ನೀವು ಪ್ರತಿದಿನ (Daily) ಸಾಮಾಜಿಕ ಮಾಧ್ಯಮವನ್ನು(Social Media) ಬಳಸುತ್ತಿದ್ದರೆ (Users), ಕೆಲವು ತಿಂಗಳುಗಳ ( Few Month Ago) ಹಿಂದೆ ಪಾಕಿಸ್ತಾನ ಮೂಲದ ಆಯೇಷಾ ಎಂಬ ಹುಡುಗಿಯ ಡ್ಯಾನ್ಸ್ ಅನ್ನ ನೀವು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿಯೇ ಇರುತ್ತೀರಿ. ಈ ಹುಡುಗಿ 'ಮೇರಾ ದಿಲ್ ಪುಕಾರೆ ಆಜಾ' ಎಂಬ ಹಾಡಿಗೆ (Song) ಡ್ಯಾನ್ಸ್ (Dance) ಮಾಡುತ್ತಿರುವ ಕ್ಲಿಪ್ ಅನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ನಂತರ ಮಹಿಳೆ ಈಗ ವಾರಗಳಿಂದ ಎಲ್ಲರ ಸಾಮಾಜಿಕ ಫೀಡ್ ಗಳಲ್ಲಿ ಹರಿದಾಡುತ್ತಿದ್ದಾಳೆ ಅಂತ ಹೇಳಬಹುದು.
ಮ್ಯೂಸಿಕ್ ಲೇಬಲ್ನಿಂದ ಈ ವಿಡಿಯೋ ಅಧಿಕೃತವಾಗಿರಲಿಲ್ಲ. ಅದು ಸ್ವತಃ ಮಹಿಳೆಯ ಸಾಮಾನ್ಯ ರೀಲ್ ಆಗಿತ್ತು. "ನಾನು ನನ್ನನ್ನು ತುಂಬಾನೇ ಪ್ರೀತಿಸುತ್ತೇನೆ ಮತ್ತು ನಾನು ನಿಜವಾಗಿಯೂ ಯಾವುದಕ್ಕೂ ಕೇರ್ ಮಾಡುವುದಿಲ್ಲ ಎಂದು ನಿಮಗೆ ತಿಳಿದಿದೆಯೇ, ಆದ್ದರಿಂದ ಕೆಟ್ಟ ಕಾಮೆಂಟ್ ಗಳನ್ನ ಹಾಕ್ಬೇಡಿ" ಎಂಬ ಶೀರ್ಷಿಕೆಯೊಂದಿಗೆ ಅವರು ಇನ್ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ತಮ್ಮ ಡ್ಯಾನ್ಸ್ ಮಾಡಿದ ವಿಡಿಯೋವನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ.
ಆಯೇಷಾ ಅವರ ಮೊದಲ ಡ್ಯಾನ್ಸ್ ವಿಡಿಯೋಗೆ 17 ಲಕ್ಷ ವೀಕ್ಷಣೆಗಳು ಬಂದಿದ್ದವು.
ನವೆಂಬರ್ 11 ರಂದು ಪೋಸ್ಟ್ ಮಾಡಲಾದ ಈ ರೀಲ್ ಈಗ 17 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಅವರ ಪ್ರೊಫೈಲ್ ಕೇವಲ ಎಂಟು ಪೋಸ್ಟ್ ಗಳನ್ನು ಮಾತ್ರವೇ ಹೊಂದಿದೆ. ಆದರೆ ಅವರ ಫಾಲೋವರ್ಸ್ ಗಳ ಸಂಖ್ಯೆ ಇದೀಗ 7.09 ಲಕ್ಷಕ್ಕೂ ಹೆಚ್ಚಾಗಿದೆ ಅಂತ ಹೇಳಲಾಗುತ್ತಿದೆ.
ಆಯೇಷಾ ಅವರ ಡ್ಯಾನ್ಸ್ ನ ರೀಲ್ ಅನ್ನು ನೋಡಿದ ನೆಟ್ಟಿಗರು ಆಕೆಯನ್ನು ಅಂತರ್ಜಾಲದಲ್ಲಿ ರಾತ್ರೋರಾತ್ರಿ ವೈರಲ್ ಮಾಡಿದರು ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಅವರು ‘ಗುಡ್ ಮಾರ್ನಿಂಗ್ ಪಾಕಿಸ್ತಾನ್ ಶೋ’ ನಲ್ಲಿ ಕಾಣಿಸಿಕೊಂಡರು, ಅಲ್ಲಿ ಅವರು ಶಾಜಿಯಾ ಮಂಜೂರ್ ಅವರ "ಬತ್ತಿಯಾ ಬುಜಾಯಿ ರಖ್ದಿ" ಎಂಬ ಹಾಡಿಗೆ ಡ್ಯಾನ್ಸ್ ಮಾಡಿದರು.
ಆದರೆ ಆಕೆಯ ಹೆಸರು ಪ್ರತಿದಿನವೂ ಟ್ರೆಂಡ್ ಆಗುತ್ತಿದ್ದಂತೆ, ಕೆಲವರು ಅವರು ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಟ್ರೋಲ್ ಮಾಡಲು ಪ್ರಾರಂಭಿಸಿದರು.
ಕಪ್ಪು ಪ್ಯಾಂಟ್ ಮತ್ತು ಬರ್ಗಂಡಿ ಟಾಪ್ ಧರಿಸಿದ್ದ ಹದಿಹರೆಯದ ಯುವತಿ ಇನ್ಸ್ಟಾಗ್ರಾಮ್ ನಲ್ಲಿ ತನ್ನ ಅನೇಕ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಮೂರು ಚಿತ್ರಗಳಲ್ಲಿ, ಅವಳು ತನ್ನ ಮಧ್ಯದ ಬೆರಳನ್ನು ಕ್ಯಾಮೆರಾಗೆ ತೋರಿಸುತ್ತಿದ್ದಳು. ಈ ಪೋಸ್ಟ್ ಗೆ ಟೀಕೆಗಳು ಬಂದವು ಮತ್ತು ಅವಳ ಅನೇಕ ಫಾಲೋವರ್ಗಳು ನಕಾರಾತ್ಮಕ ಸನ್ನೆಗಾಗಿ ಅವಳನ್ನು ಟ್ರೋಲ್ ಮಾಡಿದರು.
ಇದೀಗ ಆ ಟ್ರೋಲಿಂಗ್ ಎಲ್ಲಾ ಶಾಂತವಾಗಿದ್ದು, ಹೆಚ್ಚು ಹೆಚ್ಚು ನೆಟ್ಟಿಗರು ಅವಳ ಮೊದಲ ಡ್ಯಾನ್ಸ್ ಮಾಡಿದ ವಿಡಿಯೋದಿಂದ ಸ್ಫೂರ್ತಿ ಪಡೆಯುತ್ತಿದ್ದಾರೆ ಅಂತ ಕಾಣುತ್ತಿದೆ.
ಆಯೇಷಾ ಡ್ಯಾನ್ಸ್ ನ ಮರುಸೃಷ್ಟಿಸಿದ ಮಹಿಳಾ ಪೊಲೀಸ್ ಅಧಿಕಾರಿ
ಏಕೆಂದರೆ ಇತ್ತೀಚೆಗೆ, ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಆಯೇಷಾ ಅವರು ಈ ಹಿಂದೆ ಲತಾ ಮಂಗೇಶ್ಕರ್ ಅವರ ಹಾಡು 'ಮೇರಾ ದಿಲ್ ಯೇ ಪುಕಾರೆ ಆಜಾ' ಹಾಡಿಗೆ ಮಾಡಿದ ಡ್ಯಾನ್ಸ್ ಅನ್ನು ಆ ಹಾಡಿನ ರೀಮಿಕ್ಸ್ ಆವೃತ್ತಿಯೊಂದಿಗೆ ಮರು ಸೃಷ್ಟಿಸಿದ್ದಾರೆ ನೋಡಿ.
View this post on Instagram
ಇದನ್ನೂ ಓದಿ: Viral Video: ಟ್ರೈನಿನಲ್ಲಿ ಕೂತು ಹಿಂದಿ ಹಾಡು ಹಾಡಿದ ವಯಸ್ಸಾದ ವ್ಯಕ್ತಿ! ವಿಡಿಯೋ ವೈರಲ್
ಈ ವಿಡಿಯೋ 7.7 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದ್ದು, 5 ಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ಸಹ ಗಳಿಸಿದೆ ಎಂದು ಹೇಳಬಹುದು. ಈ ಮಹಿಳಾ ಪೊಲೀಸ್ ಅಧಿಕಾರಿಯನ್ನು ಎಕ್ಷಾ ಕೆರುಂಗ್ ಎಂದು ಗುರುತಿಸಲಾಗಿದೆ. ಅವರ ಸ್ಟೆಪ್ ಗಳಿಂದ ಪ್ರಭಾವಿತರಾದ ನಂತರ ನೆಟ್ಟಿಗರು ಅವರ ಮೇಲೆ ಹೊಗಳಿಕೆಗಳು ಮತ್ತು ಲೈಕ್ ಗಳ ಸುರಿಮಳೆಗೈದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ