ಸಾಮಾನ್ಯವಾಗಿ ಈ ಮದುವೆಯಾದ (Marriage) ಹೊಸತರಲ್ಲಿ ಗಂಡ-ಹೆಂಡತಿ (Husband and wife) ಇಬ್ಬರು ನೋಡಿದವರಿಗೆ ಹೊಟ್ಟೆ ಕಿಚ್ಚಾಗುವಷ್ಟು ತುಂಬಾನೇ ಪ್ರೀತಿಯಿಂದ ಇರುವುದು, ಕೆಲವೊಮ್ಮೆ ಯಾವುದೋ ಚಿಕ್ಕ ಪುಟ್ಟ ವಿಷಯಗಳಿಗೂ ಜಗಳವಾಡಿ ಪರಸ್ಪರ ಕೋಪ ಮಾಡಿಕೊಳ್ಳುವುದು ಮತ್ತು ಸ್ವಲ್ಪ ಸಮಯದ ನಂತರ ಮತ್ತೆ ಒಂದಾಗುವುದು ಇವೆಲ್ಲಾ ನಡೀತಾ ಇರುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆನಂತರ ಗಂಡನಾದವನು ಹೆಂಡತಿಯ ಕೋಪವನ್ನು ಕಡಿಮೆ ಮಾಡುವುದಕ್ಕೆ ಏನಾದರೂ ದುಬಾರಿಯಾದ ಮತ್ತು ಆಕೆಗೆ ಇಷ್ಟವಾಗುವ ಉಡುಗೊರೆಯನ್ನು (Gift) ಆಕೆಗೆ ಹೇಳದಂತೆ ತಂದು ಕೊಟ್ಟು ಸರ್ಪ್ರೈಸ್ (Surprise) ಮಾಡುವುದು ಎಲ್ಲವೂ ನಡೆಯುತ್ತಿರುತ್ತದೆ.
ತನ್ನ ಹೆಂಡತಿ ತನ್ನ ಮೇಲೆ ಅಸಮಾಧಾನಗೊಂಡಿದ್ದಾಳೆ ಮತ್ತು ಕೋಪ ಮಾಡಿಕೊಂಡಿದ್ದಾಳೆ ಅಂತ ಗೊತ್ತಾದರೆ ಸಾಕು, ಗಂಡನಾದವನು ಆಕೆಯ ಕೋಪವನ್ನು ಕಡಿಮೆ ಮಾಡಲು ಅನೇಕ ರೀತಿಯ ಹರಸಾಹಸಗಳನ್ನು ಮಾಡುತ್ತಾನೆ. ಕೆಲವರಂತೂ ಹೆಂಡತಿಗೆ ಕೋಪ ಬರುವಂತಹ ಕೆಲಸಗಳನ್ನು ಮಾಡುವುದೇಕೆ? ನಂತರ ಆಕೆಗೆ ದುಬಾರಿ ಉಡುಗೊರೆ ತಂದುಕೊಡುವುದೇಕೆ ಅಂತ ಹೆಂಡತಿಗೆ ಕೋಪ ಬರುವಂತಹ ಕೆಲಸಗಳನ್ನೇ ಮಾಡುವುದಿಲ್ಲ ಎಂದು ಹೇಳಬಹುದು.
ಹೆಂಡತಿ ಕೋಪ ಮಾಡಿದ್ದಕ್ಕೆ ಗಂಡನಿಂದ ದುಬಾರಿ ಗಿಫ್ಟ್
ಈ ವಿಷಯದ ಬಗ್ಗೆ ಈಗೇಕೆ ಮಾತು ಅಂತೀರಾ? ಇಲ್ಲಿ ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ ನೋಡಿ. ಇದರಲ್ಲಿ ಹೆಂಡತಿ ರಾತ್ರಿ ಕೋಪ ಮಾಡಿಕೊಂಡಿದ್ದಾಳೆ ಎನ್ನುವುದನ್ನು ತಿಳಿದುಕೊಂಡು ಬೆಳಿಗ್ಗೆ ಬೆಳಿಗ್ಗೆನೇ ಎಂತಹ ದುಬಾರಿಯಾದ ಉಡುಗೊರೆಯನ್ನು ನೀಡಿ ಆಕೆಯನ್ನು ಸಂತೋಷಪಡಿಸಿದ್ದಾನೆ ನೋಡಿ ಈ ಪತಿರಾಯ.
ಇದನ್ನೂ ಓದಿ: Dog Video: ಶಾಲೆ ಮಕ್ಕಳನ್ನು ಸೇಫಾಗಿ ರಸ್ತೆ ದಾಟಿಸೋ ನಾಯಿ, ವಿಡಿಯೋ ವೈರಲ್
ಇಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಎದುರು ಹೋಟೆಲ್ ಲಾಬಿಯಲ್ಲಿ ಸೆಲೆಬ್ರಿಟಿ ಮಿಯಾ ಖಲೀಫಾಳನ್ನು (Mia Khalifa) ನೋಡಿ ತುಂಬಾನೇ ಉತ್ಸುಕನಾಗಿದ್ದನು. ತನ್ನ ಹನಿಮೂನ್ ನಲ್ಲಿ ತನ್ನನ್ನು ನೋಡುವುದನ್ನು ಬಿಟ್ಟು ಬೇರೆಯವರನ್ನು ನೋಡಿದರೆ ಯಾವ ಹೆಂಡತಿಗಾದರೂ ಕೋಪ ಬರುತ್ತೆ ಅಲ್ಲವೇ? ತನ್ನ ಹೆಂಡತಿ ಕೋಪ ಮಾಡಿಕೊಂಡಿದ್ದಾಳೆ ಅಂತ ಆಕೆಯನ್ನು ಕೂಲ್ ಮಾಡುವುದಕ್ಕೆ ಈ ಪತಿರಾಯ ಬಿರ್ಕಿನ್ ಹ್ಯಾಂಡ್ ಬ್ಯಾಗ್ ಅನ್ನು ಖರೀದಿಸಿ ಹೊಟೇಲ್ ಲಾಬಿಯಲ್ಲಿ ಉಡುಗೊರೆ ನೀಡಿದ್ದಾನೆ. ಇದನ್ನು ನೋಡಿ ಹೆಂಡತಿ ಕೋಪ ಒಂದೇ ಕ್ಷಣದಲ್ಲಿ ಮಾಯವಾಗಿದೆ ನೋಡಿ. ಪ್ರೀಮಿಯಂ ಬ್ರ್ಯಾಂಡ್ ಹ್ಯಾಂಡ್ ಬ್ಯಾಗ್ ಇದಾಗಿದ್ದು, ಇದರ ಬೆಲೆ 7 ರಿಂದ 10 ಲಕ್ಷ ರೂಪಾಯಿಗಳವರೆಗೆ ಇರಬಹುದು.
ಟ್ವಿಟ್ಟರ್ ನಲ್ಲಿ ವಿಡಿಯೋ ವೈರಲ್
ಜೂನ್ 13 ರಂದು ಮಿಯಾ ಟ್ವಿಟ್ಟರ್ ನಲ್ಲಿ ವಿಡಿಯೋದ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡಿದ್ದಾರೆ, ಇದನ್ನು ಈ ಹಿಂದೆ ಟಿಕ್ಟಾಕ್ ಇನ್ಫ್ಲುಯೆನ್ಸರ್ ಒಬ್ಬರು ಪೋಸ್ಟ್ ಮಾಡಿದ್ದರು. "ಪ್ಯಾರಿಸ್ ನ ಒಂದು ಹೊಟೇಲ್ ನಲ್ಲಿ ನಾನು ಉಳಿದುಕೊಂಡಿದ್ದೆ, ಅಲ್ಲೇ ಉಳಿದುಕೊಂಡಿರುವ ಟಿಕ್ಟಾಕ್ ಇನ್ಫ್ಲುಯೆನ್ಸರ್ ಒಬ್ಬರು ಇದನ್ನು ಪೋಸ್ಟ್ ಮಾಡಿದ್ದಾರೆ.
ಕಳೆದ ರಾತ್ರಿ ಊಟದ ಸಮಯದಲ್ಲಿ ನಾನು ಹಾಗೆ ನಡೆದುಕೊಂಡು ಹೋಗುವುದನ್ನು ನೋಡಲು ಆ ಮಹಿಳೆಯ ಪತಿರಾಯ ತುಂಬಾನೇ ಉತ್ಸುಕನಾಗಿದ್ದನು ಮತ್ತು ಇದನ್ನು ಅವನ ಹೆಂಡತಿ ಗಮನಿಸಿದ್ದಾಳೆ. ಇಂದು ಬೆಳಿಗ್ಗೆ ಹೆಂಡತಿಯ ಅಸಮಾಧಾನವನ್ನು ಸರಿದೂಗಿಸಲು ಅವನು ಅವಳಿಗೆ ಬಿರ್ಕಿನ್ ಬ್ಯಾಗ್ ಖರೀದಿಸಿ ಉಡುಗೊರೆ ನೀಡಿದ್ದಾನೆ” ಎಂದು ತಮ್ಮ ಪೋಸ್ಟ್ ನ ಶೀರ್ಷಿಕೆಯಲ್ಲಿ ಬರೆದು ಕೊಂಡಿದ್ದಾರೆ.
ಇದನ್ನೂ ಓದಿ: Barso Re: ಟೈಮ್ಸ್ ಸ್ಕ್ವೇರ್ನಲ್ಲಿ ಬಾಲಿವುಡ್ ಮಳೆ ಹಾಡು! ಐಶ್ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಯುವತಿಯರು
ಮಿಯಾ ಹಂಚಿಕೊಂಡಿರುವ ಮೂರು ಜನರ ಈ ವಿಡಿಯೋವನ್ನು ನಂತರ ಪೋಸ್ಟ್ ಮಾಡಲಾಯಿತು, ಇದರಲ್ಲಿ ಗಂಡನಾದವನು ತನ್ನ ಹೆಂಡತಿಗೆ ಬಿರ್ಕಿನ್ ಬ್ಯಾಗ್ ಅನ್ನು ನೀಡುತ್ತಿರುವುದನ್ನು ನಾವು ನೋಡಬಹುದು. ಇನ್ನೇನು ತನ್ನ ಗಂಡನ ಮೇಲೆ ಅಸಮಾಧಾನ ತೋರಿಸಿಕೊಳ್ಳಬೇಕು, ಅಷ್ಟರಲ್ಲಿಯೇ ಈ ಉಡುಗೊರೆ ನೀಡಿದ್ದಾನೆ ಈ ಪತಿರಾಯ. "ನಾವೆಲ್ಲಾರೂ ಏಕೆ ಭೇಟಿಯಾದೆವು" ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ವಿಡಿಯೋಗೆ ಬಂದ ಕಾಮೆಂಟ್ ಗಳು ಹೇಗಿವೆ ನೋಡಿ
ಈ ವಿಡಿಯೋ ಇಲ್ಲಿಯವರೆಗೆ ಟ್ವಿಟ್ಟರ್ ನಲ್ಲಿ 5.9 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೋ ನೋಡಿ ಸಂತೋಷಪಟ್ಟರು. ಒಬ್ಬ ಬಳಕೆದಾರರು ಇದನ್ನು ವೈಯಕ್ತಿಕವಾಗಿ ತೆಗೆದುಕೊಂಡು "ಅದೃಷ್ಟವಶಾತ್ ಇದು ಸರಿಹೋಗಿದೆ, ನಾನು ನನ್ನ ಹೆಂಡತಿಗೆ ಕೋಪ ಬಂದಿದ್ದರೆ ಇಡೀ ಅಂಗಡಿಯನ್ನೇ ಖರೀದಿಸಬೇಕಾಗುತ್ತದೆ" ಎಂದು ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ