Tyre Secrete: ವಾಹನ ಟೈರ್​​ಗಳ ಕಪ್ಪು ಬಣ್ಣದ ರಹಸ್ಯ! ಏಕೆ ಬೇರೆ ಬಣ್ಣದಲ್ಲಿರುವುದಿಲ್ಲ?

ಕಾರ್ಬನ್ ಯಾವಾಗಲೂ ಕಪ್ಪು ಬಣ್ಣದಲ್ಲಿರುವುದರಿಂದ ಟೈರ್​​ ಬಣ್ಣವೂ ಸಹ ಕಪ್ಪಾಗಿರುತ್ತದೆ. ಸುಡುವ ಬಿಸಿಲಲ್ಲೂ ಕಾದ ರಸ್ತೆಯಲ್ಲಿ ವಾಹನ ಓಡಿಸಬೇಕಾಗುತ್ತದೆ. ಅಂತ ಸಂದರ್ಭದಲ್ಲಿ ಈ ಕಪ್ಪು ಕಾರ್ಬನ್ ಟೈರ್ ಕರಗದೇ ಇರುವ ಹಾಗೆ ನೋಡಿಕೊಳ್ಳುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆಫ್​​ಲೈನ್ ಇರ್ಲಿ, ಆನ್​​ಲೈನ್ ಇರ್ಲಿ ನಾವು ಗಾಡಿಯ ಟೈರ್ (Tyer) ಖರೀದಿಸೋವಾಗ ಕಂಪನಿಗಳ ಹೆಸರನ್ನಷ್ಟೇ ಗಮನಸ್ತೀವಿ. ಆದ್ರೆ, ಟೈರ್ ಯಾವ ಬಣ್ಣದ್ದು ತಗೋಬೇಕು ಎಂಬ ಪ್ರಶ್ನೆಯೇ ಬರೋದಿಲ್ಲ. ಯಾವುದೇ ವಾಹನಕ್ಕೆ ಟೈರ್ ಖರೀದಿಸುವ ಸಂದರ್ಭದಲ್ಲಿ ನಾವು ಯಾವ ಬಣ್ಣದ ಟೈರ್ ಖರೀದಿಸಬೇಕು ಎಂಬ ಪ್ರಶ್ನೆಯೇ ಇಲ್ಲ. ಯಾಕೆಂದರೆ ಎಲ್ಲಾ ಟೈರ್​ಗಳೂ ಸಹ ಕಪ್ಪು (Black) ಬಣ್ಣದಲ್ಲಿಯೇ ಇರುತ್ತವೆ. ಆದರೆ ಟೈರ್ ಖರೀಸಬೇಕಾದರೆ ಪರಿಗಣಿಸಬೇಕಾದ ನೂರಾರು ಅಂಶಗಳಿವೆ. ಟೈರ್ ಮಾತ್ರ ಯಾವಾಗಲೂ ಕಪ್ಪು ಬಣ್ಣದಲ್ಲೇ ಇರತ್ತೆ ಇದಕ್ಕೆ ಕಾರಣ (Reason) ಏನು ಅಂತ ತಿಳ್ಕೋಬೇಕಾ ಹಾಗಾದ್ರೆ ಇದನ್ನು ಓದಿ.

ಬಿಳಿ ಟೈರ್!
ಅನೇಕರಿಗೆ ಈ ವಿಷಯ ತಿಳಿದಿರೋದಿಲ್ಲ. ಆದರೆ ಸುಮಾರು 125 ವರ್ಷಗಳ ಹಿಂದೆ ಎಲ್ಲಾ ಟೈರ್​​ಗಳೂ ಸಹ ಬಿಳಿ ಬಣ್ಣದಲ್ಲಿತ್ತು. ಟೈಯರ್ ತಯಾರಿಸಲು ಬಳಸುವ ರಬ್ಬರ್ ಹಾಲಿನಂತೆ ಬಿಳಿಯಾಗಿರುತ್ತದೆ. ಹಾಗಾದರೆ ನಾವು ಯಾವಾಗಿನಿಂದ ಕಪ್ಪು ಟೈಯರ್‌ಗಳನ್ನು ಬಳಸಲು ಪ್ರಾರಂಭಿಸಿದ್ದೇವೆ ಎಂದರೆ ಓಡಾಟಕ್ಕಾಗಿ ಹೆಚ್ಚಾಗಿ ವಾಹನಗಳನ್ನೇ ಬಳಸಲು ಪ್ರಾರಂಭಿಸಿದಾಗಿನಿಂದ.

ಬಿಳಿ ಟೈರ್​ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ ಮತ್ತು ಹೆಚ್ಚು ದಿನ ಬಾಳಿಕೆಯೂ ಬರುತ್ತಿರಲಿಲ್ಲ. ಹಾಗಾಗಿ ಟೈರ್​ನ ಆಯುಷ್ಯ ಹೆಚ್ಚಿಸಲು ಹಾಗು ಪ್ರಬಲಗೊಳ್ಳಲು ಕಾರ್ಬನ್ ಬಳಕೆ ಪ್ರಾರಂಭವಾಯ್ತು. ಹಾಲು ಬಿಳುಪಿನ ರಬ್ಬರ್​​ಗೆ ಕಾರ್ಬನ್ ಮಿಶ್ರಣ ಮಾಡಿದಾಗ ಟೈಯರ್ ಶಕ್ತಿ ಹೆಚ್ಚಿ ಹೆಚ್ಚು ದಿನ ಬಾಳಿಕೆ ಬರುವಂತೆ ಮಾಡಲಾಯಿತು. ಕಾರ್ಬನ್ ಯಾವಾಗಲೂ ಕಪ್ಪು ಬಣ್ಣದಲ್ಲಿರುವುದರಿಂದ ಟೈಯರ್​​ ಬಣ್ಣವೂ ಸಹ ಕಪ್ಪಾಗಿರುತ್ತದೆ.

ಕಪ್ಪೇ ಬಣ್ಣವೇ ಏಕೇ?
ವಾಹನಗಳು ಓಡಾಡ್ಬೇಕು ಅಂದ್ರೆ ಟೈರ್​​ಗಳು ಪಾತ್ರ ಮಹತ್ವದ್ದು. ರಸ್ತೆಯ ಮೇಲ್ಮೈಗೆ ಸಂಪರ್ಕ ಕಲ್ಪಿಸುವ ಟೈರ್​​ಗಳು. ಕಾರ್, ಬೈಕ್, ಸೈಕಲ್ ಲಾರಿ ಯಾವುದೇ ಇರ್ಲಿ ಟೈರ್‌ಗಳು ವಾಹನದಲ್ಲಿನ ಅತ್ಯಂತ ಮಹತ್ವದ ವಿಭಾಗಗಳಲ್ಲಿ ಒಂದಾಗಿವೆ.

ಇದನ್ನೂ ಓದಿ: Tiger Cub: ಬೆಕ್ಕಿಗೆ ಬಣ್ಣ ಹಚ್ಚಿ ಹುಲಿಮರಿ ಎಂದು ಮಾರಾಟ!

ಏಕೆಂದರೆ ಅವು ರಸ್ತೆಯ ಮೇಲ್ಮೈಗೆ ಸಂಪರ್ಕ ಹೊಂದಿರುತ್ತವೆ. ಟೈರ್ ತುಂಬಾ ದಿನ ಬಾಳಿಕೆ ಬರುವಂತ ವಸ್ತು.  ಬಳಕೆಗೆ  ಯೋಗ್ಯವಾಗಿರುವ ಎಲ್ಲಾ ಟೈರ್​ಗಳು ಸಹ ಕಾರ್ಬನ್ ಹೊಂದಿರುತ್ತದೆ. ಇದನ್ನು ಬಳಸಿದಾಗ ಮಾತ್ರ ಹೆಚ್ಚು ಬಾಳಿಕೆ ಬರುವ ಟೈರ್​​ಗಳನ್ನು ಸಿದ್ಧಪಡಿಸಲು ಸಾಧ್ಯ. ಹಾಗಾಗಿ ಎಲ್ಲಾ ಟೈರ್​​ಗಳು ಕಪ್ಪು ಬಣ್ಣದಲ್ಲೇ ಇರುತ್ತವೆ.

ಬಿಸಿಯಿಂದ ರಕ್ಷಣೆ
ಸುಡುವ ಬಿಸಿಲಲ್ಲೂ ಕಾದ ರಸ್ತೆಯಲ್ಲಿ ವಾಹನ ಓಡಿಸಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಈ ಕಪ್ಪು ಕಾರ್ಬನ್ ಟೈರ್ ಕರಗದೇ ಇರುವ ಹಾಗೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲ, ಕಾರ್ಬನ್ ಕಪ್ಪು ಓಝೋನ್ ಮತ್ತು UV ವಿಕಿರಣದ ಹಾನಿಕಾರಕ ಪರಿಣಾಮಗಳಿಂದ ಟೈರ್‌ಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಹಾಗಾಗಿ ಟೈರ್​​ನಲ್ಲಿ ಬಿರುಕು ಬಿಡುವುದು, ಒಡೆದು ಹೋಗುವುದು ಅಥವಾ ಹರಿಯುವುದು ಅಪರೂಪಕ್ಕೆ ಮಾತ್ರ ಕಂಡುಬರುತ್ತದೆ. ಹೆಚ್ಚಿನ ದಿನ ಇವು ಕಾರ್ನ್ ಕಾರಣದಿಂದಲೇ ತಾಳಿಕೆ ಬರುತ್ತವೆ.

ಇದನ್ನೂ ಓದಿ: Tongue Cut: ತನ್ನ ನಾಲಿಗೆಯನ್ನೇ ಕತ್ತರಿಸಿ ದೇವಿ ಮುಂದಿಟ್ಟ ಭಕ್ತ! ಅಂಧಭಕ್ತಿಯ ಕಥೆ ಕೇಳಿದ್ರೆ ಶಾಕ್ ಆಗ್ತೀರಿ

ಟೈರ್​​ನ ತೂಕ
ಬಿಳಿ ಬಣ್ಣದ ಟೈರ್ ಇರುವ ಸಂದರ್ಭದಲ್ಲಿ ಟೈರ್​​ನ ತೂಕ ಈಗಿರುವ ಟೈರ್ ತೂಕಗಳಿಗಿಂತ ತುಂಬಾ ಕಡಿಮೆ ಇತ್ತು. ಆದರೆ ಈಗ ಟೈರ್​​ನ ಗ್ರಾತ್ರಕ್ಕೆ ತಕ್ಕಂತೆ ತೂಕವೂ ಸಹ ಹೆಚ್ಚುತ್ತಾ ಹೋಗುತ್ತದೆ. ನೈಸರ್ಗಿಕವಾದ ರಬ್ಬರ್​​ನಿಂದ ತಯಾರಿಸುತ್ತಿದ್ದ ಟೈರ್​​ಗಳು ತುಂಬಾ ಹಗುರವಾಗಿದ್ದ ಕಾರಣ ಲಾರಿಗಳಂತ ಭಾರದ ವಸ್ತು ಸಾಗಾಟ ಮಾಡುವ ವಾಹನಗಳಿಗೆ ಬಿಳಿ ಟೈರ್​​ಗಳು ಅಷ್ಟು ಸೂಕ್ತವಾಗಿರಲಿಲ್ಲ. ಹಿಂದೊಮ್ಮೆ ಕಾರ್ ಕಂಪನಿಗಳು ಟೈರ್​ಗಳನ್ನು ಬದಲಾಯಿಸಲು ಸಾಕಷ್ಟು ಬೇಡಿಕೆ ಇಟ್ಟಿತ್ತು. ಟೈರ್​​ನ ತೂಕ ಹೆಚ್ಚಿಸಲು ಸತು ಆಕ್ಸೈಡ್ ಅನ್ನು ಬಳಸಲಾಯಿತು.
First published: