• Home
  • »
  • News
  • »
  • trend
  • »
  • ಮಳೆಗಾಲದಲ್ಲಿ ನೀರು ಸೇವನೆ ಏಕೆ ಅತ್ಯಗತ್ಯವಾಗಿದೆ? ತಿಳಿದುಕೊಳ್ಳಲು ಈ ಲೇಖನ ಓದಿ

ಮಳೆಗಾಲದಲ್ಲಿ ನೀರು ಸೇವನೆ ಏಕೆ ಅತ್ಯಗತ್ಯವಾಗಿದೆ? ತಿಳಿದುಕೊಳ್ಳಲು ಈ ಲೇಖನ ಓದಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಮ್ಮ ಬೆರಳಿನ ಮೇಲ್ಭಾಗದ ಚರ್ಮವನ್ನು ಚಿವುಟಿ. ಚಿವುಟಿದ ನಂತರ ಆ ಭಾಗದ ಚರ್ಮವು ಸುಲಭವಾಗಿ ಮತ್ತು ತ್ವರಿತವಾಗಿ ಕೆಳಕ್ಕೆ ಹೋದರೆ ನೀವು ಚೆನ್ನಾಗಿ ಹೈಡ್ರೇಟ್ ಆಗಿರುವಿರಿ ಎಂದಾಗಿದೆ. ಚರ್ಮವು ಕೆಳಕ್ಕೆ ಹೋಗಲು ತುಂಬಾ ಸಮಯವನ್ನು ತೆಗೆದುಕೊಂಡಲ್ಲಿ ನೀವು ಸೇವಿಸುವ ನೀರಿನ ಪ್ರಮಾಣ ಕಡಿಮೆಯಾಗಿದೆ ಎಂದರ್ಥವಾಗಿದೆ.

ಮುಂದೆ ಓದಿ ...
  • Share this:

    ನಮ್ಮ ದೇಹವನ್ನು ಹೈಡ್ರೇಟ್ ಆಗಿ ಇರಿಸಿಕೊಳ್ಳುವುದು ಎಲ್ಲಾ ಕಾಲದಲ್ಲೂ ಅತಿ ಮುಖ್ಯವಾದ ಅಂಶವಾಗಿದ್ದು ಸಾಕಷ್ಟು ಪ್ರಮಾಣದ ನೀರು ಸೇವನೆಯಿಂದ ಸಾಕಷ್ಟು ಅನಾರೋಗ್ಯಗಳನ್ನು ಬುಡದಿಂದಲೇ ತೊಡೆದು ಹಾಕಬಹುದಾಗಿದೆ. ಬೇಸಿಗೆಯಲ್ಲಿ ಮಾತ್ರವೇ ಹೆಚ್ಚು ನೀರನ್ನು ಕುಡಿಯುವುದು ಉಳಿದ ಕಾಲಗಳಲ್ಲಿ ನೀರನ್ನು ಯಥೇಚ್ಛವಾಗಿ ಕುಡಿಯದೇ ಇರುವುದು ಇಂತಹ ತಪ್ಪುಗಳನ್ನು ಮಾಡುವುದರಿಂದ ಅನಾರೋಗ್ಯ ನಮ್ಮನ್ನು ಕಾಡಬಹುದು.


    ಹೇಳಿ ಕೇಳಿ ಇದು ಮಳೆಗಾಲವಾಗಿದೆ. ಈ ಸಮಯದಲ್ಲಿ ನಮಗೆ ಬೇಸಿಗೆಯಷ್ಟು ಬಾಯಾರಿಕೆ ಉಂಟಾಗದಿದ್ದರೂ ಮಳೆಗಾಲದಲ್ಲೂ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಪೂರೈಸಬೇಕು. ಹಾಗಾದರೆ ಮಳೆಗಾಲದಲ್ಲಿ ನೀರು ಏಕೆ ಕುಡಿಯಬೇಕು ಎಂಬ ಅಂಶವನ್ನು ತಿಳಿದುಕೊಳ್ಳೋಣ.


    ಮಳೆಗಾಲದಲ್ಲಿ ನೀರು ಸೇವನೆ ಏಕೆ ಅತ್ಯಗತ್ಯ?


    ಸೆಲೆಬ್ರಿಟಿ ನ್ಯೂಟ್ರಿಶಿಯನಿಸ್ಟ್ ಪೂಜಾ ಹೇಳುವಂತೆ ಮಳೆಗಾಲದ ಸಮಯದಲ್ಲಿನ ಆರ್ದ್ರತೆಯು ದೇಹದಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರಹಾಕುತ್ತದೆ, ಇದರಿಂದಾಗಿ ನಮಗೆ ನಿರಂತರವಾಗಿ ಬೆವರು ಹರಿಯುತ್ತದೆ, ಕೆಲವೊಮ್ಮೆ ತುಂಬಾ ವಾಸನೆ ಬರುವುದಿಲ್ಲ. ನಮ್ಮ ದೇಹದ ಶೇಕಡಾ 70 ರಷ್ಟು ನೀರಿನಿಂದ ಕೂಡಿದೆ ಎಂದು ಅವರು ಹೇಳುತ್ತಾರೆ ಆದರೆ ಈ ಪ್ರಮುಖ ಪೋಷಕಾಂಶವನ್ನು ನಾವು ಮರೆತುಬಿಡುತ್ತೇವೆ. ಮಳೆಗಾಲದಲ್ಲಿ ಸಾಕಷ್ಟು ನೀರನ್ನು ಸುತ್ತಮುತ್ತಲಿನ ಪರಿಸರದಲ್ಲಿ ನೋಡುವುದರಿಂದ ನೀರು ಕುಡಿಯಬೇಕೆಂದು ಅವರಿಗೆ ಅನಿಸುವುದಿಲ್ಲ. ಅದೇ ರೀತಿ ತಾಪಮಾನ ಕೂಡ ಏರಿಕೆಯಾಗುವುದಿಲ್ಲ. ಹವಾಮಾನ ತಂಪಾಗಿರುತ್ತದೆ. ಹಾಗಾಗಿ ಬಾಯಾರಿಕೆ ಉಂಟಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.


    ನಿಮ್ಮ ದೇಹವನ್ನು ಸಾಕಷ್ಟು ನೀರಿನಿಂದ ಹೈಡ್ರೇಟ್ ಮಾಡಿಕೊಂಡಿದ್ದೀರಾ ಎಂಬುದನ್ನು ಪರಿಶೀಲಿಸಲು ಪೂಜಾ ಸುಲಭ ಉಪಾಯವೊಂದನ್ನು ತಿಳಿಸಿಕೊಟ್ಟಿದ್ದಾರೆ. ಆಕೆಯ ಇನ್‌ಸ್ಟಾಗ್ರಾಮ್ ವೀಡಿಯೊ ಒಂದರಲ್ಲಿ ಆಕೆ ವಿವರಿಸಿರುವಂತೆ ನಿಮ್ಮ ಬೆರಳಿನ ಮೇಲ್ಭಾಗದ ಚರ್ಮವನ್ನು ಚಿವುಟಿ. ಚಿವುಟಿದ ನಂತರ ಆ ಭಾಗದ ಚರ್ಮವು ಸುಲಭವಾಗಿ ಮತ್ತು ತ್ವರಿತವಾಗಿ ಕೆಳಕ್ಕೆ ಹೋದರೆ ನೀವು ಚೆನ್ನಾಗಿ ಹೈಡ್ರೇಟ್ ಆಗಿರುವಿರಿ ಎಂದಾಗಿದೆ. ಚರ್ಮವು ಕೆಳಕ್ಕೆ ಹೋಗಲು ತುಂಬಾ ಸಮಯವನ್ನು ತೆಗೆದುಕೊಂಡಲ್ಲಿ ನೀವು ಸೇವಿಸುವ ನೀರಿನ ಪ್ರಮಾಣ ಕಡಿಮೆಯಾಗಿದೆ ಎಂದರ್ಥವಾಗಿದೆ.


    ಬೆಳಗ್ಗೆ ಎದ್ದೊಡನೆ ಖಾಲಿ ಹೊಟ್ಟೆಯಲ್ಲಿ ನೀರು ಸೇವಿಸಿ. ಇದು ಸಾಕಷ್ಟು ಪ್ರಯೋಜನವನ್ನು ನಿಮ್ಮ ದೇಹಕ್ಕೆ ನೀಡಲಿದೆ. ನೀರು ಸೇವಿಸುವ ಅಭ್ಯಾಸವನ್ನು ನೀವು ದಿನದ ಆರಂಭದಲ್ಲಿ ಮಾಡಿದಲ್ಲಿ ನಿಮ್ಮ ಜೀರ್ಣಕ್ರಿಯೆ ಸುಧಾರಣೆಗೊಳ್ಳುತ್ತದೆ, ತ್ವಚೆ ಕಾಂತಿಯುಕ್ತವಾಗುತ್ತದೆ ಮತ್ತು ಚಯಾಪಚಯ ಕ್ರಿಯೆ ವೃದ್ಧಿಯಾಗುತ್ತದೆ.


    ಮಳೆಗಾಲದ ಸಮಯದಲ್ಲಿ ನೀವು ಸಾಕಷ್ಟು ನೀರು ಕುಡಿಯದಿದ್ದರೆ ನಿಮ್ಮ ದೇಹಕ್ಕೆ ಹೆಚ್ಚಿನ ತೊಂದರೆಯುಂಟಾಗುತ್ತದೆ. ಹಾಗೆಯೇ ನೀವು ಶೀಘ್ರವೇ ಅನಾರೋಗ್ಯಕ್ಕೆ ಕೂಡ ತುತ್ತಾಗುವ ಸಂಭವವಿದೆ.


    ಇದನ್ನೂ ಓದಿ: Corona :ವ್ಯಾಕ್ಸಿನ್ ಹಾಕಿಸಿಕೊಳ್ಳದಿದ್ರೆ ಸಿಗಲ್ಲ ರೇಷನ್; ಸಾವಿನ ಮನೆಯಾಗಿದ್ದ ಗ್ರಾಮವೀಗ ಕೊರೋನಾ ಮುಕ್ತ

    ಬೆಳಗ್ಗೆ ಎದ್ದೊಡನೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಆಗಾಗ್ಗೆ ಆಹಾರ ಸೇವಿಸಬೇಕೆಂಬ ಬಯಕೆ ನಿಯಂತ್ರಣದಲ್ಲಿರುತ್ತದೆ. ಸಿಕ್ಕಾಪಟ್ಟೆ ತಿನ್ನಬೇಕೆಂಬ ವ್ಯಾಮೋಹ ಕಾಡುವುದಿಲ್ಲ. ಮಳೆಗಾಲದಲ್ಲಿ ನೀರು ಸೇವಿಸುವುದರಿಂದ ಮಳೆಗಾಲದ ಹಲವಾರು ಅನಾರೋಗ್ಯ ಸಮಸ್ಯೆಗಳಿಂದ ಸಂರಕ್ಷಣೆಯನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಇಂದಿನಿಂದಲೇ ದೇಹಕ್ಕೆ ಬೇಕಾಗುವಷ್ಟು ನೀರು ಕುಡಿಯಲು ಮರೆಯದಿರಿ.




    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

    Published by:HR Ramesh
    First published: