣವಾಗಿ 1952ರಿಂದಲೇ ಚೀತಾಗಳು ದೇಶದಲ್ಲಿ ನಾಶವಾಗಿ ಹೋದವು. ಈಗ 7 ದಶಕಗಳ ನಂತರ ಭಾರತಕ್ಕೆ ಚೀತಾಗಳು ಮರು ಪ್ರವೇಶ ಮಾಡಲಿವೆ. ಹೌದು, 5 ಸಾವಿರಕ್ಕೂ ಹೆಚ್ಚು ಮೈಲಿಗಳ ದೂರದಿಂದ ಅಂದರೆ ದಕ್ಷಿಣ ಆಪ್ರಿಕಾದಿಂದ ಭಾರತಕ್ಕೆ ಈ ವರ್ಷದ ನವೆಂಬರ್‌ನಲ್ಲಿ 8 ಚೀತಾಗಳು ದೇಶಕ್ಕೆ ಬರಲಿವೆ ಎನ್ನಲಾಗುತ್ತಿದೆ. ದೊಡ್ಡ ಬೆಕ್ಕುಗಳ ಜಾತಿಯ ಭೂಮಿ ಮೇಲೆ ವಿಶ್ವದಲ್ಲೇ ಅತ್ಯಂತ ವೇಗವಾಗಿ ಓಡುವ ಪ್ರಾಣಿ ಎನಿಸಿಕೊಂಡಿರುವ ಚೀತಾಗಳು ನವೆಂಬರ್‌ನಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬರುವ ನಿರೀಕ್ಷೆಯಿದೆ. ದಕ್ಷಿಣ ಆಫ್ರಿಕಾದ ಅಳಿವಿನಂಚಿನಲ್ಲಿರುವ (ಪ್ರಾಣಿಗಳ ) ವನ್ಯಜೀವಿ ಟ್ರಸ್ಟ್ (ಇಡಬ್ಲ್ಯೂಟಿ) ಭಾರತಕ್ಕೆ 5 ಗಂಡು ಮತ್ತು 3 ಹೆಣ್ಣು ಚಿರತೆಗಳನ್ನು ಕೊಡುಗೆಯಾಗಿ ನೀಡಿದೆ ಎಂದು ವರದಿಯಾಗಿದೆ.

ವೈಲ್ಡ್ ಏಷಿಯಾಟಿಕ್ ಚೀತಾಗಳು: ಅಳಿವಿನ ಕಾರಣ20ನೇ ಶತಮಾನದ ಆರಂಭದವರೆಗೂ, ಏಷ್ಯಾಟಿಕ್ ಚೀತಾಗಳು ಈ ಪ್ರದೇಶದಲ್ಲಿ ಹೇರಳವಾಗಿದ್ದವು. ಆದರೆ ನಂತರ ವ್ಯಾಪಕವಾದ ಬಲೆ ಮತ್ತು ಪಳಗಿಸುವಿಕೆಯಿಂದಾಗಿ ಅವುಗಳ ಜನಸಂಖ್ಯೆ ಕುಸಿಯಿತು. ಇದಲ್ಲದೆ, ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ, ಚಿರತೆಗಳನ್ನು ಕೊಲ್ಲಲು ಬಹುಮಾನ ನೀಡಲಾಗುತ್ತಿತ್ತು. ಅಲ್ಲದೆ, ಮರಳುಗಾರಿಕೆ ಮತ್ತು ಅರಣ್ಯನಾಶ - ಇವೆರಡು ಪ್ರಮುಖ ಕಾರಣಗಳಿಂದಲೂ ಭಾಋತದಲ್ಲಿ ಚೀತಾಗಳ ಆವಾಸ ಸ್ಥಾನ ನಾಶವಾಯಿತು ಎಂದೂ ಹೇಳಲಾಗುತ್ತದೆ.


ಇದನ್ನೂ ಓದಿ:Bangalore Unlock: ಅನ್​ಲಾಕ್​ ಬಳಿಕ ರಸ್ತೆಗಿಳಿಯಲಿವೆ 3000 BMTC ಬಸ್​ಗಳು..!

ಚೀತಾಗಳನ್ನು ಮರು ಪರಿಚಯಿಸುವ ಯೋಜನೆಗಳು


ಭಾರತದಲ್ಲಿ ಚೀತಾಗಳನ್ನು ಪುನಃ ಪರಿಚಯಿಸುವ ಯೋಜನೆಗಳನ್ನು 1955ರಲ್ಲೇ ಮಾಡಲಾಗಿತ್ತು. ಬಳಿಕ, ಅಳಿವಿನಂಚಿನಲ್ಲಿದ್ದ ಏಷ್ಯಾಟಿಕ್‌ ಪ್ರಭೇದಗಳ ಚೀತಾವನ್ನು ಇರಾನ್‌ನಿಂದ ತರಲು 1970 ರಲ್ಲಿ ಮಾತುಕತೆ ನಡೆಸಲಾಗಿತ್ತು. ಈ ಕುರಿತು ದಶಕಗಳ ಕಾಲ ಮಾತುಕತೆ ನಡೆದರೂ, 2010 ರಲ್ಲಿ ಇರಾನ್‌ನಿಂದ ಏಷ್ಯಾಟಿಕ್ ಚೀತಾಗಳನ್ನು ತರುವ ಯೋಜನೆ ಕೈಬಿಡಲಾಯಿತು.


ಈ ಹಿನ್ನೆಲೆ ಆಫ್ರಿಕಾ ರಾಷ್ಟ್ರಗಳಿಂದ ಚೀತಾಗಳನ್ನು ತರಿಸಿಕೊಳ್ಳುವ ಪ್ರಕ್ರಿಯೆ ಶುರುವಾಯಿತು. ಇತ್ತೀಚೆಗೆ, ದಕ್ಷಿಣ ಆಫ್ರಿಕಾ ಸೇರಿದಂತೆ ಕೀನ್ಯಾ, ನಮೀಬಿಯಾ ಮುಂತಾದ ದೇಶಗಳು ಚೀತಾಗಳನ್ನು ಭಾರತಕ್ಕೆ ದಾನ ಮಾಡಲು ಮುಂದಾಗಿವೆ. ಸಂರಕ್ಷಣಾವಾದಿಗಳು ಮತ್ತು ಭಾರತದ ಪರಿಸರ ಮತ್ತು ಅರಣ್ಯ ಸಚಿವಾಲಯ (ಎಂಒಇಎಫ್) ನಡುವಿನ ದೀರ್ಘಕಾಲದ ಕಾನೂನು ದ್ವಂದ್ವ ಯುದ್ಧವು 8 ವರ್ಷಗಳಿಗಿಂತ ಹೆಚ್ಚು ಕಾಲ ಈ ಪ್ರಕ್ರಿಯೆಯನ್ನು ವಿಳಂಬಗೊಳಿಸಿದೆ. 2 ಪ್ರಭೇದಗಳ ನಡುವಿನ ಅನುವಂಶಿಕ ವ್ಯತ್ಯಾಸಗಳು ಮತ್ತು ಅನ್ಯ ವನ್ಯಜೀವಿಗಳ ಸ್ಥಳಾಂತರಕ್ಕೆ ನೀಡಲಾದ ಮಾರ್ಗಸೂಚಿಗಳು ಚರ್ಚೆಗೆ ಕಾರಣವಾಗಿತ್ತು.ಇದನ್ನೂ ಓದಿ:Karnataka Lockdown: ಯಾವ ಜಿಲ್ಲೆ ಲಾಕ್? ಯಾವುದು ಅನ್ ಲಾಕ್?; ಇಲ್ಲಿದೆ ಮಾಹಿತಿ

ಜನವರಿ 2020 ರಲ್ಲಿ ದಕ್ಷಿಣ ಆಫ್ರಿಕಾದ ಚಿರತೆಗಳನ್ನು ಪುನಃ ಪರಿಚಯಿಸಲು ಸುಪ್ರೀಂ ಕೋರ್ಟ್ ಗ್ರೀನ್‌ ಸಿಗ್ನಲ್‌ ನೀಡಿದೆ. 2021 ರಲ್ಲಿ, ಆರು ಉದ್ಯಾನವನಗಳು ಮತ್ತು ಅಭಯಾರಣ್ಯಗಳ ಸೂಕ್ತತೆಯನ್ನು ವಿಶ್ಲೇಷಿಸಿದ ಆಳವಾದ ಕಾರ್ಯಸಾಧ್ಯತೆಯ ಮೌಲ್ಯಮಾಪನದ ಫಲಿತಾಂಶಗಳನ್ನು ವೈಲ್ಡ್‌ಲೈಫ್‌ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರಕಟಿಸಿತು (WII). ಅಂತಿಮವಾಗಿ, ದೆಹಲಿಯಿಂದ ದಕ್ಷಿಣಕ್ಕೆ ಸುಮಾರು 500 ಕಿ.ಮೀ ದೂರದಲ್ಲಿರುವ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾವನ್ನು ಪುನಃ ಪರಿಚಯಿಸಲು ಅನುಕೂಲಕರ ತಾಣವಾಗಿ MoEF, NTCA, ಮತ್ತು WII ಆಯ್ಕೆ ಮಾಡಿದೆ.


ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಮಚ್ಚೆಯುಳ್ಳ ಜಿಂಕೆ ಎಂದೂ ಕರೆಯಲ್ಪಡುವ ಕಾಡು ಜಾನುವಾರು ಮತ್ತು ಚಿಟಲ್ ಹೇರಳವಾಗಿ ಕಂಡುಬರುತ್ತವೆ. ಇದಲ್ಲದೆ, ಕಾಡುಹಂದಿ ಇರುವಿಕೆಯು ಈ ಚೀತಾಗಳಿಗೆ ಉತ್ತಮ ಬೇಟೆ ನೀಡುತ್ತವೆ. ಆದರೂ, ಸ್ಥಳಾಂತರಗೊಂಡ ಚಿರತೆಗಳಿಗೆ ಸೂಕ್ತವಾದ ಪ್ರದೇಶವನ್ನು ಮಾಡಲು ಕನಿಷ್ಠ ಸುಧಾರಣೆಗಳು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಅಗತ್ಯವಾಗಿವೆ.Youtube Video

ಸ್ಥಳಾಂತರ ಯೋಜನೆಗಾಗಿ ಕೇಂದ್ರ ಸರ್ಕಾರ 2 ಕೋಟಿ 65 ಲಕ್ಷ ರೂ. ಖರ್ಚು ಮಾಡುತ್ತಿದೆ. ಫೆನ್ಸಿಂಗ್, ಅರಣ್ಯ ನಿರ್ವಹಣೆ ಮತ್ತು ದಕ್ಷಿಣ ಆಫ್ರಿಕಾದಿಂದ ಚಿರತೆಗಳ ಸಾಗಣೆಗೆ ಈ ವೆಚ್ಚ ತಗುಲುತ್ತದೆ. ಒಟ್ಟು ಐದು ಗಂಡು ಮತ್ತು ಮೂರು ಹೆಣ್ಣು ಸೇರಿ 8 ಚಿರತೆಗಳನ್ನು ಇಡಬ್ಲ್ಯೂಟಿ ದಾನ ಮಾಡಲಿದ್ದು, ದಕ್ಷಿಣ ಆಫ್ರಿಕಾದಿಂದ 8,405 ಕಿ.ಮೀ ಪ್ರಯಾಣ ಮಾಡಿ ನವೆಂಬರ್‌ನಲ್ಲಿ ಭಾರತದ ವಿಸ್ತಾರವಾದ ರಾಷ್ಟ್ರೀಯ ಉದ್ಯಾನವನದಲ್ಲಿ ತಮ್ಮ ಹೊಸ ಮನೆಗೆ ಕಾಲಿಡಲಿವೆ ಎನ್ನಲಾಗಿದೆ.

Published by: Latha CG
First published: June 10, 2021, 3:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories