• Home
  • »
  • News
  • »
  • trend
  • »
  • APJ Abdul Kalam: ವಿಶ್ವ ವಿದ್ಯಾರ್ಥಿಗಳ ದಿನವನ್ನು ಕಲಾಂ ಅವರ ಜನ್ಮದಿನದಂದು ಏಕೆ ಆಚರಿಸಲಾಗುತ್ತದೆ? ಕಾರಣ ಇಲ್ಲಿದೆ

APJ Abdul Kalam: ವಿಶ್ವ ವಿದ್ಯಾರ್ಥಿಗಳ ದಿನವನ್ನು ಕಲಾಂ ಅವರ ಜನ್ಮದಿನದಂದು ಏಕೆ ಆಚರಿಸಲಾಗುತ್ತದೆ? ಕಾರಣ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರತಿ ವರ್ಷ ಅಕ್ಟೋಬರ್ 15 ರಂದು ವಿಶ್ವ ವಿದ್ಯಾರ್ಥಿಗಳ ದಿನವನ್ನು ಆಚರಿಸಲಾಗುತ್ತದೆ ಎಂಬುದು ನಮಗೆಲ್ಲಾ ತಿಳಿದಿರುವ ವಿಷಯವೇ ಆಗಿದೆ. ಆದರೆ ವಿಶ್ವ ವಿದ್ಯಾರ್ಥಿಗಳ ದಿನವನ್ನು ಭಾರತದ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮ ದಿನದಂದೆ ಏಕೆ ಆಚರಿಸಲಾಗುತ್ತದೆ.

  • Share this:

ಪ್ರತಿ ವರ್ಷ (Every year) ಅಕ್ಟೋಬರ್ 15 ರಂದು ವಿಶ್ವ ವಿದ್ಯಾರ್ಥಿಗಳ ದಿನವನ್ನು( World Students Day) ಆಚರಿಸಲಾಗುತ್ತದೆ (celebrated) ಎಂಬುದು ನಮಗೆಲ್ಲಾ ತಿಳಿದಿರುವ ವಿಷಯವೇ ಆಗಿದೆ. ಆದರೆ ವಿಶ್ವ ವಿದ್ಯಾರ್ಥಿಗಳ ದಿನವನ್ನು ಭಾರತದ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ (Former President of India Dr. APJ Abdul Kalam)ಅವರ ಜನ್ಮ ದಿನದಂದೆ ಏಕೆ ಆಚರಿಸಲಾಗುತ್ತದೆ, ಅಂತ ಪ್ರಶ್ನೆಯೊಂದು ಬಹುತೇಕರ ತಲೆಯಲ್ಲಿ ಓಡಾಡುತ್ತಿರಬೇಕಲ್ಲವೇ? ಬನ್ನಿ ಹಾಗಾದರೆ ಇದಕ್ಕೆ ಉತ್ತರ ಇಲ್ಲಿದೆ ನೋಡಿ.ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಅವರ ಜನ್ಮ ದಿನದಂದು ವಿಶ್ವ ವಿದ್ಯಾರ್ಥಿಗಳ ದಿನವನ್ನು ಆಚರಿಸಲಾಗುತ್ತದೆ.ಭಾರತದ ಮಾಜಿ ರಾಷ್ಟ್ರಪತಿ ಮತ್ತು ಏರೋಸ್ಪೇಸ್ ವಿಜ್ಞಾನಿ ಡಾ. ಎಪಿಜೆ ಅಬ್ದುಲ್ ಕಲಾಂ(Aerospace scientist Dr. APJ Abdul Kalam) ಅವರು ಅಕ್ಟೋಬರ್ 15, 1931 ರಂದು ಜನಿಸಿದ್ದರು ಮತ್ತು ಇವರು 2002 ರಿಂದ 2007 ರವರೆಗೆ ಭಾರತದ ಹನ್ನೊಂದನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.




ಡಾ. ಕಲಾಂ ಅವರು “ಜನರ ರಾಷ್ಟ್ರಪತಿ” ಆಗಿದ್ದರು..


ತಮ್ಮ ಐದು ವರ್ಷಗಳ ಅಧಿಕಾರಾವಧಿಯಲ್ಲಿ, ಕಲಾಂ ಅವರಿಗೆ ಜನರು ತುಂಬಾನೇ ಪ್ರೀತಿ ನೀಡಿದರು ಮತ್ತು ಇವರನ್ನು "ಜನರ ರಾಷ್ಟ್ರಪತಿ" ಎಂದು ಸಹ ಕರೆಯುತ್ತಿದ್ದರು. ವಿಶ್ವ ವಿದ್ಯಾರ್ಥಿಗಳ ದಿನವು ವಿದ್ಯಾರ್ಥಿಗಳು ಮತ್ತು ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ಡಾ. ಕಲಾಂ ಅವರ ಪ್ರಯತ್ನಗಳನ್ನು ಗುರುತಿಸುವ ಗುರಿಯನ್ನು ಹೊಂದಿದೆ.


ಡಾ. ಕಲಾಂ ಅವರು ತಮ್ಮ ಜೀವನದಲ್ಲಿ ಹೆಚ್ಚು ಪ್ರೀತಿಸಿದ ವೃತ್ತಿ ಎಂದರೆ ಅದು ಶಿಕ್ಷಕ ವೃತ್ತಿ ಎಂದು ಹೇಳಬಹುದು. 2015 ರಲ್ಲಿ ಶಿಲ್ಲಾಂಗ್ ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ ಉಪನ್ಯಾಸ ನೀಡುತ್ತಿದ್ದಾಗ ಅವರು ಹೃದಯ ಸ್ತಂಭನದಿಂದ ಬಳಲಿದರು ಮತ್ತು ಕೊನೆಯುಸಿರೆಳೆದರು.


ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದ ಡಾ. ಕಲಾಂ ಅವರು ವಿಜ್ಞಾನ ಮತ್ತು ಭೌತಶಾಸ್ತ್ರವನ್ನು ಅಧ್ಯಯನ ಮಾಡಿದ್ದರು. ಅವರು ತಮ್ಮ ಉಪನ್ಯಾಸಗಳ ಮೂಲಕ ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗುವುದಕ್ಕೆ ಸ್ಫೂರ್ತಿ ನೀಡಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟರು ಎಂದು ಹೇಳಿದರೆ ತಪ್ಪಾಗುವುದಿಲ್ಲ.


ಇದನ್ನೂ ಓದಿ: Currency Notes: ಇನ್ಮುಂದೆ ನೋಟಿನ ಮೇಲೆ ಗಾಂಧಿ ಚಿತ್ರ ಇರಲ್ವಂತೆ! ಇನ್ಯಾರ್​ ಫೋಟೋ ಇರಬಹುದು? ಗೆಸ್​​​​ ಮಾಡಿ


ಡಾ. ಕಲಾಂ ಅವರು "ಮಿಸೈಲ್ ಮ್ಯಾನ್ ಆಫ್ ಇಂಡಿಯಾ"


ಅತ್ಯಂತ ಪ್ರಮುಖ ಭಾರತೀಯ ಕ್ಷಿಪಣಿಗಳ ಅಭಿವೃದ್ಧಿ ಮತ್ತು ರಾಷ್ಟ್ರದ ಬಾಹ್ಯಾಕಾಶ ಕಾರ್ಯಕ್ರಮದ ನೇತೃತ್ವ ವಹಿಸಿದ್ದಕ್ಕಾಗಿ ಅವರನ್ನು "ಮಿಸೈಲ್ ಮ್ಯಾನ್ ಆಫ್ ಇಂಡಿಯಾ" ಅಂತ ಸಹ ಕರೆಯಲಾಯಿತು.


ರಕ್ಷಣಾ, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದಲ್ಲಿ ಆಡಳಿತಗಾರರಾಗಿ ಅವರು ಕೆಲವು ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದ್ದರು.


ಡಾ. ಕಲಾಂ ಅವರು ಭಾರತದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ನಂತರ ಬೋಧನೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅವರು ಐಐಎಂ-ಶಿಲ್ಲಾಂಗ್, ಐಐಎಂ-ಅಹಮದಾಬಾದ್ ಮತ್ತು ಐಐಎಂ-ಇಂದೋರ್ ನಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.


ಇದನ್ನೂ ಓದಿ: Abdul Kalam: ಪದೇ ಪದೇ ನೆನಪಾಗುವ ಅಬ್ದುಲ್ ಕಲಾಂ!


ಡಾ. ಕಲಾಂ ಅವರಿಗೆ ಯಾವೆಲ್ಲಾ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು ನೋಡಿ..


ಕಲಾಂ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ "ಭಾರತ ರತ್ನ" ನೀಡಿ ಗೌರವಿಸಲಾಯಿತು. ಭಾರತ ಸರ್ಕಾರದ ವೈಜ್ಞಾನಿಕ ಸಲಹೆಗಾರರಾಗಿ ಕೆಲಸ ಮಾಡಿದ್ದಕ್ಕಾಗಿ ಅವರಿಗೆ ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿ ಸಹ ನೀಡಿ ಗೌರವಿಸಲಾಯಿತು.


ಡಾ. ಕಲಾಂ ಅವರು 1990 ರ ದಶಕದಲ್ಲಿ ಭಾರತದ ಅತ್ಯಂತ ಪ್ರಸಿದ್ಧ ಪರಮಾಣು ವಿಜ್ಞಾನಿಯಾದರು. ಅವರ ಮರಣದ ವರ್ಷಗಳ ನಂತರವೂ, ಅವರ ಕೊಡುಗೆಗಳನ್ನು ಭಾರತದ ಕೆಲವು ಅತ್ಯುತ್ತಮ ವೈಜ್ಞಾನಿಕ ಮತ್ತು ತಾಂತ್ರಿಕ ಬೆಳವಣಿಗೆಗಳೆಂದು ಗೌರವಿಸಲಾಗುತ್ತದೆ.


ಡಾ. ಕಲಾಂ ಅವರು ವಿಜ್ಞಾನಿಯಾಗಿ, ರಾಷ್ಟ್ರಪತಿಯಾಗಿ ಮತ್ತು ಶಿಕ್ಷಣ ತಜ್ಞರಾಗಿ ತಮ್ಮ ಗಮನಾರ್ಹ ವೃತ್ತಿಜೀವನಕ್ಕಾಗಿ ಮಾತ್ರವಲ್ಲದೆ, ಅವರ ವ್ಯಕ್ತಿತ್ವಕ್ಕಾಗಿಯೂ ಪ್ರೀತಿಪಾತ್ರರಾಗಿದ್ದಾರೆ. ಅಷ್ಟೊಂದು ಸಾಧನೆ ಮಾಡಿದ್ದರೂ ಅವರು ತುಂಬಾ ವಿನಮ್ರ ವ್ಯಕ್ತಿಯಾಗಿದ್ದರು.

First published: