ನಾವು ಯಾವುದೇ ಕಂಪನಿಯಲ್ಲಿ ಕೆಲಸಕ್ಕೆ (Work) ಹೋದರೂ ಅಲ್ಲಿನ ನೀತಿ ನಿಯಮಗಳು ಬೇರೆ ಬೇರೆ ಆಗಿರುತ್ತವೆ ಮತ್ತು ಕೆಲವು ನಿಯಮಗಳು ಬಹುತೇಕವಾಗಿ ಎಲ್ಲಾ ಕಂಪನಿಗಳಲ್ಲಿಯೂ (Company) ಒಂದೇ ರೀತಿಯದ್ದಾಗಿರುತ್ತವೆ. ಇಂತಹ ಒಂದು ನಿಯಮದಲ್ಲಿ ತುಂಬಾನೇ ಮುಖ್ಯವಾದದ್ದು ಅಂತ ಹೇಳುವುದಾದರೆ ‘ಯಾರು ತಮಗೆ ಸಿಗುವ ಸಂಬಳದ (Salary) ಬಗ್ಗೆ ಪಕ್ಕದವರ ಜೊತೆಗೆ ಚರ್ಚೆ ಮಾಡಬಾರದು, ಅದು ತುಂಬಾನೇ ರಹಸ್ಯವಾಗಿತ್ತುಕೊಳ್ಳಬೇಕು’ ಅಂತ ನಿಯಮದಲ್ಲೂ ಇರುತ್ತದೆ ಮತ್ತು ಕಂಪನಿಯಲ್ಲಿ ನಿಮ್ಮನ್ನು ಕೆಲಸಕ್ಕೆ ಸೇರಿಸಿಕೊಳ್ಳುವಾಗ ನಿಮ್ಮ ಎಲ್ಲಾ ದಾಖಲೆಗಳನ್ನು (Record) ಪರಿಶೀಲಿಸಿ ನಿಮ್ಮನ್ನು ಕೆಲಸಕ್ಕೆ ಸೇರಿಸಿಕೊಳ್ಳುವ ಎಚ್ ಆರ್ ವ್ಯವಸ್ಥಾಪಕರು ಒತ್ತಿ ಒತ್ತಿ ಹೇಳುತ್ತಾರೆ.
ಆದರೆ ಇತ್ತೀಚಿನ ಯುವಕರು ತಮ್ಮ ಸಂಬಳವನ್ನು ಪಕ್ಕದವರ ಬಳಿ ಆರಾಮಾಗಿ ಹೇಳಿಕೊಳ್ಳುವುದರೊಂದಿಗೆ ಆನ್ಲೈನ್ ನಲ್ಲಿಯೂ ಸಹ ಸಾರ್ವಜನಿಕವಾಗಿ ಬಹಿರಂಗಪಡಿಸುತ್ತಿದ್ದಾರೆ, ಹೀಗೆ ಮಾಡುವುದರೊಂದಿಗೆ ದೀರ್ಘಕಾಲದ ನಿಷೇಧವನ್ನು ಒಳ್ಳೆ ಕಡ್ಡಿ ಮುರಿದಂತೆ ಮುರಿಯುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ, ಅವರು ಅದನ್ನು ಸಾರ್ವಜನಿಕಗೊಳಿಸಲು ನಿಜವಾಗಿಯೂ ಇಷ್ಟಪಡದ ಉದ್ಯೋಗದಾತರನ್ನು ಸಹ ಅಸಮಾಧಾನಗೊಳಿಸುತ್ತಿದ್ದಾರೆ.
ಹನ್ನಾ ವಿಲಿಯಮ್ಸ್ ಅವರಿಂದ ಶುರುವಾಯಿತು ಈ ಟ್ರೆಂಡ್ !?
ಹನ್ನಾ ವಿಲಿಯಮ್ಸ್ ಎಂಬ ಟಿಕ್‌ಟಾಕರ್ ನಿಂದ ಈ ಹೊಸ ಟ್ರೆಂಡ್ ಪ್ರಾರಂಭವಾಯಿತು, ಅವಳು ಬೀದಿಯಲ್ಲಿ ಭೇಟಿಯಾಗುವ ಪ್ರತಿಯೊಬ್ಬರಿಗೂ "ನೀವು ಎಷ್ಟು ಸಂಪಾದಿಸುತ್ತೀರಿ" ಅಂತ ಕೇಳುವುದನ್ನು ನಾವು ಆಕೆಯ ವಿಡಿಯೋದಲ್ಲಿ ನೋಡಬಹುದು.
ವಿಲಿಯಮ್ಸ್ ತನ್ನ ವೃತ್ತಿಜೀವನದಲ್ಲಿ ತನಗೆ ಕಡಿಮೆ ವೇತನ ನೀಡಲಾಗುತ್ತಿದೆ ಎಂದು ತಿಳಿದ ನಂತರ ಈ ವಿಡಿಯೋಗಳನ್ನು ಮಾಡಲು ಪ್ರಾರಂಭಿಸಿದಳು ಎಂದು ಬಿಬಿಸಿ ವರದಿ ಮಾಡಿದೆ. ನಂತರ ಅವರು ಟಿಕ್‌ಟಾಕ್ ನಲ್ಲಿ ತಮ್ಮ ವೃತ್ತಿಪರ ಬೆಳವಣಿಗೆಯ ಬಗ್ಗೆ ಮಾತನಾಡಲು ಪ್ರಾರಂಭಿಸಿದರು, ಅಲ್ಲಿ ಅವರ ಫಾಲೋವರ್ಸ್ ಗಳು ಸಹ ತಮ್ಮ ವೇತನದ ಬಗ್ಗೆ ತಮ್ಮ ನಿಷ್ಠುರತೆಯನ್ನು ಮೆಚ್ಚಿದ್ದಾರೆ ಎಂದು ಹೇಳಿದರು.
ಉತ್ತಮ ಸಂಬಳವನ್ನು ಗಳಿಸುವ ಸಲುವಾಗಿ ಉದ್ಯೋಗಗಳನ್ನು ಬದಲಾಯಿಸುವ ಅರ್ಜಿದಾರರು ದೂರದೃಷ್ಟಿಯಿಲ್ಲದವರಾಗಿದ್ದಾರೆ ಎಂದು ಅನೇಕ ಕಂಪನಿಗಳು ನಂಬುತ್ತವೆ, ಆದರೆ ಉದ್ಯೋಗ ಬದಲಾವಣೆಗಳು ಸಾಂದರ್ಭಿಕವಾಗಿ ಆದಾಯವನ್ನು ಸುಧಾರಿಸುವ ಬಯಕೆಯಿಂದ ಪ್ರೇರೇಪಿಸಲ್ಪಡಬಹುದು. ಭಾರತದಲ್ಲಿ ಮಾನವ ಸಂಪನ್ಮೂಲ ವ್ಯವಸ್ಥಾಪಕರು ತಮ್ಮ ಹಿಂದಿನ ವೇತನವನ್ನು ಬಹಿರಂಗಪಡಿಸುವಂತೆ ಅಭ್ಯರ್ಥಿಯನ್ನು ಕೇಳಬೇಕೇ ಮತ್ತು ಅದಕ್ಕೆ ಪೂರಕವಾದ ವೇತನ ಪ್ಯಾಕೇಜ್ ಅನ್ನು ನೀಡಬೇಕೇ ಎಂಬ ಬಗ್ಗೆಯೂ ಚರ್ಚೆಗಳು ಇನ್ನೂ ನಡೆಯುತ್ತಿವೆ.
ಜರ್ಮನಿಯು ಉದ್ಯೋಗದಾತರು ಅಭ್ಯರ್ಥಿಯ ಪೂರ್ವ ವೇತನದ ಬಗ್ಗೆ ಕೇಳುವುದಿಲ್ಲವಂತೆ!
ಜರ್ಮನಿಯು ಉದ್ಯೋಗದಾತರು ಅಭ್ಯರ್ಥಿಯ ಪೂರ್ವ ವೇತನದ ಬಗ್ಗೆ ಕೇಳುವುದನ್ನು ನಿಷೇಧಿಸುತ್ತದೆ. ಕೆಲವು ಯುಎಸ್ ರಾಜ್ಯಗಳಲ್ಲಿ, ಆ ವೇತನಗಳನ್ನು ಮುಕ್ತವಾಗಿ ಬಹಿರಂಗಪಡಿಸದ ಹೊರತು ಉದ್ಯೋಗದಾತರು ಅರ್ಜಿದಾರರ ಪೂರ್ವ ವೇತನದ ಬಗ್ಗೆ ವಿಚಾರಿಸುವುದು ಕಾನೂನಿಗೆ ವಿರುದ್ಧವಾಗಿದೆ.
ಇದನ್ನೂ ಓದಿ: Flipkart Delivery Boy: ಗ್ರಾಹಕರಿಗೆ ತಲುಪದ 4 ಲಕ್ಷ ರೂಪಾಯಿಯ 61 ಗ್ಯಾಜೆಟ್! ಡೆಲಿವರಿ ಕೊಡೋಕೆ ಹೋದ ಹುಡುಗನೇ ಎಸ್ಕೇಪ್!
ಲಿಂಗದ ಆಧಾರದ ಮೇಲೆ ಮತ್ತು ಅದೇ ಕೆಲಸದ ಕರ್ತವ್ಯಗಳನ್ನು ಮಾಡುವ ಉದ್ಯೋಗಿಗಳ ನಡುವಿನ ವೇತನ ಅಸಮಾನತೆಯನ್ನು ತೊಡೆದು ಹಾಕುವುದು ಈ ಬದಲಾವಣೆಯ ಉದ್ದೇಶವಾಗಿದೆ. ಇತ್ತೀಚಿಗೆ ಕ್ಯಾಲಿಫೋರ್ನಿಯಾವು 15 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಎಲ್ಲಾ ವ್ಯವಹಾರಗಳಿಗೆ ಲಭ್ಯವಿರುವ ಹುದ್ದೆಗಳಿಗೆ ವೇತನ ಶ್ರೇಣಿಗಳನ್ನು ಬಹಿರಂಗವಾಗಿ ಕೆಲಸಗಳ ಜಾಹೀರಾತಿನಲ್ಲಿ ತಿಳಿಸಿ ಅಂತ ಕಡ್ಡಾಯಗೊಳಿಸಿದ ಅತ್ಯಂತ ಇತ್ತೀಚಿನ ಯುಎಸ್ ರಾಜ್ಯವಾಯಿತು.
ಏತನ್ಮಧ್ಯೆ, ಇವು ವಿಲಿಯಮ್ಸ್ ಅವರಿಗೆ ಮಾತ್ರವೇ ಕಾಡುತ್ತಿರುವ ಪ್ರಶ್ನೆಗಳಲ್ಲ. ವೈರಲ್ ಟ್ವೀಟ್ ಗಳು, ಮೀಮ್ ಗಳು ಮತ್ತು ಟಿಕ್‌ಟಾಕ್ ಖಾತೆಗಳನ್ನು ಯುವ ಪೀಳಿಗೆಗಳು ಇತರರೊಂದಿಗೆ ಸಾರ್ವಜನಿಕವಾಗಿ ಬಹಿರಂಗಪಡಿಸುವ ಮೂಲಕ ವೇತನ ಪಾರದರ್ಶಕತೆಯನ್ನು ಪ್ರತಿಪಾದಿಸಲು ಬಳಸುತ್ತಿವೆ.
ಭಾರತದಲ್ಲಿ ವೇತನವನ್ನು ಬಹಿರಂಗಪಡಿಸುವುದು ಕಾನೂನು ಬದ್ಧವೇ?
ಆದಾಗ್ಯೂ, ಭಾರತದಲ್ಲಿ, ಮಾನವ ಸಂಪನ್ಮೂಲ ವ್ಯವಸ್ಥಾಪಕರು ಹಿಂದಿನ ಸಂಬಳವನ್ನು ಕೇಳದ ಯಾವುದೇ ಉದ್ಯೋಗ ಪ್ರಸ್ತಾಪವಿಲ್ಲ. ಇದರ ಪರಿಣಾಮವಾಗಿ, ಉದ್ಯೋಗಿಗಳು ತಮ್ಮ ಹಿಂದಿನ ವೇತನಕ್ಕೆ ಅನುಗುಣವಾಗಿ ವೇತನವನ್ನು ಪಡೆಯುತ್ತಾರೆ, ಆದರೆ ಅದೇ ರೀತಿಯ ಸ್ಥಾನಗಳಲ್ಲಿ ವೇತನ ವ್ಯತ್ಯಾಸವು ಹೆಚ್ಚು ಆಗಾಗ್ಗೆ ಕಂಡು ಬರುತ್ತದೆ. ಭಾರತದಲ್ಲಿನ ಅನೇಕ ದೊಡ್ಡ ಕಂಪನಿಗಳು ಉದ್ಯೋಗಿಗಳನ್ನು ಸಂಬಳದ ಬಗ್ಗೆ ಪರಸ್ಪರ ಚರ್ಚಿಸುವುದನ್ನು ನಿಷೇಧಿಸಲಾಗಿದೆ.
ಸಂಬಳವನ್ನು ಬಹಿರಂಗಪಡಿಸುವುದರಿಂದ ಏನು ಲಾಭ?
ಲಿಂಕ್ಡ್ಇನ್ ಮಾರ್ಕೆಟ್ ರಿಸರ್ಚ್ ಪ್ರಕಾರ, ಇತ್ತೀಚಿನ ಯುವ ಪೀಳಿಗೆಯ 80 ಪ್ರತಿಶತಕ್ಕೂ ಹೆಚ್ಚು ಜನರು ಆದಾಯವನ್ನು ಬಹಿರಂಗ ಪಡಿಸುವುದರಿಂದ ವೇತನ ಸಮಾನತೆಯನ್ನು ಹೆಚ್ಚಿಸುತ್ತದೆ ಎಂದು ನಂಬುತ್ತಾರೆ.
ಇದನ್ನೂ ಓದಿ: Lottery: ಏನ್ ಅದೃಷ್ಟ ಗುರು ಈ ಮನುಷ್ಯಂದು! ಒಂದಲ್ಲ, ಎರಡಲ್ಲ ಮೂರು ಲಾಟರಿ ಹೊಡೆದಿದೆ
ಭಾರತದಲ್ಲಿ ಲಿಂಗ ವೇತನದ ಅಂತರ
‘ವರ್ಲ್ಡ್ ಏಕಾನಾಮಿಕ್ ಫೋರಂ ನ ಜಾಗತಿಕ ಲಿಂಗ ಅಂತರ ವರದಿ 2022 ರ ಪ್ರಕಾರ, ಭಾರತವು 146 ದೇಶಗಳಲ್ಲಿ 135 ನೇ ಸ್ಥಾನದಲ್ಲಿದೆ. 2021 ರಲ್ಲಿ, ಲಿಂಗ ಅಂತರ ಸೂಚ್ಯಂಕದಲ್ಲಿ ಭಾರತವು 140ನೇ ಸ್ಥಾನದಲ್ಲಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ