Thief Note: ಮನೆಯಲ್ಲಿ ಹಣ ಇಲ್ಲ ಅಂದ್ಮೇಲೆ ಬೀಗ ಯಾಕೆ ಹಾಕ್ತೀರಾ? ಕಳ್ಳ ಬರೆದಿಟ್ಟ ಪತ್ರ ನೋಡಿ ಮನೆ ಮಾಲೀಕ ಶಾಕ್!

Thief Leaves Note: ಇಲ್ಲೊಬ್ಬ ಕಳ್ಳ ಕಳ್ಳತನಕ್ಕಾಗಿ ಮನೆಯೊಂದನ್ನ ಹೊಕ್ಕಿದ್ದು, ಮನೆಯ ಪ್ರತಿಯೊಂದು ಕೋಣೆಗೆ ತೆರಳಿ ಚಿನ್ನ, ಬೆಲೆ ಬಾಳುವ ವಸ್ತುಗಳಿಗೆ ಹುಡುಕಾಟ ನಡೆಸಿದ್ದಾನೆ. ಕೊನೆಗೆ ತಾನಂದುಕೊಂಡಷ್ಟು ವಸ್ತುಗಳು ಸಿಗದೆ ನಿರಾಶೆಗೊಂಡಿದ್ದಾನೆ. ಕಷ್ಟಪಟ್ಟು ಮನೆ ಹೊಕ್ಕಿ, ಇಂದಿನ ಬೇಟೆ ವ್ಯರ್ಥವಾಯಿತು ಎಂದು ಕೋಪಗೊಂಡು ಕಳ್ಳ ಕೊನೆಗೆ ಏನು ಮಾಡಿದ್ದಾನೆ ಗೊತ್ತಾ? ಕೊಂಚ ಭಿನ್ನವಾಗಿದೆ ಈ ಸ್ಟೋರಿ…..

ಪ್ರಾತಿನಿಧಿಕ ಚಿತ್ರ (Photo: Google)

ಪ್ರಾತಿನಿಧಿಕ ಚಿತ್ರ (Photo: Google)

 • Share this:
  Thief Leaves Note: ಕಳ್ಳತನ, ದರೋಡೆಗಳು ದಿನ ದಿನದಕ್ಕೆ ಹೆಚ್ಚಾಗುತ್ತಿದೆ. ಹಗಲು ಕಣ್ಣುಹಾಯಿಸಿ ರಾತ್ರಿ ವೇಳೆ ಕಳ್ಳರು ಕೈಚಳಕ ತೋರಿಸುವ ಅನೇಕ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಅಷ್ಟೇ ಏಕೆ ಹಣ, ಚಿನ್ನ ಬೆಲೆ ಬಾಳುವ ವಸ್ತುಗಳಿರುವ ಮನೆಯನ್ನು ಗುರಿಯಾಗಿಸಿ ಯಾರು ಇಲ್ಲದ ವೇಳೆ ಕದ್ದು ಮನೆಯವರಿಗೆ ಪಂಗನಾಮ ಹಾಕುವ ಘಟನೆಗಳು ಬೆಳಕಿಗೆ ಬರುತ್ತಿರುತ್ತದೆ. ಅದರಂತೆ ಇಲ್ಲೊಬ್ಬ ಕಳ್ಳ ಕಳ್ಳತನಕ್ಕಾಗಿ ಮನೆಯೊಂದನ್ನ ಹೊಕ್ಕಿದ್ದು, ಮನೆಯ ಪ್ರತಿಯೊಂದು ಕೋಣೆಗೆ ತೆರಳಿ ಚಿನ್ನ, ಬೆಲೆ ಬಾಳುವ ವಸ್ತುಗಳಿಗೆ ಹುಡುಕಾಟ ನಡೆಸಿದ್ದಾನೆ. ಕೊನೆಗೆ ತಾನಂದುಕೊಂಡಷ್ಟು ವಸ್ತುಗಳು ಸಿಗದೆ ನಿರಾಶೆಗೊಂಡಿದ್ದಾನೆ. ಕಷ್ಟಪಟ್ಟು ಮನೆ ಹೊಕ್ಕಿ, ಇಂದಿನ ಬೇಟೆ ವ್ಯರ್ಥವಾಯಿತು ಎಂದು ಕೋಪಗೊಂಡು ಕಳ್ಳ ಕೊನೆಗೆ ಏನು ಮಾಡಿದ್ದಾನೆ ಗೊತ್ತಾ? ಕೊಂಚ ಭಿನ್ನವಾಗಿದೆ ಈ ಸ್ಟೋರಿ…..

  ಮಧ್ಯ ಪ್ರದೇಶ ದೇವಾಸ್​ ಜಿಲ್ಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಅಲ್ಲಿನ ಸರ್ಕಾರಿ ಅಧಿಕಾರಿ ನಿವಾಸದಲ್ಲಿ ಸಾಕಷ್ಟು ನಗದು ಮತ್ತು ಬೆಲೆ ಬಾಳುವ ವಸ್ತುವಿದೆ ಎಂದು ತಿಳಿದ ಕಳ್ಳ. ಆ ಮನೆ ಹೊಕ್ಕಿದ್ದಾನೆ. ಆದರೆ ಎಲ್ಲೂ ನೋಡಿದರು ತಾನಂದುಕೊಂಡಷ್ಟು ಬೆಳಬಾಳುವ ವಸ್ತುಗಳು ಕಳ್ಳನ ಕೈಗೆ ಸಿಗದೆ ನಿರಾಶೆಗೊಂಡಿದ್ದಾನೆ. ಇದರಿಂದ ಕೋಪಗೊಂಡ ಆತ ಕಾಗದವೊಂದರ ಮೇಲೆ ‘‘ ಹಣವಿಲ್ಲದಿದ್ದಾಗ ಮನೆಗೆ ಬೀಗ ಹಾಕಬೇಡಿ, ಕಲೆಕ್ಟರ್​’’ ಎಂದು ಬರೆದಿಟ್ಟು ಹೋಗಿದ್ದಾನೆ!.

  ಕಳ್ಳ ಬರೆದಿಟ್ಟ ಕಾಗದವು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಷ್ಟಪಟ್ಟು ಅಧಿಕಾರಿ ಮನೆಯಿಂದ ನಗದು, ಚಿನ್ನ ಕದಿಯಬಹುದೆಂದುಕೊಂಡ ಕಳ್ಳನಿಗೆ ಕೊನೆಗೆ ಏನು ಸಿಗದೆ ಕಾಗದ ಮೇಲೆ  ‘‘ಜಬ್ ಪೈಸೆ ನಹೀ ಅವರು ತೋ ಲಾಕ್ ನಹೀ ಕರ್ಣ, ಕಲೆಕ್ಟರ್‘‘ ಎಂದು ಹಿಂದಿಯಲ್ಲಿ ಬರೆದಿಟ್ಟು ಹೋಗಿದ್ದಾನೆ.

  ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಉಮರಾವ್ ಸಿಂಗ್ ಪ್ರಕಾರ, ತ್ರಿಲೋಚನ್ ಸಿಂಗ್ ಗೌರ್ ಅವರ ನಿವಾಸದಿಂದ 30,000 ರೂ. ನಗದು ಮತ್ತು ಕೆಲವು ಆಭರಣ ವಸ್ತುಗಳನ್ನು ಕಳವು ಮಾಡಲಾಗಿದೆ. ಅವರು ಪ್ರಸ್ತುತ ಖಟೇಗಾಂವ್ ಪಟ್ಟಣದಲ್ಲಿ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಆಗಿ ನೇಮಕಗೊಂಡಿದ್ದಾರೆ.

  ಕಳೆದ 15 ದಿನಗಳಿಂದ ತ್ರಿಲೋಚನ್ ಸಿಂಗ್ ಗೌರ್ ಮನೆಯಲ್ಲಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ರಾತ್ರಿ ಮನೆಗೆ ಮರಳಿದಾಗ ಕಳ್ಳತನದ ಬಗ್ಗೆ ತಿಳಿದುಬಂದಿದೆ. ಮನೆಯಲ್ಲೆಲ್ಲ ತನ್ನ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಮತ್ತು ಸ್ವಲ್ಪ ನಗದು ಮತ್ತು ಆಭರಣ ಕಾಣೆಯಾಗಿರುವುದನ್ನು ಕಂಡು ತ್ರಿಲೋಚನ್ ಸಿಂಗ್ ಗೌರ್ ಪೋಲಿಸ್ ದೂರು ನೀಡಿದ್ದಾರೆ.

  ಇದನ್ನು ಓದಿ: Paralysed Man: ಕುತ್ತಿಗೆ ಕೆಳಗೆ ಬಲವಿಲ್ಲ, ಮಲಗಿದ್ದಲ್ಲಿಂದಲೇ ಕೋಟಿಗಟ್ಟಲೆ ವಹಿವಾಟು ನಡೆಸುತ್ತಾರೆ!

  ಅಚ್ಚರಿ ವಿಚಾರವೆಂದರೆ ತಾನಂದುಕೊಂಡಷ್ಟು ಬೆಲೆ ಬಾಳುವ ವಸ್ತು ಮತ್ತು ನಗದು ಸಿಗದೆ ನಿರಾಶೆಗೊಂಡ ಕಳ್ಳ ಅಲ್ಲೇ ಇದ್ದ ತ್ರಿಲೋಚನ್ ಸಿಂಗ್ ಗೌರ್ ಅವರ ನೋಟ್ ಪ್ಯಾಡ್ ಮತ್ತು ಪೆನ್ ಬಳಸಿದ್ದಾನೆ. ಏತನ್ಮಧ್ಯೆ, ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಮತ್ತು ಪ್ರಸ್ತುತ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಇದನ್ನು ಓದಿ: WhatsApp: ಎಚ್ಚರ! ವಾಟ್​​ಆ್ಯಪ್​ನಲ್ಲಿ​ ಹರಿದಾಡುವ ಈ ಲಿಂಕ್​ ಕ್ಲಿಕ್​ ಮಾಡದಿರಿ…

  ಬಹುತೇಕರು ಮನೆಯ ಟಿವಿ ಪರದೆ ಮೇಲೆ ಆಗಾಗ ಕಾಣಿಸುವ.. ಮನೆಯಲ್ಲಿ ಇದ್ದರೆ ಚಿನ್ನ.. ಚಿಂತೆಯು ಏತಕೆ ಇನ್ನ..!! ಎಂಬ ಜಾಹೀರಾತು ನೋಡಿರಬಹುದು. ಆದರೆ ಮನೆಯಲ್ಲಿ ಚಿನ್ನ ಇದ್ದರೆ ಕಳ್ಳರ ಕಾಟ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಹಾಗಾಗಿ ಸೂಕ್ತ ಜಾಗದಲ್ಲಿರಿಸಿದರೆ ಇಂತಹ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ.

  ಕಳ್ಳತನ ಪ್ರಕರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರ ಪ್ರದೇಶದಿಂದ ಹಿಡಿದು ಹಳ್ಳಿಯಾಚೆಗೂ ಕಳ್ಳತನಗಳು ನಡೆಯುತ್ತಿರುತ್ತದೆ. ಈ ಬಗ್ಗೆ ಎಷ್ಟೇ ಜಾಗರೂಕರಾಗಿದ್ದರು ಅಷ್ಟೇ. ಕೆಲವೊಮ್ಮೆ ಪರಿಚಯಸ್ಥರೇ ಕಳ್ಳನ ಮಾಡುತ್ತಾರೆ. ಹಾಗಾಗಿ ಜಾಗರೂಕತೆಯಿಂದ ಇರುವುದು ಒಳಿತು.
  Published by:Harshith AS
  First published: