• Home
  • »
  • News
  • »
  • trend
  • »
  • Viral Story: ಗಂಡ ಪ್ರೀತಿಸಿದ ಹುಡುಗಿ ಜೊತೆ ಮದುವೆ ಮಾಡಿಸಿದ ಪತ್ನಿ, ಒಂದೇ ಮನೆಯಲ್ಲಿ ಇರೋಕೂ ಒಪ್ಪಿಗೆ ಕೊಟ್ಟ ಹೆಂಡ್ತಿ!

Viral Story: ಗಂಡ ಪ್ರೀತಿಸಿದ ಹುಡುಗಿ ಜೊತೆ ಮದುವೆ ಮಾಡಿಸಿದ ಪತ್ನಿ, ಒಂದೇ ಮನೆಯಲ್ಲಿ ಇರೋಕೂ ಒಪ್ಪಿಗೆ ಕೊಟ್ಟ ಹೆಂಡ್ತಿ!

ವಿಮಲಾ, ಕಲ್ಯಾಣ್​, ನಿತ್ಯಶ್ರೀ

ವಿಮಲಾ, ಕಲ್ಯಾಣ್​, ನಿತ್ಯಶ್ರೀ

ಗಂಡ ಬೇರೊಬ್ಬಳನ್ನು ಪ್ರೀತಿಸಿ ಮದುವೆಯಾದ ಅಂತ ಆತನನ್ನು ಕೊಂದಿರುವ ಘಟನೆಯನ್ನೂ ನಾವು ಕೇಳಿದ್ದೇವೆ. ಆದರೆ ಇಲ್ಲಿ ನಾವು ಹೇಳುತ್ತಿರುವ ಹೆಂಡತಿ ಬಗ್ಗೆ ಕೇಳಿದರೆ, ನಿಜಕ್ಕೂ ನಿಮಗೂ ಶಾಕ್​ ಆಗಬಹುದು.

  • Share this:

ಹೆಂಡತಿ (Wife) ಯೊಬ್ಬಳು ಮನೆಯೊಳಗೆ ಇದ್ದರೆ ನನಗೆ ಅದು ಕೋಟಿ (Crore) ರೂಪಾಯಿ ಎಂಬ ಮಾತನ್ನು ಕೇಳಿದ್ದೇವೆ. ಹೆಂಡತಿ ಕೇವಲ ಹೆಂಡತಿ ಅಷ್ಟೇ ಅಲ್ಲ. ತಾಯಿ (Mother) , ತಂಗಿ, ಅಕ್ಕ, ಸ್ನೇಹಿತೆ (Friend) ಯಾಗಿ ಗಂಡನ ಬೆನ್ನೆಲುಬಾಗಿ ಕಾಯುತ್ತಾಳೆ. ಮದುವೆ ಬಳಿಕ ಗಂಡ-ಹೆಂಡತಿ ನಡುವೆ ನಡೆಯುವ ಜಗಳ ಉಂಡು, ಮಲಗುವ ತನಕ ಎನ್ನುತ್ತಾರೆ. ಆದರೆ, ನಮ್ಮನ್ನು ಅರ್ಥ ಮಾಡಿಕೊಳ್ಳುವ ಹೆಂಡತಿ ಸಿಕ್ಕರೆ ನಮ್ಮ ಅದೃಷ್ಟ (Luck) ಅನ್ನುತ್ತಾರೆ ಗಂಡು ಹೈಕ್ಳು. ಪ್ರೀತಿಸಿ ಮದುವೆಯಾದ ಹೆಂಡತಿ ಮತ್ತೊಬ್ಬನ ಜೊತೆ ಅಕ್ರಮ ಸಂಬಂಧ (Illicit Relationship) ಹೊಂದಿರುವುದಕ್ಕೆ ಗಂಡನೆ ಕೊಂದಿರುವ ಕೇಸ್​ಗಳ ಬಗ್ಗೆ ನಾವು ಕೇಳಿದ್ದೇವೆ. ಅಷ್ಟೇ ಯಾಕೆ ಗಂಡ ಬೇರೊಬ್ಬಳನ್ನು ಪ್ರೀತಿಸಿ ಮದುವೆಯಾದ ಅಂತ ಆತನನ್ನು ಕೊಂದಿರುವ ಘಟನೆಯನ್ನೂ ನಾವು ಕೇಳಿದ್ದೇವೆ. ಆದರೆ ಇಲ್ಲಿ ನಾವು ಹೇಳುತ್ತಿರುವ ಹೆಂಡತಿ ಬಗ್ಗೆ ಕೇಳಿದರೆ, ನಿಜಕ್ಕೂ ನಿಮಗೂ ಶಾಕ್​ ಆಗಬಹುದು.


ಗಂಡ ಪ್ರೀತಿಸಿದ ಯುವತಿ ಜೊತೆ ಮದ್ವೆ ಮಾಡಿಸಿದ ಪತ್ನಿ!


ಹೌದು, ಅರೇ ಇದೆನಪ್ಪಾ? ಇದು ಸಾಧ್ಯನಾ? ಎಂದು ನೀವು ಬಾಯಿ ಮೇಲೆ ಬೆರಳು ಇಡಬಹುದು. ನಂಬದಿದ್ದರೂ ಇದು ಸತ್ಯ. ತಿರುಪತಿ ಜಿಲ್ಲೆಯ ಟಕಿಲಿ ಅಂಬೇಡ್ಕರ್ ಪಟ್ಟಣದ ಕಲ್ಯಾಣ್  ಎಂಬಾತ ಟಿಕ್ ಟಾಕ್‌ನಲ್ಲಿ ಸಿಕ್ಕಾಪಪಟ್ಟೆ ಫೇಮಸ್​ ಆಗಿದ್ದರು. ಅದೇ ಟಿಕ್​ಟಾಕ್​ನಲ್ಲಿ ಕಡಪಾ ಮೂಲದ ವಿಮಲಾ ಕೂಡ ಫೇಮಸ್​ ಆಗಿದ್ದರು. ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಸ್ನೇಹ ಪ್ರೀತಿಗೂ ತಿರುಗಿತ್ತು. ಇಬ್ಬರು ಮದುವೆ ಕೂಡ ಆಗಿದ್ದರು. ಒಟ್ಟೊಟ್ಟಿಗೆ ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಿದ್ದರುಇಬ್ಬರಿಗೂ ಟಿಕ್ ಟಾಕ್ ನಲ್ಲಿ ಅಪಾರ ಫಾಲೋವರ್ಸ್ ಇದ್ದಾರೆ. ಇಬ್ಬರೂ ಒಟ್ಟಿಗೆ ವಿಡಿಯೋ ಮಾಡಿ ಬಹಳ ಜನಪ್ರಿಯರಾದರು.


ಗಂಡನ ಹಳೇ ಲವರ್​ ಜೊತೆ ಮದುವೆ ಮಾಡಿಸಿದ ಹೆಂಡತಿ!


ಎಲ್ಲವೂ ಚೆನ್ನಾಗಿತ್ತು. ಆದರೆ ಗಂಡನ ನಡುವಳಿಕೆಯಲ್ಲಿ ಬದಲಾವಣೆಯಾಗಿತ್ತು. ಇದನ್ನು ಕಂಡ ವಿಮಲಾ ತನ್ನ ಗಂಡನನ್ನು ಏನಾಯ್ತು ಅಂತ ಕೇಳಿದ್ದಾಳೆ. ವಿಮಲಾನ ಮದುವೆ ಆಗುವ ಮುನ್ನ ಕಲ್ಯಾಣ್​ ತಿರುಮಂತ್​ ಮೊದಲು ವಿಶಾಖಪಟ್ಟಣಂ ಮೂಲದ ನಿತ್ಯಶ್ರೀ ಎಂಬ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಇಬ್ಬರೂ ಕೂಡ ವಿಡಿಯೋ ಮಾಡಿ ಪೋಸ್ಟ್​ ಮಾಡಿಸುತ್ತಿದ್ದರು. ಕೆಲ ಕಾರಣಾಂತರಗಳಿಂದ ಇಬ್ಬರೂ ದೂರವಾಗಿದ್ದರು. ಈ ಎಲ್ಲಾ ವಿಚಾರವನ್ನು ಪತ್ನಿ ವಿಮಲಾ ಬಳಿ ಗಂಡ ಹೇಳಿಕೊಂಡಿದ್ದಾನೆ.


ವಿಮಲಾ, ಕಲ್ಯಾಣ್​, ನಿತ್ಯಶ್ರೀ


ಇದನ್ನೂ ಓದಿ: ಮುತ್ತು ಪೋಣಿಸಿದಂತೆ ಪ್ರಿಸ್ಕ್ರಿಪ್ಷನ್ ಬರೆದ ವೈದ್ಯ, ಫೋಟೋ ನೋಡಿ ದಂಗಾದ ನೆಟ್ಟಿಗರು!


ಇದ್ದಕ್ಕಿದ್ದಂತೆ ಈಗ ನಿತ್ಯಶ್ರೀ  ಮತ್ತೆ ಕಲ್ಯಾಣ್​  ಜೀವನಕ್ಕೆ ಕಾಲಿಟ್ಟಿದ್ದಾರೆ. ನೇರವಾಗಿ ವಿಮಲಾ ಬಳಿ ಹೋಗಿ ಇದನ್ನು ಹೇಳಿದ್ದರು. ನಿತ್ಯಶ್ರೀ ಕೂಡ ವಿಮಲಾ ಭೇಟಿಯಾಗಿ ಕಲ್ಯಾಣ್​ ಬಿಟ್ಟು ಬದುಕಲ್ಲ ಎಂದು ಹೇಳಿಕೊಂಡಿದ್ದಳು. ಹೇಗಾದರೂ ಮಾಡಿ ನಮ್ಮನ್ನು ಜೊತೆಯಲ್ಲಿಡಬೇಕೆಂದು ಬೇಡಿಕೊಂಡಳು. ವಿಮಲಾ ಯಾವ ಹೆಂಡತಿಯೂ ಮಾಡದ ತ್ಯಾಗಕ್ಕೆ ಸಿದರಾಗಿದ್ದರು. ವಿಮಲಾ ತನ್ನ ಪತಿ ಕಲ್ಯಾಣ ತನ್ನ ಪ್ರೀತಿಯ ನಿತ್ಯಶ್ರೀ ಜೊತೆ  ಮದುವೆ ಮಾಡಿಸಿದ್ದಾರೆ.


ಮೂವರು ಒಟ್ಟಿಗೆ ಇರಲು ಒಪ್ಪಿಗೆ!


ತನ್ನ ಗಂಡ ಪ್ರೀತಿಸಿದ ಹುಡುಗಿಯ ಜೊತೆ ವಿಮಲಾ ಮದುವೆ ಮಾಡಿಸಿದ್ದಾರೆ. ಅಷ್ಟೆ ಅಲ್ಲದೇ ಮೂವರು ಒಟ್ಟಿಗೆ ಜೀವನ ನಡೆಸುವುದಾಗಿ ಮಾತು ಕೊಟ್ಟಿದ್ದಾರೆ.ಮೊದಲ ಮದುವೆಯ ನಂತರ ಕಲ್ಯಾಣ್ ಎರಡನೇ ಬಾರಿಗೆ ಮದುವೆಯಾದರು. ಈಗ ಮೂವರೂ ಒಟ್ಟಿಗೆ ಸಂತೋಷವಾಗಿದ್ದಾರೆ. ಮದುವೆಯ ಎಲ್ಲ ವ್ಯವಸ್ಥೆಗಳನ್ನು ಮೊದಲ ಪತ್ನಿಯೇ ವಹಿಸಿಕೊಂಡಿದ್ದು ಇಲ್ಲಿನ ವಿಶೇಷ. ಪತಿಯ ಎರಡನೇ ಮದುವೆಯಲ್ಲಿ ವಿಮಲಾ ಪ್ರಮುಖ ಪಾತ್ರ ವಹಿಸಿದ್ದರು. ಪತಿ ಮತ್ತು ಗೆಳತಿಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಮದುವೆ ಮಾಡಿಸಿದರು.


ಇದನ್ನೂ ಓದಿ: ಮತ್ತೆ ತನ್ನ ಮರಿಯ ಜೊತೆಯಾದ ಆನೆಯೊಂದು ಅರಣ್ಯಾಧಿಕಾರಿಗಳಿಗೆ ಏನ್​​ಮಾಡಿದೆ ಗೊತ್ತಾ? ಈ ವಿಡಿಯೋ ನೋಡಿ


ಅವರಿಬ್ಬರ ಜೊತೆ ಫೋಟೋ ತೆಗೆಸಿಕೊಂಡರು. ತ್ಯಾಗಮೂರ್ತಿ ವಿಮಲಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ಆದರೆ ಮದುವೆಯ ನಂತರ ಮೂವರು ಎಲ್ಲಿಗೆ ಹೋದರು ಎಂಬುದು ಸಸ್ಪೆನ್ಸ್.

Published by:ವಾಸುದೇವ್ ಎಂ
First published: